Friday, 20th September 2024

ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 58 ಮಂದಿ ಆಹುತಿ

ಬಾಗ್ದಾದ್‌: ಕರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದ ವಾರ್ಡ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿ, 58 ಮಂದಿ ಆಹುತಿಯಾಗಿದ್ದಾರೆ.

ದಕ್ಷಿಣ ಇರಾಕ್‌ನ ನಾಸಿರ್‌ಯಾ ನಗರದ ಅಲ್‌-ಹುಸೈನ್‌ ಟೀಚಿಂಗ್‌ ಹಾಸ್ಪಿಟಲ್‌ನಲ್ಲಿ ಸೋಮವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಅಗ್ನಿ ಆಕಸ್ಮಿಕ ಸಂಭವಿ ಸಿದೆ ಎನ್ನಲಾಗಿದೆ.

ಆಮ್ಲಜನಕ ಸಿಲಿಂಡರ್‌ ಸ್ಪೋಟದಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಆರೋಗ್ಯ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ವಾರ್ಡ್‌ನಲ್ಲಿ 70 ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಗ್ನಿ ಅವಘಡ ಸಂಭವಿಸಿದಾಗ ಕನಿಷ್ಠ 63 ರೋಗಿಗಳು ಇದ್ದರು ಎಂದು ಇರಾಕ್‌ನ ನಾಗರಿಕ ರಕ್ಷಣಾ ವಿಭಾಗದ ಮುಖ್ಯಸ್ಥ ತಿಳಿಸಿದ್ದಾರೆ.

ಇರಾಕ್‌ ಆಸ್ಪತ್ರೆಗಳಲ್ಲಿ ಒಂದೇ ವರ್ಷದಲ್ಲಿ ಸಂಭವಿಸಿದ ಎರಡನೇ ದೊಡ್ಡ ಪ್ರಮಾಣದ ಅಗ್ನಿ ಅನಾಹುತ ಇದಾಗಿದೆ. ಏಪ್ರಿಲ್‌ನಲ್ಲಿ  ಬಾಗ್ದಾದ್‌ನ್‌ ಇಬನ್‌ ಅಲ್‌ ಖತೀಬ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಟ್ಯಾಂಕ್‌ ಸ್ಪೋಟದಿಂದ ಅಗ್ನಿ ದುರಂತ ನಡೆದಿತ್ತು.