Friday, 22nd November 2024

ನೂರೈವತ್ತು ರೂಪಾಯಲ್ಲಿ ಜರುಗಿದ ಮದುವೆ

*ಹೊನಕೇರಪ್ಪ ಸಂಶಿ

ಏನು ಅರಿಯದೆ ನಾನೊಮ್ಮೆೆ ಹಿರಿಯರಿಗೆ ಪ್ರಶ್ನಿಿಸಿದ ಪ್ರಶ್ನೆೆ ಮದುವೆಯಲ್ಲಿ ಆಮಂತ್ರಣ ಪತ್ರಿಿಕೆ ಯಾಕೆ ಮಾಡಿಸ್ತಾಾರೆ? ಮದುವೆಯ ಸಮಯದಲ್ಲಿ ಲಗ್ನಪತ್ರಿಿಕೆಗೆ ಸಾಮಾಜಿಕ ಮಹತ್ವ ಇದೆ. ಕಾಲ ಬದಲಾದಂತೆ ಆಮಂತ್ರಣ ಪತ್ರಿಿಕೆ ಹಂಚುವ ಮತ್ತು ರೂಪಗೊಳಿಸುವ ವಿಧಾನದಲ್ಲಿ ಬದಲಾಗಿದೆ. ಪತ್ರಿಿಕೆಯ ಉದ್ದೇಶ ಮಾತ್ರ ಬದಲಾಗಿಲ್ಲ. ಅದರ ಮೂಲ ಪಬ್ಲಿಿಸಿಟಿ ಆದ್ರೂ ಅದೊಂದು ಮದುವೆ ಜರುಗಿರುವುದಕ್ಕೆೆ, ಕಾನೂನಾತ್ಮಕ ಸಾಕ್ಷಿ. ಪತಿ ಪತ್ನಿಿಯರ ನಡುವೆ ಕಲಹಗಳಾಗಿ ಕೋರ್ಟ್ ಮೆಟ್ಟಲು ಏರಿದಾಗ, ಲಗ್ನಪತ್ರಿಿಕೆಗಳು ಪ್ರಮುಖ ಪಾತ್ರ ವಹಿಸಿರುವ ಉದಾಹರಣೆಗಳು ನಮ್ಮ ಮುಂದೆ ಇವೆ. ದಂಪತಿಗಳಾಗಲು ಸಮಾಜ ನಮಗೆ ನೀಡುವ ಮನ್ನಣೆಯೆ ಮದುವೆ.

ಮದುವೆಯ ಪ್ರಚಾರದ ಮಾಧ್ಯಮವಾಗಿ ಲಗ್ನಪತ್ರ ಬಳಸಿಕೊಳ್ಳವುದು ಹಳೆಯ ಸಂಪ್ರದಾಯ. ಇಂದಿನ ಸಾಮಾಜಿಕ ಮಾಧ್ಯಮಗಳು ಫೇಸ್ಬುಕ್, ವಾಟ್ಸ್ಯಾಾಪ್, ಟ್ವಿಿಟರ್ ಬರುವುದಕ್ಕಿಿಂತ ಮುಂಚೆ ಮದುವೆ ಮಾಹಿತಿಯನ್ನು ಸಮಾಜಕ್ಕೆೆ, ಸಂಬಂಧಿಕರಿಗೆ ತಲುಪಿಸುವ ಸೇತುವೆಯಾಗಿ ಆಮಂತ್ರಣ ಪತ್ರಿಿಕೆಗಳು ಕೆಲಸ ಮಾಡುತ್ತಿಿದ್ದವು. ಆದರೆ ಇಂದು ಹಾರ್ಡ್ ಕಾಪಿಗೂ ಅಧಿಕವಾಗಿ ಬಳಕೆಯಲ್ಲಿರುವುದು ಸಾಪ್‌ಟ್‌ ಕಾಪಿ, ಎಲ್ಲ ಕಾರ್ಯಕ್ರಗಳಲ್ಲಿ ಡಿಜಿಟಲ್ ಆಮಂತ್ರಣ ಪತ್ರಿಿಕೆ ಇಂದು ಚಾಲ್ತಿಿಯಲ್ಲಿದೆ. ಬರುವ ದಿನಗಳಲ್ಲಿ ಮುದ್ರಿಿತ ವಿವಾಹ ಪತ್ರಿಿಕೆ ಸಂಪೂರ್ಣ ಸ್ತಬ್ದವು ಆಗಬಹುದು.

ಧರ್ಮದಲ್ಲಿ ಪೂಜಿಸುವ ದೇವರ ಆಶಿರ್ವಾದದಿಂದ, ದಂಪತಿಗಳು ಹೇಗಿರಬೇಕೆನ್ನುವ ಹಿತನುಡಿಯ ಸಾಲುಗಳೊಂದಿಗೆ ಆರಂಭವಾಗುತ್ತಿಿದ್ದ ಲಗ್ನಪತ್ರಿಿಕೆಯಲ್ಲಿ, ವಧು, ವರ ಬಂಧು ಮಿತ್ರ ಹೆಸರು ಹಿತೈಷಿಗಳ ಹೆಸರು ಇರುತ್ತಿಿದ್ದವು. ಇಂದು ಅದಕ್ಕೂ ಆಧುನಿಕತೆಯ ಸ್ಪರ್ಶವನ್ನು ಸಂಪೂರ್ಣವಾಗಿ ಬದಲಿಸಿದ್ದೇವೆ. ನಮ್ಮ ಪುಣ್ಯ ಸಂಬಂಧಗಳಿಗೆ ಆಧುನಿಕತೆಯ ಸ್ಪರ್ಶ ನೀಡುವ ಮನಸ್ಸು ಮಾಡಿಲ್ಲ.

ಲಗ್ನಪತ್ರಿಿಕೆಯ ವಿಷಯ ಚರ್ಚೆಗೆ ಬರಲು ಕಾರಣ,ಮನೆಯಲ್ಲಿ ಸಿಕ್ಕ ಅಜ್ಜಿಿಯ ಲಗ್ನಪತ್ರಿಿಕೆ. ನಮ್ಮ ಮನೆಯಲ್ಲಿ ಅಜ್ಜಿಿ ಕಾಲವಾಗಿ ಬಹಳ ದಿನಗಳಾಗಿವೆ. ಆದರೆ ಅವರ ಜೀವನದ ಪಳಿಯುಳಿಕೆ ಎನ್ನುವಂತೆ ಅವರ ಲಗ್ನಪತ್ರಿಿಕೆ ಮನೆಯಲ್ಲಿ ಇಂದಿಗೂ ಇದೆ. ಅದರ ಜೊತೆಗೆ ಅವರ ಮದುವೆಯಲ್ಲಿ ಬಂದು ಬಳಗ ಉಡುಗುರೆ ರೀತಿಯಲ್ಲಿ ಮುಯ್ಯಿಿ, ಮಾಡಿರುವ ವಸ್ತುಗಳು ನಮ್ಮ ಮನೆಯಲ್ಲಿ ಇಂದಿಗೂ ಇವೆ. ವಸ್ತುಗಳ ಜತೆ ಭಾವನಾತ್ಮಕ ಸಂಬಂಧ ಹೊಂದಿರುವುದರಿಂದ ಅಜ್ಜಿಿಯ ಬಳಸುತ್ತಿಿದ್ದ ವಸ್ತುಗಳನ್ನು ಇಂದಿಗೂ ಉಳಿದುಕೊಂಡಿವೆ.

ಅವರ ಮದುವೆಯ ಸಮಯದಲ್ಲಿ ಮುಯ್ಯಿಿ ಮಾಡುವ ಪದ್ಧತಿ ಇತ್ತು. ಅದರ ಲಿಸ್‌ಟ್‌‌ನ್ನು ಇನ್ನೂ ಜೋಪಾನವಾಗಿ ಕಾಯ್ದುಕೊಂಡು ಬಂದಿದ್ದರು ಅಮ್ಮ. ಹಣದ ಮುಯ್ಯಿಿ ನೋಡಿದಾಗ ನಗು ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವೇ ಆಗೊಲ್ಲ. ಹತ್ತು ಪೈಸೆ, ನಾಲ್ಕಾಾಣೆ, ಎಂಟಾಣೆ, ಹೆಚ್ಚೆೆಂದರೆ ಒಂದು ರೂಪಾಯಿ, ಸೀರೆಯ ಬ್ರ್ಯಾಾಂಡ್ ಸಹಿತ ಹೆಸರುಗಳು ಅದರಲ್ಲಿ ಇವೆ. ಸಿಲ್ಲಿ ಎನ್ನಿಿಸುವ ಎಷ್ಟೊೊ ಹೆಸರು ಅದರಲ್ಲಿ ಇವೆ. ನಮಗೆ ಸಿಲ್ಲಿ ಎನ್ನಿಿಸಿದರು ಅವರಿಗೆ ಅದು ಬೆಲೆಕಟ್ಟಲಾಗದ ನೆನೆಪುಗಳ ಹೊತ್ತಿಿಗೆ ಎಂದು ಎನ್ನಿಿಸಿದ್ದು ಅಮ್ಮನಾಡಿದ ಮಾತುಗಳಿಂದ.

ಮಹಾನಗರಗಲ್ಲಿ ಮದುವೆ ಜರುಗುವ ಸಮಯ ಸೇರಿದಂತೆ, ಸ್ಥಳವು ಬದಲಾಗಿದೆ. ಸೂರ್ಯೋದಯದ ಸಮಯದಲ್ಲಿ, ಮನೆಯಲ್ಲಿ ಅಂಗಳದಲ್ಲಿ, ಹಸಿರು ಹಂದರದಲ್ಲಿ, ಊರು ಜನರ ಸಮ್ಮುಖದಲ್ಲಿ ನೆಡೆಯುತ್ತಿಿದ್ದ ಮದುವೆಗಳು ಇಂದು ಕಲ್ಯಾಾಣ ಮಂಟಪದಲ್ಲಿ ನೆಡೆಯುತ್ತಿಿವೆ. ನಮ್ಮ ಅನುಕೂಲಕ್ಕೆೆ ತಕ್ಕಂತೆ ಸಂಪ್ರದಾಯಗಳನ್ನು ಬದಲಿಸಿಕೊಂಡು ಬಂದಿದ್ದೇವೆ. ಅದು ಸಾಮಾಜಿಕವಾಗಿ ಉತ್ತಮ ಬೆಳವಣಿಗೆ. ಧರ್ಮ ಸಂಪ್ರದಾಯಗಳು ಬೆಳವಣಿಗೆಗೆ ಸಹಕಾರಿಯಾಗಬೇಕಲ್ಲವೆ.

ನೂರೈವತ್ತು ರೂಪಾಯಲ್ಲಿ ಒಂದು ಮದುವೆ
ಅದು ಪ್ರೇಮ ವಿವಾಹವಾದ್ರೂ ಬಹಳ ಸರಳ, ಮೌಲ್ಯಗಳನ್ನು ಹೊಂದಿದ ಮದುವೆ. ವೆಚ್ಚದ ಮದುವೆಗಳು ನೀಡದ ಜೀವನ ಮೌಲ್ಯಗಳನ್ನು ಅಂದಿನ ನೂರೈವತ್ತು ರೂಪಾಯಿಯಲ್ಲಿ ಆದ ಸರಳ ಮದುವೆ ನವ ದಂಪತಿಗೆ ನೀಡಿತ್ತು. ಎರಡು ಹೂವಿನ ಹಾರ, ಅರಿಸಿಣದ ದಾರ, ಯಾರೊ ಸಂಬಂಧವೆ ಇಲ್ಲದವರು ನೀಡಿದ ಸಾರಿ, ಪಂಚೆ. ಹಿರಿಯರು ಆ ಸಮಯದಲ್ಲಿಯೇ ಕೂಡಿಸಿಕೊಟ್ಟ ಹಣದಲ್ಲಿ ತಂದ ಮಂಡಕ್ಕಿಿ, ತಿಂಡಿ ತಿನಿಸುಗಳು ಅಷ್ಟೆೆ. ಸಮಯದಲ್ಲಿ ಅವರ ಭಾಗಕ್ಕೆೆ ಇದ್ದ ಸೌಲಭ್ಯಗಳು. ಮದುವೆಗೆ ಲಗ್ನಪತ್ರಿಿಕಗೆಯ ಮುದ್ರಣವು ಇರಲಿಲ್ಲ. ಹಿರಿಯರ ಗೊರ್ತು ಮಾಡಿರಲಿಲ್ಲ. ಸಮಾಜ ರೂಪಿಸಿಕೊಂಡ ವಿವಾಹ ಸಂಪ್ರದಾಯಗಳನ್ನು ಪಾಲಿಸಲಿಲ್ಲ. ಅವರು ಇಂದು ಚೆನ್ನಗಿಯೇ ಇದ್ದಾಾರೆ. ಅವರಿಗೆ ಮಕ್ಕಳು ಇವೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಗೌರವಯುತವಾಗಿಯೂ ಇದ್ದಾಾರೆ. ಸರಳ ಮದುವೆ ಅವರಿಗೆ ನೀಡಿದ ಜೀವನ ಮಾರ್ಗದರ್ಶನದ ಮೌಲ್ಯಗಳನ್ನು. ಹೆಚ್ಚು ವೆಚ್ಚ ಮಾಡಿ ಮಾಡಿದ ವಿವಾಹಗಳು ನೀಡುವಲ್ಲಿ ಸೋತು ಹೋದ ಘಟನೆಗಳನ್ನು ಕೇಳಿದಾಗ, ನೋಡಿದಾಗೆಲ್ಲ ನೂರೈವತ್ತು ರೂಪಾಯಿ ಮದುವೆ ಬರುತ್ತೆೆ.

.