Sunday, 22nd September 2024

ಕಿರುದನಿಯ ಕರೆಗೆ ಕಾದಿರುವೆ…

* ಮಂಜುಳಾ ಎನ್

ಅರಿವಿರದೆ ಅಪರಿಚಿತರಾಗಿರುವೆವು
ಅರಿತ ಮೇಲೆ ಬೆರೆತು ಬಾಳೆತ್ತಿಿನ ಗಾಡಿಗೆ ಜೋಡೆತ್ತುಗಳಾಗಲು
ನನ್ನತನವ ತೊರೆದು ತುಂಟತನಕೆ ಮೊರೆ ಹೋಗಿಹೆನು
ಕೊರಳು ಕಾಯುತಿವುದು ನೀ ಕಟ್ಟುವ ಕರಿಮಣಿಗೆ
ಕಾಲ ಬೆರಳು ಕೇಳುತಿಹುದು ಕಾಲುಂಗುರದ ಆಸೆಗೆ
ಕನಸು ಕಾಡುತಿದೆ ಸಪ್ತಪದಿಯ ಜೊತೆಗಾರನ ಕಾಣಲು
ನಿನ್ನ ಹೆಸರಿಗೆ ನನ್ನ ಹೆಸರ ಸೇರಿಸಿ ಬರೆಯಲು ಹೃದಯ ಹಂಬಲಿಸಿದೆ
ಕೈ ಬಳೆಗಳು ಕಾದಿವೆ ನಿನ್ನ ಸ್ಪರ್ಶಕೆ
ನೀ ಇಡುವ ಸಿಂಧೂರಕೆ ಮೊಗವು ನಾಚುತಲಿದೆ
ಎಂದಿಗೆ ಕೊಡುವೆಯೋ ಸತಿಯ ಅಧಿಕಾರ
ಕನಸು ಕೈಗೂಡುವ ಕ್ಷಣಕ್ಕೆೆ ಒಲವೆಂಬ ಕಾಣಿಕೆಯನ್ನಿಿಟ್ಟು
ನಿನ್ನ ಕಿರುದನಿಯ ಕರೆಗೆ ಕಾದಿರುವೆ…