Saturday, 23rd November 2024

ಒಲಿಂಪಿಕ್ಸ್ ಕ್ರೀಡಾಕೂಟ: 4 ಮಂದಿಗೆ ಕೋವಿಡ್ ಸೋಂಕು

ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟ ದಲ್ಲಿ ಮತ್ತೆ 4 ಮಂದಿಗೆ ಕೋವಿಡ್ ಸೋಂಕು ಒಕ್ಕರಿಸಿದೆ. ಈ  ಮೂಲಕ ಕ್ರೀಡಾಕೂಟದಲ್ಲಿನ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದೆ.

4 ಮಂದಿಗೆ ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಮೂರು ಮಂದಿ ಅಥ್ಲೀಟ್ ಗಳ ಸಿಬ್ಬಂದಿಗಳು ಎಂದು ತಿಳಿದು ಬಂದಿದೆ. 20 ಮಂದಿ ಸೋಂಕಿತರು ಕ್ರೀಡಾಗ್ರಾಮ ದಲ್ಲಿನ ಪ್ರತ್ಯೇಕ ಚಿಕಿತ್ಸಾ ಕೇಂದ್ರದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಸೋಮವಾರ ಮೂರು ಮಂದಿ ಅಥ್ಲೀಟ್ ಗಳು ಸೇರಿದಂತೆ 16ಮಂದಿ ಸೋಂಕಿಗೆ ತುತ್ತಾಗಿದ್ದರು.

ಟೆನ್ನಿಸ್ ಆಟಗಾರ ಜೀನ್ ಜೂಲಿಯನ್ ರೋಜರ್ ಸೋಂಕಿಗೀಡಾಗಿದ್ದಾರೆ. ರೋಜರ್ ಮತ್ತು ಅವರ ಪಾರ್ಟ್​ನರ್ ವೆಸ್ಲೀ ಕೂಲ್ಹಾಫ್ ತಮ್ಮ ಎರಡನೇ ಸುತ್ತಿನ ಪಂದ್ಯವನ್ನು ಸೋಮವಾರ ಆಡಬೇಕಿತ್ತು, ಆದರೆ ಅವರಿಬ್ಬರನ್ನು ಐಸೋಲೇಷನ್​ನಲ್ಲಿ ಇಡಲಾಗಿದೆ ಎಂದು ಐಟಿಎಫ್ ಹೇಳಿದೆ.

ಜೆಕ್ ಗಣರಾಜ್ಯ, ಅಮೆರಿಕ, ಚಿಲಿ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ಸೇರಿವೆ. ಇವುಗಳಲ್ಲಿ, ನಾಲ್ಕು ಕ್ರೀಡಾ ಪಟುಗಳು ಕೂಡ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ ಜೆಕ್ ಗಣರಾಜ್ಯದ ಬೀಚ್ ವಾಲಿಬಾಲ್ ಮತ್ತು ರೋಡ್ ಸೈಕ್ಲಿಂಗ್ ಅಥ್ಲೀಟ್ ಗಳು ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ.