Friday, 22nd November 2024

ಮೆಸೇಜ್ ಮೂಲಕ ವಂಚನೆ

* ಎಲ್.ಪಿ.ಕುಲಕರ್ಣಿ, ಬಾದಾಮಿ.

ಈ ಜಗತ್ತಿಿನಲ್ಲಿ ಹಿಂದೆಯೂ ವಂಚಕರು ಇದ್ದರು, ಇಂದೂ ಇದ್ದಾಾರೆ. ಆದರೆ ಈಗ ಅಂತರ್ಜಾಲವನ್ನು ಉಪಯೋಗಿಸಿಕೊಂಡು, ಆ ಕುರಿತು ಜನರಿಗೆ ಇರುವ ಅಜ್ಞಾಾನವನ್ನು ಉಪಯೋಗಿಸಿಕೊಂಡು ವಂಚಿಸುವ ವೃತ್ತಿಿನಿರತ ವಂಚಕರ ಪಡೆಯೇ ಕಾರ್ಯನಿರತವಾಗಿದೆ. ದೂರ ಇರಲು ಕಲಿಯುವುದು ಇಂದಿನ ಅವಶ್ಯಕತೆಗಳಲ್ಲಿ ಒಂದು.

ಇತ್ತೀಚೆಗೆ ನನಗೆ ಫೇಸ್‌ಬುಕ್‌ನಲ್ಲಿ ಅಮೆರಿಕಾದ ಮರಿಯಾ ಎಂಬ ಸುಂದರ(?) ಯುವತಿಯ ಫ್ರೆೆಂಡ್ ರಿಕ್ವೆೆಸ್‌ಟ್‌ ಬಂದಿತ್ತು. ಸುಂದರ ಎನಿಸುವ ಫೋಟೋ ಹಾಕಿದ್ದರು, ಆದರೆ ಅವರದ್ದೇ ಆ ಫೋಟೋ ಎಂದು ಖಚಿತಪಡಿಸುವ ಯಾವ ಅವಕಾಶವೂ ಇಲ್ಲ! ಫ್ರೆೆಂಡ್ ರಿಕ್ವೆೆಸ್‌ಟ್‌ ಆಕ್ಸೆೆಪ್‌ಟ್‌ ಮಾಡಿಕೊಳ್ಳುವುದಕ್ಕೂ ಮುಂಚೆ ಅವಳ ಫ್ರೊೊಫೈಲ್‌ನ್ನು ತೆಗೆದು ನೋಡಿದೆ. ಅವಳೊಬ್ಬ ವಿಧವೆ ಮತ್ತು ಒಂದು ಪ್ರತಿಷ್ಠಿಿತ ಫೈನಾನ್‌ಸ್‌ ಕಂಪನಿಯಲ್ಲಿ ಕೆಲಸಮಾಡುತ್ತಿಿದ್ದಾಳೆಂಬುದು ಗೊತ್ತಾಾಯಿತು. ಯಾರೋ ಗೊತ್ತಿಿಲ್ಲ, ಪರಿಚಯವಿಲ್ಲ ಎಂದು ನೆಗ್ಲೆೆಕ್‌ಟ್‌ ಮಾಡಿ ಸುಮ್ಮನಿದ್ದೆ. ಅದೇ ದಿನ ಸಾಯಂಕಾಲ ಅವಳು ಫೇಸ್ಬುಕ್ ಮೆಸೆಂಜರ್‌ನಲ್ಲಿ ತನ್ನ ಬಗ್ಗೆೆ ಹೀಗೆ ಬರೆದು ಕೊಂಡಿದ್ದಳು ’ನಾನೊಬ್ಬ ಫೈನಾನ್ಸಿಿಯರ್, ವಿಧವೆ. ಇತ್ತೀಚೆಗೆ ನಿಮ್ಮ ಫೇಸ್ಬುಕ್ ಫ್ರೊೊಫೈಲ್ ನೋಡಿದೆ. ಉತ್ತಮ ಮಾಹಿತಿಯನ್ನು ಒಳಗೊಂಡಿದೆ.

ಕಾರಣ ಫ್ರೆೆಂಡ್ ರಿಕ್ವೆೆಸ್‌ಟ್‌ ಕಳಿಸಿದೆ. ಒಳ್ಳೆೆಯ ಗೆಳೆಯರಾಗಿರೋಣ, ಇನ್ನು ಮುಂದೆ ನಾವು ಇ-ಮೇಲ್ ಮೂಲಕ ಮಾಹಿತಿ ಹಂಚಿಕೊಳ್ಳೋೋಣ. ಆದ್ದರಿಂದ ನಿಮ್ಮ ಇ-ಮೇಲ್ ವಿಳಾಸ ಕೊಡಿ’ ಎಂದಿತ್ತು. ’ ಥ್ಯಾಾಂಕ್‌ಸ್‌ ’ ಅಂತಾ ಮೆಸೆಜ್ ಮಾಡ್ತಿಿನಿ, ಆಸಾಮಿ ಪತ್ತೇನೆ ಇಲ್ಲ. ಎರಡು ದಿನಗಳ ನಂತರ ಒಂದು ದಿನ ಪತ್ರಿಿಕೆಯಲ್ಲಿ ಸುದ್ದಿ ಬಂದಿತ್ತು. ಮರಿಯಾ ಎಂಬುವಳ ಮೋಸದ ಜಾಲಕ್ಕೆೆ ಬಿದ್ದು, ತಮ್ಮ ಮೇಲ್ ಅಡ್ರೇಸ್ ಕೊಟ್ಟ ಹಿರಿಯ ಬ್ಯಾಾಂಕ್ ಸಿಬ್ಬಂದಿಯೊಬ್ಬರು, ತಮ್ಮ ಖಾತೆಯಲ್ಲಿನ ಎರಡು ಲಕ್ಷ ಹಣವನ್ನು ಕಳೆದುಕೊಂಡಿದ್ದರು.

ಐ’ಞ ಋ್ಟಿ. ಎ್ಟ್ಚಛಿ ್ಛ್ಟಟಞ ಖಿಖಅ ್ಞ ಐ’ಞ ಈಟ್ಞಠಿಜ್ಞಿಿಜ 3,900,000.00 ಖಿಖಈ ಠಿಟ ಟ್ಠ ್ಛಟ್ಟ ಠಿಛಿ ್ಠ್ಟಟಛಿ ಛ್ಝಿಿಜ್ಞಿಿಜ ಟಟ್ಟ ಛಿಟ್ಝಛಿ ಜ್ಞಿಿ ಐ್ಞಜಿ. ಇಟ್ಞಠ್ಚಿಠಿ ಞಛಿ ಟ್ಞ: ಜ್ಞ್ಛಿಿಟಜ್ಟ್ಚಛಿಞಜಞಜ್ಝಿಿ.್ಚಟಞ ಎಂಬ ಒಂದು ಸಂದೇಶ ನನ್ನ ಮೊಬೈಲ್ ಮೆಸೆಜ್ ಬಾಕ್‌ಸ್‌‌ಗೆ ಬಂದಿತ್ತು. ಈ ರೀತಿ ಬಡವರಿಗೆ ಸಹಾಯ ಮಾಡಲು 3,900,000 ಅಮೆರಿಕನ್ ಡಾಲರ್ ಅಂದರೆ ಭಾರತೀಯ ರೂಪಾಯಿಗಳಲ್ಲಿ ₹ 27, 83, 70, 300 ಆಗುತ್ತದೆ! ಇಷ್ಟೊೊಂದು ಹಣ ನಮಗೆ ಯಾರಾದರೂ ಕೊಡಲು ಸಾಧ್ಯವೇ! ಇದನ್ನು ನಂಬಿ ನಾವೇನಾದರೂ ಮೊಸದ ಜಾಲಕ್ಕೆೆ ಬಿದ್ದರೆ ಮುಗಿದೇ ಹೋಯಿತು. ನಮ್ಮ ಅಳಿದುಳಿದ ಹಣವೆಲ್ಲ ಗೋ…ವಿಂದ…!

ಇನ್ನೊೊಂದು ಘಟನೆಯನ್ನು ನಾನಿಲ್ಲಿ ಹಂಚಿಕೊಳ್ಳಲೇಬೇಕು. ಕೆಲವು ದಿನಗಳ ಹಿಂದೆ ನನ್ನ ಗೆಳಯನ ಮೊಬೈಲ್‌ಗೆ ಇಂಗ್ಲಿಿಷ್ನಲ್ಲಿ ಒಂದು ಸಂದೇಶ ಬಂದಿತ್ತು. 2019ರ ವಾಟ್ಸ್ಆ್ಯಪ್ ಗ್ಲೋೋಬಲ್ ಅವಾರ್ಡ್‌ನಲ್ಲಿ ನಿಮ್ಮ ವಾಟ್ಸ್ಆ್ಯಪ್ ನಂಬರ್ ₹ 2 ಕೋಟಿ 75 ಲಕ್ಷ ಗೆದ್ದುಕೊಂಡಿದೆ. ಈ ಬಹುಮಾನ ಪಡೆದುಕೊಳ್ಳಲು ನಿಮ್ಮ ಹೆಸರು, ಮೊಬೈಲ್ ನಂಬರ್, ವಯಸ್ಸು ಮತ್ತು ಉದ್ಯೋೋಗದ ಮಾಹಿತಿಯನ್ನು ್ಟಚಿಜಿಛ್ಝಿಿಜ್ಟಿಿಚಿಜಿಛ್ಝಿಿಜಿಜಟಠಿ.್ಚಟಞಗೆ ಕಳುಹಿಸಿಎಂದು ಅದರಲ್ಲಿ ಇತ್ತು. ಜನರನ್ನು ವಂಚಿಸಲು ಇರುವ ಮಾರ್ಗಗಳಲ್ಲಿ ಒಂದು.

ಕುತೂಹಲಕ್ಕಾಾಗಿಯಾದರೂ ನೀವು ಈ ಲಿಂಕ್ ಮೇಲೆ ಕ್ಲಿಿಕ್ ಮಾಡಿದರೆ, ಅದು ನಿಮ್ಮನ್ನು ತನ್ನ ಮೋಸದ ಜಾಲದಲ್ಲಿ ಸಿಲುಕಿಸಿ ನಿಮ್ಮಿಿಂದ ಹಣ ಕೀಳುವ ಇಲ್ಲವೇ ನಿಮ್ಮ ವೈಯಕ್ತಿಿಕ ಮಾಹಿತಿ ಪಡೆದು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಸಂದೇಶಗಳನ್ನು ನಿರ್ಲಕ್ಷಿಸುವುದೇ ಒಳಿತು. ಇಲ್ಲಿ ಅಚ್ಚರಿಯ ವಿಷಯ ಏನೆಂದರೆ, ಸಾಮಾನ್ಯವಾಗಿ ಈ ರೀತಿ ಸೃಷ್ಟಿಿಯಾಗುವ ನಕಲಿ ಇ-ಮೇಲ್ ವಿಳಾಸ ವಿಚಿತ್ರವಾಗಿರುತ್ತವೆ. ಸುಲಭಕ್ಕೆೆ ಓದಲೂ ಆಗದಂತಿರುತ್ತವೆ. ಇಲ್ಲಿ ಬಂದಿರುವ ವಿಳಾಸದಲ್ಲಿ ದೆಹಲಿ ಯನ್ನು ಹೋಲುವಂತಿದೆ. ಆರ್‌ಬಿಐ ಎಂದಾಕ್ಷಣ ಜನ ನಂಬುತ್ತಾಾರೆ ಎಂದುಕೊಂಡಂತಿದೆ. ಇಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿ ಏನೆಂದರೆ, ವಾಟ್ಸ್ಆ್ಯಪ್‌ಗೂ ಆರ್‌ಬಿಐಗೂ ಯಾವುದೇ ಸಂಬಂಧ ಇಲ್ಲ. ಹೀಗಿರುವಾಗ ವಾಟ್ಸ್ಆ್ಯಪ್ ಅವಾರ್ಡ್ ಅನ್ನು ಆರ್‌ಬಿಐ ಕೊಡುತ್ತದೆಯೇ ಎನ್ನುವ ಪ್ರಶ್ನೆೆ ಮೂಡುತ್ತದೆ.

ಅಷ್ಟಕ್ಕೂ ಗ್ಲೋೋಬಲ್ ಅವಾರ್ಡ್ ಏರ್ಪಡಿಸುವುದೇ ಆದರೆ ವಾಟ್ಸ್ಆ್ಯಪ್ ಅದನ್ನು ಬಹಳ ದೊಡ್ಡ ಮಟ್ಟದಲ್ಲಿ ಜಾಹೀರಾತು, ಪ್ರಕಟಣೆಯ ಮೂಲಕ ಘೋಷಣೆ ಮಾಡಬೇಕಿತ್ತು ಅಲ್ಲವೆ. ಅಂತಹ ಯಾವುದೇ ಸುದ್ದಿ, ಜಾಹೀರಾತು ಎಲ್ಲಿಯೂ ಪ್ರಕಟವಾಗಿಲ್ಲ. ಮೂರ್ಖರನ್ನಾಾಗಿಸಿ, ಅವರಿಂದ ಹಣ ಮತ್ತು ಇತರ ಮಾಹಿತಿ ದೋಚುವ ದುರುದ್ದೇಶದಿಂದಲೇ ಈ ರೀತಿ ವಂಚನೆಯ ಮೆಸೆಜ್ ಹರಿಬಿಡಲಾಗುತ್ತದೆ. ಹೀಗಾಗಿ, ಇಂತಹ ಸಂದರ್ಭಗಳಲ್ಲಿ ಕುತೂಹಲ, ಅತಿ ಬುದ್ಧಿಿವಂತಿಕೆ ಉಪಯೋಗಿಸದೇ ನಿರ್ಲಕ್ಷ್ಯ ತೋರುವುದೇ ಜಾಣತನ.

ವಹಿಸಬಹುದಾದ ಎಚ್ಚರಿಕೆಗಳು

* ಫೇಸ್ಬುಕ್, ಇನ್ಸ್ಟಾಾಗ್ರಾಾಮ್ ಮುಂತಾಂದ ಸಾಮಾಜಿಕ ಜಾಲತಾಣಗಳಲ್ಲಿ ಗೊತ್ತು ಪರಿಚಯವಿಲ್ಲದವರ ಜೊತೆ ನಿಮ್ಮ ಮೇಲ್ ಅಡ್ರೆೆಸ್, ಮೊಬೈಲ್ ನಂಬರ್ ಮುಂತಾದ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.

* ನೀವು ಬಳಸುತ್ತಿಿರುವ ಸಾಮಾಜಿಕ ಜಾಲತಾಣಗಳ ಸೆಟ್ಟಿಿಂಗ್ ನಲ್ಲಿ ನೀವು ಶೇರ್ ಮಾಡಿಕೊಳ್ಳುತ್ತಿಿರುವ ಮಾಹಿತಿ ಕೇವಲ ನಿಮ್ಮ ಪರಿಚಿತ ಫೇಸ್‌ಬುಕ್ ಸ್ನೇಹಿತರಿಗೆ ಮಾತ್ರ ತೋರುವಂತೆ, ಇಲ್ಲವೇ ನಿಮಗಷ್ಟೇ ಗೋಚರಿಸುವಂತೆ ಸೆಟ್ ಮಾಡಿಕೊಳ್ಳಿಿ.

* ಮೆಸೇಜ್ನಲ್ಲಿರುವ ಯಾವುದೇ ಲಿಂಕ್ ಮೇಲೆಯೂ ಕ್ಲಿಿಕ್ ಮಾಡಬೇಡಿ. ಒಂದೊಮ್ಮೆೆ ಕ್ಲಿಿಕ್ ಮಾಡಿದರೂ ಯಾವುದೇ ರೀತಿಯ ವೈಯಕ್ತಿಿಕ ಮಾಹಿತಿ ನೀಡಬೇಡಿ.

* ಅನುಮಾನ ಬಂದರೆ ಅಧಿಕೃತ ಜಾಲತಾಣಕ್ಕೆೆ ಹೋಗಿ ಲಾಗಿನ್ ಆಗಿ. ನಿಜವಾಗಿಯೂ ಸಮಸ್ಯೆೆ ಇದ್ದರೆ ಆಗ ನೀವು ಏನು ಮಾಡಬೇಕು ಎನ್ನುವ ಬಗ್ಗೆೆ ಅಲ್ಲಿ ಪಡೆದುಕೊಳ್ಳಬಹುದು.

* ಕ್ರೆೆಡಿಟ್/ಡೆಬಿಟ್ ಕಾರ್ಡ್ ಹಿಂಭಾಗದಲ್ಲಿ ನೀಡಿರುವ ಸಹಾಯವಾಣಿ ಅಥವಾ ಮೊಬೈಲ್ ನಂಬರ್ ಜತೆಯೂ ಸಂದೇಶ ಬಂದಿರುವ ಮೊಬೈಲ್ ಸಂಖ್ಯೆೆಯನ್ನು ತಾಳೆ ಮಾಡಿ ನೋಡಿ.

* ಯಾವುದೇ ಬ್ಯಾಾಂಕ್ ಅಥವಾ ಹಣಕಾಸು ಸಂಸ್ಥೆೆಯೂ ಫೋನ್ ಮೂಲಕ ನಿಮ್ಮ ವೈಯಕ್ತಿಿಕ ಮಾಹಿತಿ ಕಳುಹಿಸುವಂತೆ ಕೇಳುವುದಿಲ್ಲ. ಅವರ ಹೆಸರನ್ನು ಬಳಸಿಕೊಂಡು, ವಂಚಕರು ನಿಮಗೆ ಕರೆಮಾಡಿ ನಿಮ್ಮ ಡೆಬಿಟ್ ಕಾರ್ಡ್ ಎಕ್ಸೆ್ಪೈರಿ ಆಗ್ತಿಿದೆ, ಅದನ್ನು ರಿನಿವಲ್ ಮಾಡ್ಬೇಕಿದೆ. ಕಾರಣ ನಿಮ್ಮ ಕಾರ್ಡ್ ನಲ್ಲಿರುವ ಸಂಖ್ಯೆೆಗಳನ್ನು ಹೇಳಿ, ಎಟಿಎಮ್ ಪಿನ್ ಹೇಳಿ, ಅಂತೆಲ್ಲಾ ಕೇಳಬಹುದು. ದಯವಿಟ್ಟು ಹೇಳಬೇಡಿ. ಅನುಮಾನ ಬಂದರೆ, ‘ನಾನು ಬ್ಯಾಾಂಕಿನ ಮ್ಯಾಾನೇಜರ್‌ಗೆ ಮಾತನಾಡುತ್ತೇನೆ’ ಎಂದು ತಿಳಿಸಿ, ಬ್ಯಾಾಂಕಿನ ನಂಬರನ್ನು ಅಂತರ್ಜಾಲದಲ್ಲಿ ಹುಡುಕಿ, ಮಾತಾಡಿ.

* ಆನ್‌ಲೈನ್ ಷಾಪಿಂಗ್‌ನಲ್ಲಿ ಕಾರ್ಡ್ ನಂರ್ಬ, ಎಕ್ಸೆ್ಪೈರಿ ಡೇಟ್ ನೀಡಿ ಹಣ ಪಾವತಿಸುವ ಮುನ್ನ ್ಕಛಿಞಛಿಞಚಿಛ್ಟಿಿ ಠಿಜಿ ್ಛಟ್ಟ ್ಛ್ಠಠ್ಠ್ಟಿಿಛಿ ಎನ್ನುವಲ್ಲಿ ಟಿಕ್ ಮಾರ್ಕ್ ಇದ್ದರೆ ಅದನ್ನು ಅನ್ ಟಿಕ್ ಮಾಡಿ. ಅಂದರೆ, ಆ ಸಂಖ್ಯೆೆಗಳು ಸೇವ್

* ಯಾವುದೇ ಹೆಚ್ಚಿಿನ ಅನುಮಾನ ಬಂದರೆ ನುರಿತ ಸಾಫ್ಟವೇರ್ ತಂತ್ರಜ್ಞರನ್ನು ಸಂಪರ್ಕಿಸಿ. ಅವರಿಂದ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಿಿ.
ಈ ಜಗತ್ತಿಿನಲ್ಲಿ ಹಿಂದೆಯೂ ವಂಚಕರು ಇದ್ದರು, ಇಂದೂ ಇದ್ದಾಾರೆ. ಆದರೆ ಈಗ ಅಂತರ್ಜಾಲವನ್ನು ಉಪಯೋಗಿಸಿಕೊಂಡು, ಆ ಕುರಿತು ಜನರಿಗೆ ಇರುವ ಅಜ್ಞಾಾನವನ್ನು ಉಪಯೋಗಿಸಿಕೊಂಡು ವಂಚಿಸುವ ವೃತ್ತಿಿನಿರತ ವಂಚಕರ ಪಡೆಯೇ ಕಾರ್ಯನಿರತವಾಗಿದೆ. ಅಂತಹವರಿಂದ ದೂರ ಇರಲು ಕಲಿಯುವುದು ಇಂದಿನ ಅವಶ್ಯಕತೆಗಳಲ್ಲಿ ಒಂದು.