Thursday, 24th October 2024

ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣದ ಆರೋಪಿ ರಾಜೀವ್ ಸಕ್ಸೇನಾ ಬಂಧನ

ನವದೆಹಲಿ: ಹಣ ಅಕ್ರಮ ವರ್ಗಾವಣೆಯ ಪ್ರಕರಣ ಹಾಗೂ 3,600 ರೂ. ಕೋಟಿ ವಿವಿಐಪಿ ಹೆಲಿಕಾಪ್ಟರ್ ಡೀಲ್ ಪ್ರಕರಣದ ಆರೋಪಿ ರಾಜೀವ್ ಸಕ್ಸೇನಾ ಅವರನ್ನು ಜಾರಿ ನಿರ್ದೇಶನಾಲ ಯವು ಬಂಧಿಸಿರುವುದು ವರದಿಯಾಗಿದೆ.

ದುಬೈನಲ್ಲಿ ನೆಲೆಸಿದ್ದ ರಾಜೀವ್ ಸಕ್ಸೇನಾ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ಅಕ್ರಮವಾಗಿ ಹಣ ಸಂಪಾದಿಸಿದ್ದರು. 2019ರ ಜ.31ರಂದು ಸಕ್ಸೇನಾ ಅವರನ್ನು ಯುಎಇ ದೇಶವು ಭಾರತಕ್ಕೆ ಗಡಿಪಾರು ಮಾಡಿತ್ತು. ನಂತರ ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.

‘ದುಬೈನಲ್ಲಿ ವಿವಿಧ ಕಂಪನಿಗಳ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದ ಸಕ್ಸೇನಾ, ಮ್ಯಾಟ್ರಿಕ್ ಗ್ರೂಪ್ ಕಂಪನೀಸ್ ಹೆಸರಿನಿಂದ ಪ್ರಸಿದ್ಧರಾಗಿದ್ದರು. ಹೆಲಿಕಾಪ್ಟರ್ ಹಗರಣದಲ್ಲಿ ಭಾಗಿಯಾಗಿದ್ದ ಅವರು ಮೊಸರ್ ಬೇರ್ ಬ್ಯಾಂಕ್‌ಗೆ ವಂಚಿಸಿದ್ದ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ. ಇತರ ಹಲವು ವಂಚನೆ ಪ್ರಕರಣಗಳಲ್ಲೂ ರಾಜೀವ್ ಸಕ್ಸೇನಾ ಅವರ ಹೆಸರು ಕೇಳಿಬಂದಿದ್ದು ತನಿಖೆ ಪ್ರಗತಿಯಲ್ಲಿದೆ’ ಎಂದು ಇ.ಡಿ ತಿಳಿಸಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರನ ಮೇರೆಗೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು.