Friday, 20th September 2024

ಅಕ್ಷರಲೋಕದಿಂದ ಆಯ್ದ ಕೌತುಕಗಳು

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ

journocate@gmail.com

ಎಲ್ಲರೂ ಸ್ನೇಹಿತರಾಗಲಾರರು, ಆಗಲೂ ಬಾರದು. ಫೇಸ್‌ಬುಕ್‌ನಲ್ಲಿ ಬರೆಯಲಾರಂಭಿಸಿದ ನಂತರ ನಾನು ಬಹಳಷ್ಟು ಸ್ನೇಹಿತರನ್ನು ಕಳೆದುಕೊಂಡೆ. ಅವರಲ್ಲಿ ಬಹುತೇಕರು ಮಾಧ್ಯಮ ಲೋಕದವರು. ಕೆಲವರು ಸಹೋದ್ಯೋಗಿಗಳು. ಅವರು ನನ್ನನ್ನು ಬ್ಲಾಕ್ ಮಾಡಲು ಕಾರಣವೇನೆಂದು ಊಹಿಸಲು ಕಷ್ಟವಾಗಲಿಲ್ಲ.

ನಾನು ಅವರಿಗೆ ಭಕ್ತನಾಗಿ ಕಂಡಿರಬೇಕು. ಭಕ್ತಿ ಎಂದರೆ ಬದ್ಧತೆ. ಸತ್ಯಕ್ಕೆ, ನ್ಯಾಯಕ್ಕೆ, ಕೊನೆಗೆ ಆತ್ಮಸಾಕ್ಷಿಗೆ ಬದ್ಧನಾಗಿರಬೇಕಾದ್ದು ಪತ್ರಕರ್ತನ ಧರ್ಮ. ಆ ಬದ್ಧತೆಯನ್ನು ಬದಿಗಿಟ್ಟಾದರೂ ಮೋದಿಯನ್ನು ವಿರೋಽಸದರಷ್ಟೆ ನಿಮಗೆ ಹೋತನ ದಾಡಿ ಬಿಟ್ಟವರ, ಹತ್ತು ರುಪಾಯಿ ನಾಣ್ಯದಷ್ಟಗಲ ಕುಂಕುಮವಿಡುವವರ ಸಾಂಗತ್ಯ ಲಭ್ಯ.

To be politically correct is to oppose Modi blindly and vehemently, even if it is to the detriment of the nation. ನನಗದರ ಅಗತ್ಯವಿಲ್ಲ. ಮೋದಿ ಗುಜರಾತ್‌ನ ಮುಖ್ಯಮಂತ್ರಿ ಆಗುವು ದಕ್ಕೂ ಬಲು ಹಿಂದೆ ರೈಲಿನಲ್ಲಿ, IRS ಪರೀಕ್ಷೆ ಬರೆಯಲು ತೆರಳುತ್ತಿದ್ದ ಇಬ್ಬರು ಮಹಿಳಾ ಸಹ ಪ್ರಯಾಣಿಕರ ಜತೆ ನಡೆದುಕೊಂಡ ರೀತಿಯನ್ನು ಮೆಚ್ಚಿಕೊಂಡು ಅವರಬ್ಬರು ಪೋ ಹಾಕಿದ್ದರು. ಹಿಂದಿನ ದಿನವಷ್ಟೆ ಮತ್ತೊಂದು ರೈಲಿನಲ್ಲಿ, ಕುಡಿದ ಸಹ ಪ್ರಯಾಣಿಕರ ಅಸಭ್ಯ ವರ್ತನೆಯಿಂದ ಬೆದರಿದ್ದ ಆ ಇಬ್ಬರು ಹೆಂಗಸಿಗರಿಗೆ ಮೋದಿ ಮತ್ತವರ ಜತೆಗಾರನ ಸಭ್ಯ ನಡವಳಿಕೆ ಸಂತಸ ಉಂಟುಮಾಡುತ್ತದೆ.

ಫೇಸ್‌ಬುಕ್ ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ಅಭಿವ್ಯಕ್ತಿಗೊಂಡದ್ದೆಲ್ಲವೂ ಸತ್ಯವಲ್ಲವಲ್ಲ, ಹಾಗಾಗಿ ಯಾರೋ ಹಂಚಿಕೊಂಡಿದ್ದ ಆ ಪೋಸ್ಟ್‌ನ ಮೂಲ ಕತೃ ಯಾರು ಎಂಬುದನ್ನು ಪತ್ತೆ ಮಾಡಿ, (ದೆಹಲಿಯಲ್ಲಿ ಸೇವೆ ಸಲ್ಲಿಸಿಸುತ್ತಿದ್ದ) ಆಕೆಯ ಮೊಬೈಲ್ ನಂಬರ್ ಪಡೆದು ಕರೆ ಮಾಡಿ ಅವರು ನೆನೆದ ಘಟನೆ ಸತ್ಯ ವೆಂದು ಖಾತರಿಪಡಿಸಿಕೊಂಡಿದ್ದೆ. ನನಗೆ ಇಷ್ಟವಾದದ್ದು ಮೋದಿಯ ಚಾರಿತ್ರ್ಯ. ಆತನ ನಡೆವಳಿಕೆ ಆ ಮಹಿಳೆಯರನ್ನು ಒಲಿಸಿಕೊಳ್ಳಲು ಮಾಡಿದ್ದಲ್ಲ. ಜನಪ್ರಿ ಯತೆಯ ಉತ್ತುಂಗಕ್ಕೇರಿದ ನಂತರ ಕೆಲವರು ಮಾಡುವ ನಾಟಕ ದಂತೆಯೂ ಅಲ್ಲ. ಇಂತಹ ಕೆಲವು ಪ್ರಸಂಗಗಳ ಮಾಹಿತಿ ಪಡೆದ ನಂತರ ಮೋದಿಯನ್ನು ಕುರಿತು ಮೆಚ್ಚುಗೆಯ ಒಂದೆರಡು ಪೋಸ್ಟ್‌ಗಳನ್ನು ಹಾಕಿದೆ.

ಮನೆಹಾಳ ರಾಜಕಾರಣಿಗಳನ್ನೇ ನೋಡುತ್ತಾ ಪತ್ರಕರ್ತನಾಗಿ ಸೇವೆ ಸಲ್ಲಿಸಿದ ನನಗೆ ಪತ್ರಿಕೋದ್ಯಮಕ್ಕೆ ಮರಳಿದರೆ ಚೆನ್ನ ಎಂದೆನಿಸಲು ಶುರುವಾಗಿದ್ದೇ ಮೋದಿ
ಶಕೆಯಲ್ಲಿ. ಹಾಗೆಂದು ಮೋದಿ ಭ್ರಷ್ಟನಾದ ದಿನ ನಾನು ಆತನ ವಿರುದ್ಧ ಬರೆಯದಿರಲಾರೆ. ದೇಶದ ಹಿತದೃಷ್ಟಿಯಿಂದ ಆ ದಿನ ಬರದಿರಲಿ. ನಾಡಿನ ಬಹುಸಂಖ್ಯಾ ತರ ಕನಸು ಒಡೆಯದಿರಲಿ. ಬಾಬರಿ ಮಸೀದಿ ಕೆಡವಿದ ನಂತರ, ಹಿಂದೂ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ನಮ್ಮ ಬಡಾವಣೆಯ ಪರಿಚಯವಿರದ ಒಂದು ಮುಸ್ಲಿಂ ಕುಟುಂಬಕ್ಕೆ ನೈತಿಕ ಸ್ಥೈರ್ಯ ತುಂಬಿz. ತದನಂತರ ಆ ಕುಟುಂಬದ ಸದಸ್ಯರು ಹತ್ತಿರವಾಗಿದ್ದರು.

ಹಿಂದುಳಿದ ಮುಸ್ಲಿಮರ ಕಲ್ಯಾಣಕ್ಕಾಗಿ ಕಾರ್ಯಕ್ರಮವೊಂದನ್ನು ರೂಪಿಸಲು ಚರ್ಚಿಸಿದ್ದೆವು. ಹಾಗೆ ಚರ್ಚಿಸಿದ ವ್ಯಕ್ತಿಯ ತಾಯಿ ಕಳೆದ ವರ್ಷ ನಿಧನರಾದಾಗ
ಹೋಗಿ ಅಂತಿಮ ಗೌರವ ಸಲ್ಲಿಸಿದ್ದೆ. ಗತಿಸುವ ಮೊದಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಕೆಯ ಚಿಕಿತ್ಸೆಯಲ್ಲಿ ಆಸಕ್ತಿ ವಹಿಸಿದ್ದೆ. ಆದರೆ, ಮೋದಿ ಬಗ್ಗೆ ನಾನು ತಳೆದ ನಿಲುವು ಆ ಕುಟುಂಬದಿಂದ ನನ್ನನ್ನು ದೂರಮಾಡಿಬಿಟ್ಟಿತು. CAA ವಿರುದ್ಧ ರಾಜಧಾನಿಯಲ್ಲಿ ನಡೆದ ಹಿಂಸಾಚಾರದ ರೂವಾರಿ ಇವನೇ ಎಂದು ಸಾಕ್ಷ್ಯಾಧಾರ ವಿರುವ ವೀಡಿಯೊ ಸಮೇತ ಮುಸ್ಲಿಂ ಧುರೀಣನ ವಿರುದ್ಧ ಆರೋಪಿಸಿದ ಸ್ನೇಹಿತರ ಪೋಸ್ಟ್ ಅನ್ನು ನಾನು ಹಂಚಿಕೊಂಡಿz. ಆಗ ಮೈಸೂರಿನ ಈ ಮುಸ್ಲಿಂ ಕುಟುಂಬ ನನ್ನ ಮೇಲೆ ಅಕ್ಷರ ದಾಳಿ ಮಾಡಿತು.

ನಾನು ಮೌನವಾಗಿದ್ದೆ. ನನ್ನ ಮೌನ ದಾಳಿಕೋರರನ್ನು ಕೆರಳಿಸಿತು. ಅವರಿಗೆ ನನ್ನ ಬಗ್ಗೆ ಅಪಾರವಾದ ಗೌರವವಿರುವುದಾಗಿಯೂ, ನಾನು ಮೋದಿಯನ್ನು
ಬೆಂಬಲಿಸುವುದು ಉಚಿತವಲ್ಲವೆಂದೂ ಖಾಸಗಿ ಸಂದೇಶವನ್ನು ಕಳಿಸಿದರು. ಸುಮ್ಮನಿದ್ದೆ. ಕೊನೆಗೆ ಸಾರ್ವಜನಿಕವಾಗಿ ನನ್ನನ್ನು ಫ್ಯಾಸಿಸ್ಟ್ ಎಂದು ಕರೆದರು.
ಸೋಜಿಗಗೊಂಡೆ, ಆ ಸಂಸಾರವನ್ನು ದೂರವಿಟ್ಟೆ. ಫ್ಯಾಸಿಸ್ಟ್ ಪದವನ್ನು ಬಳಸುವ ಬಹುತೇಕರಿಗೆ ಅದರ ಅರ್ಥವಾಗಲೀ, ಹುಟ್ಟಾಗಲೀ, ಇತಿಹಾಸವಾಗಲೀ
ಗೊತ್ತಿರುವುದಿಲ್ಲ. ನಾನು ಹಾಡುವ ಹಿಂದಿ ಅಥವಾ ತಮಿಳು ಹಾಡುಗಳ ಅರ್ಥ ನನಗೆ ಬಿಲ್‌ಕುಲ್ ಗೊತ್ತಿಲ್ಲ.

ಹಾಡಿನ ಸಂಗೀತದ ಜಾಡನ್ನು ಹಿಡಿದು ಅದರ ಭಾವವನ್ನು ಅರಿತುಕೊಳ್ಳುತ್ತೇನೆ. ಒಮ್ಮೆ ಕಿಶೋರನ ಒಂದು ಶೋಕಗೀತೆಯನ್ನು ಹಾಡುವ ಮುನ್ನ ಅದನ್ನು
ಸಭಾಂಗಣದಲ್ಲಿದ್ದ ನನ್ನಾಕೆಗೆ ಅರ್ಪಿಸುತ್ತಿದ್ದೇನೆಂದು ಜೋಕ್ ಮಾಡಿದೆ. ಹಾಡಿನ ಅರ್ಥ ಗೊತ್ತಿಲ್ಲ, ಭಾವವಷ್ಟೇ ಗೊತ್ತು. ಪತ್ರಕರ್ತರು ಒಂದು ಸಂಜೆ ಹಾಯಾಗಿ
ಕಳೆಯಲೆಂದು ನಾವೊಂದಿಬ್ಬರು ಪತ್ರಕರ್ತರೇ ನಿಯೋಜಿಸಿದ ರಸಮಂಜರಿ ಕಾರ್ಯಕ್ರಮವದು. ನಾನು ಹಾಡು ಮುಗಿಸುವ ವೇಳೆಗೆ ನಮ್ಮ ದಾಂಪತ್ಯದ
ಬಿರುಕಿ(!)ನಿಂದ ಆತಂಕಗೊಂಡ ಒಂದಿಬ್ಬರು ಹಿಂದಿ ಬಲ್ಲ ಸಹೋದ್ಯೋಗಿಗಳು ನನ್ನಾಕೆಯತ್ತ ಸಾಂತ್ವನದ ನೋಟ ಬೀರಿದ್ದರು.

ಇದು ನನ್ನ ಜೋಕ್ ತಂದ ಎಡವಟ್ಟು. ಮಿಲನ್ ಕುಂದೇರಾರ ಚೆಕ್ (Czech) ಭಾಷೆಯ The Joke  ಕಾದಂಬರಿ ಪ್ರಕಟವಾದದ್ದು ಅರವತ್ತರ ದಶಕದಲ್ಲಿ. ಎಲ್ಲಾ ಪಾಶ್ಚಿಮಾತ್ಯ ಭಾಷೆಗಳಿಗೂ ಅದು ಅನುವಾದಗೊಂಡಿತು. ಫ್ರಾನ್ಸ್‌ನಲ್ಲಿ ಮೂಲ ಕೃತಿಯ ಶೈಲಿಯನ್ನು ಸಿಂಗರಿಸಿ ಅದನ್ನು ತಿದ್ದಿ ಬರೆದಿದ್ದರು. ಶಸ್ತ್ರಕ್ರಿಯೆಯಲ್ಲಿ ನಿರ್ಲಕ್ಷ್ಯದಿಂದ ದೇಹದ ಭಾಗವನ್ನೇ ತೆಗೆದುಬಿಡುವಂತೆ ಇಂಗ್ಲೆಂಡನಲ್ಲಿ ಕೃತಿಯ ಮುಖ್ಯಭಾಗಗಳನ್ನು ತುಂಡರಿಸಿದ್ದರು. ಲಾರಿಗೆ ತುಂಬುವ ಬೂಸಾ ಮೂಟೆ ಗಳನ್ನು ಪೇರಿಸುವಾಗ ಅದಲು ಬದಲು ಮಾಡಲು ಅಡ್ಡಿಯೇನು ಎಂಬ ಧೋರಣೆಯಲ್ಲಿ ಕಾದಂಬರಿಯ ವಿವಿಧ ಭಾಗಗಳ ಕ್ರಮವನ್ನು ಎಳೆದಾಡಲಾಯಿತು. ಮತ್ತೊಂದು ದೇಶದಲ್ಲಿ ಕುಂದೇರಾ ತಮ್ಮ ಅನುವಾದಕನಿಗೆ ಚೆಕ್ ಭಾಷೆಯೇ ಬರದಿರುವುದನ್ನು ಕಂಡು ಬೆರಗಾಗುತ್ತಾರೆ. ಮತ್ತೆ ಅದು ಹೇಗೆ ಅನುವಾದಿಸಿದಿರಿ ಎಂಬ ಪ್ರಶ್ನೆಗೆ ದೊರಕುವ ಆಘಾತಕಾರಿ ಉತ್ತರ ಹೃದಯದಿಂದ!

ಅದಕ್ಕೆ ಪುರಾವೆ ಒದಗಿಸುವಂತೆ ವಾಲೆಟ್‌ನಲ್ಲಿ ಭಕ್ತಿಪೂರ್ವಕವಾಗಿ ಜೋಪಾನ ಮಾಡಿದ ಕುಂದೇರಾರ ಭಾವಚಿತ್ರವನ್ನು ತೆಗೆದು ತೋರಿಸುತ್ತಾನೆ. ಹೃದಯದಿಂದ ಅನುವಾದ ಎಂಬ ಅತೀಂದ್ರಿಯ ಪರಿಕಲ್ಪನೆ ಅವರನ್ನು ಸ್ತಮ್ಭೀಭೂತರನ್ನಾಗಿಸುತ್ತದೆ. ಇಂತಹ ಹಲವಾರು ಆಘಾತಕಾರಿ ಅನುವಾದಗಳಿಂದ ಆದ ತಮ್ಮ ಮನದ ಮೇಲಿನ ಗಾಯ ಮಾಯಲೇ ಇಲ್ಲ ಎಂದು ಕುಂದೇರಾ ಪರಿತಪಿಸಿದ್ದಾರೆ.

ಆ ಗಾಯದ ಮೇಲೆ ಮತ್ತೆ ಬರೆ ಎಳೆಯಬಾರದೆಂದೋ ಅಥವಾ ಆ ನೋವನ್ನು ಮರೆಮಾಚಲೆಂದೋ ತಾವೇ ಒಂದು 63 ಶಬ್ದಗಳನ್ನೊಳಗೊಂಡ ಪದಕೋಶ ವನ್ನು ರಚಿಸಿದ್ದಾರೆ. ಅವು ಯಾರೂ ಕೇಳದ ಶಬ್ದಗಳೇನಲ್ಲ. ಅವರ  ಕಾದಂಬರಿಯಲ್ಲಿ ಆ ಶಬ್ದಗಳು ಯಾವ ವಿಶಿಷ್ಟ ರೀತಿಯಲ್ಲಿ ಬಳಸಲಾಗಿದೆ ಎಂದು (ಓದುಗ ರಿಗೂ, ವಿಮರ್ಶಕರಿಗೂ, ಅವರಿಬ್ಬರಿಗಿಂತಾ ಮುಖ್ಯವಾಗಿ, ಅನುವಾದಕರಿಗೆ) ಸಂಪೂರ್ಣವಾಗಿ ವಿವರಿಸುವ ಪುಟ್ಟ ಪದಕೋಶ. ಉದಾಹರಣೆಗೆ ಯೂರೋಪ್ ಎಂಬ ಶಬ್ದವೇ ಕುಂದೇರಾರ ಕಾದಂಬರಿಯ ಸಂದರ್ಭದಲ್ಲಿ ಅತಿ ವಿಶೇಷವಾದ ಅರ್ಥವನ್ನು ಪಡೆದುಕೊಳ್ಳುತ್ತದೆ. ಪದಕೋಶದಲ್ಲಿನ ಪ್ರತಿಯೊಂದು ಶಬ್ದವೂ ವಿವರಣಾತ್ಮವಾಗಿಯೂ, ವಿಶ್ಲೇಷಣಾತ್ಮಕವಾಗಿಯೂ ಇದೆ.

ಕಾದಂಬರಿಕಾರನ ಚಿಂತನಾಕ್ರಮಕ್ಕೆ ಹಿಡಿದ ದೀವಿಗೆಯಾಗಿದೆ. ಅಂದ ಮಾತ್ರಕ್ಕೆ ಮುಂದಿನ ಅನುವಾದಕರು ಎಡವಟ್ಟು ಸೃಷ್ಟಿಸುವುದಿಲ್ಲ ಅನ್ನುವ ಭರವಸೆ ಇಲ್ಲ.
ಭರವಸೆ ಮತ್ತು ವಿಶ್ವಾಸವನ್ನು ನಿಖರತೆ ಗಳಿಸಿಕೊಡಬಲ್ಲದು. ನನ್ನನ್ನು ಸಂದರ್ಶಿಸಿದ ಖ್ಯಾತ ಕನ್ನಡ ಪತ್ರಿಕೆಯ ವರದಿಗಾರನಿಗೆ ಆತನಿಗೆ ಅರ್ಥವಾಗಲೆಂದೇ
ಬಿಡಿಸಿ ಹೇಳಿದ್ದರೂ ನನ್ನ ಮಾತುಗಳನ್ನು ತಿರುಚಿದ್ದ. ನನ್ನದೇ ವೃತ್ತಿಯಲ್ಲಿ ನಿತ್ಯ ಘಟಿಸುವ ಆಭಾಸಗಳ ಫಲಾನುಭವಿ ನಾನಾಗಿದ್ದೆ.

ಹಾಗೆ ತಿರುಚಿದ್ದು ಅನುದ್ದೇಶಿತವಾಗಿತ್ತು ಎಂದು ಖಚಿತವಾಗಿ ಹೇಳಬ! ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕೀಯ ಸಲಹೆಗಾರ ಟಿಜೆಎಸ್ ಜಾರ್ಜ್ ಅದ್ಭುತ ಲೇಖಕ. ಒಮ್ಮೆ ಆತ ಹೇಳಿದ್ದು: ನಮ್ಮ ವರದಿಗಾರ ವಿಭಾಗದಲ್ಲಿ 16 ಜನರಿದ್ದಾರೆ. ಅವರಲ್ಲಿ ನಾಲ್ಕು ಮಂದಿ ರಿಪೋಟರ್‌ರ್ಗಳು, ಉಳಿದವರೆಲ್ಲ ಪೋರ್ಟರ್‌ಗಳು (ಮಾಹಿತಿ ಯನ್ನು ಹೊತ್ತು ತರುವ ಹಮಾಲಿಗಳು). ಅಲ್ಲಿನ ಅಂದಿನ ವರದಿಗಾರರ ವರದಿಗಳನ್ನು ತಿದ್ದಿದ ಅನುಭವಿರುವ ನನಗೆ ಜಾರ್ಜ್‌ರ ಮಾತು ಜೋಕಾಗಿ ಕೇಳಲಿಲ್ಲ. ಆಂಗ್ಲ ಮಾಧ್ಯಮದಲ್ಲಿ ಸೇವೆ ಸಲ್ಲಿಸುವ ವರದಿಗಾರರೆಲ್ಲರಿಗೆ ಇಂಗ್ಲಿಷ್ ಬರುತ್ತದೆಂಬುದು ಭ್ರಮೆ.

ನಾನು ಸಂಪಾದಿಸುತ್ತಿದ್ದ ಸಂಜೆ ಪತ್ರಿಕೆಯಿಂದ ಒಂದು ದಿನ ದೂರವುಳಿಯಬೇಕಾಯಿತು. ಅಂದೇ ಮುಖ್ಯವಾದ ಒಂದು ಬೆಳವಣಿಗೆಯಾಗಿತ್ತು. ಆ ಕುರಿತು ಮುಖಪುಟದ ಸಂಪಾದಕೀಯ ಬರೆಯಲು ನಿರ್ಧರಿಸಿದೆ. ನೋಡಿದರೆ, ಇಂಟರ್‌ನೆಟ್ ಕೈಕೊಟ್ಟಿತ್ತು. ಸಬ್ ಎಡಿಟರ್ ಒಬ್ಬಳಿಗೆ ಫೋನಿನ ಡಿಕ್ಟೇಟ್ ಮಾಡಲು ನಿರ್ಧರಿಸಿದೆ. ಆಕೆಯ ಸಾಮರ್ಥ್ಯದ ಬಗ್ಗೆ ನನಗೆ ಭರವಸೆ ಇಲ್ಲದಿದ್ದುದರಿಂದ ಆಕೆ ಮಾನಿಟರ್‌ನಲ್ಲಿ ಟೈಪ್ ಮಾಡುವುದನ್ನು ಕಿವಿಗೊಟ್ಟು ಕೇಳುತ್ತಿದ್ದೆ. (ಪುಣ್ಯಕ್ಕೆ, ಟೈಪ್ ಮಾಡಿದರೆ ಟಕಟಕ ಶಬ್ದ ಮಾಡುವ ಕೀಬೋರ್ಡ್ ಕಾಲವದು.) ತಪ್ಪಾಗಿ ಟೈಪ್ ಮಾಡಿದ್ದಿ, ಸರಿಪಡಿಸು ಎಂದೆ.

reign ಶಬ್ದ – ಟೈಪ್ ಮಾಡಿದರೆ ಐದು ಬಾರಿ ಸದ್ದು ಮಾಡಬೇಕು, ಆದರೆ ನನಗೆ ಕೇಳಿದ್ದು ನಾಲ್ಕು. ಅವಳು ಅದನ್ನು rein  ಎಂತಲೋ, rain ಎಂದೋ ಟೈಪ್ ಮಾಡಿರುವ ಸಾಧ್ಯತೆಯನ್ನು ಮನಗಂಡಿದ್ದೆ. ಬೊಫೋರ್ಸ್ ಹಗರಣವನ್ನು ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕ ಅರುಣ್ ಶೌರಿ ಎಳೆಎಳೆಯಾಗಿ ಬಿಡಿಸಿಡುತ್ತಿದ್ದ
ದಿನಗಳವು. ಅವರ ಒಂದೆರಡು ಲೇಖನಗಳು ಪತ್ರಿಕೆಯ ಎರಡು ಪುಟಗಳನ್ನು ಆಕ್ರಮಿಸುವಷ್ಟು ಸುದೀರ್ಘವಾಗಿದ್ದವು. ಅದೊಂದರ ಕರಡನ್ನು ತಮ್ಮ ಮುಂದಿಟ್ಟು
ಕೊಂಡಿದ್ದ ಬೆಂಗಳೂರು ಆವೃತ್ತಿಯ ಸುದ್ದಿ ಸಂಪಾದಕರು ಅದರತ್ತ ಕಣ್ಣಾಡಿಸಲು ನನ್ನ ಸಹಾಯ ಕೇಳಿದರು. ಒಂದು ಸಣ್ಣ ತಪ್ಪಿರುವುದನ್ನು ತೋರಿಸಿದೆ. ಅಯ್ಯೋ, ಅವನು (ಶೌರಿ) ಊರ (ಬೆಂಗಳೂರಿನ) ಇದ್ದೇನಪ್ಪ, ತಿದ್ದೋದು ಬೇಡ ಎಂದರು.

ಪತ್ರಿಕೋದ್ಯಮದಲ್ಲಿ ನಾನು ಕಲಿತ ಒಂದು ಪಾಠ ಲೇಖಕನ ಖ್ಯಾತಿ ಎಷ್ಟೇ ದೊಡ್ಡದಿದ್ದರೂ ಅವರ ಕಾಪಿ ಕೈಗೆತ್ತುಕೊಳ್ಳುವ ಉಪಸಂಪಾದಕ ಅದರಿಂದ
ಪ್ರಭಾವಿತನಾಗಬಾರದು. ಕಾಪಿಯಲ್ಲಿರುವ ತಪ್ಪನ್ನು ತಿದ್ದುವುದಷ್ಟೇ ಅವನ ಕೆಲಸ, ವೃತ್ತಿಧರ್ಮ. ಖ್ಯಾತ ಲೇಖಕರ ಕಾಪಿಯಲ್ಲೂ ತಪ್ಪಿರಬಹುದೆಂಬ ಪೂರ್ವ
ನಿಶ್ಚಯದಿಂದಲೇ ಕೆಲಸಕ್ಕೆ ಕೈ ಹಾಕಬೇಕು. ವಿದ್ವತ್ ಕಾರಣಕ್ಕೆ ನಾನು ಗೌರವಿಸುವ ಬಂಗಾಳ ಮೂಲದ ಅಮೆರಿಕ ವಾಸಿ ಫೇಸ್‌ಬುಕ್ ಸ್ನೇಹಿತೆಯೊಬ್ಬರು
ಸಮೂಹಮಾಧ್ಯಮ ಪ್ರಾಧ್ಯಾಪಕರು, ಆಧ್ಯಾತ್ಮಿಕತೆ ಕುರಿತು ಕೃತಿಗಳನ್ನು ರಚಿಸಿರುವ ಲೇಖಕಿ ಕೂಡ. ಮೊನ್ನೆ ಅವರು ಮನುಸ್ಮೃತಿ ಈಗ ಮುಕ್ತವಾಗಿ ದೊರಕುತ್ತಿದೆ ಎಂದು ಲಿಂಕ್ ಹಂಚಿಕೊಂಡಿದ್ದಾರೆ.

ನಾನಿನ್ನೂ ಓದಿಲ್ಲ. ಆಗಷ್ಟೇ ಕ್ಲಬ್ ಹೌಸ್ ಚರ್ಚೆಯೊಂದರಲ್ಲಿ ಶ್ರೋತೃವಾಗಿ ಪಾಲ್ಗೊಂಡಿದ್ದೆ. ಮನುಸ್ಮೃತಿಯ ಯಾವ ಶ್ಲೋಕಗಳನ್ನು ಖಂಡಿಸಿದ್ದರೋ, ಆ ಶ್ಲೋಕ ಗಳನ್ನು ಭಾಷೆಯ ನಿಖರತೆಗೆ ಒರೆಹಚ್ಚಿ ಪ್ರತಿಪಾದಿಸಿದ ಚರ್ಚೆ. ಇಂಗ್ಲಿಷ್, ಹಿಂದಿ ಮತ್ತು ಸಂಸ್ಕೃತ ಮೂರು ಭಾಷೆಗಳಲ್ಲೂ ಪ್ರಭುತ್ವ ಹೊಂದಿದ್ದ ಚರ್ಚಾಪಟು ಗಳು. ಅಂಬೇಡ್ಕರ್ ಗ್ರಹಿಕೆ ಸರಿಯಿಲ್ಲವೆಂದು ವಾದ ಮಂಡಿಸಿದರು.

ಇವರು ಮನುವಾದಿಗಳಂತೇ ಕಂಡುಬಂದರು. ಫ್ಯಾಸಿಸ್ಟ್ ಶಬ್ದ ಬಳಸುವರನೇಕರಿಗೆ ಅದರ ಬಗ್ಗೆ ತಿಳುವಳಿಕೆ ಇಲ್ಲವೆಂಬ ವಾಸ್ತವವನ್ನು ಹೇಳಿದೆ. ಮನುವಾದಿ ಯೆಂಬ ಠಸ್ಸೆಯನ್ನು ಒತ್ತಿ ಅವನನ್ನು ಎಡಪಂಥವೆಂಬ ಜೆಸಿಬಿಯಿಂದ ಎತ್ತಿ ಒಗೆದರೆ ಹಾಗೆ ಕರೆಸಿಕೊಂಡವನು ಮತ್ತೆಂದೂ ಧೂಳಿನಿಂದ ಎದ್ದುಬರಬಾರದು. ಆ ಠಸ್ಸೆ ಒತ್ತುವವನಿಗೆ ಮನು ಯಾರೆಂದೇನೂ ತಿಳಿದಿರಬೇಕಿಲ್ಲ, ಅವನ ಕಾಲಮಾನದ ಜ್ಞಾನವಿರಬೇಕಿಲ್ಲ, ಸಂಸ್ಕೃತ ವರ್ಣಮಾಲೆಯ ಪರಿಚಯವಿರಬೇಕಿಲ್ಲ, ಮೂರ್ನಾಲ್ಕು ದಿನ ಗಲ್ಲಕ್ಕೆ ರೇಝರ್ ತಗುಲಿಸದಿದ್ದರೆ ಸಾಕು.