ರತ್ನಮಂಜರಿ ಚಿತ್ರದ ಮೂಲಕ ಸ್ಯಾಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ನಟ ರಾಜ್ ಚರಣೆ ಬಳಿಕ, ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಸೈ ಎಸನಿಸಿಕೊಂಡರು. ಅದೇ ರಾಜ್ ಚರಣ್ ಇಂದಿನ ಸ್ಟಾಾರ್ ಟ್ರಾಾವೆಲ್‌ನಲ್ಲಿ ನಮ್ಮೊೊಂದಿಗೆ ಮಾತನಾಡಿದ್ದಾರೆ.
ನಮಗೆ ಇಷ್ಟವಾದ ಪ್ರವಾಸಿ ತಾಣ ಯಾವುದು ?
ರಾಜ್ ಚರಣ್ : ನನಗೆ ಪ್ರಕೃತಿಯ ಸಿರಿ ಅಚ್ಚುಮೆಚ್ಚು. ಹಾಗಾಗಿ ನನಗೆ ಲಡಾಖ್ ಅಚ್ಚುಮೆಚ್ಚು. ಅಲ್ಲಿನ ನಿಸರ್ಗ ರಮಣೀಯ ತಾಣ, ಮಂಜುಕವಿದ ವಾತಾವರಣದಲ್ಲಿ ಕಾಣುವ ಗಿರಿ ಶಿಖರಗಳ ವಿಹಂಗಮ ನೋಟ , ವಾವ್ ,,, ನೋಡಲು ಆನಂದವೂ ಆನಂದ. ಅದರ ಜತೆಗೆ ಮ್ಯಾಾಗ್ನೆೆಟಿಕ್ ಪಾಯಿಂಟ್ ಪ್ರದೇಶವೂ ವಿಸ್ಮಯ ಮೂಡಿಸುತ್ತದೆ. ಪ್ರಕೃತ್ತಿಿಯ ಶಕ್ತಿಿ ಅಲ್ಲಿ ನಮಗೆ ವ್ಯಕ್ತವಾಗುತ್ತದೆ.
ಅಲ್ಲಿನ ಯಾವ ಆಹಾರ ಪದಾರ್ಥ ನಿಮಗೆ ಇಷ್ಟ ?
ರಾಜ್ ಚರಣ್ : ನನಗೆ ಅಲ್ಲಿನ ಸ್ಥಳೀಯ ಆಹಾರಗಳ ಇಷ್ಟ. ಅಲ್ಲಿ ಸಿಗುವ ಆಲೂ ಪರೋಟ ಆಹಾ… ಸವಿಯಲು ರುಚಿಕಟ್ಟಾಾಗಿರತ್ತದೆ. ಆ ತಟ್ಟಣೆಯ ವಾತಾವಣದಲ್ಲಿ ಮಂಜು ಹನಿಗಳ ನಡುವೆ ಆಲೂ ಪರೋಟ ಸೇವನೆ ಅದ್ಭುತ ಕ್ಷಣ ಎನಿಸುತ್ತದೆ.
ಲಡಾಖ್‌ನಲ್ಲಿ ಯಾರೊಂದಿಗೆ ಕಳೆಯಲು ಬಯಸುತ್ತೀರ ?
ರಾಜ್ ಚರಣ್ : ಲಡಾಕ್ ನಲ್ಲಿ ಸ್ನೇಹಿತರೊಂದಿಗೆ ಕಳೆಯುವುದು ಅಚ್ಚುಮೆಚ್ಚು. ಗೆಳೆಯರ ಬಳದೊಂದಿಗೆ ಸೇರಿ ಲಡಾಕನ್ನು ಒಂದು ಸುತ್ತು ಬಂದರೆ ಆಹಾ ಸ್ವರ್ಗವೇ ಧರೆಗಿಳಿದ ಬಾಸವಾಗುತ್ತದೆ.
ಯಾವ ಸಮಯದಲ್ಲಿ ಲಡಾಕ್ ಗೆ ಭೇಟಿ ನೀಡಿದರೆ ?
ರಾಜ್ ಚರಣ್ : ಲಡಾಕ್‌ಗೆ ಬೇಸಿಗೆಯ ಸಮಯದಲ್ಲಿ ಭೇಟಿ ನೀಟಿದರೆ ಉತ್ತಮ ಯಾಕೆಂದರೆ ಆ ವೇಳೆಯಲ್ಲಿ ಹಿತವಾದ ವಾತಾವರಣವಿರುತ್ತದೆ. ಗಿರಿ ಶೃಂಗಗಳು ಹಿಮವೃತವಾಗಿ ಶ್ವೇತಸುಂದರಿಯಂತೆ ಕಂಗೊಳಿಸುತ್ತವೆ. ಅದನ್ನು ನೋಡುವುದೇ ಚೆಂದ.
ಪ್ರವಾಸದಿಂದ ಏನೆಲ್ಲಾಾ ಕಲಿಯಬಹುದು ?
ರಾಜ್‌ಚರಣ್ : ದೇಶಸುತ್ತ ಇಲ್ಲ ಕೋಶ ಒದು ಎಂಬ ಮಾತಿದೆ ಅಂತೆಯೇ ಪ್ರವಾಸದಿಂದ ಹಲವು ವಿಚಾರಗಳನ್ನು ಕಲಯಬಹುದು, ವೈವಿದ್ಯಮಯ ಜಗತ್ತನ್ನು ಕಣ್ತುಂಬಿಕೊಳ್ಳಬಹದು.