Friday, 18th October 2024

ಯಾವುದು ? ಆ…ದೃಶ್ಯ!

ಪ್ರಶಾಂತ್ ಟಿ.ಆರ್

ಈ ಬಾರಿ ಕನ್ನಡ ಸಿನಿಪ್ರಿಿಯರಿಗೆ ಹಬ್ಬವೋ ಹಬ್ಬ. ಯಾಕೆಂದರೆ ಕ್ರೇಜಿಸ್ಟಾಾರ್ ರವಿಚಂದ್ರನ್ ಅಭಿನಯದ ಆ ದೃಶ್ಯ ತೆರೆಗೆ ಬರುತ್ತಿಿದೆ. ಚಿತ್ರದ ಟ್ರೇಲರ್ ರಿಲೀಸ್ ಆಗಿ ಕುತೂಹಲ ಕೆರಳಿಸಿತ್ತು. ಚಿತ್ರವನ್ನು ನೋಡಬೇಕು ತಮ್ಮ ನೆಚ್ಚಿಿನ ನಟನನ್ನು ಕಣ್ತುಂಬಿಕೊಳ್ಳಬೇಕು ಎಂದು ಅಭಿಮಾನಿಗಳು ಕಾತರರಾಗಿದ್ದರು. ಅಂತು ಎಲ್ಲರ ನಿರೀಕ್ಷೇಯಂತೆ ಚಿತ್ರ ತೆರೆಗೆ ಬಂದಿದೆ. ಚಂದನವನದಲ್ಲಿ ಭಾರೀ ಸದ್ದು ಮಾಡುತ್ತಿಿದೆ. 2014ರಲ್ಲಿ ತೆರೆಬಂದ ‘ದೃಶ್ಯ’ ಸಿನಮಾ ವಿಭಿನ್ನ ಕಥೆಯನ್ನು ಹೊಂದಿತ್ತು. ರಿಮೇಕ್ ಆದರೂ, ಹೊಸತನ ಅದರಲ್ಲಿತ್ತು. ಅದರಲ್ಲಿಯೂ ಕ್ರೇಜಿಸ್ಟಾಾರ್ ನಾಯಕನಾಗಿ ನಟಿಸಿದ್ದರು. ಈ ಚಿತ್ರ ಒಂದು ಇಮೇಜ್ ಸೃಷ್ಟಿಿಸಿತ್ತು. ಅಂತೆಯೇ ‘ಆ ದೃಶ್ಯ’ ಚಿತ್ರವೂ ಕೂಡ ಹೊಸತನದಿಂದ ಕೂಡಿರುವುದು ಸುಳ್ಳಲ್ಲ.

ಸಸ್ಪೆೆನ್‌ಸ್‌ , ಥ್ರಿಿಲ್ಲರ್‌ನ ‘ಆ ದೃಶ್ಯ’, ಸೂಪರ್ ಹಿಟ್ ಆಗುವ ಎಲ್ಲಾಾ ಲಕ್ಷಣಗಳನ್ನೂ ಹೊಂದಿದೆ. ಬಹಳಷ್ಟು ನಿರೀಕ್ಷೆೆಯನ್ನೂ ಹುಟ್ಟು ಹಾಕಿದೆ. ಅದಕ್ಕೆೆ ಕಾರಣ, ಕ್ರೇಜಿಸ್ಟಾಾರ್ ರವಿಚಂದ್ರನ್ ಅವರು ವಿಭಿನ್ನ ಗೆಟಪ್‌ನಲ್ಲಿ ಬಣ್ಣಹಚ್ಚಿಿರುವುದು. ಇತ್ತೀಚೆಗೆ ತೆರೆಗೆ ಬಂದ ಸಿನಿಮಾಗಳಲ್ಲಿ ರವಿಚಂದ್ರನ್ ಗಡ್ಡ ಬಿಟ್ಟು ಕಂಗೊಳಿಸಿದ್ದರು. ಆದರೆ ಈ ಚಿತ್ರದಲ್ಲಿ ರವಿಮಾಮ ಯಂಗ್ ಅಂಡ್ ಎನೆರ್ಜಿಟಿಕ್ ಆಗಿ ತೆರೆಯಲ್ಲಿ ಮಿಂಚಲಿದ್ದಾಾರೆ. ಸ್ಟೈಲಿಶ್ ಆಗಿಯೂ ಕಾಣಿಸಿಕೊಂಡಿದ್ದಾಾರೆ. ಖಡಕ್ ಪೊಲೀಸ್ ಆಫೀಸರಾಗಿ ಬಣ್ಣಹಚ್ಚಿಿದ್ದಾಾರೆ.

ಕೊಲೆಯ ಸುತ್ತ !
ಮೊದಲೇ ಹೇಳಿದ ಹಾಗೇ, ‘ಆ ದೃಶ್ಯ’, ಸೆಸ್ಪನ್‌ಸ್‌, ಥ್ರಿಿಲ್ಲರ್ ಜಾನರ್‌ನಲ್ಲಿ ಮೂಡಿಬಂದಿರುವ ಸಿನಿಮಾ. ತಮಿಳಿನ ‘ಧ್ರುವಂಗಳ್ 16’ ಚಿತ್ರದ ಕತೆಯನ್ನು ಕನ್ನಡಿಕರಣಗೊಳಿಸಲಾಗಿದೆ. ‘ದೃಶ್ಯ’ದಲ್ಲಿ ಗೌರವಾನ್ವಿಿತ ವ್ಯಕ್ತಿಿಯಾಗಿ , ತಮ್ಮ ಕುಟುಂಬವನ್ನು ಸಲಹುವ, ರಕ್ಷಿಿಸುವ ನಿಟ್ಟಿಿನಲ್ಲಿ, ಪೋಲೀಸರಿಗೆ ಸೆಡ್ಡೆೆಹೊಡೆದಿದ್ದರು. ಆದರೆ ಈ ಚಿತ್ರದಲ್ಲಿ ತನಿಖಾಧಿಕಾರಿಯಾಗಿ ಕೊಲೆಗಡುಕರನ್ನು ಹೆಡೆಮುರಿಕಟ್ಟು ಪಾತ್ರದಲ್ಲಿ ನಟಿಸಿದ್ದಾಾರೆ. ಖಾಕಿ ಖದರ್‌ನಲ್ಲಿ ಮಿಂಚುವ ರವಿಮಾಮ ಅವರ ನಟನೆ ಎಂದಿನಂತೆ ಸಾದಾಸೀದವಾಗಿ ಮೂಡಿಬಂದಿದೆ. ಪ್ರತಿದೃಶ್ಯದಲ್ಲೂ ಬರುವ ಡೈಲಾಗ್‌ಗಳನ್ನು ಕೇಳಲು ಸಂತಸವಾಗುತ್ತದೆ. ಒಂದು ದಿನ ಮೊಬೈಲ್ ಸ್ವಿಿಚ್ ಆಫ್ ಆಗಿರುತ್ತದೆ. ಬಳಿಕ ಮತ್ತೆೆ ಚಾಲ್ತಿಿಗೆ ಬಂದಾಗ ಅಲ್ಲಿ ಏನೇನು ನಡೆದಿರುತ್ತದೆ ಎಂಬುದೇ ‘ಆ ದೃಶ್ಯ’ ಚಿತ್ರದ ಒಂದು ಎಳೆಯ ಕಥೆಯಾಗಿದೆ.

ಯಾರು ಅವನು ?
‘ಹೂ… ಐ ಆ್ಯಮ್ …’ ಇದು ‘ಆ ದೃಶ್ಯ’ದ ಫೇಮಸ್ ಡೈಲಾಗ್. ಅಲ್ಲೊೊಂದು ಕೊಲೆ ನಡೆದಿರುತ್ತದೆ. ಆ ಕೊಲೆ ಮಾಡಿದವರು ಯಾರು? ಏತಕ್ಕಾಾಗಿ? ಎಂಬುದೇ ಸಸ್ಪೆೆನ್‌ಸ್‌. ಇಲ್ಲಿ ಕೊಲೆಗಾರ ಸೈಕೋ ಕಿಲ್ಲರ್ ಎಂಬ ಸಂಶವೂ ಕಾಡುತ್ತದೆ. ಎಷ್ಟೇ ಹುಡುಕಾಡಿದರೂ ಆತನ ಬಗ್ಗೆೆ ಸುಳಿವು ಸಿಗುವುದೇ ಇಲ್ಲ. ಕೊಲೆ ಮಾಡಿದ ಬಳಿಕ ‘ಹೂ… ಐ ಆ್ಯಮ್ …’ ಎಂದು ಪೊಲೀಸರಿಗೆ ಸವಾಲು ಹಾಕುತ್ತಾಾನೆ. ಕೊನೆಗೆ ತನಿಖಾಧಿಕಾರಿ ಕೊಲೆಗಾರನನ್ನು ಹೇಗೆ ಖೇಡ್ಡಾಾಕ್ಕೆೆ ಕೆಡವುತ್ತಾಾರೆ ಎಂಬುದನ್ನು ತೆರೆಯ ಮೇಲೆ ನೋಡಬೇಕು. ಚಿತ್ರದ ಪ್ರತಿಯೊಂದು ದೃಶ್ಯವೂ ಪ್ರೇಕ್ಷಕರನ್ನು ಹಿಡಿದು ಕೂರಿಸುವಂತೆ ಮೂಡಿಬಂದಿದೆ ಎನ್ನುತ್ತಾಾರೆ ಚಿತ್ರದ ನಿರ್ಮಾಪಕ ಕೆ.ಮಂಜು.

ಈ ಹಿಂದೆ ‘ಜಿಗರ್‌ಥಂಡಾ’, ‘ತ್ರಾಾಟಕ’ ಚಿತ್ರಗಳನ್ನು ನಿರ್ದೇಶಿಸಿದ್ದ ಶಿವಗಣೇಶ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾಾರೆ. ‘ಆ ದೃಶ್ಯ’ ಅವರ ಮೂರನೇ ಚಿತ್ರವಾಗಿದೆ. ರಮೇಶ್‌ಭಟ್, ಅಚ್ಯುತಕುಮಾರ್, ಚೈತ್ರಾಾಆಚಾರ್, ಅಜಿತ್‌ಜಯರಾಜ್, ನಿಸರ್ಗ, ಗಿರೀಶ್, ರಕ್ಷಿತ್, ಯಶ್‌ಶೆಟ್ಟಿಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾಾರೆ. ಸಂಗೀತ ಗೌತಂ ಶ್ರೀವತ್ಸ, ಛಾಯಾಗ್ರಹಣ ವಿನೋಧ್‌ಭಾರತಿ, ಸತೀಶ್‌ಬಿಲ್ಲಾಾಡಿ, ಸಾಹಿತ್ಯ ಡಾ.ನಾಗೇಂದ್ರಪ್ರಸಾದ್, ಸಂಕಲನ ಸುರೇಶ್‌ಆರುಮುಗಂ, ಸಾಹಸ ಕುಂಫುಚಂದ್ರು, ಸಂಭಾಷಣೆ ಮೃಗಶಿರ ಶ್ರೀಕಾಂತ್ ಅವರದಾಗಿದೆ. ಕೆ.ಮಂಜು ಸಿನಿಮಾಸ್ ಬ್ಯಾಾನರ್ ನಡಿಯಲ್ಲಿ ನಿರ್ಮಾಣವಾಗಿರುವ ಚಿತ್ರ ಸುಮಾರು 150 ಕೇಂದ್ರಗಳಲ್ಲಿ ತೆರೆಕಾಣಲಿದೆ.

ಕ್ರೇಜಿ ಸ್ಟಾರ್ ಫುಲ್‌ಖುಷ್ !
ರವಿಚಂದ್ರನ್ ಫುಲ್‌ಖುಷ್ ಆಗಿದ್ದಾಾರೆ. ಮೊದಲನೆಯದಾಗಿ ಪಿಎಂಆರ್ ವಿಶ್ವವಿದ್ಯಾಾಲಯವು ರವಿಚಂದ್ರನ್ ಅವರ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ. ಎರಡನೆಯದು ‘ಆ ದೃಶ್ಯ’ ಚಿತ್ರ ರವಿಚಂದ್ರನ್ ಅವರ ತಂದೆಯ ಹುಟ್ಟುಹಬ್ಬದ ದಿವಸದಂದು ಬಿಡುಗಡೆಯಾಗುತ್ತಿಿರುವುದು. ಇನ್ನು ಮಗಳ ಹುಟ್ಟುಹಬ್ಬದಂದೇ ‘ಕುರುಕ್ಷೇತ್ರ’ ಚಿತ್ರ ತೆರೆಗೆ ಬಂದಿದ್ದು. ಅದರಲ್ಲಿ ಕೃಷ್ಣನ ಪಾತ್ರದಲ್ಲಿ ಅಭಿನಯಿಸಿದ್ದು ಸಂತಸ ತಂದಿದೆಯಂತೆ.
ಸದ್ಯ ರವಿಚಂದ್ರನ್ ‘ರವಿಬೋಪಣ್ಣ’ ಚಿತ್ರದಲ್ಲಿ ನಟಿಸುತ್ತಿಿದ್ದು, ಅದರಲ್ಲಿ ಹಿರಿಯ ನಾಗರೀಕರ ಪಾತ್ರದಲ್ಲಿ ಬಣ್ಣ ಹಚ್ಚಿಿದ್ದಾಾರೆ. ಆದರೆ ‘ಆ ದೃಶ್ಯ’ ಚಿತ್ರದಲ್ಲಿ ನಿರ್ದೇಶಕರು ಮೂವತ್ತು ವರ್ಷದವರಂತೆ ಗೆಟಪ್ ಹಾಕಿಸಿದ್ದಾಾರಂತೆ. ಪ್ರತಿ ಚಿತ್ರವನ್ನು ಇನ್ನೊೊಬ್ಬರ ನಿರ್ದೇಶಕ ಬಳಿ ಬಂದಾಗ ನಾನು ಕೂಡ ಹೊಸಬನಾಗಿರುತ್ತಾಾನೆ. ಮೂವತ್ತಮೂರು ವರ್ಷದ ಅನುಭವಕ್ಕೆೆ ಗೌರವ ಸಿಕ್ಕಿಿದೆ ಎಂದು ಮುಗುಳ್ನಗುತ್ತಾಾರೆ ರವಿಮಾಮ.

ಅನಾವರಣಗೊಳ್ಳಲಿದೆ ಪ್ರೇಮ ಲೋಕ
ಕ್ರೇಜಿಸ್ಟಾಾರ್ ರವಿಚಂದ್ರನ್ ಚಂನವನದ ‘ಕನಸುಗಾರ’ ಅಂತಲೇ ಪರಸಿದ್ಧಿಿ ಪಡೆದವರು. ಅಷ್ಟೇ ಅಲ್ಲ ಕಂಡ ಕನಸುಗಳನ್ನು ನನಸಾಗಿಸುವ ಛಲಗಾರ ಕೂಡ ಹೌದು. ಈಗ ರವಿಮಾಮ ಮತ್ತೊೊಂದು ಕನಸು ಕಂಡಿದ್ದಾಾರೆ. ಅದು ಇಂದು ನಿನ್ನೆೆಯದಲ್ಲ . 35ವರ್ಷಗಳ ಕನಸದು. ಅದನ್ನು ಇಂದು ನನಸು ಮಾಡಲು ರೆಡಿಯಾಗಿದ್ದಾಾರೆ. 1987ರಲ್ಲಿ ತೆರೆಗೆ ಬಂದ ‘ಪ್ರೇಮಲೋಕ’ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಹೊಸ ಅಲೆಯನ್ನು ಮೂಡಿಸಿತ್ತು. ಸಂಗೀತದ ಮೂಲಕ ದಾಖಲೆಯನ್ನೇ ಬರೆದಿತ್ತು. ಈಗ ಮತ್ತೆೆ ಅದೇ ‘ಪ್ರೇಮಲೋಕ’ದಲ್ಲಿ ವಿಹರಿಸಲು ರವಿಮಾಮ ಸಿದ್ಧವಾಗಿದ್ದಾಾರೆ. ಮತ್ತೊೊಂದು ನಾನ್ ಸ್ಟಾಾಪ್ ಮ್ಯೂಸಿಕಲ್ ಸಿನಿಮಾ ಕೊಡಲು ರೆಡಿಯಾಗಿದ್ದಾಾರೆ.