Sunday, 24th November 2024

10,00,000 ಚಾರ್ಜಿಂಗ್ ಪಾಯಿಂಟ್‌ಗಳು!

ವಿದ್ಯುತ್ ಕಾರುಗಳ ಪ್ರಮುಖ ಅವಶ್ಯಕತೆ ಎಂದರೆ ಚಾರ್ಜಿಂಗ್ ಪಾಯಿಂಟ್‌ಗಳು. ಮುಂದುವರಿದ ದೇಶ ಎನಿಸಿರುವ ಜರ್ಮನಿಯಲ್ಲಿ ಈಗ ಸುಮಾರು 20,000 ಚಾರ್ಜಿಂಗ್ ಪಾಯಿಂಟ್‌ಗಳಿವೆ. ಇನ್ನು ಹನ್ನೊೊಂದು ವರ್ಷಗಳಲ್ಲಿ, ಅಂದರೆ 2030ರ ಸಮಯಕ್ಕೆೆ ಜರ್ಮನಿಯಲ್ಲಿ ಕೊನೆಯ ಪಕ್ಷ 10,00,000 ಚಾರ್ಜಿಂಗ್ ಪಾಯಿಂಟ್‌ಗಳು ಇರುವಂತೆ ನೋಡುಕೊಳ್ಳಬೇಕು ಎಂದು ಅಲ್ಲಿನ ಚಾನ್ಸೆೆಲರ್ ಅಂಜೆಲಾ ಮಾರ್ಕೆಲ್ ಹೇಳಿದ್ದಾಾರೆ. ಹಾಗೆ ನೋಡಹೋದರೆ, ಮುಂದುವರಿದಿರುವ ಜರ್ಮನಿಗೂ ಇದು ಸುಲಭ ಎನಿಸುವ ಕೆಲಸವೇನಲ್ಲ. ಕೇವಲ ಸರಕಾರದ ಒತ್ತಾಾಯದಿಂದಲೂ ಇದನ್ನು ಸಾಧಿಸುವುದು ಕಷ್ಟ. ಅದಕ್ಕೆೆಂದೇ, ಆಟೊಮೊಬೈಲ್ ಉದ್ಯಮದವರು ಸಹ ಇದರಲ್ಲಿ ಭಾಗವಹಿಸಬೇಕು ಎಂದು ಚಾನ್ಸಲರ್ ಹೇಳಿದ್ದಾಾರೆ.

ಜರ್ಮನಿಯೂ ಸೇರಿಕೊಂಡಿರುವ ಯುರೋಪಿಯನ್ ಯೂನಿಯನ್‌ನಲ್ಲಿ 2050ರ ಹೊತ್ತಿಿಗೆ ‘ತಟಸ್ಥ ಪರಿಸರ ಸ್ಥಿಿತಿ’ಯನ್ನು ಅಳವಡಿಸಬೇಕು ಎಂಬ ಮಹತ್ ಆಶಯ ಇದೆ. ಎಂದರೆ, ಜನರಿಂದ ಯಾವುದೇ ಮಾಲಿನ್ಯವು ಪರಿಸರಕ್ಕೆೆ ಸೇರದೇ ಇರುವಂತಹ, ಆರೋಗ್ಯಕರ ಸ್ಥಿಿತಿಯನ್ನು 2050ರ ಹೊತ್ತಿಿಗೆ ಹೊಂದಬೇಕು ಎಂಬ ಯೋಜನೆ ಅದು. ಈ ನಿಟ್ಟಿಿನಲ್ಲಿ, 2040ರ ಸಮಯದಲ್ಲಿ , ಇಂಧನ ಚಾಲಿತ ಎಲ್ಲಾಾ ವಾಹನಗಳ ಮಾರಾಟವನ್ನು ನಿಷೇಧಿಸಬೇಕು ಎಂದು ಫ್ರಾಾನ್‌ಸ್‌ ಯೋಚಿಸುತ್ತಿಿದೆ. ಪರಿಸರ ರಕ್ಷಣೆಗೆ ಪೂರಕ ಎನಿಸುವ ಇಂತಹ ಯೋಜನೆಗಳು ಯಶಸ್ವಿಿಯಾಗಬೇಕಾದರೆ, ಎಲ್ಲಾಾ ರೀತಿಯ ವಾಹನಗಳನ್ನು ಚಾರ್ಜ್ ಮಾಡಲು ವಿವಿಧ ಶಕ್ತಿಿಯ ಚಾರ್ಜಿಂಗ್ ಪಾಯಿಂಟ್‌ಗಳು ಎಲ್ಲರಿಗೂ, ಎಲ್ಲಾಾ ಕಡೆಯಲ್ಲೂ ಲಭ್ಯವಾಗಬೇಕು. ವಿದ್ಯುತ್ ಚಾಲಿತ ವಾಹನಗಳನ್ನು ಚಲಿಸಿಕೊಂಡು ಹೊರಟವರು, ಮುಂದಿನ ಚಾರ್ಜ್‌ನ್ನು ಎಲ್ಲಿ ಮಾಡುವುದು ಎಂದು ಚಿಂತಿಸುವಂತಾಗಬಾರದು.

ಜರ್ಮನಿಯ ಆಟೊಮೊಬೈಲ್ ತಯಾರಕರು, ಈ ದಿಸೆಯಲ್ಲಿ ಕಾರ್ಯಪ್ರವತ್ತರಾಗಿದ್ದು, ಹೆದ್ದಾಾರಿಯುದ್ದಕ್ಕೂ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಾಪಿಸುತ್ತಿಿದ್ದಾಾರೆ. ನೂರಿನ್ನೂ ಕಿಲೊಮೀಟರ್ ಚಲಿಸಿದ ನಂತರ, ಕಾಫಿ ಕುಡಿದು ಉಪಾಹಾರ ಸೇವಿಸುವಷ್ಟು ಸಮಯದಲ್ಲಿ, ಕಾರೊಂದನ್ನು ಸಂಪೂರ್ಣ ಚಾರ್ಜ್ ಮಾಡುವಷ್ಟು ದಕ್ಷ ಚಾರ್ಜರ್‌ಗಳನ್ನು ಆವಿಷ್ಕರಿಸಲಾಗುತ್ತಿಿದೆ. ಚಾರ್ಜಿಂಗ್ ಪಾಯಿಂಟ್ ಹೆಚ್ಚಳಗೊಂಡಷ್ಟೂ, ವಿದ್ಯುತ್ ಚಾಲಿತ ವಾಹನಗಳ ಮಾರಾಟದ ಸಂಖ್ಯೆೆ ಹೆಚ್ಚಳಗೊಳ್ಳುತ್ತದೆ ಎಂಬುದನ್ನು ಅರಿತಿರುವ ಆಟೊಮೊಬೈಲ್ ಸಂಸ್ಥೆೆಗಳು, ಅದಕ್ಕೆೆ ತಕ್ಕ ವ್ಯವಸ್ಥೆೆ ಮಾಡುತ್ತಿಿವೆ. 2030ರ ಹೊತ್ತಿಿಗೆ ಯಾವ ಸಂಸ್ಥೆೆಯು ಹೆಚ್ಚು ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಾಪಿಸುತ್ತದೋ, ಆ ಸಂಸ್ಥೆೆಯ ವಾಹನಗಳ ಮಾರಾಟ ಹೆಚ್ಚಳವಾಗುತ್ತದೆ ಎಂಬುದು ಸ್ಪಷ್ಟ.

ವಿದ್ಯುತ್ ಚಾಲಿತ ವಾಹನ ಎಂದರೆ, ಕಾರುಗಳ ಜತೆಯಲ್ಲೇ ಟ್ರಕ್ ಮತ್ತು ಬಸ್‌ಗಳೂ ಸೇರಿರುತ್ತವೆ. ಘನವಾಹನಗಳೂ ಸಾಕಷ್ಟು ದೂರ ವಿದ್ಯುತ್ ಶಕ್ತಿಿಯ ಸಹಾಯದಿಂದ ಚಲಿಸುವುಂತಾದಾಗ, ಈ ಅಭಿಯಾನಕ್ಕೆೆ ಹೆಚ್ಚಿಿನ ಅರ್ಥ ಬರುತ್ತದೆ. ಈ ವಾರದಲ್ಲಿ, ದೆಹಲಿಯಲ್ಲಿ ಅತಿ ಹೆಚ್ಚಿಿನ ಮಟ್ಟ ಮುಟ್ಟಿಿರುವ ವಾಯು ಮಾಲಿನ್ಯಕ್ಕೆೆ ಒಂದು ಮುಖ್ಯ ಕಾರಣವೆಂದರೆ, ಚಲಿಸುವ ವಾಹನಗಳು ಉಗುಳುವ ಹೊಗೆ ಮತ್ತು ಕಲ್ಮಶಗಳು. ಅಲ್ಲಿನ ಜನರು ಬೆಳಗಿನ ಹೊತ್ತಿಿನಲ್ಲಿ ವಾಕಿಂಗ್ ಮಾಡಬೇಡಿ ಎಂಬ ಸಲಹೆ ದೊರೆಯುವಷ್ಟಾಾಗಿದೆ, ಅಲ್ಲಿನ ವಾಯು ಮಾಲಿನ್ಯ. ದೆಹಲಿಯಂತಹ ನಗರದಲ್ಲಿ ಹೆಚ್ಚಿಿನ ಸಂಖ್ಯೆೆಯಲ್ಲಿ ವಿದ್ಯುತ್ ಚಾಲಿತ ವಾಹನಗಳು ಚಲಿಸುವಂತಾದರೆ, ಸಹಜವಾಗಿ ಅಷ್ಟರ ಮಟ್ಟಿಿಗಿನ ವಾಯುಮಾಲಿನ್ಯ ಕಡಿಮೆಯಾಗುತ್ತದೆ.

ನಮ್ಮ ದೇಶದ ನಗರಗಳಲ್ಲಿ ಚಲಿಸುವ ಬಹುಪಾಲು ವಾಹನಗಳು ವಿದ್ಯುತ್ ಚಾಲಿತ ವಾಹನಗಳಾಗಿರಬೇಕು ಎಂಬ ಯೋಜನೆಯನ್ನು ಹಾಕಿಕೊಂಡರೆ, ಮುಂದಿನ ದಿನಗಳಲ್ಲಾಾದರೂ, ದೆಹಲಿಯಲ್ಲಿ ಇಂದು ಕಂಡುಬಂದಿರುವ ತುರ್ತು ಸ್ಥಿಿತಿಯನ್ನು ಎದುರಿಸಬಹುದು. ಸಾಕಷ್ಟು ಸಂಖ್ಯೆೆಯ ಚಾರ್ಜಿಂಗ್ ಪಾಯಿಂಟ್‌ಗಳು ಲಭ್ಯವಿರುವ ಸ್ಥಳಗಳಲ್ಲಿ, ಸಹಜವಾಗಿಯೇ ವಿದ್ಯುತ್ ಚಾಲಿತ ವಾಹನಗಳ ಮಾರಾಟ ಹೆಚ್ಚಳಗೊಂಡೀತು, ಮತ್ತು ಅದರಿಂದಾಗಿ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ. ಜರ್ಮನಿಯು ಹಾಕಿಕೊಂಡಿರುವ ಕಾರ್ಯಯೋಜನೆಯ ರೀತಿಯೇ, ನಮ್ಮ ದೇಶದಲ್ಲೂ ವಿದ್ಯುತ್ ಚಾಲಿತ ವಾಹನಗಳ ಜನಪ್ರಿಿಯತೆ ಹೆಚ್ಚಿಿಸಲು ಸರಕಾರ ಕಾರ್ಯಪ್ರವೃತ್ತವಾಗಬೇಕಾಗಿದೆ.