Friday, 22nd November 2024

ಮಾದರಿ ಆರ್ ಜೆ ಸುನೀಲ್ …!

* ಪ್ರಶಾಂತ್ ಟಿ ಆರ್

ಬಾಲ್ಯದಿಂದಲೂ ಕಷ್ಟದಲ್ಲೇ ಸುನೀಲ್ ಕಷ್ಟಗಳನ್ನು ಮೆಟ್ಟಿನಿಂತು ಈ ಸಮಾಜದಲ್ಲಿ ಹೇಗೆ ಹೆಸರು. ಕೀರ್ತಿಗಳಿಸಬೇಕು ಎಂಬುದನ್ನು ನಮಗೆಲ್ಲರಿಗೂ ತೋರಿಸಿಕೊಟ್ಟಿದ್ದಾರೆ. ನಿಜವಾಗಿಯೂ ಸುನೀಲ್ ಎಲ್ಲರಿಗೂ ಮಾದರಿಯೇ ಸರಿ.

ಸಂಗೀತಕ್ಕೆೆ ತಲೆದೂಗದವರೇ ಇಲ್ಲ. ಸಂಗೀತಕ್ಕೆೆ ಅಂತಹ ಮಹಾನ್ ಶಕ್ತಿಿ ಇದೆ. ಅದಕ್ಕಾಾಗಿಯೇ ಇತ್ತೀಚಿನ ದಿನಗಳಲ್ಲಿ ಖಾಸಗಿ ರೆಡಿಯೋ ಸ್ಟೇಷನ್‌ಗಳು ಹುಟ್ಟಿಿಕೊಂಡಿದ್ದು, ಕೇಳುವರಿಗೆ ಇಷ್ಟವಾದ ಹಾಡುಗಳನ್ನ ಪ್ರಸಾರ ಮಾಡುತ್ತವೆ. ಅದರ ಜತೆಗೆ ಅಗತ್ಯ ಮಾಹಿತಿಯನ್ನೂ ನೀಡುತ್ತವೆ. ಇದಿಷ್ಟಕ್ಕೇ ರೆಡಿಯೋಗಳು ಸೀಮಿತವಾಗಿಲ್ಲ. ಕೇಳುಗರಿಗೆ ಕಚಗುಳಿ ಇಡುವ ಹಾಸ್ಯಭರಿತ ಪ್ರಸಾರ ಮಾಡುತ್ತಿಿವೆ. ಇಂತಹ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಇರುವ ಕಾರ್ಯಕ್ರಮ ‘ಕಲರ್ ಕಾಗ್’ ‘ರೆಡ್ ಎಫ್‌ಎಂ’ ನಲ್ಲಿ ಮೂಡಿಬರುವ ಈ ಕಾರ್ಯಕ್ರಮ ಜನಪ್ರಿಯತೆಯ ಉತ್ತುಂಗಕ್ಕೇರಿದೆ. ಎಂತಹದ್ದೇ ಒತ್ತಡವಿರಲಿ ‘ಕಲರ್ ಕಾಗೆ’ಯ ದನಿ ಕಿವಿಗೆ ಬಿದ್ದರೆ ಎಷ್ಟೇ ಒತ್ತಡವಿದ್ದರೂ ಅದನ್ನು ಮರೆತು ಆನಂದವಾಗಿರಬಹುದು. ಅದಕ್ಕೆೆ ಕಾರಣ ಕಾರ್ಯಕ್ರಮ ನಡೆಸಿಕೊಡುವ ಆರ್.ಜೆ. ಸುನೀಲ್ . ಹೌದು. ಸುನೀಲ್ ಈ ಕಾರ್ಯಕ್ರಮಕ್ಕೆೆ ಮೆರಗು ತಂದುಕೊಟ್ಟಿದ್ದಾರೆ. ಕೇಳುಗರು ಇಂತಹವರಿಗೆ ‘ಕಾಗೆ’ ಹಾರಿಸಿ ಎಂದು ಪೋನ್ ನಂಬರ್ ಸಾಕು, ಮುಂದೆ ನಗುವೇ…

ಹೀಗೆ ಎಲ್ಲರನ್ನೂ ನಗಿಸುವ ಸುನೀಲ್ ಮನದಾಳದಲ್ಲಿ ಹೇಳಿಕೊಳ್ಳಲಾಗದ, ನೋವಿದೆ. ತೋಡಿಕೊಳ್ಳಲಾಗದ ದುಖವಿದೆ. ಆದರೂ ಇತರರ ನಗುವಿನಲ್ಲಿ ತನ್ನ ನೋವನ್ನು ಮರೆತು ನಲಿವನ್ನು ಕಂಡಿದ್ದಾಾರೆ. ಸುನೀಲ್ ಬಲು ಚುರುಕಾದ ಹುಡುಗ. ಜೀವನದಲ್ಲಿ ಏನನ್ನಾಾದರು ಸಾಧಿಸಬೇಕೆಂಬ ಹಂಬಲ ಹೊಂದಿದ್ದವರು. ಆದರೆ ಕಾಲೇಜಿನಲ್ಲಿರುವಾಗಲೇ ತಂದೆ-ತಾಯಿಯನ್ನು ಕಳೆದುಕೊಂಡರು. ಆ ವೇಳೆ ಇವರಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಕಂಡಕನಸೆಲ್ಲಾಾ ಕಮರಿತ್ತು. ಆದರೂ ಧೃತಿಗೆಡಲಿಲ್ಲ. ಕುಟುಂಬವೆಂಬ ಬಂಡಿಯ ನೊಗವನ್ನು ಹೊತ್ತು ಸಾಗಿದರು. ವಿದ್ಯಾಾಭ್ಯಾಾಸವನ್ನು ಮೊಟಕುಗೊಳಿಸಿದರು. ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆೆ ಸೇರಿಕೊಂಡರು. ಹೊರಗಡೆಯಿಂದ ಬರುವ ವಸ್ತುಗಳನ್ನು ಇಳಿಸುವ, ಇಲ್ಲಿಂದ ಹೊರ ಹೋಗುವ ವಸ್ತುಗಳನ್ನು ಸಾಗಿಸುವ ಕೆಲಸ ಅವರದ್ದಾಾಗಿತ್ತು.

 

ಅದು ಗಣೇಶ ಚತುರ್ಥಿಯ ಸಂಭ್ರಮದ ದಿನಗಳು ಇವರ ಮನೆಯ ಪಕ್ಕದಲ್ಲಿಯೇ, ಗಣೇಶ ಮೂರ್ತಿಯನ್ನು ಪ್ರತಿಷ್ಠಾಾಪಿಸಿದ್ದರು. ಅಲ್ಲಿ ಆರ್ಕೆಸ್ಟ್ರಾಾ ನಡೆಯುತ್ತಿಿತ್ತು. ಅದನ್ನು ತದೇಕಚಿತ್ತದಿಂದ ನೋಡುತ್ತಿಿದ್ದ ಸುನೀಲನಿಗೆ ತಾನು, ಹೀಗೆ ಕಾರ್ಯಕ್ರಮ ನಡೆಸಿಕೊಟ್ಟಿಿದ್ದರೆ ಎಷ್ಟು ಚೆಂದವೆಂದು ಮನದಲ್ಲಿಯೇ ಅಂದುಕೊಳ್ಳುತ್ತಿಿದ್ದರು. ಹೀಗಂದುಕೊಂಡಾಗಲೇ ಆರ್ಕೆಸ್ಟ್ರ ತಂಡ ಕೊಂಚ ವಿರಾಮ ತೆಗೆದುಕೊಂಡಾಗ ವೇದಿಕೆ ಏರಿದ ಮಿಮಿಕ್ರಿಿ ಮಾಡಲು ಮುಂದಾದರು. ಮಿಮಿಕ್ರಿಿ ಮಾಡಿದ್ದೇ ತಡ, ಅಲ್ಲಿ ನೆರೆದಿದ್ದ ಜನರೆಲ್ಲ, ನಕ್ಕು ನಕ್ಕು ಚಪ್ಪಾಾಳೆತಟ್ಟಿಿ ಸಂಭ್ರಮಿಸಿದರು. ಇದನ್ನು ಕಂಡ ಕಂಪೆನಿಯ ಮುಖ್ಯಸ್ಥ ಅಚ್ಚರಿಗೊಂಡು, ತಮ್ಮ ತಂಡಕ್ಕೆೆ ಸೇರುವಂತೆ ಸುನೀಲನಿಗೆ ಆಹ್ವಾಾನ ಕೊಟ್ಟರು. ಇದು ನನಗೆ ಬಯಸದೇ ಬಂದ ಭಾಗ್ಯ ಎಂದು ತಿಳಿದ ಸುನೀಲ್ ಆರ್ಕೆಸ್ಟ್ರಾಾ ತಂಡ ಸೇರಲು ಸಂತೋಷದಿಂದಲೇ ಸಮ್ಮತಿಸಿದರು. ಒಂದು ವಾರದ ಬಳಿಕ ತಂಡವನ್ನು ಭೇಟಿ ಮಾಡಿದ ಸುನೀಲನಿಗೆ ಮುಂದಿನ ವಾರ ಪಕ್ಕದ ಊರಿನಲ್ಲಿ ನಡೆಯುವ ಬರುವಂತೆ ತಿಳಿಸಿದರು. ಅದರಂತೆ ಮಾರನೇಯ ದಿನ ಸುನೀಲ್ ಅಲ್ಲಿಗೆ ತೆರಳಿದರು. ಆದರೆ ಅಲ್ಲಿ ಬಯಸಿದಂತೆ ವೇದಿಕೆಯಲ್ಲಿ ಹಾಡುವ, ಮಿಮಿಕ್ರಿಿ ಮಾಡುವ ಅವಕಾಶ ಸಿಗಲಿಲ್ಲ. ಬದಲಾಗಿ ಆರ್ಕೆಸ್ಟ್ರಕ್ಕೆೆ ಬೇಕಾದ ಸ್ಟ್ಯಾಾಂಡ್, ಲೈಟ್‌ಗಳನ್ನು ಎತ್ತಿಿ ಸಾಗಿಸುವ ಕೆಲಸವಷ್ಟೇ ಸುನೀಲ್‌ನದಾಗಿತ್ತು. ಮುಂದಿನ ಮೂರು -ನಾಲ್ಕು ಕಾರ್ಯಕ್ರಮಗಳಲ್ಲೂ ಇದೇ ಚಾಕರಿ ಸುನೀಲ್‌ನ ಪಾಲಿಗೆ ಮೀಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ಸುನೀಲ್, ಆರ್ಕೆಸ್ಟ್ರಾಾ ತಂಡ ತೊರೆದು ಮತ್ತೆೆ ಕಾರ್ಖಾನೆಗೆ ತೆರಳಿ ಕೆಲಸ ಮುಂದುವರಿಸಿದರು. ಆದರೂ ಸುನೀಲನೊಳಗೊಬ್ಬ ಕಲಾವಿದ ಇದ್ದ.

ವೇದಿಕೆ ನೀಡಿದ ಆ ಕಾರ್ಯಕ್ರಮ !
ಒಮ್ಮೆೆ ಪಕ್ಕದ ಊರಿನಲ್ಲಿ ಹರಿಕತೆ ಕಾರ್ಯಕ್ರಮವನ್ನು ಹಮ್ಮಿಿಕೊಳ್ಳಲಾಗಿತ್ತು. ಹರಿಕತೆ ತಂಡದವರು ಸುನೀಲನನ್ನು ತಮ್ಮೊೊಂದಿಗೆ ಕರೆದೊಯ್ದರು. ಹೀಗೆ ತೆರಳಿದ ಸುನೀಲ ಹರಿಕತೆಯ ನಡು ನಡುವೆ ನಗೆ ಚಟಕಿ ಹಾರಿಸುತ್ತಾಾ… ಎಲ್ಲರನ್ನೂ ನಗಿಸುತ್ತಿಿದ್ದರು. ಅವರ ಹಾಸ್ಯ ಹೇಗಿತ್ತೆೆಂದರೆ ದುಖದಲ್ಲಿದ್ದವರು ಬಿದ್ದು ಬಿದ್ದು ನಗಲು ಶುರು ಮಾಡಿದರು. ಯಾವುದೋ ಕಾರ್ಯ ನಿಮಿತ್ತ ಆ ಊರಿಗೆ ಬಂದಿದ್ದ ಸಿನಿಮಾ ನಟ ತಬಲಾ ನಾಣಿ, ಅಲ್ಲಿ ಸುನೀಲ್‌ನ ಕಂಡು ಮೆಚ್ಚಿಿದರು. ತಮ್ಮೊೊಂದಿಗೆ ಸೇರಿಸಿಕೊಂಡು ನಟನೆಯ ಬಗ್ಗೆೆಯೂ ತರಬೇತಿ ನೀಡಿದರು. ಹೀಗೆ ನಟನೆಯ ಬಗ್ಗೆೆಯೂ ಅರಿತ ಸುನೀಲ, ‘ಚೆಡ್ಡಿಿದೋಸ್‌ತ್‌’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದರು. ಆದರೆ ಸಿನಿಮಾದಿಂದ ಬರುತ್ತಿಿದ್ದ ಹಣದಲ್ಲಿ ಕುಟುಂಬದ ನಿರ್ವಹಣೆ ಕಷ್ಟಕರವಾಗಿತ್ತು.

ಹಾಗಾಗಿ ಬೇರೆ ನೌಕರಿಯೂ ಸುನೀಲನಿಗೆ ಅನಿವಾರ್ಯವಾಗಿತ್ತು. ಇದೇ ವೇಳೆ ಸುನೀಲ್ ಸ್ನೇಹಿತರೊಬ್ಬರು ಭೇಟಿಯಾದರು. ಆಗ ಚಾಲ್ತಿಿಯಲ್ಲಿದ್ದ ‘ಎಸ್.ಎಫ್ ಎಂ’ನಲ್ಲಿ ನೌಕರಿ ಕೊಡಿಸಿದರು. ಅಲ್ಲಿಂದ ಸುನೀಲ್‌ನ ದಿಕ್ಕೆೆ ಬದಲಾಯಿತು. ‘ಎಸ್.ಎಫ್‌ಎಂ’ನಲ್ಲಿ ಸಿಕ್ಕ ಸದವಕಾಶವನ್ನು ಬಳಸಿಕೊಂಡರು. ಅದು‘ರೆಡ್ ಎಫ್‌ಎಂ’ ಆಗಿ ಬದಲಾಯಿತು. ಇಲ್ಲಿಯೂ ಸುನೀಲ್‌ನ ಪ್ರತಿಭೆ ಅನಾವರಣಗೊಳ್ಳುತ್ತಾಾ ಸಾಗಿತು. ತನಗೆ ಯಾವುದೇ ಕಾರ್ಯಕ್ರಮ ನೀಡಿದರೂ ಅದನ್ನು ಅಚ್ಚುಕಟ್ಟಾಾಗಿ ನಿಭಾಯಿಸುತ್ತಿಿದ್ದರು.

ಆ ಹೊತ್ತಿಿಗೆ ‘ಕಲರ್ ಕಾಗೆ’ ಎಂಬ ಹೊಸ ಕಲ್ಪನೆಯ ಕಾರ್ಯಕ್ರಮ ಪ್ರಾಾರಂಭವಾಯಿತು. ಈ ಕಾರ್ಯಕ್ರಮ ಲಕ್ಷಾಾಂತರ ಮಂದಿಯ ಮನಗೆದ್ದಿತು. ವಿಶೇಷ ಎಂದರೆ ಸುನೀಲ್, ನಟ ಪವರ್ ಸ್ಟಾಾರ್ ಪುನೀತ್ ರಾಜ್‌ಕುಮಾರ್ ಅವರಿಗೂ ಕಲರ್ ಕಾಗೆ ಹಾರಿಸಿದರು. ಸುನೀಲ್‌ನ ಮಾತಿನ ದಾಟಿಯನ್ನು ಮೆಚ್ಚಿಿದ ಪವರ್ ಸ್ಟಾಾರ್, ಆತನನ್ನು ಹೀಗೆ ಕಲರ್ ಕಾಗೆ ಹಾರಿಸುವ ಸುನೀಲ್ ತಮ್ಮ ವ್ಯಕ್ತಿಿತ್ವದಿಂದಲೂ ಗಮನಸೆಳೆದರು. ಇಂದು ರಾಜ್ಯದ ಪ್ರಸಿದ್ಧ ಆರ್.ಜೆ ಆಗಿದ್ದರೂ ಅವರಲ್ಲಿ ಹಮ್ಮುಬಿಮ್ಮು ಇಲ್ಲ, ಅದೇ ಸರಳತೆ, ಸಭ್ಯತೆ ಅವರಲ್ಲಿದೆ. ಸುನೀಲ್‌ಗೆ ಸಿನಿಮಾದಲ್ಲೂ ನಟಿಸುವ ಅವಕಾಶ ಬರುತ್ತಿಿದೆ. ಆದರೆ ಸುನೀಲ್‌ಗೆ ಇರುವ ಆಶಯ ಒಂದೇ ‘ನಾನು ಜನರನ್ನು ನಗಿಸಬೇಕು. ಅದರಂದಲೇ ನಾನೂ ನಗುವನ್ನು ಕಾಣಬೇಕು’ ಎಂಬುದು.