Wednesday, 23rd October 2024

ಹರ‍್ಯಾಣ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ ರಿಲೀಸ್‌

ನವದೆಹಲಿ : ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ 10 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರನ್ನು ಶುಕ್ರವಾರ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಯಿತು.

1999-2000 ರಲ್ಲಿ ಹರಿಯಾಣದಲ್ಲಿ 3,206 ಮೂಲ ಶಿಕ್ಷಕರನ್ನು ಕಾನೂನುಬಾಹಿರವಾಗಿ ನೇಮಕ ಮಾಡಿದ್ದಕ್ಕಾಗಿ ಚೌಟಾಲಾ ಮತ್ತು ಅವರ ಪುತ್ರನನ್ನು ದೆಹಲಿಯ ನ್ಯಾಯಾಲಯವು ಜನವರಿ 13 2021 ರಂದು ದೋಷಿ ಎಂದು ಘೋಷಿಸಿತು. ಶಿಕ್ಷಕರನ್ನು ನೇಮಿಸಿಕೊಳ್ಳಲು ಲಂಚ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದ ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಅವರ ಮನವಿಯ ಮೇರೆಗೆ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಚೌಟಾಲಾ ಅವರು ಈಗಾಗಲೇ ಪೆರೋಲ್ ಮೇಲೆ ಹೊರಗಿದ್ದರು. ಆದರೆ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಶುಕ್ರವಾರ ತಿಹಾರ್ ತಲುಪಿದ್ದು, ನಂತರ ಅವರನ್ನು ಬಿಡುಗಡೆ ಮಾಡಲಾಯಿತು.