Friday, 22nd November 2024

ಒಲಿಂಪಿಕ್ಸ್ ಪದಕ ವಿಜೇತರಿಗೆ ಗೋ ಫಸ್ಟ್, ಸ್ಟಾರ್ ಏರ್’ನಿಂದ ಉಚಿತ ಪ್ರಯಾಣದ ಆಫರ್

ನವದೆಹಲಿ: ಗೋ ಫಸ್ಟ್ ಮತ್ತು ಸ್ಟಾರ್ ಏರ್ ಎಲ್ಲಾ ಆರು ಭಾರತೀಯ ಕ್ರೀಡಾಪಟುಗಳಿಗೆ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಪುರುಷರ ಹಾಕಿ ತಂಡಕ್ಕೆ ಉಚಿತ ಪ್ರಯಾಣದ ಆಫರ್ ನೀಡಿತು.

ಭಾರತದ 13 ನಗರಗಳನ್ನು ಸಂಪರ್ಕಿಸುವ ಪ್ರಾದೇಶಿಕ ವಾಹಕ ಸ್ಟಾರ್ ಏರ್, ಪದಕ ವಿಜೇತರಿಗೆ ಜೀವಮಾನದ ಉಚಿತ ವಿಮಾನ ಪ್ರಯಾಣವನ್ನು ನೀಡುವು ದಾಗಿ ಹೇಳಿದೆ. ಭಾರತವು ಒಲಿಂಪಿಕ್ಸ್‌ ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳೊಂದಿಗೆ ತನ್ನ ಅಭಿಯಾನ ಮುಗಿಸಿತು.

ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಶನಿವಾರ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಚಿನ್ನದ ಪದಕ ಗೆದ್ದ ನಂತರ, ಇಂಡಿಗೋ ಅವರಿಗೆ ಒಂದು ವರ್ಷದವರೆಗೆ ಅನಿಯಮಿತ ಉಚಿತ ಪ್ರಯಾಣ ನೀಡುವುದಾಗಿ ಘೋಷಿಸಿತ್ತು.

ಗೋ ಫಸ್ಟ್, ಭಾನುವಾರ ಪ್ರಕಟಣೆಯಲ್ಲಿ, ಒಲಿಂಪಿಕ್ಸ್‌ನಲ್ಲಿ ಭಾರತದ ಅತ್ಯುತ್ತಮ ಏಳು ಪದಕಗಳನ್ನು ಗೆದ್ದಿರುವುದಕ್ಕಾಗಿ ಮುಂದಿನ ಐದು ವರ್ಷಗಳವರೆಗೆ, ಎಲ್ಲಾ ಪದಕ ವಿಜೇತರಿಗೆ ಉಚಿತ ಪ್ರಯಾಣ ನೀಡುತ್ತಿದೆ’ ಎಂದು ಹೇಳಿದೆ.

‘ಏಳು ಒಲಿಂಪಿಕ್ಸ್ ಪದಕ ವಿಜೇತರು ಮೀರಾಬಾಯಿ ಚಾನು (ಭಾರ ಎತ್ತುವಿಕೆ), ಪಿ.ವಿ.ಸಿಂಧು (ಬ್ಯಾಡ್ಮಿಂಟನ್), ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ಪುರುಷರ ಹಾಕಿ ತಂಡ, ರವಿ ಕುಮಾರ್ ದಹಿಯಾ (ಕುಸ್ತಿ), ಬಜರಂಗ್ ಪುನಿಯಾ (ಕುಸ್ತಿ) ಮತ್ತು ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (ಜಾವೆಲಿನ್ ಥ್ರೋ ) ಮುಂದಿನ ಐದು ವರ್ಷಗಳವರೆಗೆ ಯಾವುದೇ ಗೋ ಫಸ್ಟ್ ಸೆಕ್ಟರ್‌ಗಳಿಗೆ ಉಚಿತ ವಿಮಾನ ಪ್ರಯಾಣ ಒದಗಿಸಲಾಗುವುದು ಎಂದು ಗೋ ಫಸ್ಟ್ ಹೇಳಿದೆ.

ಸ್ಟಾರ್ ಏರ್ ‘ನಮ್ಮ ಟೋಕಿಯೊ ಒಲಿಂಪಿಕ್ ಚಾಂಪಿಯನ್‌ಗಳಿಗೆ ಜೀವಮಾನದ ಉಚಿತ ವಾಯುಯಾನವನ್ನು ನೀಡುವುದು ತನ್ನ ಸವಲತ್ತು’ ಎಂದು ಹೇಳಿದೆ.