Thursday, 24th October 2024

3316 ಕೋಟಿ ರೂಪಾಯಿ ನಷ್ಟ: ಎಂಡಿ ವುಪ್ಪಲಪತಿ ಸತೀಶ್​ ಕುಮಾರ್ ಬಂಧನ

ನವದೆಹಲಿ: ಸಾರ್ವಜನಿಕ ಬ್ಯಾಂಕುಗಳಿಗೆ 3316 ಕೋಟಿ ರೂಪಾಯಿ ನಷ್ಟ ಮಾಡಿದ ಆರೋಪದ ಅಡಿಯಲ್ಲಿ ಪ್ರಥ್ವಿ ಇನ್​ಫಾರ್ಮೇಷನ್​ ಸಲ್ಯೂಷನ್​ ಲಿಮಿಟೆಡ್​​ನ ಎಂಡಿ ವುಪ್ಪಲಪತಿ ಸತೀಶ್​ ಕುಮಾರ್​​ರನ್ನು ಬಂಧಿಸಿರುವುದಾಗಿ  ಜಾರಿ ನಿರ್ದೇಶನಾಲಯ ಹೇಳಿದೆ.

ವಿಎಂಸಿ ಸಿಸ್ಟಂ ಲಿಮಿಟೆಡ್​​ನ ಎಂಡಿ ಹೀಮಾ ಬಿಂದು ಅವರ ಸಹಕಾರದಿಂದ ಬ್ಯಾಂಕ್​ ಒಕ್ಕೂಟಗಳಿಗೆ 3316 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ ಹಿನ್ನೆಲೆಯಲ್ಲಿ ಕುಮಾರ್​ರನ್ನು ಮನಿಲ್ಯಾಂಡರಿಂಗ್​ ತಡೆ ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿಂದು ಎಂಬವರು ಕುಮಾರ್​ರ ಸಹೋದರಿ ಆಗಿದ್ದು ಇವರನ್ನೂ ಆ.5ರಂದು ಬಂಧಿಸಲಾಗಿತ್ತು.

ಕಂಪನಿಯ ವಿರುದ್ಧ ಸಿಬಿಐ ದಾಖಲಿಸಿದ ಎಫ್​ಐಆರ್​ನ್ನು ಆಧರಿಸಿದ ಜಾರಿ ನಿರ್ದೇಶನಾಲಯ ಈ ತನಿಖೆಯನ್ನು ಕೈಗೆತ್ತಿಕೊಂಡಿರುವುದಾಗಿ ಹೇಳಿದೆ. ವಿಎಂಸಿಎಸ್​​ಎಲ್​​ ವಿವಿಧ ಸಾರ್ವಜನಿಕ ಬ್ಯಾಂಕುಗಳಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದುಕೊಂಡಿದೆ. ಪ್ರಸ್ತುತ ಈ ಕಂಪನಿಯು 3316 ಕೋಟಿ ರೂಪಾಯಿ ಸಾಲದ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ.