Friday, 22nd November 2024

ಇ-ಸಿಗರೆಟ್ ನಿಷೇಧ

ಚೈನಾದಲ್ಲಿ ಆನ್‌ಲೈನ್ ಮಾರಾಟದ ಮೂಲಕ ಇ-ಸಿಗರೆಟ್ ಮಾರಾಟವನ್ನು ನಿಷೇಧಿಸಲಾಗಿದೆಯಂತೆ! ಇದು ಅಧಿಕೃತ ಸುದ್ದಿ. ಆದರೆ, ಈ ನಿಷೇಧವು ಕಾರ್ಯರೂಪಕ್ಕೆೆ ಬರುತೋ ಇಲ್ಲವೋ ಎಂಬ ಅನುಮಾನ ಇದೆ. ಆ ದೇಶದಲ್ಲಿ ಧೂಮಪಾನಿಗಳ ಸಂಖ್ಯೆೆ ಸುಮಾರು 30 ಕೋಟಿ! ಚೈನಾದಲ್ಲಿ ಸಿಗರೆಟ್ ತಯಾರಕಾ ಸಂಸ್ಥೆೆಗಳ ಲಾಬಿ ಬಹಳ ಬಲಶಾಲಿ ಮತ್ತು ಇ-ಸಿಗರೆಟ್ ಮಾರಾಟದಲ್ಲೂ ಅವು ಮುಂದು. ಚೈನಾದ ಶೇ.6ರಷ್ಟು ರಾಷ್ಟ್ರೀಯ ಆದಾಯವು ಸಿಗರೆಟ್ ಮಾರಾಟದ ತೆರಿಗೆಯಿಂದಲೇ ಬರುತ್ತದೆ. ಜತೆಗೆ ಹಿಂದೆಯೂ ಇ-ಸಿಗರೆಟ್‌ನ್ನು ಚೈನಾದಲ್ಲಿ ನಿಷೇಧಿಸಲಾಗಿತ್ತು! ದ್ದರಿಂದ ತೋರಿಕೆಗೆ ಮಾತ್ರ ಈ ನಿಷೇಧ ಇರಬಹುದು ಎನ್ನುತ್ತಿಿದ್ದಾಾರೆ ಪಾಶ್ಚಾಾತ್ಯ ಮಾರುಕಟ್ಟೆೆ ಪಂಡಿತರು.