Friday, 22nd November 2024

ಸಿಡ್ನಿ ಬೆನ್ನಲ್ಲೇ ಮೆಲ್ಬರ್ನ್‌ನಲ್ಲೂ ಲಾಕ್‌ಡೌನ್

ಮೆಲ್ಬರ್ನ್: ಆಸ್ಟ್ರೇಲಿಯಾದ ಸಿಡ್ನಿ ನಂತರ ಮೆಲ್ಬರ್ನ್‌ನಲ್ಲೂ ಕೋವಿಡ್ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.

ಕೋವಿಡ್ ನಿಯಂತ್ರಣದಲ್ಲಿದ್ದ ಆಸ್ಟ್ರೇಲಿಯಾದಲ್ಲಿ ಕಳೆದ ತಿಂಗಳು 1,000ದಷ್ಟು ಸೋಂಕು ಪ್ರಕರಣಗಳು ಕಂಡುಬಂದಿದ್ದವು. ಅಲ್ಲದೆ ಡೆಲ್ಟಾ ರೂಪಾಂತರ ತಳಿಯು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ವಿಕ್ಟೋರಿಯಾದಲ್ಲಿ 18 ಸೋಂಕು ಪ್ರಕರಣ ದೃಢಪಟ್ಟ ಬೆನ್ನಲ್ಲೇ ಲಾಕ್‌ಡೌನ್ ಘೋಷಿಸುವ ಕಠಿಣ ನಿರ್ಧಾರ ಕೈಗೊಂಡಿದ್ದೇವೆ ಎಂದು ಆಂಡ್ರೂಸ್ ತಿಳಿಸಿದ್ದಾರೆ. ಇದರಿಂದ ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. ಸಿಡ್ನಿಯಲ್ಲಿ ಲಾಕ್‌ಡೌನ್ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಕಳೆದ 24 ತಾಸಿನಲ್ಲಿ 65 ಹೊಸ ಪ್ರಕರಣಗಳು ದಾಖಲಾಗಿವೆ. ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಲಾಕ್‌ಡೌನ್ ಮುಂದಿನ ಎರಡು ವಾರಗಳ ವರೆಗೂ ಮುಂದುವರಿಸುವ ಸಾಧ್ಯತೆಯಿದೆ.

ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವುದರಲ್ಲಿ ಆಸ್ಟ್ರೇಲಿಯಾ ‘ಕೋವಿಡ್ ಶೂನ್ಯ ನೀತಿ’ಯನ್ನು ಅತ್ಯಂತ ಪರಿಣಾಮಕಾರಿಯಾಗಿ ಆಳವಡಿಸಿಕೊಂಡಿದೆ.