Sunday, 24th November 2024

ಸೆನ್ಸೆಕ್ಸ್ 148, ನಿಫ್ಟಿ 57 ಪಾಯಿಂಟ್ಸ್ ಏರಿಕೆ

share Market

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಮಂಗಳವಾರ ಜಾಗತಿಕ ಸಕಾರಾತ್ಮಕ ಸೂಚನೆಗಳ ಹಿನ್ನಲೆಯಲ್ಲಿ ಸೆನ್ಸೆಕ್ಸ್ 148 ಪಾಯಿಂಟ್ಸ್ ಏರಿಕೆ ಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 57 ಪಾಯಿಂಟ್ಸ್ ಹೆಚ್ಚಾಗಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 148.74 ಪಾಯಿಂಟ್ಸ್ ಏರಿಕೆಗೊಂಡು 55,704.53 ಪಾಯಿಂಟ್ಸ್ ಮುಟ್ಟಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 57.30 ಪಾಯಿಂಟ್ಸ್ ಹೆಚ್ಚಾಗಿ 16,553 ತಲುಪಿದೆ. ದಿನದ ವಹಿವಾಟು ಆರಂಭದಲ್ಲಿ 955 ಷೇರುಗಳು ಏರಿಕೆಗೊಂಡರೆ, 733 ಷೇರುಗಳು ಕುಸಿದವು, 71 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಹಿಂಡಾಲ್ಕೊ ಷೇರು ಸುಮಾರು 6 ರೂಪಾಯಿ ಗಳಿಕೆಯೊಂದಿಗೆ 413.30 ಕ್ಕೆ ಆರಂಭವಾಯಿತು. ಟಾಟಾ ಸ್ಟೀಲ್ ನ ಷೇರುಗಳು 20 ರೂಪಾಯಿ ಹೆಚ್ಚಾಗಿ 1,378.35 ರೂ., NTPC ಷೇರುಗಳು ರೂ 2 ಗಳಿಕೆಯೊಂದಿಗೆ 115.00 ಮಟ್ಟದಲ್ಲಿ ಪ್ರಾರಂಭವಾಯಿತು. ಪವರ್ ಗ್ರಿಡ್ ಕಾರ್ಪೊರೇಷನ್ ಷೇರುಗಳು 2 ರೂ.ಗಳಷ್ಟು ಏರಿಕೆಯಾಗಿ 178.05 ರೂ. ಪ್ರಾರಂಭವಾಯಿತು.

ಎಚ್‌ಡಿಎಫ್‌ಸಿ ಷೇರುಗಳು 19 ರೂಪಾಯಿ ಇಳಿಕೆಯೊಂದಿಗೆ ರೂ 2,702.80 ಕ್ಕೆ ಆರಂಭವಾಯಿತು. ಮಾರುತಿ ಸುಜುಕಿಯ ಷೇರುಗಳು 6,767.35 ಕ್ಕೆ ಆರಂಭವಾಗಿದ್ದು, ಸುಮಾರು 59 ರೂಪಾಯಿಗಳಷ್ಟು ಇಳಿಕೆಯಾಗಿದೆ. ಏಷ್ಯನ್ ಪೇಂಟ್ಸ್ ನ ಷೇರುಗಳು 21 ರೂಪಾಯಿ ಇಳಿಕೆಯಾಗಿ 3,056.40 ರೂಪಾಯಿಗೆ ಆರಂಭವಾಯಿತು. ಶ್ರೀ ಸಿಮೆಂಟ್ ನ ಷೇರುಗಳು 186 ರೂಪಾಯಿ ಇಳಿಕೆಯಾಗಿ 25,799.95 ರೂ.ನಲ್ಲಿ ಆರಂಭವಾಯಿತು.

ಡಾಲರ್‌ನಲ್ಲಿನ ದೌರ್ಬಲ್ಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಅಪಾಯದ ಹಸಿವಿನ ಹೆಚ್ಚಳದಿಂದಾಗಿ ರೂಪಾಯಿ ಆರಂಭಿಕ ವಹಿವಾಟಿನಲ್ಲಿ ಬಲವನ್ನು ಪಡೆಯ ಬಹುದು. ಭಾರತೀಯ ರೂಪಾಯಿ 11 ಪೈಸೆ ಏರಿಕೆಯೊಂದಿಗೆ ಪ್ರತಿ ಡಾಲರ್‌ಗೆ 74.10 ತಲುಪಿದೆ.