ಮುಂಬೈ: ಕಳೆದ ಬುಧವಾರ ಸಾಕಷ್ಟು ನಷ್ಟಕ್ಕೆ ಸಾಕ್ಷಿಯಾಗಿದ್ದ ಭಾರತದ ಷೇರುಪೇಟೆ ಗುರುವಾರ ಸೆನ್ಸೆಕ್ಸ್ 224 ಪಾಯಿಂಟ್ಸ್ ಏರಿಕೆಗೊಂಡಿದ್ದು, ನಿಫ್ಟಿ 70 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 224.86 ಪಾಯಿಂಟ್ಸ್ ಹೆಚ್ಚಳಗೊಂಡು 52668.57 ತಲುಪಿದೆ. ಎನ್ಎಸ್ಇ ಸೂಚ್ಯಂಕ ನಿಫ್ಟಿ 70.60 ಪಾಯಿಂಟ್ಸ್ ಏರಿಕೆ ಗೊಂಡು 15780 ಪಾಯಿಂಟ್ಸ್ ಮುಟ್ಟಿದೆ. ಆರಂಭದಲ್ಲಿ 1484 ಷೇರುಗಳು ಏರಿಕೆಗೊಂಡರೆ, 353 ಷೇರುಗಳು ಕುಸಿದವು ಮತ್ತು 61 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಬುಧವಾರ ಭಾರತೀಯ ಷೇರುಪೇಟೆ ಸೆನ್ಸೆಕ್ಸ್ 135 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 37.05 ಪಾಯಿಂಟ್ಸ್ ಇಳಿಕೆಯೊಂದಿಗೆ 15700 ಮಟ್ಟದಲ್ಲೇ ಉಳಿದಿತ್ತು.
ಟಾಟಾ ಮೋಟಾರ್ಸ್ನ ಷೇರುಗಳು 5 ರೂ.ಗಳ ಲಾಭದೊಂದಿಗೆ 289.70 ರೂ., ಟೆಕ್ ಮಹೀಂದ್ರಾ ಷೇರುಗಳು 14 ರೂ.ಗಳ ಏರಿಕೆ ಕಂಡು 1,134.00 ರೂ., ಭಾರ್ತಿ ಏರ್ಟೆಲ್ನ ಷೇರು 7 ರೂ.ಗಳ ಲಾಭದೊಂದಿಗೆ 574.40 ರೂ. ತಲುಪಿದೆ.