Sunday, 5th January 2025

ಆಧ್ಯ ಫೌಂಡೇಶನ್ಸ್ ವತಿಯಿಂದ ದಿನಸಿ ಕಿಟ್, ಮಾಸ್ಕ್‌ ವಿತರಣೆ

ಇಂಡಿ: ಬಿಜಾಪುರ ಜಿಲ್ಲೆಯ ಇಂಡಿ ನಗರದಲ್ಲಿ ಆಧ್ಯ ಫೌಂಡೇಶನ್ಸ್ ವತಿಯಿಂದ ಸಿಂದಗಿ ರಸ್ತೆಯಲ್ಲಿರುವ ಶಾಂತಿನಗರ ಶ್ರೀ ಸತ್ಯನಾರಾಯಣ ದೇವಸ್ಥಾನದ ಆವರಣದಲ್ಲಿ ಕೊವಿಡ ಸಂಕಷ್ಟದಿಂದ ತೊಂದರೆಗೆ ಒಳಗಾದ ವಿಪ್ರ ಬಾಂಧವರಿಗೆ ಮುಜರಾಯಿ ಇಲಾಖೆಗೆ ಒಳಪಡದ ತಾಲ್ಲೂಕು ಮತ್ತು ಗ್ರಾಮಗಳ ಅರ್ಚಕರು, ಅಡುಗೆ ಕೆಲಸದವರು ಹಾಗೂ ಪುರೋಹಿತರಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ಟನ್ನು , ಮಾಸ್ಕಗಳನ್ನು ವಿತರಿಸಲಾಯಿತು.

ಇನ್ನೂ ಕಾರ್ಯಕ್ರಮ ಸ್ಥಳಕ್ಕೆ ಬರಲು ಆಗದ ಅನೇಕ ಕುಟುಂಬಕ್ಕೆ ಅವರ ಮನೆ ಬಾಗಿಲಿಗೆ ದಿನಸಿ ಕಿಟ್‌ ಹಾಗೂ ಔಷಧಿ ಕಿಟ್‌ಗಳನ್ನು ಒದಗಿಸಲು ಯೋಜನೆ ಮಾಡಲಾಗಿತ್ತು , ಇಂಡಿ ನಗರ ಅಗರ್ಖೇಡ್ ಗ್ರಾಮ ಐರಸಂಗ ಮಣೂರು ಹಿರೇಬೆನ್ನೂರು ಅಂಜುಟಗಿ ಗ್ರಾಮಗಳಿಂದ ವಿಪ್ರ ಬಾಂಧವರು ಬಂಧು ಕಿಟ್ಟುಗಳನ್ನು ಸ್ವೀಕರಿಸಿದರು ಹಾರೈಸಿದರು . ಸ್ವಯಂಸೇವಕರ ಸಹಾಯ ದಿಂದ ಸೋಶಿಯಲ್ ಡಿಸ್ಟನ್ಸ್ ಸಿಂಗ್ ಆಧ್ಯಾ ಫೌಂಡೇಶನ್ ವತಿಯಿಂದ ಸ್ಯಾನಿಟೇಷನ್ ಥರ್ಮಲ್ ಚೆಕಿಂಗ್ ವ್ಯವಸ್ಥೆ ಮಾಡಲಾಗಿತ್ತು.

ಈ ಕಾರ್ಯಕ್ರಮ ಆಧ್ಯಾ ಫೌಂಡೇಶನ್ ಸಂಸ್ಥಾಪಕರಾದ ಅನಿಲ್ ಜಹಗೀರ್ ದಾರ್ ಅವರ ಸಹಕಾರದೊಂದಿಗೆ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಮುಖಂಡರಾದ ವೆಂಕಟೇಶ್ ಕುಲ್ಕರ್ಣಿಯವರು ರಾಘವೇಂದ್ರ ಕುಲಕರ್ಣಿ ಅವರು ರಾಜು ಆಳಂದಕರ್ ಅವರು ರಾಮಾಚಾರ್ ಕವಿ ಅವರು , ಹಣಮಂತರಾವ್ ಪಾಟೀಲ್ ಅವರು ಉಪಸ್ಥಿತರಿದ್ದು ಫೌಂಡೇಶನ್ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಆದ್ಯ ಫೌಂಡೇಶನ್ ಬಿಜಾಪುರ ಜಿಲ್ಲಾ ಘಟಕದ ಪದಾಧಿಕಾರಿಗಳಾ ಮುಕುಂದ ಆದ್ಯ ಮಧುಸೂದನ ಆದ್ಯ ಕೃಷ್ಣ ಆದ್ಯ ಹಾಗೂ ನಗರದ ವಿಪ್ರ ಬಾಂಧವರು ಉಪಸ್ಥಿತರಿದ್ದರು ಆದ್ಯ ಫೌಂಡೇಶನ್ ಮುಂಬರುವ ದಿನಗಳಲ್ಲಿ ಬೆಂಗ್ಳೂರ್ ನಗರ ಅಲ್ಲದೆ ಉತ್ತರ ಕರ್ನಾಟಕದ ಜಿಲ್ಲಾ ಹಾಗೂ ತಾಲ್ಲೂಕುವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ.

ಸಮಸ್ತ ಆದ್ಯ ಜಾಗೀರ್ದಾರ್ ಪರಿವಾರವ ಹಾಗೂ ಬಂಧು ಮಿತ್ರರು ಹಿತೈಷಿಗಳು ಈ ಫೌಂಡೇಶನ್ ವತಿಯಿಂದ ಒಗ್ಗೂಡಿ ಈ ಕಾರ್ಯಕ್ರಮವನ್ನು ನೆರವೇರಿಸಲು ಯೋಚಿಸಲಾಗಿದೆ , ಮುಂದಿನ ದಿನಗಳಲ್ಲಿ ಸರಕಾರಿ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪುಸ್ತಕಗಳ ವಿತರಣೆ , ಸಂಕಷ್ಟದಲ್ಲಿ ಇರುವ ನಜನರಿಗೆ ಆಹಾರ ಧಾನ್ಯಗಳ ವಿತರಣೆ ಸ್ಯಾನಿಟೈಸರ್ ಗಳ ವಿತರಣೆ ಮಾಸ್ಕ್ ಗಳ ವಿತರಣೆ ಮಾಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *