ಕರೋನಾದ ಹೊಡೆತದಿಂದ ಚೇತರಿಸಿಕೊಳ್ಳುವ ಮೊದಲೇ ರಾಜ್ಯಾದ್ಯಂತ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ರಾಜ್ಯವನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ. ಪ್ರತಿ ವರ್ಷ ನೆರೆ ಹಾವಳಿಗೆ ತುತ್ತಾಗುವ ಉತ್ತರ ಕರ್ನಾಟಕದ ಜನತೆ ಈ ಬಾರಿಯೂ ಬೀದಿಗೆ ಬಿದ್ದಿದ್ದಾರೆ.
ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಧಾರವಾಡ, ಹಾವೇರಿ ಸೇರಿದಂತೆ ರಾಜ್ಯದ ಅರ್ಧದಷ್ಟು ಜಿಲ್ಲೆ ಗಳಲ್ಲಿ ಮಳೆಯ ರುದ್ರನರ್ತನ ಮುಂದುವರಿದಿದೆ. ಪರಿಣಾಮವಾಗಿ ವರ್ಷವಿಡೀ ಬೆಳೆದ ರೈತರ ಫಸಲು ಪ್ರವಾಹದ ಪಾಲಾಗಿದೆ. ದೇಶದ ಬೆನ್ನೆಲುಬು ರೈತ ಎನ್ನುವ ನಾವು ಅಂತಹ ರೈತನಿಗೆ ಈಗ ಸಂಕಷ್ಟ ಪರಿಸ್ಥಿತಿ ಬಂದೊದಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟಗಳು ನಾಚಿಕೆಗೇಡಿನ ಸಂಗತಿ. ಒಂದೆಡೆ ಜನರು ತಮ್ಮ ಜೀವ, ಜೀವನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಇನ್ನೊಂದೆಡೆ ರಾಜಕಾರಣಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಪರದಾ ಡುತ್ತಿರುವುದು ಎಂಥವ ರಿಗೂ ಹೇಸಿಗೆ ಹುಟ್ಟಿಸಿದೆ.
ಆದ್ದರಿಂದ ನಾಯಕತ್ವ ಬದಲಾವಣೆಯನ್ನು ಪಕ್ಕಕ್ಕರಿಸಿ, ಪ್ರವಾಹದಿಂದ ಪರಿತಪಿಸುತ್ತಿರುವ ಜನ, ಜಾನುವಾರು ಗಳ ಸಹಾಯಕ್ಕೆ ಧಾವಿಸಬೇಕಾದದ್ದು ಆಡಳಿತ ನಡೆಸುವವರ ಆದ್ಯ ಕರ್ತವ್ಯ. ಎಲ್ಲ ಸಚಿವರು, ಶಾಸಕರು ರಾಜಕಾರಣ ಬಿಟ್ಟು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕು. ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ ಆಶ್ರಯ ಕಳೆದುಕೊಂಡವರಿಗೆ ಆಶ್ರಯವಾಗಿ ನಿಲ್ಲಬೇಕಿದೆ.
ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಈಗಲೇ ಮೇವು ಖರೀದಿಗೆ ಮುಂದಾಗ ಬೇಕಿದೆ. ಕಾಳಜಿ ಕೇಂದ್ರಗಳಲ್ಲಿ ಕರೋನಾ ಹರಡದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆರೋಗ್ಯ ಇಲಾಖೆ ಅಽಕಾರಿಗಳು ಅಚ್ಚುಕಟ್ಟಾಗಿ ನಿಭಾಯಿಸ ಬೇಕಿದೆ.