Friday, 20th September 2024

ತಾಲಿಬಾನಿಗಳೆಂಬ ತಲೆಕೆಟ್ಟ ಕ್ರಿಮಿಗಳು

ಅಭಿಪ್ರಾಯ

ಮಣ್ಣೆಮೋಹನ್

ತುರ್ತು ಕೆಲಸದ ನಿಮಿತ್ತ ವ್ಯಕ್ತಿಯೊಬ್ಬರು ಕಾರಿನಲ್ಲಿ ವೇಗವಾಗಿ ಸಾಗುತ್ತಿದ್ದರು. ಒಂದು ಸ್ಥಳದಲ್ಲಿ ಇದ್ದಕ್ಕಿದ್ದಂತೆಯೇ ಮಂಗವೊಂದು ರಸ್ತೆ ದಾಟಲು ಓಡಿಬಂತು. ಅದನ್ನು ಗಮನಿಸಿದ ಅವರು ಕೂಡಲೇ ಬ್ರೇಕ್ ಹಾಕಿ ಮಂಗವನ್ನು ಅಪಘಾತದಿಂದ ತಪ್ಪಿಸಲು ಶತಪ್ರಯತ್ನಪಟ್ಟರು. ಆದರೂ ಅಪಘಾತ ನಡೆದೇಹೋಯಿತು. ಮಂಗ ವಿಲವಿಲ ಒದ್ದಾಡುತಿತ್ತು. ಆ ವ್ಯಕ್ತಿ ಕೂಡಲೇ ಕಾರಿನಲ್ಲಿದ್ದ ನೀರನ್ನು ತಂದು ಅದರ ಬಾಯಿಗೆ ಬಿಟ್ಟು ತಲೆಯನ್ನು, ಮೈಯನ್ನು ತಟ್ಟುತ್ತಿದ್ದರು. ತಲೆಗೆ ಹೆಚ್ಚಿನ ಪೆಟ್ಟು ಬಿದ್ದಿದ್ದರಿಂದ ಮಂಗ ಮರಣವನ್ನಪ್ಪಿತು.

ಕಾರನ್ನು ಚಲಾಯಿಸುತ್ತಿದ್ದ ಆ ವ್ಯಕ್ತಿ ಚಿಂತಾಕ್ರಾಂತರಾಗಿ ಬಹಳ ವ್ಯಾಕುಲಕ್ಕೊಳಗಾದರು. ಬಹಳ ಸಮಯ ಅವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಪಾಪಪ್ರಜ್ಞೆ ಕಾಡತೊಡಗಿತು. ಮುಂದೆ ಯಾವ ಅನಾಹುತ ಕಾದಿದೆಯೋ? ಎಂಬ ಚಿಂತೆ ಮುಖದ ಮೇಲೆ ಮೂಡಿತು. ಕಣ್ಣಲ್ಲಿ ಧಾರಾಕಾರ ನೀರು ಸಹ ಬಂತು. ಏನೂ ಮಾಡಲು ತೋಚದೆ, ಬಹಳಕಾಲ ಮಂಗದ ಮುಂದೆಯೇ ಕುಳಿತಿದ್ದು, ನಂತರ ನಿಶ್ಚಯವೊಂದನ್ನು ಮಾಡಿ, ಮಂಗದ ಶವವನ್ನು ತನ್ನ ಕಾರಿನಲ್ಲಿಟ್ಟು ಕೊಂಡು ತಮ್ಮ ತೋಟದ ಬಳಿ ಬಂದರು. ಮನೆಯವರಿಗೆಲ್ಲ ವಿಷಯ ತಿಳಿಸಿದರು. ಅವರೂ ಕೂಡ ಚಿಂತಾಕ್ರಾಂತರಾದರು.

ಎಲ್ಲರೂ ಸೇರಿ ಮನುಷ್ಯನಿಗೆ ಮಾಡುವ ರೀತಿಯಲ್ಲೇ ಶವದ ಶೃಂಗಾರ ಮಾಡಿ, ತಮ್ಮ ತೋಟದಲ್ಲೇ ಶವ ಸಂಸ್ಕಾರವನ್ನು ಮಾಡಿದರು. ಅದಕ್ಕೆ ಸಮಾಧಿ ಕಟ್ಟಿ, ಅದರ ಮೇಲೆ ಪುಟ್ಟ ಗುಡಿಯನ್ನು ಕಟ್ಟಿ, ದಿನವೂ ಪೂಜಿಸುತ್ತಿದ್ದಾರೆ. ಇನ್ನೊಮ್ಮೆ ಬೈಕ್ ನಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಡ್ಡಲಾಗಿ ರಸ್ತೆ ದಾಟುತ್ತಿದ್ದ ನಾಗರ ಹಾವೊಂದು ಎದುರಾಗುತ್ತದೆ. ಮಬ್ಬುಗತ್ತಲ ಸಮಯವಾದ್ದರಿಂದ ಅದನ್ನು ಗಮನಿಸದ ಅವರ ಬೈಕ್ ಚಕ್ರಕ್ಕೆ ಹಾವು ಸಿಲುಕುತ್ತದೆ. ಇದು ಅವರ ಅರಿವಿಗೆ ಬಂದ ಕೂಡಲೇ ಗಾಡಿಯನ್ನು ನಿಲ್ಲಿಸುತ್ತಾರೆ. ಹಾವು ವಿಲವಿಲ ಒದ್ದಾಡುತ್ತಿರುತ್ತದೆ. ಆ ವ್ಯಕ್ತಿಗೆ ಧರ್ಮಸಂಕಟ. ಅದನ್ನು ಉಪಚರಿಸುವಂತಿಲ್ಲ.

ಸುಮ್ಮನಿರಲೂ ಆಗುತ್ತಿಲ್ಲ. ಸ್ವಲ್ಪ ಸಮಯದ ನಂತರ ಹಾವು ಸಾವನ್ನಪ್ಪುತ್ತದೆ. ಇದು ಅವರ ಮನದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಕೂಡಲೇ ತಮ್ಮ ಪರಿಚಿತ ಪುರೋಹಿತರನ್ನು ಫೋನ್ ಮೂಲಕ ಸಂಪರ್ಕಿಸಿ ವಿಷಯ ತಿಳಿಸುತ್ತಾರೆ . ಅವರ ಸಲಹೆಯಂತೆ ರಸ್ತೆಯ ಬದಿಯಲ್ಲಿ ಗುಂಡಿ ತೋಡಿ ಅದನ್ನು ಮುಚ್ಚಿ, ಅಕ್ಕಪಕ್ಕದ ಹೂವಿನ ಗಿಡಗಳಿಂದ ಹೂಗಳನ್ನು ಕಿತ್ತು ಸಮಾಧಿಯ ಮೇಲಿಟ್ಟು, ಮನೆಗೆ ಬಂದು ಸ್ನಾನ ಮುಗಿಸಿ, ದೇವಸ್ಥಾನಕ್ಕೆ ತೆರಳಿ ಪೂಜೆ ನೆರವೇರಿಸಿ ಕಾಣಿಕೆಯನ್ನು ಹಾಕಿ, ತಮ್ಮ ಪಾಪಪ್ರeಯನ್ನು ಹೋಗಲಾಡಿಸಿಕೊಳ್ಳುತ್ತಾರೆ.

ಹೀಗೆಯೇ ಯಾವುದೇ ಪ್ರಾಣಿ- ಪಕ್ಷಿಗಳಿರಲಿ, ಹಸು- ಕರು ಗಳಿರಲಿ ಜೀವತೆತ್ತರೆ ಗೌರವಪೂರ್ಣವಾಗಿ ಶವಸಂಸ್ಕಾರ ಮಾಡುವ ಪದ್ಧತಿ ಹಿಂದಿನ ಕಾಲದಿಂದಲೂ
ನಮ್ಮಲ್ಲಿ ನಡೆದುಕೊಂಡು ಬಂದಿದೆ. ಗೋವುಗಳಿಗೇನಾದರೂ ಈ ರೀತಿಯಾದರೆ ಆ ಪಾಪಪ್ರಜ್ಞೆಯಿಂದ ಹೊರಬರಲು, ಜೀವಂತ ಗೋವುಗಳನ್ನು ಮಠ ಮಾನ್ಯ ಗಳಿಗೆ ದಾನ ಮಾಡುವುದು, ಬೆಳ್ಳಿಯಲ್ಲಿ ಮಾಡಿದ ಗೋವುಗಳನ್ನು ದೇವಾಲಯಗಳಿಗೆ ಕಾಣಿಕೆ ಕೊಡುವುದು- ನಡೆದುಕೊಂಡು ಬಂದಿರುವ ಪದ್ಧತಿ.

ಮೇಲಿನ ದೃಷ್ಟಾಂತಗಳನ್ನು ಗಮನಿಸಿದಾಗ ಹಿಂದೂ ಜನಾಂಗದ ಜೀವನ ಪದ್ಧತಿಯ ಮೌಲ್ಯಗಳು, ಪರಂಪರೆಯಿಂದ ಬಂದಂತಹ ದಯಾಪರ ನಂಬಿಕೆಗಳು
ನಮಗೆ ಎದ್ದುಕಾಣಿಸುತ್ತವೆ.‘ಸರ್ವೇಜನೋ ಸುಖಿನೋ ಭವಂತು’ ಮಾತ್ರವಲ್ಲದೆ, ‘ಸಕಲಜೀವಿಗಳಲ್ಲೂ ದಯೆ ಇರಲಿ’ ಎಂಬ ತತ್ತ್ವವನ್ನು ತಲೆತಲೆಮಾರುಗಳಿಂದ
ಜೀವನದುದ್ದಕ್ಕೂ ಪರಿಪಾಲಿಸಿಕೊಂಡು ಬಂದಿರುವ ಜೀವನದರ್ಶನವನ್ನು ಕಾಣುತ್ತೇವೆ. ನಮ್ಮಂತೆಯೇ ಪರಿಸರದಲ್ಲಿ ಬದುಕುವಂತಹ ಇತರ ಪ್ರಾಣಿಗಳ ಜೊತೆ ಗಿನ ನಮ್ಮ ಒಡನಾಟ, ಪರಸ್ಪರ ಮನುಷ್ಯರ ನಡುವಿನಷ್ಟೇ, ಕೆಲವೊಮ್ಮೆ ಅದಕ್ಕಿಂತ ಹೆಚ್ಚು ಆಪ್ತತೆಯುಳ್ಳದ್ದು. ಈ ಕಾರಣಕ್ಕಾಗಿಯೇ ಅವುಗಳ ಸಾವಿಗೆ ನಾವು ಕಾರಣವಾದಾಗ ವ್ಯಾಕುಲತೆಗೊಳಗಾಗುವುದು.

ಸಕಲ ಪ್ರಾಣಿಗಳಲ್ಲೂ ದಯೆ, ಕರುಣೆ ನಮಗೆಲ್ಲ ನಮ್ಮ ಜೀನ್ಸ್ ನಲ್ಲೇ ಬಂದಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ, ಎಲ್ಲವನ್ನೂ ಒಳಗೊಳ್ಳುವ ಸಂಸ್ಕೃತಿ ನಮ್ಮದಾಗಿದೆ. ಇದೀಗ ಮುಖ್ಯ ವಿಚಾರಕ್ಕೆ ಬರೋಣ. ನಮ್ಮ ಪಕ್ಕದ ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ನಡೆಸುತ್ತಿರುವ ದುರಾಕ್ರಮಣದ ಚಿತ್ರಣಗಳನ್ನು ಪ್ರತಿನಿತ್ಯ ನಾವು ಗಮನಿಸುತ್ತಿದ್ದೇವೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಹೆಣ್ಣೊಬ್ಬಳು ತಲೆಯನ್ನು ಬಟ್ಟೆಯಿಂದ ಮುಚ್ಚಲು ನಿರಾಕರಿಸಿದ ಕಾರಣಕ್ಕೆ ಆಕೆಯನ್ನು ರಸ್ತೆಬದಿ ಕುಳ್ಳಿರಿಸಿ, ಐದಾರು ಜನ ಆಕೆಯ ಸುತ್ತಲೂ ನೆರೆದು, ಶರಿಯಾ ಕಾನೂನಿನಂತೆ ನ್ಯಾಯ ತೀರ್ಮಾನ ಮಾಡಿ, ಆಕೆಯ ತಲೆಗೆ ಗುಂಡಿಟ್ಟು ಕೊಲ್ಲುವ ಅಮಾನವೀಯ ದೃಶ್ಯವನ್ನು ನೀವೆಲ್ಲರೂ ನೋಡಿದ್ದೀರಿ.

ಇನ್ನೊಂದು ವಿಡೀಯೋದಲ್ಲಿ ಹೆಣ್ಣೊಬ್ಬಳು ಉಗುರಿಗೆ ನೇಲ್ ಪಾಲಿಶ್ ಹಾಕಿರುವ ಕಾರಣಕ್ಕೆ ಆಕೆಯ ಬೆರಳನ್ನೇ ತುಂಡರಿಸಿರುವ ಚಿತ್ರವನ್ನು ನಾವು ಗಮನಿಸಿ ದ್ದೇವೆ. ಇವೆಲ್ಲಕ್ಕಿಂತ ಘೋರವಾದದ್ದು, ಶಾಲೆಗಳಲ್ಲಿ ಓದುತ್ತಿರುವ ಹತ್ತು- ಹನ್ನೆರಡು ವಯಸ್ಸಿನ ಹೆಣ್ಣುಮಕ್ಕಳನ್ನು ಭೀದಿಯಲ್ಲಿ ಒಟ್ಟಿಗೆ ಕೂರಿಸಿ ಇಪ್ಪತ್ತು- ಮೂವತ್ತು ಡಾಲರ್‌ಗೆ ಹರಾಜು ಹಾಕುತ್ತಿರುವ ಹೃದಯವಿದ್ರಾವಕ ದೃಶ್ಯ ನಮ್ಮೆಲ್ಲರ ಮನ ಕಲಕದೆ ಇರದು. ಇಷ್ಟೇ ಅಲ್ಲದೆ ಅವರನ್ನು ಕೊಂಡು ಹೋದವರು, ಏನೂ ತಿಳಿಯದ ಆ ಮುಗ್ಧ ಮಕ್ಕಳನ್ನು ಹೇಗೆಲ್ಲ ನಡೆಸಿಕೊಳ್ಳುತ್ತಾರೆ ಎಂಬುದನ್ನು ನೆನಪಿಸಿಕೊಂಡರೆ ಮನಸ್ಸು ಕುದಿಯುತ್ತದೆ.

ಇಂತಹ ಮೃಗೀಯ ವರ್ತನೆ ನಿಜಕ್ಕೂ ಮನುಕುಲಕ್ಕೆ ಅಪಮಾನ. ಹಾಗಾದರೆ ಶರಿಯಾ ಕಾನೂನಿನಲ್ಲಿ ಹೆಣ್ಣುಮಕ್ಕಳಿಗೆ ಕಿಂಚಿತ್ತೂ ಮರ್ಯಾದೆ ಇಲ್ಲವೇ? ಷರಿಯಾ ಕಾನೂನು ಎಂದರೆ ದೇವರ ಕಾನೂನು ಎಂದರ್ಥ. ದೇವರ ದೃಷ್ಟಿಯಲ್ಲಿ ಹೆಣ್ಣು ಮಕ್ಕಳು ಇಷ್ಟೊಂದು ನಿಕೃಷ್ಟವೇ? ಎಲ್ಲರನ್ನೂ, ಎಲ್ಲವನ್ನೂ ದೇವರೇ ಸೃಷ್ಟಿಸಿದ ಎನ್ನುವುದಾದರೆ, ದೇವರಿಂದಲೇ ಸೃಷ್ಟಿಯಾಗಿರುವ ಹೆಣ್ಣುಕುಲಕ್ಕೆ ದೇವರ ಕಾನೂನಿನಲ್ಲಿ ಇಷ್ಟೊಂದು ಅಪಚಾರವೇ? ಎಲ್ಲರೂ ಚರ್ಚಿಸಬೇಕಾಗಿರುವ ವಿಷಯ ವಿದು.

ಮುಸ್ಲಿಮ್ ತಾಲಿಬಾನಿಗಳು ಅವರವರ ಜನಾಂಗದ, ಅವರವರ ಸಂಬಂಽಕರ ಮೇಲೆಯೇ ಇಷ್ಟೊಂದು ಕ್ರೂರವಾಗಿ ವರ್ತಿಸುತ್ತಿದ್ದಾರೆಂದರೆ, ಭಾರತದ ಮೇಲೆ
ದಾಳಿ ಮಾಡಿದ ಸಂದರ್ಭದಲ್ಲಿ ಹಿಂದೂಗಳನ್ನು ಎಷ್ಟು ಕ್ರೂರವಾಗಿ ನಡೆಸಿಕೊಂಡಿದ್ದಾರೆ ಎಂಬುದು ವೇದ್ಯವಾಗುತ್ತದೆ. ಕೇವಲ 8 ದಿನಗಳ ತಾಲಿಬಾನಿಗಳ
ಅಟ್ಟಹಾಸಕ್ಕೆ ಇಡೀ ಜಗತ್ತು ಬೆಚ್ಚಿಬಿದ್ದಿದೆ. ಹಾಗಾದರೆ 800 ವರ್ಷಗಳ ಕಾಲ ನಿರಂತರವಾಗಿ ಹಿಂದೂಗಳನ್ನು ಇವರು ಹೇಗೆ ಚಿತ್ರಹಿಂಸೆಗೊಳಪಡಿಸಿರಬಹುದು ಯೋಚಿಸಿ.

ಶಾಂತಿಯ ತೋಟದಲ್ಲಿ ರಕ್ತದೋಕುಳಿಯಾಡುವ ಇಂಥಾ ನೀಚರಿಗೆ ನಿಜಕ್ಕೂ ಧರ್ಮವೆಂಬುದು ಇದೆಯೇ? ಅದೇಕೋ ಕಾಣೆ? ಮುಸ್ಲಿಮರು ನಮ್ಮ ಬ್ರದರ್ಸ್‌ಗಳು
ಎಂದ ಮಹಾನುಭಾವರು, ತಮ್ಮ ಬ್ರದರ್ಸ್‌ಗಳ ಇಂತಹ ನೀಚ ಕೃತ್ಯವನ್ನು ಖಂಡಿಸದೆ ಬಾಯಿ ಹೊಲಿದುಕೊಂಡು ಕುಂತಿದ್ದಾರೆ. ಹಾಗೆಯೇ ‘ಮಸ್ಲಿಮರಿಂದಲೇ ನಮಗೆ ಎಪ್ಪತ್ತು ಸೀಟು ಬಂದಿದ್ದು’ ಎಂದ ಇನ್ನೊಬ್ಬ ಮಹಾನುಭಾವರು, ಸಂಪೂರ್ಣ ಮುಸ್ಲಿಮರೇ ತುಂಬಿರುವ ಅಫ್ಘಾನಿಸ್ತಾನಕ್ಕೆ ತೆರಳಿ, ತಮ್ಮ ಪಕ್ಷವನ್ನು ಸ್ಥಾಪಿಸಿ, ಎಲ್ಲಾ ಸೀಟುಗಳನ್ನು ಗೆದ್ದು, ಆ ದೇಶದ ಅಧ್ಯಕ್ಷರಾಗುವ ಅವಕಾಶವಿದೆ ಅಲ್ಲವೇ? ಒಮ್ಮೆ ಪ್ರಯತ್ನಿಸಿದರೆ ಒಳ್ಳೆಯದು! ಏಕೆಂದರೆ ಈ ದೇಶದಲ್ಲಿ ಅವರ ಪಕ್ಷಕ್ಕೆ ಅಸ್ತಿತ್ವವಂತೂ ಇಲ್ಲ. ಅಲ್ಲಾದರೂ ತಮ್ಮ ಪಕ್ಷಕ್ಕೆ ನೆಲೆ ಡುಕೊಂಡರೆ ತುಂಬಾ ಸಂತೋಷ.

ಆದರೆ ಇದಂತೂ ಇವರಿಂದ ಸಾಧ್ಯವಿಲ್ಲ. ಏಕೆಂದರೆ ಇವರ ಆರ್ಭಟವೇನಿದ್ದರೂ ಇವರು ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡು ಸುಮ್ಮನಿರುವ ಸಹಿಷ್ಣು ಹಿಂದೂಗಳ
ಭಾರತದಲ್ಲಿ ಮಾತ್ರ. ಇಷ್ಟೆಲ್ಲಾ ಮುಸ್ಲಿಮರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಇವರುಗಳು, ಒಂದು ತಿಂಗಳು ಕುಟುಂಬ ಸಮೇತರಾಗಿ ಪಾಕಿಸ್ತಾನದಲ್ಲೊ,
ಅ-ನಿಸ್ತಾನದಲ್ಲೊ ವಾಸವಿದ್ದು ಸುರಕ್ಷಿತವಾಗಿ ವಾಪಸ್ ಬಂದು ಮಾತನಾಡಲಿ ನೋಡೋಣ! ಆಗ ಇವರು ಹೇಳಿದ್ದೆಲ್ಲವನ್ನೂ ಕೇಳೋಣ, ಏನಂತೀರಾ? ಖಂಡಿತ
ಇವರಿಂದ ಇದು ಸಾಧ್ಯವಿಲ್ಲ, ಏಕೆಂದರೆ ಇವರು ಬರೀ ಬೊಗಳೆದಾಸರುಗಳು. ಇವರ ಪರಾಕ್ರಮವೇನಿದ್ದರೂ ಸಹಿಷ್ಣು ಹಿಂದೂಗಳ ಮುಂದೆ ಮಾತ್ರ. ಹಾಗೆಯೇ ಹಿಂದೂ ದೇವರುಗಳಿಗೆ ನೂರೆಂಟು ಯಜ್ಞ- ಯಾಗಾದಿ, ಹೋಮ- ಹವನಗಳನ್ನು ಮಾಡಿ ತಮ್ಮ ಇಡೀ ಕುಟುಂಬಕ್ಕೆ ಅನುಕೂಲವಾಗುವಂತೆ ಮಾಡಿಕೊಂಡ ಮಹಾನುಭಾವ ರೊಬ್ಬರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವುದಾಗಿ ಹೇಳಿಕೊಂಡಿದ್ದರು.

ಅವರು ಈಗಲೇ ಅಫ್ಘಾನಿಸ್ತಾನಕ್ಕೆ ತೆರಳಿ ಮುಂದಿನ ಜನ್ಮದಲ್ಲಿ ತಾವು ಜನ್ಮ ತಾಳಬೇಕಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು. ಹಾ! ಇನ್ನೊಂದು ವಿಚಾರ ಮರೆತಿದ್ದೆ. ಭಾರತ ದೇಶದಲ್ಲಿ ಅಭದ್ರತೆಯ ಭಾವ ಕಾಡುತ್ತದೆಂದು ಹೇಳಿದ್ದ ಮಹಾನುಭಾವ ನಟರುಗಳ ದನಿಯೆಲ್ಲೂ ಕೇಳುತ್ತಿಲ್ಲ. ಏಕೋ ತಿಳಿಯುತ್ತಿಲ್ಲ. ಗಂಟಲು ಕೆಟ್ಟಿದೆಯೇ? ಅಥವಾ ಮಾತೇ ಹೊರಡದಾಯಿತೇ? ಅಭದ್ರತೆಯ ಕಾರಣಕ್ಕೆ ಮರೆಯಲ್ಲಿರುವ ಅವರನ್ನು ದಯವಿಟ್ಟು ಹುಡುಕಿಕೊಂಡು ಬನ್ನಿ. ಭದ್ರತೆಯ ದೇಶಗಳಾಗಿರುವ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ ಕಳಿಸಿಕೊಡೋಣ. ಅಲ್ಲಾದರೂ ಅವರ ಜೀವನ ಸುಭದ್ರವಾಗಿರಲಿ, ಅಲ್ಲವೇ? ತಾಲಿಬಾನಿಗಳ ವಿಶ್ವ ರೂಪದರ್ಶನವನ್ನು ನೋಡಿದ ನಂತರ ಅದೇಕೋ ಕಾಣೆ, ನಮ್ಮ ಕೆಲವು ಬುದ್ಧಿಜೀವಿಗಳ ಬಾಯಿ ಬಂದ್ ಆಗಿರುವಂತಿದೆ.

ಹಾಗೆಯೇ ಕಮ್ಯುನಿಸ್ಟ್ ಬಾಯಿಗಳ ಗಂಟಲು ಒಣಗಿಹೋಗಿವೆ. ಸೊಲ್ಲೇ ಹೊರಬರುತ್ತಿಲ್ಲ! ಪಾಪ ಏನಾಯಿತು ಅವರ ಚೀರಾಡುವ ಗಂಟಲುಗಳಿಗೆ? ತಜ್ಞ ವೈದ್ಯ ರಿಂದ ಪರಿಶೀಲಿಸಿ ವರದಿ ತರಿಸಿಕೊಳ್ಳಬೇಕು. ಇವರ ಕಥೆಯೇ ಹೀಗಾದರೆ ಇನ್ನು ಸದಾ ಅಲ್ಪಸಂಖ್ಯಾತರನ್ನು ಓಲೈಸುವ ವಿರೋಧಪಕ್ಷಗಳ ವಿಷಯ ಕೇಳಬೇಕೆ? ಅವರಿಗೆಲ್ಲ ಜಾಣ ಕುರುಡು, ಜಾಣ ಕಿವುಡು. ಗಾಢ ಮೌನಂ ಅತಿ ಬುದ್ಧಿವಂತ ಲಕ್ಷಣಂ. ಹಾಗೆಯೇ ಇಲ್ಲಿಯ ನೆಲದಲ್ಲಿ ಆಶ್ರಯ ಪಡೆದು, ಇಲ್ಲಿಯ ಗಾಳಿ ನೀರು ಕುಡಿದು, ಇಲ್ಲಿಯ ಆಹಾರ ಸೇವಿಸಿ ಬದುಕುವ ಕೆಲವೊಂದು ಕೆಟ್ಟ ಕ್ರಿಮಿಗಳು ಜೈ ತಾಲಿಬಾನಿ ಎಂಬ ಘೋಷಣೆ ಕೂಗುತ್ತಿವೆ.

ಇಂತಹ ಕ್ರಿಮಿಗಳು ಇರಬೇಕಾದ್ದು ತಾಲಿಬಾನ್‌ಗಳ ಮಧ್ಯೆ. ದಯವಿಟ್ಟು ಇಂಥವರನ್ನು ಸರಕಾರ ಗುರುತಿಸಿ ತಾಲಿಬಾನಿಗಳ ಜತೆ ಕಳಿಸಿದರೆ ಒಳ್ಳೆಯದು. ಒಂದು ಒಳ್ಳೆಯ ಬೆಳವಣಿಗೆ ಎಂದರೆ, ಇಂತಹ ಕ್ರಿಮಿಗಳನ್ನ ಮುಸ್ಲಿಂ ಬಾಂಧವರೇ ಹಿಡಿದು ಹೊಸಕಿ ಹಾಕುತ್ತಿರುವುದು. ಇದೀಗ ತುರ್ತಾಗಿ ಆಗಬೇಕಿರುವ ಕೆಲಸವೆಂದರೆ ಭಾರತದ ಇಡೀ ಮುಸ್ಲಿಂ ಸಮುದಾಯ ಎದ್ದುನಿಂತು ತಾಲಿಬಾನಿಗಳ ಕೃತ್ಯವನ್ನು ಖಂಡಿಸಬೇಕಾಗಿದೆ. ನಿಮ್ಮ ಹೇಡಿ ಕೃತ್ಯಕ್ಕೆ ನಮ್ಮ ಬೆಂಬಲವಿಲ್ಲವೆಂದು ಸಾರಿ ಹೇಳಬೇಕಾಗಿದೆ. ತಮ್ಮವರೇ ತಮಗೆ ಬೆಂಬಲ ಕೊಟಿಲ್ಲವೆಂದ ಮೇಲೆ ತಾಲಿಬಾನಿಗಳು ಜೀವಿಸಲು ಹೇಗೆ ಸಾಧ್ಯ ಅಲ್ಲವೇ?

ಉಪಸಂಹಾರ: ಆಕಸ್ಮಿಕವಾಗಿ ವಾಹನಗಳಿಗೆ ಸಿಕ್ಕಿ ಸಾವನ್ನಪ್ಪುವ ಪ್ರಾಣಿಗಳಿಗಾಗಿ ಮಮ್ಮಲಮರುಗುವ ಮನೋಭಾವ ದೊಡ್ಡದೇ? ಅಥವಾ ನರಮನುಷ್ಯರನ್ನು,
ತಮ್ಮಂತೆಯೇ ಹುಟ್ಟಿದವರನ್ನು ಕಂಡ ಕಂಡಲ್ಲಿ ಗುಂಡಿಕ್ಕಿ ಕೊಲ್ಲುವ ಇವರ ಹೇಡಿ ಕೃತ್ಯ ದೊಡ್ಡದೇ? ಪ್ರಜ್ಞಾವಂತರೆಲ್ಲರೂ ಯೋಚಿಸಬೇಕಾಗಿದೆ.