Saturday, 23rd November 2024

ತಾಲಿಬಾನ್ ನಿರ್ಬಂಧ ಸಡಿಲಿಕೆ ಸದ್ಯಕ್ಕೆ ಸಾಧ್ಯವಿಲ್ಲ: ಜೋ ಬೈಡನ್

ವಾಷಿಂಗ್ಟನ್: ತಾಲಿಬಾನ್ ಮೇಲಿನ ನಿರ್ಬಂಧ ಸಡಿಲಿಕೆ ದ್ಯಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿದ್ದು, ಮುಂದಿನ ನಿರ್ಧಾರ ಅಲ್ಲಿನ ಪರಿಸ್ಥಿತಿಯನ್ನಾಧರಿಸಿದೆ ಎಂದು ಹೇಳಿದ್ದಾರೆ.

ತಾಲಿಬಾನ್‌ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಅವರ ವಿರುದ್ಧ ಅಮೆರಿಕಾ ವಿಧಿಸಲಾಗಿ ರುವ ಕಠಿಣ ನಿರ್ಬಂಧಗಳನ್ನು ಕೈಬಿಡಲು ಅಮೆರಿಕ ಅಧ್ಯಕ್ಷ ಬೈಡೆನ್ ನಿರಾಕರಿಸಿದ್ದಾರೆ. ಚುನಾಯಿತ ಸರ್ಕಾರವನ್ನು ಬಲವಂತವಾಗಿ ಪತನಗೊಳಿಸಿದ ನಂತರ ತಾಲಿಬಾನ್‌ಗಳ ನಡವಳಿಕೆಗಳು ನಿರ್ಬಂಧ ಸಡಿಲಿಕೆಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ.

ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲೂ ಭದ್ರತಾ ವಲಯವನ್ನು ಇನ್ನಷ್ಟು ವಿಸ್ತರಿಸ ಲಾಗುವುದು. ಆ.31 ರೊಳಗೆ ಪೂರ್ಣಗೊಳ್ಳಲಿರುವ, ಸೇನಾ ಪಡೆಗಳ ವಾಪಸಾತಿ ಅವಧಿ ವಿಸ್ತರಿಸುವ ಸಾಧ್ಯತೆಗಳ ಬಗ್ಗೆ ಅಮೆರಿಕಾ ಭದ್ರತಾ ಪಡೆಗಳೊಂದಿಗೆ ಚರ್ಚಿಸುತ್ತೇವೆ ಎಂದು ತಿಳಿಸಿದರು.

ಇದಕ್ಕೂ ಮುನ್ನ, ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಾತನಾಡಿ, ಕಾಬೂಲ್ ವಿಮಾನ ನಿಲ್ದಾಣದಿಂದ ನಾಗರೀಕರ ಸ್ಥಳಾಂತರ ಕಾರ್ಯಾಚರಣೆಗೆ ತಾಲಿಬಾನ್‌ ಅಡ್ಡಿಪಡಿಸಿದರೆ, ಅಮೆರಿಕಾ ಅವರಿಗೆ ತಕ್ಕ ಬುದ್ದಿ ಹೇಳಲಿದೆ ಎಂದು ಎಚ್ಚರಿಸಿದರು.