Sunday, 5th January 2025

ರಾಷ್ಟ್ರಪ್ರೇಮದಲ್ಲಿ ಸ್ವಾರ್ಥವೆಂದರೆ ಮೊಸರಲ್ಲಿ ಕಲ್ಲಿದ್ದಂತೆ

ಅಭಿಮತ 

ಶಶಿಧರ ತಲ್ಲೂರಂಗಡಿ

ಯುಟ್ಯೂಬ್ ಚಾನೆಲ್‌ವೊಂದರಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಸಂದರ್ಶನ ನೋಡುತ್ತಿದ್ದೆ. ಅದರಲ್ಲಿ ಅವರಿಗೆ ಕೆಲವಷ್ಟು ಹೆಸರನ್ನು ಹೇಳಿದಾಗ ಒಂದೆರಡು ಪದಗಳಲ್ಲಿ ಆ ಬಗ್ಗೆ ಉತ್ತರಿಸಬೇಕಿತ್ತು. ನಿರೂಪಕಿ ‘ಭಾರತ’ ಎಂದಾಕ್ಷಣ ಚಕ್ರವರ್ತಿ ಸೂಲಿಬೆಲೆಯವರು ತಕ್ಷಣವೆ ನನಗೆಲ್ಲವೂ ಅದೇ, ನಾನೇ ಅದು ಎಂದುತ್ತರಿಸಿ ದರು.

ವಾಹ್ಹ್ ನಿಜವಾಗಿ ಒಂದು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿಯೂ ಇರಬೇಕಾದ ಭಾವನೆಯಿದು. ಸೂಲಿಬೆಲೆಯವರು ನಾನೇ ರಾಷ್ಟ್ರ ಎಂದುತ್ತರಿಸುವಾಗ ಅವರ ಮಾತಿನಲ್ಲಿ ಎಳ್ಳಷ್ಟೂ ಕಪಟವಿರಲಿಲ್ಲ. ನೇರವಾಗಿ ಮನಸ್ಸಿನಿಂದಲೇ ಬಂದ ಉತ್ತರವದು ಎಂದು ಆ ಸಂದರ್ಶನವನ್ನು ನೋಡಿದ ಯಾರಾದರೂ ತಿಳಿಯ ಬಹುದು. ಅವರನ್ನು ವಿರೋಧಿಸುವವರೂ ಕೂಡಾ ಅವರ ರಾಷ್ಟ್ರದ ಮೇಲಿನ ಪ್ರೀತಿಯನ್ನು ಒಪ್ಪುವಂತಿತ್ತು ಅವರ ಮಾತು. ಯುವ ಬ್ರಿಗೇಡ್ ಸಂಸ್ಥೆಯನ್ನು ಹುಟ್ಟು ಹಾಕುವಾಗ ಆ ಮನುಷ್ಯನ ಉದ್ದೇಶವೇನಿತ್ತೋ ತಿಳಿದಿಲ್ಲ. ಆದರೆ ದಿನದಿಂದ ದಿನಕ್ಕೆ ಯುವ ಬ್ರಿಗೇಡ್ ಮಾಡುತ್ತಿರುವ ಕೆಲಸಗಳನ್ನು ಗಮನಿಸುತ್ತಾ ಸಾಗಿದರೆ ನಮ್ಮೊಳಗೇ ಒಂದಾಗಿರುವ ಸಂಘಟನೆಯಿದು ಎಂದನ್ನಿಸದಿರುವುದಿಲ್ಲ.

ಬಹುಶಃ ನಾನೇ ರಾಷ್ಟ್ರ ಎನ್ನುವಂತೆ ಒಂದು ಸಂಸ್ಥೆಯ ರೀತಿಯಲ್ಲಲ್ಲದೆ ರಾಷ್ಟ್ರಪರ ಕೆಲಸ ಮಾಡುವ ಮನಸ್ಥಿತಿಯೇ ಯುವ ಬ್ರಿಗೇಡ್ ಅನ್ನಬಹುದೇನೊ. ಅಷ್ಟರ ಮಟ್ಟಿಗೆ ಜನರನ್ನು ತಲುಪುವಲ್ಲಿ ಯುವ ಬ್ರಿಗೇಡ್ ಯಶಸ್ವಿಯಾಗಿದೆ. ಸದಾ ಹರಿಯುತ್ತಿರುವ ನದಿಯ ನೀರು ಕೊಳಚೆಯಾಗಲು ಸಾಧ್ಯವೇ ಇಲ್ಲ. ಒಂದೊಮ್ಮೆ
ಹೊರಗಿಂದ ಬರುವ ಕೊಳಚೆ ನೀರು ತನ್ನನ್ನು ಸೇರಿಕೊಂಡರೂ ಹರಿಯುತ್ತಾ ಸಾಗಿದಂತೆ ಆ ನೀರನ್ನೂ ಶುದ್ಧಗೊಳಿಸಿ ತಿಳಿಯಾಗಿಸಿ ಮುನ್ನಡೆಯುವ ಸಾಮರ್ಥ್ಯ ನದಿಯ ನೀರಿಗಿದೆ. ಸಂಘಟನೆಗಳೂ ಹಾಗೆ ಹರಿಯುವ ನೀರಾದಾಗ ಅಲ್ಲಿ ಕಲ್ಮಶಗಳಿಗೆ ಜಾಗವಿರುವುದಿಲ್ಲ. ಅಪೇಕ್ಷೆಯೇ ಇರದೆ ಯಾವುದೇ ಕೆಲಸವನ್ನು ಮಾಡಿದಾಗ ಆ ಕೆಲಸದ ಪರಿಣಾಮ ನಮ್ಮನ್ನಷ್ಟು ಕಾಡುವುದಿಲ್ಲ.

ಸ್ವಾರ್ಥರಹಿತ ಬದುಕಿನಲ್ಲಿ ನಿಜವಾದ ಉದ್ದೇಶ ಈಡೇರಿದರಷ್ಟೇ ಮನಸ್ಸಿಗೆ ನೆಮ್ಮದಿ. ಅದೇ ಸ್ವಾರ್ಥವೇ ತುಂಬಿದ ಮನಸ್ಸಿಗೆ ಚಕ್ರವರ್ತಿ ಸೂಲಿಬೆಲೆಯವರ ಕೆಲಸಗಳನ್ನು ನೋಡಿದರೆ ಬಹಳಷ್ಟು ಪ್ರಶ್ನೆಗಳು ಕಾಡದೇ ಇರುವುದಿಲ್ಲ. ಈ ಮನುಷ್ಯ ಯಾಕಾಗಿ ಇದನ್ನೆಲ್ಲ ಮಾಡುತ್ತಿದ್ದಾರೆ?! ಇದರಿಂದ ಅವರಿಗಾಗುವ ಪ್ರಯೋಜನವೇನು! ಬಹುಶಃ ಯಾವುದೋ ಪಕ್ಷ ಇವರಿಗೆ ಅಗಾಧ ಹಣ ನೀಡುತ್ತಿರಬಹುದೇ! ಒಂದು ಭಾಷಣಕ್ಕೆ ಇಷ್ಟು ಎಂದು ಹಣ ಪಡೆಯುತ್ತಿದ್ದಾರೆಯೇ! ಮುಂದೊಮ್ಮೆ ರಾಜಕೀಯದಲ್ಲಿ ಬೆಳೆಯುವ ಉದ್ದೇಶ ಇವರಲ್ಲಿದೆಯೇ! ಹೀಗೆ ಹತ್ತು ಹಲವು ಮನಸ್ಸಲ್ಲಿ ಮೂಡುವ ಪ್ರಶ್ನೆಗಳಿಗೆ ಅವರಷ್ಟಕ್ಕೆ ಅವರೇ ಅಂದು ಕೊಳ್ಳುವ ಉತ್ತರವೂ ಇರುತ್ತದೆ.

ಸತ್ಯಾಸತ್ಯತೆಯ ಗೋಜಿಗೇ ಹೋಗದೇ ತಮ್ಮ ಮನಸ್ಸಿಗೆ ತೋಚಿದ್ದನ್ನು ಹಂಚತೊಡಗುತ್ತಾರೆ. ನಮ್ಮದೊಂದು ಸ್ವಭಾವ. ನಾವೇನು ಮಾಡಿದ್ದೇವೆ ಎಂದು ಪ್ರಶ್ನಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಬದಲಾಗಿ ಕೆಲಸ ಮಾಡಿದವರು ಮಾಡಿದ್ದರಲ್ಲಿ ಸರಿಯೆಷ್ಟು ತಪ್ಪೆಷ್ಟು ಎಂದು ಹೇಳುವುದರಲ್ಲಿ ನಾವು ನಿಸ್ಸೀಮರು. ತೆಂಗಿನ ಮಡಲಿನಿಂದ ಬ್ಯಾಟ್ ಮಾಡಿಕೊಂಡು ರಬ್ಬರ್ ಬಾಲ್‌ನಲ್ಲಿ ಕ್ರಿಕೆಟ್ ಆಡಲೂ ಒzಡುವವನು ವಿರಾಟ್ ಕೊಹ್ಲಿ ಆಡಿದ್ದು ಸರಿಯಿಲ್ಲವೆಂದು ಬೈಯ್ಯುವಂತೆ ಸದಾ ನಮಗೆ ಬೇರೆಯವರದ್ದೇ ಚಿಂತೆ. ಹೀಗೆ ಬಹುಶಃ ಆಡಳಿತ ಪಕ್ಷಕ್ಕೂ ಇರದಷ್ಟು ವಿರೋಽಗಳು ಚಕ್ರವರ್ತಿ ಸೂಲಿಬೆಲೆಯವರನ್ನು ಟಾರ್ಗೆಟ್ ಮಾಡಿ ಕುಳಿತಿzರೆ. ಕೆಲ ಕಾಂಗ್ರೆಸ್ ನಾಯಕರಿಗೂ ಕೂಡಾ ಆಕ್ಷೇಪವಿರುವುದು ಸೂಲಿಬೆಲೆಯವರ ವಿಚಾರದಲ್ಲಿ. ಹಾಗೆಂದು ಸರಕಾರವೇ ಮಾಡದ ಕೆಲಸವನ್ನು ಇವರು ಮಾಡುತ್ತಿzರೆಯೇ!

ಅದಕ್ಕಾಗಿ ವಿರೋಧಿಗಳೇ! ನೀವು ಹಾಗೆಂದುಕೊಂಡರೂ ತಪ್ಪೇನಿಲ್ಲ ಬಿಡಿ. ಫಲವತ್ತಾಗಿ ರಸಭರಿತ ಹಣ್ಣನ್ನು ತುಂಬಿಕೊಂಡಿರುವ ಮಾವಿನ ಮರಕ್ಕೆ ತಾನೇ ಹೆಚ್ಚೆಚ್ಚು ಕಟು ಬೀಳುವುದು. ಚೀನೀ ವೈರಸ್ ಕರೋನಾದಿಂದ ಇಡೀಯ ವಿಶ್ವವೇ ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲೂ ತಮ್ಮವರಿಗಾಗಿ ತುಡಿಯುವ ಮನಸ್ಸು ಎಷ್ಟು ಜನರಿಗಿರುತ್ತದೆ ಹೇಳಿ! ಎಲ್ಲಿ ನೋಡಿದರಲ್ಲಿ ಕೆಟ್ಟ ಸುದ್ದಿಯೇ ತುಂಬಿರುವಾಗ ಇವತ್ತಿದ್ದವರು ನಾಳೆ ಇಲ್ಲ ಎನ್ನುವ ಪರಿಸ್ಥಿತಿ ಇರುವಾಗ ಜನರೆಲ್ಲ
ಒಂದೆ ಭಾವದಲ್ಲಿ ಸ್ವಾರ್ಥ ಮರೆತಿರಬಹುದು ಎಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ.

ರೆಮಿಡಿಸಿವರ್ ಇಂಜೆಕ್ಷನ್‌ನ ಬದಲಿಗೆ ಬೇರೊಂದನ್ನು ನೀಡಿ ಹಣ ಮಾಡುವವರೆಷ್ಟು ಮಂದಿ, ಸ್ಮಶಾನಗಳಲ್ಲಿ ಹೆಣಕ್ಕೆ ಹೊದಿಸಿದ್ದ ಬಟ್ಟೆಗಳನ್ನೂ ಕದ್ದು ಮಾರಿ ಹಣ ಮಾಡುವ ಕ್ರೂರ ಮನಸ್ಥಿತಿಯವರೆಷ್ಟು ಮಂದಿ, ಸಾಯುವ ಪರಿಸ್ಥಿತಿಯಲ್ಲಿಯೂ ಬೆಡ್ ಸಿಗದೆ ಸಾಯಬೇಕು, ಹಣವಿದ್ದವರು ತಮಗೆ ಹಣಕೊಟ್ಟು ಬೆಡ್ ಪಡೆಯ ಬೇಕೆಂದು ಹಣಮಾಡಲು ಹೊರಟ ಬಾಂಧವರೆಷ್ಟು ಮಂದಿ! ಛೇ ಎಣಿಸಿದರೆ ಬೇಸರವಾಗುವ ವಿಚಾರಗಳು. ಈ ಎಲ್ಲದರ ನಡುವೆ ರಾಷ್ಟ್ರಕ್ಕಾಗಿ ದುಡಿಯಲು ಪಣತೊಟ್ಟು ನಿಂತ ಅದೆಷ್ಟೊ ಸಹಸ್ರ ಸಹಸ್ರ ಯುವಕರು, ಸಂಘಟನೆಗಳು ನಮ್ಮ ಕಣ್ಣ ಮುಂದೆ ಇವೆ.

Leave a Reply

Your email address will not be published. Required fields are marked *