Thursday, 28th November 2024

ಸಿನಿಮಾ ನಿರ್ದೇಶಕ ಮಣಿರತ್ನಂ ವಿರುದ್ಧ ದೂರು ದಾಖಲು ?

ಚೆನ್ನೈ: ತಮಿಳಿನ ಸಿನಿಮಾ ನಿರ್ದೇಶಕ ಮಣಿ ರತ್ನಂ ವಿರುದ್ಧ ದೂರು ದಾಖಲಾಗಿದೆ. ಮಣಿ ರತ್ನಂ ಅವರು ಐತಿಹಾಸಿ ಕಥಾ ಹಂದರದ ‘ಪೊನ್ನಿ ಯಿನ್ ಸೆಲ್ವನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ಬಳಸಲಾಗಿದ್ದ ಕುದುರೆ ಚಿತ್ರೀಕರಣದ ವೇಳೆ ಮೃತಪಟ್ಟಿದೆ. ಈ ಕಾರಣವಾಗಿ ಹೈದರಾ ಬಾದ್​ನಲ್ಲಿ ಕುದುರೆಯ ಮಾಲೀಕ, ಸಿನಿಮಾ ನಿರ್ಮಾಣ ಸಂಸ್ಥೆ ಹಾಗೂ ಚಿತ್ರತಂಡದ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಆಗಸ್ಟ್​ 11ರಂದು ಕುದುರೆ ಮೃತಪಟ್ಟ ಘಟನೆ ನಡೆದಿದ್ದು, ಆಗಸ್ಟ್​ 18 ರಂದು ಎಫ್​ಐಆರ್​ ದಾಖಲಾಗಿದೆ. ಸೆ. 2ರಂದು ದ ಅನಿಮಲ್ ವೆಲ್​ಫೇರ್ ಬೋರ್ಡ್​ ಆಫ್​ ಇಂಡಿಯಾ (AWBI) ಕುದುರೆ ಸಾವಿನ ಕುರಿತಾಗಿ ತನಿಖೆ ನಡೆಸಿ ವರದಿ ನೀಡುವಂತೆ ಹೈದರಾಬಾದ್​ನ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ಸಿನಿಮಾದಲ್ಲಿ ಯುದ್ಧ ನಡೆಯುವ ದೃಶ್ಯಗಳ ಚಿತ್ರೀಕರಣಕ್ಕಾಗಿ ಕುದುರೆಗಳನ್ನು ಬಳಸಲಾಗುತ್ತಿದ್ದು, ಶೂಟಿಂಗ್ ವೇಳೆ ಕುದುರೆ ಕೆಳಗೆ ಬಿದ್ದು ಪೆಟ್ಟಾಗಿ ಅಸುನೀಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ಆಗಬೇಕಿದೆ. ಪೇಟಾ ಹೇಳಿರು ವಂತೆ ಸುಸ್ತಾಗಿರುವ ಕುದುರೆಗಳನ್ನು ಸತತವಾಗಿ ಬಿಸಿಲಿನಲ್ಲಿ ಶೂಟಿಂಗ್​ನಲ್ಲಿ ಬಳಸಿ ಕೊಂಡ ಕಾರಣದಿಂದ ಡಿಹೈಡ್ರೇಷನ್​ ಆಗಿ ಕುದುರೆ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ.

ಸಿನಿಮಾಗಳಲ್ಲಿ ಪ್ರಾಣಿಗಳನ್ನು ಬಳಸಿಕೊಳ್ಳಲು ಕಠಿಣ ನಿಯಮಗಳಿವೆ. ಹಾಗಾಗಿಯೇ ಚಿತ್ರತಂಡಗಳು ಪ್ರಾಣಿಗಳ ಬದಲಾಗಿ ಸಿಜಿಐ ಅಥವಾ ಇತರೆ ತಂತ್ರಜ್ಞಾನ ಗಳನ್ನು ಬಳಸಿಕೊಳ್ಳುತ್ತಾರೆ.

ಇನ್ನು ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ನಟಿಸುತ್ತಿದ್ದಾರೆ. ಹೆಸರಾಂತ ತಮಿಳು ಲೇಖಕ ಕಲ್ಕಿ ಕೃಷ್ಣಮೂರ್ತಿ 1954ರಲ್ಲಿ ರಚಿಸಿದ್ದ ಚೋಳ ರಾಜಮನೆತನದ ಐತಿಹಾಸಿಕ ಹಿನ್ನೆಲೆಯ ಕಾದಂಬರಿ ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ.