Sunday, 24th November 2024

ಸೂಚ್ಯಂಕ ಸೆನ್ಸೆಕ್ಸ್: 160 ಅಂಕಗಳ ಏರಿಕೆ

ಮುಂಬೈ: ಸೋಮವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 160ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ದಿನಾಂತ್ಯದ ವಹಿವಾಟನ್ನು ಪೂರ್ಣಗೊಳಿಸಿದೆ.

ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 166.96 ಅಂಕ ಏರಿಕೆಯೊಂದಿಗೆ 58,296.91 ಅಂಕಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಮಧ್ಯಂತ ರದ ವಹಿವಾಟಿನ ಸಂದರ್ಭದಲ್ಲಿ ಸೆನ್ಸೆಕ್ಸ್ ಅಂಕ 58,515.85ರ ಗಡಿ ತಲುಪಿತ್ತು.

ಎನ್ ಎಸ್ ಇ ನಿಫ್ಟಿ 54.20 ಅಂಕಗಳ ಏರಿಕೆಯೊಂದಿಗೆ 17,337.80 ಅಂಕಗಳ ಸಾರ್ವಕಾಲಿಕ ದಾಖಲೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಎಚ್ ಸಿಎಲ್, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ಟೆಕ್ ಮಹೀಂದ್ರ, ಬಜಾಜ್ ಆಟೋ ಷೇರುಗಳು ಲಾಭ ಗಳಿಸಿದೆ.

ಶಾಂಘೈ ಸಿಯೋಲ್, ಟೋಕಿಯೊ, ಹಾಂಗ್ ಕಾಂಗ್ ಷೇರು ಮಾರುಕಟ್ಟೆ ಲಾಭದೊಂದಿಗೆ ದಿನಾಂತ್ಯದ ವಹಿವಾಟನ್ನು ಅಂತ್ಯಗೊಳಿಸಿದೆ.