Monday, 25th November 2024

ಮಕ್ಕಳಿಂದ ದೂರವಿಡಿ ಮೊಬೈಲ್ ಫೋನ್

*ಮಲ್ಲಪ್ಪ. ಸಿ. ಖೊದ್ನಾಪೂರ

ಇಂದಿನ ಮೊಬೈಲ್ ಯುಗದಲ್ಲಿ, ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡಬೇಕೆ, ಬೇಡವೆ ಎಂಬ ಪ್ರಶ್ನೆೆ ಎದುರಾಗುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತವಾಗಬಹುದು ಎಂದು ಅಧ್ಯಯನಗಳು ತಿಳಿಸಿವೆ.

ಇಂದಿನ ಕಂಪ್ಯುುಟರ್ ಯುಗದಲ್ಲಿ ಮೊಬೈಲ್, ಸ್ಮಾಾರ್ಟ್‌ಫೋನ್, ಐಪ್ಯಾಾಡ್, ಲ್ಯಾಾಪ್‌ಟಾಪ್, ಕಂಪ್ಯುುಟರ್‌ನಂತಹ ವಿನೂತನ ವಿದ್ಯುನ್ಮಾಾನ ಸಾಧನಗಳು ಕೈಯೊಳಗಿದ್ದರೆ ಇಡೀ ಜಗತ್ತೇ ನಮ್ಮ ಅಂಗೈಯಲ್ಲಿದ್ದಂತೆ. ನಮಗೆ ಅಗತ್ಯವಿರುವ ಎಲ್ಲ ಬಗೆಯ ವಿಷಯ ಜ್ಞಾಾನ, ಮಾಹಿತಿ, ಸಂಗೀತ, ಮನರಂಜನೆ, ಸುದ್ದಿ, ಕ್ರೀಡೆ, ಸಂಪರ್ಕ ಸಂದೇಶದಂತಹ ಇನ್ನಿಿತರ ಮಾಹಿತಿಗಳನ್ನು ಪಡೆಯುವದರ ಜೊತೆಗೆ ಮಾನಸಿಕ ನೆಮ್ಮದಿ ನೀಡಿ ಮನಸ್ಸನ್ನು ಪುಳಕಿತಗೊಳಿಸಬಲ್ಲ ಸಂಗತಿಗಳನ್ನು ನಾವು ಮೊಬೈಲ್‌ನಿಂದ ಪಡೆಯಬಹುದು. ಇಂದಿನ ನಮ್ಮ ಬದುಕು ಎಲ್ಲಾಾ ಮೊಬೈಲ್ ಮಯವಾಗುತ್ತಿಿದೆ ಎಂದರೆ ತಪ್ಪಾಾಗಲಿಕ್ಕಿಿಲ್ಲ. ಉದಾ-ಮಕ್ಕಳಿನಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಮೊಬೈಲ್ ಬಳಸುವವರಾಗಿದ್ದಾಾರೆ. ಹೀಗೆ ಎಲ್ಲಕ್ಕೂ ಮೊಬೈಲ್ ಬೇಕೇ ಬೇಕು ಎನ್ನುವಂತಹ ಪರಿಸ್ಥಿಿತಿ ನಮ್ಮದಾಗಿದೆ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಚಂದಮಾಮ ನ ತೋರಿಸಿ, ಮಕ್ಕಳಿಗೆ ಸಂಬಂಧಿಸಿದ ಹಾಡು ಹಾಡಿ ಊಟ ಮಾಡಿಸುತ್ತಿಿದ್ದರು. ಮಕ್ಕಳನ್ನು ಮಲಗಿಸಲ ಲಾಲಿ ಹಾಡು, ಜೋಜೋ ಪದ ಹಾಡಿ ನಮ್ಮ ಜನಪದ ಸಂಸ್ಕೃತಿಯ ಪರಿಚಯ ಮಾಡಿಸುತ್ತಿಿದ್ದರು. ಆದರೆ ಇಂದಿನ ನಮ್ಮ ಸಂಸ್ಕೃತಿ-ಸಂಸ್ಕಾಾರಗಳೆಲ್ಲಾಾ ಮಾಯವಾಗಿ ಕೇವಲ ಮೊಬೈಲ್ ಎಂಬ ಭೂತದ ಬೆನ್ನು ಹತ್ತಿಿ ಯಾಂತ್ರಿಿಕ ಜಗತ್ತಿಿನೆಡೆಗೆ ಸಾಗುತ್ತಿಿರುವ ತೀರ ಕಳವಳಕಾರಿ ಸಂಗತಿ.

ಮಕ್ಕಳು ಊಟ ಮಾಡೊಲ್ಲ, ನಿದ್ದೆೆ ಮಾಡೊಲ್ಲ ಮತ್ತು ಹೇಳಿದ ಮಾತು ಕೇಳೊಲ್ಲ ಎಂದರೆ ನಾವು ಅವರ ಕೈಗೆ ಮೊಬೈಲ್ ಕೊಟ್ಟು ಹಾಡು, ಗೇಮ್ ಹಚ್ಚಿಿ ಕೂಡ್ರಿಿಸುತ್ತೇವೆ. ತಾಂತ್ರಿಿಕತೆ ಮತ್ತು ತಂತ್ರಜ್ಞಾಾನ ಯುಗದತ್ತ ಮುಖ ಮಾಡುತ್ತಿಿರುವ ನಾವು ನಮ್ಮ ಮಕ್ಕಳ ಕಡೆಗೆ ಗಮನ ಕೊಡಲು ಸಾಧ್ಯವಾಗುತ್ತಿಿಲ್ಲ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುವದೆಂಬುದನ್ನು ಅರಿಯದೇ ಅವರನ್ನು ಮೊಬೈಲ್ ಪ್ರೀಯರನ್ನಾಾಗಿ ಮಾಡುತ್ತಿಿರುವದು ನಿಜಕ್ಕೂ ಆಂತಕಕಾರಿ.

ಮೊಬೈಲ್ ಅಥವಾ ಸ್ಮಾಾರ್ಟಫೋನ್‌ನಿಂದ ವಿಷಯ ಜ್ಞಾಾನ, ಅವಶ್ಯಕ ಮಾಹಿತಿ, ಸಂಗೀತ, ಗೇಮ್, ಕಾರ್ಟೂನ್, ಮತ್ತು ಇನ್ನಿಿತರ ಮನರಂಜನೆ ನೀಡುವ ಸೌಲಭ್ಯಗಳನ್ನು ಪಡೆದು ಬಹಳ ಕಲಿಕೆಯಲ್ಲಿ ಸಕ್ರೀಯವಾಗಿ ಮುಂದೆ ಇರಬಹುದು, ಬುದ್ಧಿಿವಂತಿಕೆಯನ್ನು ಹೆಚ್ಚಿಿಸಿಕೊಳ್ಳುತ್ತಿಿರಬಹುದು ಮತ್ತು ಸ್ಮಾಾರ್ಟ್‌ಫೋನ್ ನಂತೆ ಸ್ಮಾಾರ್ಟ್ ಕೂಡ ಆಗಿರಬಹುದು. ಆದರೆ ನಮ್ಮ ಮಕ್ಕಳು ಬಳಸುವ ಮೊಬೈಲ್ ಮತ್ತು ಸ್ಮಾಾರ್ಟ್‌ಫೋನ್‌ಗಳು ಎಷ್ಟರ ಮಟ್ಟಿಿಗೆ ಸುರಕ್ಷಿತ ಮತ್ತು ಅವುಗಳಿಂದ ಯಾವ ದುಷ್ಪರಿಣಾಮಗಳು ಆಗಬಹುದು ಎಂಬುದರ ಅರಿವೇ ಇಲ್ಲದೆ ನಾವು ಕಂಡು ಕಾಣದಂತೆ ಸಾಗುತ್ತಿಿದ್ದೇವೆ. ಇದರಿಂದ ಅತಿ ಚಿಕ್ಕ, ಏನೂ ಅರಿಯದ ಮತ್ತು ಎಳೆಯ ವಯಸ್ಸಿಿನಲ್ಲಿಯೇ ಮಕ್ಕಳು ಹೆಚ್ಚು ಪ್ರಭಾವಿತಗೊಳ್ಳುತ್ತಿಿದ್ದಾಾರೆ ಎಂಬುದನ್ನು ನಾವು ಅರಿತುಕೊಂಡು ಜಾಗೃತಗೊಳ್ಳಬೇಕಾದದ್ದು ಅವಶ್ಯಕವಾಗಿದೆ.

ಮೊಬೈಲ್ ಬಳಸುವದರಿಂದ ನಮ್ಮ ಮಕ್ಕಳು ಎನ್ನೆೆಲ್ಲಾಾ ಸಮಸ್ಯೆೆಗಳನ್ನು ಎದುರಿಸುತ್ತಾಾರೆ ಎಂಬ ಅಂಶ ಗೊತ್ತಾಾದರೆ ನಮಗೆ ಆಶ್ಚರ್ಯವಾಗುತ್ತದೆ. ಇದರಿಂದ ಪಬ್‌ಜಿ, ಗೇಮ್, ಟಿಕ್‌ಟಾಕ್, ಸಾಮಾಜಿಕ ಜಾಲತಾಣ, ಆತಂಕಕಾರಿ ಸಾಪ್ಟವೇರ್‌ಗಳು ಹಾಗೂ ಇನ್ನಿಿತರ ಅಶ್ಲೀಲ ಸಂಗತಿಗಳು ಮಕ್ಕಳ ಕೋಮಲವಾದ ಮನಸ್ಸನ್ನು ಕೆರಳಿಸಿ, ಪ್ರಚೋದಿಸಿ ಅವರನ್ನು ಗಮನ ಕೇಂದ್ರಿಿಸಿಕೊಂಡು ಕೊನೆಗೆ ಆತ್ಮಹತ್ಯೆೆ, ಜೀವ ಹಾನಿಯಂತಹ ಘಟನೆಳು ಸಂಭವಿಸುತ್ತಿಿರುವದು ಇತ್ತೀಚಿಗೆ ಕಂಡುಬರುತ್ತಿಿದೆ. ಅಷ್ಟೇ ಅಲ್ಲದೇ ಮಕ್ಕಳ ಮೃದು ಮತ್ತು ಕಾರಣ-ಪರಿಣಾಮಗಳ ಬಗ್ಗೆೆ ಅರಿವೇ ಇಲ್ಲದ ಮುಗ್ಧ ಕಂದಮ್ಮಗಳು, ಮಕ್ಕಳ ಪ್ರಪಂಚವೇ ಮೊಬೈಲ್‌ನಿಂದ ಆವರಿಸುತ್ತಿಿರೋ ಮತ್ತು ಮಕ್ಕಳನ್ನು ತನ್ನತ್ತ ಆಕರ್ಷಿತಗೊಳಿಸುತ್ತಿಿರೋ ಈ ಮೊಬೈಲ್ ಸೌಲಭ್ಯಗಳಿಗಿಂತಲೂ ತೀವ್ರತರವಾದ ದುಷ್ಪರಿಣಾಮಗಳನ್ನೇ ಬೀರುತ್ತಿಿದೆ.

ಮೊಬೈಲ್ ನಿಂದಾಗುವ ದುಷ್ಪರಿಣಾಮಗಳು
* ಹದಿಹರೆಯದ ಮತ್ತು ಯೌವ್ವನಾವಸ್ಥೆೆಯಲ್ಲಿರುವ ಮಕ್ಕಳು, ಹುಡುಗರು, ಯುವಕರಲ್ಲಿರುವ ಆಲೋಚನಾ ಶಕ್ತಿಿ ಕುಗ್ಗಲು ಹಾಗೂ ಕ್ಷೀಣಿಸಲು ಮೊಬೈಲ್ ಕಾರಣ.
* ಪಬ್‌ಜಿ ಗೇಮ್ ನಂತಹ ಯಾಂತ್ರಿಿಕ ಶಕ್ತಿಿಯ ನಿಯಂತ್ರಣಕ್ಕೊೊಳಪಟ್ಟು ಕೊನೆಗೆ ಸೋತು ಮಕ್ಕಳ ತಮ್ಮ ಪ್ರಾಾಣವನ್ನೇ ಕಳೆದುಕೊಳ್ಳುವ ಭೀತಿ.
* ಇದರಿಂದ ಮಕ್ಕಳು ಕಣ್ಣು, ಮೆದುಳು ಮತ್ತು ವಿವಿಧ ಶಾರಿರೀಕ ಬೆಳವಣಿಗೆಯ ಮೇಲೆ ಆರೋಗ್ಯದ ಅಡ್ಡ ಪರಿಣಾಮಗಳು ಆಗುತ್ತಿಿವೆ.

*ನಿರಂತರ ಮೊಬೈಲ್ ಬಳಕೆಯಿಂದ ಬಿಪಿ ಮತ್ತು ನರರೋಗಕ್ಕೆೆ ತುತ್ತಾಾಗುವಸಾಧ್ಯತೆ.
ಈ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿರುವ ಸಹಜ ಪ್ರಕ್ರೀಯೆಗಳಾದ ನಗುವದು, ಅಳುವದು, ಆಟವಾಡುವದು, ನಲಿದು-ಬೆರೆತು ಕುಣಿದು-ಕುಪ್ಪಳಿಸುವಂತಹ ಮುಗ್ಧ ಮನಸುಗಳ ಭಾವನೆಗಳು ಇಂದು ಮಾಯವಾಗುತ್ತಿಿವೆ.

ತೀವ್ರ ಬಳಕೆಯಿಂದ ವಿದ್ಯಾಾಬ್ಯಾಾಸ ಮತ್ತು ಶಿಕ್ಷಣದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿ ಕಲಿಕೆ, ಫಲಿತಾಂಶ ಕುಂಠಿತಗೊಳ್ಳುವದು. ಪ್ರೀತಿ-ವಾತ್ಸಲ್ಯ-ಮಮತೆ, ಜೀವನ, ಸಂಬಂಧ ಮತ್ತು ಮೌಲ್ಯಗಳ ಪರಿವೇಯೇ ಇಲ್ಲದೇ ಬದುಕುವ ಪರಿಸ್ಥಿಿತಿ ತಂದೊಡ್ಡಿಿದೆ.

ಮಕ್ಕಳು ತೀವ್ರ ಉದ್ವೇಗ, ಭಾವನಾತ್ಮಕ, ಆವೇಶ, ಆಕ್ರೋೋಶ, ಸೆನ್ಸಿಿಟ್ಹಿಿವ್ ಮತ್ತು ಹೈಪರ್ ಆಕ್ಟೀವ್ ಆಗಿ ಬದಲಾವಣೆಗೊಂಡು ಶಾಲಾ-ಕಾಲೇಜುಗಳಲ್ಲಿ, ಶೌಚಾಲಯಗಳಲ್ಲಿ ಅಸಭ್ಯ ವರ್ತನೆ ತೋರುತ್ತಿಿರುವದು ಮತ್ತು ವಿದ್ಯಾಾಭ್ಯಾಾಸ ಸಮಯದಲ್ಲಿ ತಮಗೆ ಬೇಕಿಲ್ಲದ ವಿಷಯಗಳ ಬಗ್ಗೆೆ ಅಂತರ್ಜಾಲ ಬಳಸಿ ತಿಳಿದುಕೊಳ್ಳುತ್ತಿಿದ್ದಾಾರೆ. ಮಕ್ಕಳ ಮನಸ್ಸಿಿನ ದಾರಿಯನ್ನು ತಪ್ಪಿಿಸುವಲ್ಲಿ ಮೊಬೈಲ್ ಬಳಕೆಯಾಗುತ್ತಿಿರುವದು ತೀರ ಆಂತಕಕಾರಿ ವಿಷಯವಾಗಿದೆ.

ಆದ್ದರಿಂದ ನಾವು ನಮ್ಮ ಮಕ್ಕಳಿಗೆ ನಮ್ಮ ಹಿಂದಿನ ಸಂಸ್ಕೃತಿ-ಸಂಸ್ಕಾಾರ, ಸಂಬಂಧಗಳು, ಮೌಲ್ಯಗಳು, ನಡೆ-ನುಡಿ, ಆಚಾರ-ವಿಚಾರ, ಬದುಕುವ ರೀತಿ-ನೀತಿ, ಜೀವನ ಕ್ರಮ, ಶೈಲಿ ಮತ್ತು ಸಂಪ್ರದಾಯ, ಪದ್ದತಿಗಳ ಬಗ್ಗೆೆ ತಿಳಿಸಿಕೊಟ್ಟು ನಮ್ಮ ಸಂಸ್ಕೃತಿ-ನಮ್ಮತನವನ್ನು ಮುಂದಿನ ಜನಾಂಗಕ್ಕೆೆ ಉಳಿಸಿ-ಬೆಳೆಸಿಕೊಂಡು ಹೋಗಬೇಕೆನ್ನುವದನ್ನು ಮನವರಿಕೆ ಮಾಡಬೇಕು. ಅಷ್ಟೇ ಅಲ್ಲದೇ ಮೊಬೈಲ್ ಎಂಬ ಭೂತದಿಂದ ದೂರವಿರಲು ಮಕ್ಕಳಿಗೆ ತಿಳಿ ಹೇಳಿ ದೂರವಿರುವಂತೆ ಕಾಪಾಡುವದು ಇಂದಿನ ಅನಿವಾರ್ಯತೆಯಾಗಿದೆ. ನಮ್ಮ ಮಕ್ಕಳನ್ನು ಸಹಜವಾಗಿರಲು ಬಿಡಿ. ಅವರು ಮೊಬೈಲ್ ನಂತಹ ಯಾಂತ್ರಿಿಕತೆಗೆ ಒಳಗಾಗಲು ಬಿಡಬೇಡಿ.

ಕೊನೆಯ ಮಾತು: ಇಷ್ಟೆೆಲ್ಲಾಾ ಅನಾಹುತ ಅಥವಾ ದುಷ್ಪರಿಣಾಮಗಳನ್ನು ಹೊಂದಿರುವ ಮೊಬೈಲ್‌ನಿಂದ ನಾವು ಮಕ್ಕಳನ್ನು ದೂರವಿರಿಸುವ ಹಾಗೂ ಬಳಸದಂತೆ ತಡೆಯುವ ಕ್ರಮಗಳನ್ನು ಕೈಗೊಳ್ಳಬೇಕಾಗಿರುವದು ಇಂದಿನ ಅಗತ್ಯತೆಯಾಗಿದೆ. ಆದ್ದರಿಂದ ದೊಡ್ಡವರು ಮಕ್ಕಳ ಮುಂದೆ ಮೊಬೈಲ್ ಬಳಸುವದನ್ನು ಕಡಿಮೆ ಮಾಡಿ, ಮಕ್ಕಳ ಬದುಕಿಗೆ ಮಾದರಿಯಾಗಬೇಕಾಗಿದೆ. ಮೊದಲ ನಾವು ಬದಲಾಗಬೇಕು – ಅಂದಾಗ ನಮ್ಮ ಮಕ್ಕಳ ಭವಿಷ್ಯವನ್ನು ನಾವು ಬದಲಾಯಿಸಬಹುದು ಎಂಬುದನ್ನು ನಾವೆಲ್ಲರೂ ಅರಿತುಕೊಂಡು ಜಾಗೃತಗೊಳ್ಳಬೇಕು. ಒಂದು ವೇಳೆ ಮಕ್ಕಳು ಮೊಬೈಲ್ ಬಳಸುವದು ಅಗತ್ಯವೆಂದಾದರೆ ಯಾವ ವಿಷಯಗಳನ್ನು ನೋಡುತ್ತಿಿದ್ದಾಾರೆ ಮತ್ತು ಗೂಗಲ್‌ನಲ್ಲಿ ಏನನ್ನು ಸರ್ಚ ಮಾಡುತ್ತಿಿದ್ದಾಾರೆಂಬ ಬಗ್ಗೆೆ ಗಮನ ವಹಿಸಬೇಕು. ಮೊಬೈಲ್ ಬದಲಾಗಿ ಮಕ್ಕಳಲ್ಲಿ ಚಿತ್ರ ಬಿಡಿಸುವ, ಬಣ್ಣ ಹಾಕುವ, ಹಾಡು ಹಾಡುವ, ಓದು-ಬರಹದಲ್ಲಿ ಆಸಕ್ತಿಿ ಮೂಡಿಸುವದು ಮತ್ತು ಮನರಂಜನೆಗಾಗಿ ಪಾರ್ಕ್ ಮತ್ತು ಕ್ರೀಡೆ-ಆಟೋಟಗಳಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಪ್ರೇರೇಪಿಸುವತ್ತ ಕಾರ್ಯೋನ್ಮುಖರಾಗಬೇಕಾಗಿದೆ.

ಮೊಬೈಲೇ ಜಗತ್ತು ಅಲ್ಲ. ಅದು ಒಂದು ಸಂಪರ್ಕ-ಸಂವಹನದ ಸಾಧನವಷ್ಟೇ ಎಂಬುದನ್ನು ಮನಗಂಡು ಜಾಗೃತಿ ಮೂಡಿಸಿ, ಕೇವಲ ಅವಶ್ಯಕತೆಯಿದ್ದಾಾಗ ಬಳಸಿರೆಂದು ಹೇಳುತ್ತಾಾ ಪುಸ್ತಕ ಓದುವ ಹವ್ಯಾಾಸ ಬೆಳೆಸುವದರೊಂದಿಗೆ ಜ್ಞಾಾನವನ್ನು ಹೆಚ್ಚಿಿಸಲು ಪ್ರಯತ್ನಿಿಸಿ ಎಂಬುದೇ ನಮ್ಮ ಆಶಯ, ಗುರಿ ಆಗಬೇಕು.