ರಾವಲ್ಪಿಂಡಿ: ಮೊದಲ ಏಕದಿನ ಪಂದ್ಯ ಆರಂಭವಾಗುವ ಮೊದಲೇ ನ್ಯೂಜಿಲೆಂಡ್ ತಂಡ, ಭದ್ರತೆಯ ಕಾರಣ ನೀಡಿ ಶುಕ್ರವಾರ ಪಾಕಿಸ್ತಾನ ಪ್ರವಾಸದಿಂದ ಹಠಾತ್ತನೇ ಹಿಂದೆ ಸರಿದಿದೆ. ರಾವಲ್ಪಿಂಡಿಯಲ್ಲಿ ಶುಕ್ರವಾರ ಮೊದಲ ಏಕದಿನ ಪಂದ್ಯ ನಿಗದಿಯಾಗಿತ್ತು.
ಈ ಪ್ರವಾಸ ಮುಂದುವರಿಸುವುದು ಸಾಧ್ಯವಿರಲಿಲ್ಲ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಚೀಫ್ ಎಕ್ಸಿಕ್ಯುಟಿವ್ ಡೇವಿಡ್ ವೈಟ್ ತಿಳಿಸಿದರು.
‘ಇದು ಪಾಕ್ ಕ್ರಿಕೆಟ್ ಮಂಡಳಿಗೆ ದೊಡ್ಡ ಹೊಡೆತ. ಅವರು ನಮಗೆ ಉತ್ತಮ ಆತಿಥ್ಯ ಒದಗಿಸಿದ್ದರು. ಆದರೆ ಆಟಗಾರರ ಸುರಕ್ಷತೆ ಎಲ್ಲದ್ದಕ್ಕಿಂತ ಮುಖ್ಯವಾದುದು. ಸದ್ಯ ನಮ್ಮ ಮುಂದಿರುವ ಜವಾಬ್ದಾರಿಯುತ ಆಯ್ಕೆ ಇದೊಂದೇ. ಆಟಗಾರರು ಸುರಕ್ಷಿತವಾಗಿದ್ದಾರೆ. ಎಲ್ಲರೂ ತಮ್ಮ ಹಿತಾಸಕ್ತಿಯಿಂದ ಉಚಿತವೆನಿಸಿದ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಮಿಲ್ಸ್ ಹೇಳಿದ್ದಾರೆ.
ನ್ಯೂಜಿಲೆಂಡ್, ಈ ಸರಣಿಯನ್ನು ಮುಂದೂಡುವ ಬಗ್ಗೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಪಾಕಿಸ್ತಾನ ಸರ್ಕಾರ ಎಲ್ಲ ಪ್ರವಾಸಿ ತಂಡಗಳಿಗೆ ಸುರಕ್ಷತಾ ವ್ಯವಸ್ಥೆ ಮಾಡುತ್ತದೆ. ನ್ಯೂಜಿಲೆಂಡ್ ಕ್ರಿಕೆಟ್‌ಗೂ ನಾವು ಈ ಭರವಸೆ ನೀಡಿದ್ದೆವು’ ಎಂದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೇಳಿದೆ.
ಅಕ್ಟೋಬರ್ 3ರವರೆಗಿನ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ-20 ಪಂದ್ಯಗಳು ನಿಗದಿ ಯಾಗಿದ್ದವು. 2009ರಲ್ಲಿ ಶ್ರೀಲಂಕಾ ತಂಡ ಪಾಕ್ ಪ್ರವಾಸ ಕೈಗೊಂಡಿದ್ದಾಗ ಭಯೋತ್ಪಾದನಾ ದಾಳಿ ನಡೆದಿತ್ತು. ಬಸ್‌ನಲ್ಲಿದ್ದ ಆಟಗಾರರು ಅದೃಷ್ಟವಶಾತ್ ಪಾರಾಗಿದ್ದರು. ಅಂದಿನಿಂದ ವಿದೇಶಿ ತಂಡಗಳನ್ನು ಆಹ್ವಾನಿಸಿ ಕ್ರಿಕೆಟ್ ಬಾಂಧವ್ಯ ಸುಧಾರಿಸಲು ಪಾಕಿಸ್ತಾನ ತಂಡ ಪ್ರಯತ್ನಿಸುತ್ತಿದೆ.