*ಡಾ. ಉಮಾಮಹೇಶ್ವರಿ .ಎನ್
ಮುಖ್ಯದ್ವಾಾರ ಕೆಂಪು ಮರಳುಕಲ್ಲಿನ ನಿರ್ಮಾಣ. ಒಳಗೆ ಅಮೃತಶಿಲೆಯ ಬಳಕೆಯಾಗಿದೆ. ರಿಷಭನಾಥ ಹಾಗೂ ಇನ್ನಿಿತರ ತೀರ್ಥಂಕರರ ವಿಗ್ರಹಗಳಿವೆ. ಇಲ್ಲಿ ಪೂಜಾಕೈಂಕರ್ಯಗಳನ್ನು ಕೈಗೊಳ್ಳಲು ಜೈನರಿಗೆ ಮಾತ್ರ ಅವಕಾಶ. ಛಾಯಗ್ರಹಣಕ್ಕೆೆ ಇಲ್ಲಿ ನಿಷೇಧವಿದೆ. 82 ಅಡಿಗಳ ಎತ್ತರದ ಮಾನಸ್ತಂಭ ಇಲ್ಲಿನ ಸೌಂದರ್ಯವನ್ನು ವೃದ್ಧಿಿಸುತ್ತದೆ. ಈ ಸ್ತಂಭದ ನಿರ್ಮಾಣ 1953ರಲ್ಲಿ ಪೂರ್ಣವಾಯಿತು.
ಸೋನಿಜಿ ಕೀ ನಸಿಯಾಂ ಎಂದು ಪರ್ಯಾಯ ನಾಮಧೇಯವಿರುವ ಅಜ್ಮೇರ್‌ನ ಜೈನ ದೇವಾಲಯ ದಿಗಂಬರ ಪ್ರತಿನಿಧಿಸುತ್ತದೆ. ದಿಗಂಬರರಿಗೆ ಪರಮಪೂಜ್ಯವಾದ ಈ ದೇವಾಲಯ ಪ್ರಥಮ ತೀರ್ಥಂಕರ ರಿಷಭದೇವನಿಗೆ ಅರ್ಪಿತವಾದದ್ದು. ಮೂಲಚಂದ ಸೋನಿ ಎಂಬ ಮಹನೀಯರು ಅಕ್ಟೋೋಬರ್ 1864ರಲ್ಲಿ ಈ ದೇವಾಲಯದ ನಿರ್ಮಾಣವನ್ನು ಆರಂಭಿಸಿ 1865 ರಲ್ಲಿ ಪೂರ್ಣಗೊಳಿಸಿದರು. ಸದಾಸುಖದಾಸ ಎಂಬ ಜ್ಞಾನಿಯ ಮಾರ್ಗದರ್ಶನದಲ್ಲಿ ನಿರ್ಮಾಣ ಪೂರ್ತಿಗೊಂಡಿತು. ಸಿದ್ಧಿಿಕೂಟ ಚೈತ್ಯಾಾಲಯ, ಕೆಂಪು ದೇವಸ್ಥಾಾನ, ಸೋನೇ ಕಾ ಮಂದಿರ್, ಸೋನಿ ಮಂದಿರ್‌ಎಂಬ ಇತರ ನಾಮಧೇಯಗಳೂ ಇದಕ್ಕೆೆ ಇವೆ.
ಇಲ್ಲಿಯ ವರೆಗಿನ ವಿವರಣೆಗಳು ಸಾಮಾನ್ಯ ಎಲ್ಲಾ ಜೈನದೇವಾಲಯಗಳಲ್ಲೂ ಕಂಡುಬರುವಂತಹವೇ. ಇಲ್ಲಿನ ತಿಳಿಯುವ ಪ್ರಯತ್ನ ಮಾಡಿದಾಗ ಮುಖ್ಯ ದೇವಸ್ಥಾಾನದ ಹಿಂಭಾಗದಲ್ಲಿ ಕೆಲವರು ಒಂದು ಹಳೆಯ ಕಟ್ಟಡದೊಳಕ್ಕೆೆ ಪ್ರವೇಶಿಸುವುದು ಗೋಚರಿಸಿತು. ಏನೆಂದು ವಿಚಾರಿಸಿದಾಗ 10 ರೂಪಾಯಿಗಳ ಶುಲ್ಕ ಕೊಟ್ಟು ಒಳಹೋಗಬೇಕೆಂದು ತಿಳಿಯಿತು. ಹಾಗೆಯೇ ಪ್ರವೇಶಪತ್ರ ಪಡೆದು ಒಳಸಾಗುವಾಗಲೂ ಏನು ನೋಡಲಿರುವೆವೆಂಬ ಕಲ್ಪನೆಯೂ ಇರಲಿಲ್ಲ. ಒಳಗಿನ ದೃಶ್ಯ ಉಸಿರುಗಟ್ಟಿಿಸುವಷ್ಟು ಅದ್ಭುತವಾಗಿತ್ತು.
24ಸ12 ಮೀಟರ್ ಅಳತೆಯ ಕೋಣೆಯಲ್ಲಿ ಎರಡು ಅಂತಸ್ತುಗಳ ಎತ್ತರವನ್ನು ಉಪಯೋಗಿಸಿಕೊಂಡು ನಿರ್ಮಿಸಿದ ಚಿನ್ನ ಲೇಪಿತ ಕಲಾಕೃತಿಗಳು ಕನಸುಮನಸಿನಲ್ಲೂ ಎಣಿಸದಷ್ಟು ಸುಂದರವಾಗಿದ್ದವು. ಹೆಚ್ಚಿಿನ ಜೈನದೇವಸ್ಥಾಾನಗಳಲ್ಲಿ ಜೀವನದ ಐದುಹಂತಗಳ ( ಗರ್ಭಸ್ಥನಾಗುವುದು, ಜನ್ಮತಾಳುವುದು, ಪರಿತ್ಯಾಾಗ, ಜ್ಞಾನೋದಯ ಹಾಗೂ ಮೋಕ್ಷ) ಚಿತ್ರಣವಿರುವುದು ಸರ್ವೇಸಾಮಾನ್ಯ. ಇಲ್ಲಿ ಮರದ ಬೊಂಬೆಗಳಿಗೆ ಚಿನ್ನದ ಹಾಳೆಗಳನ್ನು ಜೋಡಿಸಿ ರಿಷಭನಾಥನು ತಾಯಿಯ ಗರ್ಭಸೇರುವುದರಿಂದ ಹಿಡಿದು ಮೋಕ್ಷಪಡೆಯುವ ವರೆಗಿನ ಕತೆಗಳನ್ನು ತೋರಿಸಲಾಗಿದೆ.
ದೇವ-ದೇವತೆಗಳು ಆಕಾಶದಿಂದ ಹರಸುವ ಚಿತ್ರಣಗಳನ್ನು ಛಾವಣಿಯಿಂದ ನೇತಾಡುವ ಗೊಂಬೆಗಳು ಪ್ರತಿನಿಧಿಸುವುದು ಕತೆಗಳ ನಿಜ ಅನುಭವ ಕೊಡುವುದರಲ್ಲಿ ಸಮರ್ಥವಾಗುತ್ತವೆ. ಪ್ರತಿ ನಿರ್ಮಾಣಕ್ಕೆೆ ಸಂಬಂಧಿಸಿದ ಕತೆಗಳನ್ನೂ ಫಲಕಗಳಲ್ಲಿ ವಿವರಿಸಿದ್ದಾರೆ. 100 ವರ್ಷಗಳಿಗಿಂತಲೂ ಹಳೆಯದಾದ ಈ ದೇವಾಲಯದಲ್ಲಿರುವ ಚಿತ್ರಣ ಎಲ್ಲಕ್ಕಿಿಂತ ದೊಡ್ಡದಾದದ್ದು ಹಾಗೂ ಕಲಾತ್ಮಕವಾದದ್ದೆನ್ನುವುದರಲ್ಲಿ ಎರಡು ಮಾತಿಲ್ಲ. ಇದರ ಸೌಂದರ್ಯ ನೋಡಿದರಷ್ಟೇ ತಿಳಿಯುವುದು. ಕ್ಯಾಾಮರಾವೂ ಪೂರ್ತಿ ಚಿತ್ರಣವನ್ನು ಚಿತ್ರಿಿಸಲು ಅಸಮರ್ಥವಾಗುತ್ತದೆ. ಇಲ್ಲಿ ಮೊಬೈಲ್ ನಲ್ಲಿ ಕೆಲವು ಚಿತ್ರಗಳನ್ನು ತೆಗೆದುಕೊಂಡೆವು.
ಮೂಲದೇವಸ್ಥಾಾನದ ಕಾರ್ಯ ಪೂರ್ಣಗೊಂಡ ನಂತರ ಮೂಲಚಂದ ಸೋನಿಯವರಿಗೆ ರಿಷಭದೇವನ ಐದು ಕಲ್ಯಾಾಣಕಗಳನ್ನು ಚಿತ್ರರೂಪದಲ್ಲಿ ವ್ಯಕ್ತಪಡಿಸುವ ಆಲೋಚನೆ ಬಂತು. ಸ್ವರ್ಣನಗರಿಯ ಆರಂಭ ಇಲ್ಲಿಂದ. ಆಲೋಚನೆ ಬಂದೊಡನೆಯೇ ಜೈಪುರದ ಕುಶಲಕರ್ಮಿಗಳನ್ನು ನೇಮಿಸಿ ಕೆಲಸ ಆರಂಭಿಸಿಯೇ ಬಿಟ್ಟರು, 1870ರಲ್ಲಿ. 1895 ವರೆಗೆ ನಿರ್ಮಾಣ ಮುಂದುವರಿಯಿತು.
ಆಚಾರ್ಯ ಜಿನಸೇನರ ಆದಿಪುರಾಣದಲ್ಲಿ ಬರುವ ಕತೆಗಳಿಗನುಸಾರವಾಗಿ ರಚನೆಗಳು ಮೂಡಿದವು.ಅಯೋಧ್ಯೆೆ ಹಾಗೂ ಸುಮೇರು ಪರ್ವತಗಳ ನಕಲುಗಳನ್ನು ಮರದಲ್ಲಿ ತಯಾರಿಸಿ ಚಿನ್ನದ ಹೊದಿಕೆ ಹೊದಿಸಿ ಪೂರ್ಣಗೊಳಿಸಲು 25 ವರ್ಷಗಳೇ ಹಿಡಿದವು. ಎಲ್ಲಾ ಕಲಾಕೃತಿಗಳನ್ನೂ ಜೈಪುರದಲ್ಲಿ ನಿರ್ಮಿಸಿ ಅಜ್ಮೇರ್‌ಗೆ ತರಲಾಯಿತು. ದುರದೃಷ್ಟವಶಾತ್ 1891 ರಲ್ಲಿ ಮೂಲ್ ಚಂದ್ ಸೋನಿಯವರು ಅಸುನೀಗಿದರು. ಆಗ ರಚನೆ ಇನ್ನೂ ಪೂರ್ತಿಯಾಗಿರಲಿಲ್ಲ. ಮುಂದಿನ ಪೀಳಿಗೆಯವರು ಪೂರ್ತಿಗೊಳಿಸಿದರು.
ಸುಮಾರು 1000 ಕೆ. ಜಿ. ಗಳಷ್ಟು ಚಿನ್ನವನ್ನು ಈ ಸ್ವರ್ಣನಗರಿ ಅಥವಾ ಮ್ಯೂಸಿಯಂ ನಮ್ಮದೇಶದ ಅತ್ಯಮೂಲ್ಯ ಕಲಾಸಂಪತ್ತುಗಳಲ್ಲಿ ಒಂದು. ಇದು ಇನ್ನೂ ನಿರ್ಮಿಸಿದ ಕುಟುಂಬದ ಒಡೆತನದಲ್ಲೇ ಇದೆ. ಹೊರಗಿನಿಂದ ಅತಿಸಾಧಾರಣವಾಗಿ ಕಾಣುವ ಜಾಗದಲ್ಲಿ ಸುಮಾರು ಒಂದುಗಂಟೆಯ ಕಾಲ ವೀಕ್ಷಿಸಲು ಸಿಕ್ಕ ದೃಶ್ಯ ಅಪೂರ್ವ ಅನುಭವ. ಅಜ್ಮೇರ್‌ನಲ್ಲಿ ನೋಡಲೇ ಬೇಕಾದ ಜಾಗಗಳಲ್ಲಿ ಖಂಡಿತವಾಗಿಯೂ ಇದು ಮುಖ್ಯವಾದದ್ದು. ಇದು ಅಜ್ಮೇರ್‌ನ ಪೃಥ್ವಿಿರಾಜ ರಸ್ತೆೆಯಲ್ಲಿ ಇದೆ.