ನವದೆಹಲಿ: ಯಡಿಯೂರಪ್ಪನವರು ಪ್ರಧಾನಿ ಮೋದಿಯ ಇತ್ತೀಚಿನ ಬಲಿಪಶು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿರುವುದು ಕಾಂಗ್ರೆಸ್‌ಗೆ ಆಹಾರವಾಗಿದೆ. ಯಡಿಯೂರಪ್ಪ ರಾಜೀನಾಮೆ ವಿಷಯವನ್ನು ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಬಳಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಆಯ್ಕೆ ಶಾಸಕರ ಇಚ್ಛೆಯ ಪ್ರಕಾರ ನಡೆಯುವುದಿಲ್ಲ. ಬದಲಾಗಿ ದೆಹಲಿಯ ದಬ್ಬಾಳಿಕೆಯ ಪ್ರಕಾರ ನಡೆಯಲಿದೆ. ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿದ್ದೇ ಅಕ್ರಮವಾಗಿ, ಭ್ರಷ್ಟಾಚಾರ ಹಾಗೂ ಶಾಸಕರ ಪಕ್ಷಾಂತರದಿಂದ ಬಂದಿ ದ್ದಾಗಿದೆ ಎಂದು ಆರೋಪಿಸಿದ್ದಾರೆ.
ಒತ್ತಾಯಪೂರ್ವಕ ರಾಜೀನಾಮೆ ಕೊಡಿಸುತ್ತಿರುವ ಮೋದಿ ಅವರ ಇತ್ತೀಚಿನ ಬಲಿಪಶು ಯಡಿಯೂರಪ್ಪ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ ಆರೋಪಿಸಿದ್ದಾರೆ.
ಸುಮಿತ್ರಾ ಮಹಾಜನ್, ಸುಷ್ಮಾ ಸ್ವರಾಜ್, ಉಮಾ ಭಾರತಿ, ಸಿಪಿ ಠಾಕೂರ್, ಎಕೆ ಪಟೇಲ್, ಹರೇನ್ ಪಾಂಡ್ಯ, ಹರೇನ್ ಪಾಠಕ್, ಕಲ್ಯಾಣ್ ಸಿಂಗ್, ಮುಂತಾದ ವರನ್ನು ಪಕ್ಷದಲ್ಲಿ ಒತ್ತಾಯಪೂರ್ವಕವಾಗಿ ನೇಪಥ್ಯಕ್ಕೆ ಸರಿಸಲಾ ಯಿತು. ಇತ್ತೀಚಿನ ದಿನಗಳಲ್ಲಿ ರವಿಶಂಕರ್ ಪ್ರಸಾದ್, ಹರ್ಷವರ್ಧನ್, ಸುಶೀಲ್ ಮೋದಿ ಅವರನ್ನು ನೇಪಥ್ಯಕ್ಕೆ ಸರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದಾರೆ.