Wednesday, 27th November 2024

ಸುಳ್ಳು ಸುದ್ದಿ ಬಿತ್ತರಿಸುವ ವೆಬ್​ ಪೋರ್ಟಲ್​, ಯುಟ್ಯೂಬ್ ನಿಯಂತ್ರಣಕ್ಕೆ ಯತ್ನಿಸಿದ್ದೀರಾ ?: ಸುಪ್ರೀಂ

ನವದೆಹಲಿ: ವೆಬ್​ ಪೋರ್ಟಲ್​ಗಳು ಹಾಗೂ ಯುಟ್ಯೂಬ್​​ನಂತಹ ಆನ್​ಲೈನ್​ ಚಾನೆಲ್​ಗಳಲ್ಲಿ ಸುಳ್ಳು ಸುದ್ದಿಗಳು ಬಿತ್ತರವಾಗುವುದಕ್ಕೆ ಸುಪ್ರೀಂ ಕೋರ್ಟ್​ ಕಳವಳ ವ್ಯಕ್ತಪಡಿಸಿದೆ.

ಕಳೆದ ವರ್ಷ ದೇಶದಲ್ಲಿ ಕರೋನಾ ಸೋಂಕು ಪಸರಿಸಲು ತಬ್ಲಿಘಿ ಜಮಾತ್​ ಕಾರಣ ಎಂದು ವರದಿ ಬಿತ್ತರಿಸಿದ್ದ ಮಾಧ್ಯಮಗಳ ವಿರುದ್ಧ ಸಲ್ಲಿಸಲಾದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್​ ವಿಚಾರಣೆ ಕೈಗೆತ್ತಿಕೊಂಡಿತ್ತು.

ನ್ಯಾ.ರಮಣ, ಸಾಲಿಸಿಟರ್​ ಜನರಲ್​​ ತುಷಾರ್​ ಮೆಹ್ತಾ ಬಳಿ, ಮಾಧ್ಯಮಗಳ ವರ್ಗವೊಂದು ಎಲ್ಲಾ ಸುದ್ದಿಗಳಿಗೆ ಕೋಮು ಬಣ್ಣ ಹಚ್ಚುತ್ತಿದೆ. ಇದನ್ನು ನಿಯಂತ್ರಿಸಲು ಯತ್ನಿಸಿದ್ದೀರಾ ಎಂದು ಪ್ರಶ್ನಿಸಿದೆ.

ಮೆಹ್ತಾ ಉತ್ತರಿಸಿ, ಕೇಂದ್ರ ಸರ್ಕಾರವು ಈಗಾಗಲೇ ಹೊಸ ಐಟಿ ನಿಯಮ ಜಾರಿಗೆ ತಂದಿದೆ. ಹೈಕೋರ್ಟ್​ಗಳಲ್ಲಿ ಹೊಸ ಐಟಿ ನಿಯಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದ ಎಂದರು. ಇದಕ್ಕೆ ಸಿಜೆಐ ಈ ವಿವರವಾಗಿ ಚರ್ಚೆಯ ಅಗತ್ಯವಿದೆ ಎಂದಿದೆ. ಜಮಿಯತ್​ ಉಲೇಮಾ ಇ ಹಿಂದ್​ ಹಾಗೂ ಪೀಸ್​ ಪಾರ್ಟಿ ಆಫ್​ ಇಂಡಿಯಾ ಸುಪ್ರಿಂಕೋರ್ಟ್’ ನಲ್ಲಿ ಅರ್ಜಿ ಸಲ್ಲಿಸಿದ್ದು ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಕೋಮುವಾದ ಹೆಚ್ಚಲು ಕಾರಣವಾಗುತ್ತಿರುವ ಮಾಧ್ಯಮದ ಒಂದು ವರ್ಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ವೆಬ್​ ಪೋರ್ಟಲ್​ಗಳು ಹಾಗೂ ಯುಟ್ಯೂಬ್​ ಚಾನೆಲ್​ಗಳಲ್ಲಿ ಯಾರು ಬೇಕಿದ್ದರೂ ಚಾನೆಲ್​ ತೆರೆಯಬಹುದು. ಹಾಗೂ ಸುಳ್ಳು ಸುದ್ದಿಗಳು ಮುಕ್ತವಾಗಿ ಕಾಣ ಸಿಗುತ್ತಿದೆ ಎಂದು ನ್ಯಾ. ರಮಣ ಕಳವಳ ವ್ಯಕ್ತಪಡಿಸಿದ್ದಾರೆ.

ವೆಬ್​ ಪೋರ್ಟಲ್​ ಸುದ್ದಿಗಳನ್ನು ನಿಯಂತ್ರಿಸಲು ಯಾವುದೇ ಆಡಳಿತ ಮಂಡಳಿಯೇ ಇಲ್ಲ. ಮನಸ್ಸಿಗೆ ಬಂದ ಸುದ್ದಿಗಳನ್ನು ಬಿತ್ತರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಯುಟ್ಯೂಬ್​ ಚಾನೆಲ್​​ಗಳನ್ನು ಯಾರೂ ಬೇಕಾದರೂ ತೆರೆಯಬಹುದಾಗಿದೆ. ಯುಟ್ಯೂಬ್​ಗಳನ್ನು ತೆರೆದರೆ ಸಾಕು ಸುಳ್ಳು ಸುದ್ದಿಗಳು ಮುಕ್ತವಾಗಿ ಕಾಣಸಿಗುತ್ತದೆ. ಈ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಲೇಬೇಕಿದೆ ಎಂದು ಸಿಜೆಐ ಹೇಳಿದರು.