Saturday, 23rd November 2024

ಒಲುಮೆಯ ಸಾಗರದಲ್ಲಿ ಉಯ್ಯಾಾಲೆಯಾಡಿದೆ ಮನಸು

*ಸೀಮಾ ಪೋನಡ್ಕ

ಕಾಲೇಜಿನಲ್ಲಿದ್ದಾಾಗ ಪರಿಚಯವಾದ ಮನ ಮೆಚ್ಚಿಿನ ಹುಡುಗ…ನಾನೇ ಅವನ ಮನವಿಯನ್ನು ಪುರಸ್ಕರಿಸಿರಲಿಲ್ಲ. ಅದೇ ಹುಡುಗ, ಧುತ್ತೆೆಂದು ಮನೆಯಲ್ಲಿ ಹಿರಿಯರೆದುರು ಏನೇನಾಯ್ತು ಗೊತ್ತಾಾ...

ಯಾರು ನೀನು, ಎಲ್ಲಿಂದ ಬಂದ್ಯೋೋ ನಂಗಂತೂ ಗೊತ್ತಿಿಲ್ಲ. ಆದ್ರೆೆ ಇಂದು ನನ್ನ ಜೀವನದ ಅತೀ ಮುಖ್ಯ ಭಾಗವಾಗಿ ಹೋಗಿದ್ಯಾಾ. ಅಂದು ನಿನ್ನ ಜಾತ್ರೆೆ ಮಧ್ಯೆೆ ನೋಡಿದಾಗ ನನಗೇನೂ ಅನಿಸಿರಲಿಲ್ಲ. ಆದರೆ ಇಂದು ನೀನೇ ಎಲ್ಲಾಾ.. ನೀನಿರದೆ ಬಾಳೇ ಇಲ್ವೇನೋ ಅನ್ನೋೋ ಮನಸ್ಥಿಿತಿ ನನ್ನದಾಗಿ ಬಿಟ್ಟಿಿದೆ. ಕಾರಣ ಕೆದಕಿರೆ, ಪ್ರತಿ ಉತ್ತರವೂ ಮಗದೊಂದು ಪ್ರಶ್ನೆೆಯಾಗಿ ಬಿಟ್ಟಿಿದೆ. ಅದಕ್ಕೆೆ ಈ ಕ್ಷಣವನ್ನು ಸಂಭ್ರಮಿಸುವ ಯೋಚನೆ ನನ್ನದು, ನೀನದರ ಮುಖ್ಯ ಭಾಗ…..

ನಾನಿನ್ನೂ ಡಿಗ್ರಿಿ ಓದುತ್ತಿಿದ್ದ ಸಮಯವದು. ನೀನು ಅದಾಗಲೇ ಉದ್ಯೋೋಗನ ಜೀವನಕ್ಕೆೆ ಕಾಲಿರಿಸಿ ಎರಡು ವರುಷಗಳೇ ಕಳೆದಿತ್ತು. ಹೀಗೆ ಫೇಸ್‌ಬುಕ್ ಓಪನ್ ಮಾಡಿದಾಗ ನೀನು ಕಳುಹಿಸಿದ್ದ ಫ್ರೆೆಂಡ್ ರಿಕ್ವೆೆಸ್‌ಟ್‌ ಪ್ರತ್ಯಕ್ಷವಾಗಿತ್ತು. ನನಗಾ ಸಮಯದಲ್ಲಿ ಸೋಶಿಯಲ್ ಮೀಡಿಯಾ ಎಂಬುವುದೇ ಹೊಸದಾಗಿತ್ತು. ಮಾತ್ರವಲ್ಲದೇ, ನಾ ಕಲಿಯುತ್ತಿಿದ್ದ ಕಾಲೇಜಿನ ಹಿರಿಯ ವಿದ್ಯಾಾರ್ಥಿ ನೀನು, ಮೇಲಾಗಿ ನನ್ನ ಕೆಲವು ಸ್ನೇಹಿತೆಯರು ಮ್ಯೂಚುವಲ್ ಫ್ರೆೆಂಡ್‌ಸ್‌ ಅನ್ನುವುದನ್ನು ಅರಿತಾಗ, ಬೆರಳುಗಳು ನಿನ್ನ ವಿನಂತಿಯನ್ನು ಪುರಸ್ಕರಿಸಿದ್ದವು. ಮರುಕ್ಷಣವೇ ಅನ್ನೋೋ ಮೆಸೇಜ್ ಪರದೆಯ ಮೇಲೆ ಕಾಣಿಸಿಕೊಂಡಿತ್ತು. ನಾನು ಸಾಮಾನ್ಯವಾಗಿಯೇ ಉತ್ತರಿಸಿದ್ದೆೆ ಬಿಡು.

ಅದಾದ ಮೇಲೆ ಯಾವುದೋ ಕಾರಣಕ್ಕಾಾಗಿ ನಿನ್ನ ಬಳಿ ಸಹಾಯ ಕೇಳಿದ್ದೆೆ. ಆ ನೆಪದಲ್ಲಿ ಫೋನ್ ನಂಬರ್ ಕೂಡ ಅದಲು ಬದಲಾಗಿತ್ತು. ನಿನಗೊತ್ತಾಾ ನಾನು ವ್ಯಾಾಟ್ಸಾಾಪ್ ಅಕೌಂಟ್ ಮಾಡಿದ್ಮೇಲೆ ನನಗೆ ಬಂದಿದ್ದ ಮೊದಲ ವೀಡಿಯೋ ಕಾಲ್ ನಿನ್ನದೇ ಆಗಿತ್ತು. ನಿನಗೆ ಫ್ರೆೆಂಡ್‌ಶಿಪ್ ಮುಂದುವರೆಸುವ ಆಸೆಯಿತ್ತು. ಆದರೆ ನನಗದರ ಅರಿವಿರಲಿಲ್ಲ. ಅಪರೂಪಕ್ಕೊೊಮ್ಮೆೆ ಭಾನುವಾರ ವೀಡಿಯೋ ಕಾಲ್ ಸಾಮಾನ್ಯವಾಗಿ ಹೋಗಿತ್ತು. ಅನೇಕ ಬಾರಿ ನನಗೆ ಉಪಕಾರ ಮಾಡಿದ್ದೆೆಯಾದ್ರಿಿಂದ ನಾನೂ ಸರಳವಾಗಿಯೇ ನಿನ್ನ ಸಲುಗೆಯನ್ನು ಸ್ವೀಕರಿಸಿದ್ದೆೆ.

ನನಗೊಂದು ದುರಭ್ಯಾಾಸ. ನೀನು ನನಗಿಂತ ದೊಡ್ಡೋೋನೇ ಆದ್ರೂ ಏಕವಚನದಲ್ಲೇ ಕರೀತಾ ಇದ್ದೆೆ. ನೀನೂ ಏನೂ ಅಂದಿದ್ದಲ್ಲ. ಫೋನ್ ಕರೆಗಳಲ್ಲಿ, ವ್ಯಾಾಟ್ಸಾಾಪ್ ಚಾಟಿಂಗ್‌ಗಳಲ್ಲಿ ಅತೀ ಕಡಿಮೆ ಸಮಯ ಕಳೆಯುತ್ತಿಿದ್ದವಳು ನಾನು ಆದರೆ ಅದೇಕೋ ಗೊತ್ತಿಿಲ್ಲ. ನಿನ್ನೊೊಡನೆ ಗಂಟಗಟ್ಟಲೇ ಹೊತ್ತು ಚಾಟ್‌ಂಗ್ ನಡೀತಾ ಇತ್ತು. ಸ್ನಾಾತಕೋತ್ತರ ಪದವಿಯ ಮೊದಲ ವರ್ಷ. ಅಸೈನ್‌ಮೆಂಟೊಂದು ಬಾಕಿಯಿತ್ತು ಅನ್ನೋೋ ಕಾರಣಕ್ಕೆೆ ಕಾಲೇಜಿಗೆ ಹಾಕಿ ಅದೇ ಕೆಲಸದಲ್ಲಿ ತೊಡಗಿದ್ದೆೆ. ಮಧ್ಯೆೆ ಬಿಡುವಾದಾಗ, ಹಾಗೇ ಒಂದು ಫೊಟೋವನ್ನ ಕೂಡಾ ಸ್ಟೇಟಸ್ ಹಾಕಿದ್ದೆೆ. ಅದನ್ನ ನೋಡಿದ್ ಕೂಡ್ಲೇ ನೀನೊಂದು ರಿಪ್ಲೈ

                             ಕೊಟ್ಟಿಿದ್ದೆೆ ನೆನಪಿದ್ಯಾಾ ಸಾಗರ್?

‘ಬ್ಯೂಟಿಫುಲ್. ಹೀರೋಯಿನ್ ತರ ಕಾಣ್ತಾಾ ಇದ್ದೀಯ’ ಅಂತ ಹೇಳಿದ್ದೆೆ. ನಂಗೊ ಫ್ಲರ್ಟ್ ಮಾಡ್ತಿಿದ್ದಾಾನೆ ಅಂತ ಸಿಕ್ಕಾಾಪಟ್ಟೆೆ ಕೋಪ ಬಂದಿತ್ತು. ನಾ ಕೇಳಿದ್ದೆೆ.. ಯಾವ್ ಫಿಲ್‌ಮ್‌ ಹೀರೋಯಿನ್ ಅಂತ. ಕೂಡ್ಲೆೆ ರಿಪ್ಲೈ ಬಂದಿತ್ತು ನಿಂದು. ಆ ಮಾತು ಇನ್ನೂ ನೆನಪಿದೆ. ನೀ

ಮಿಸ್ಟರ್ ಆಂಡ್ ಮಿಸೆಸ್ ಸಾಗರ್’
ಓ ಭ್ರಮೆ ಅಂದಿದ್ದೆೆ ನಾನು..
ಕೂಡ್ಲೇ ಕಾಲ್ ಮಾಡಿದ್ದೆೆ, ನೀನು ಮಾತ್ರ ಸೀರಿಯಸ್ ಆಗೇ ಹೇಳಿದ್ದೆೆ. ಮದ್ವೆೆಯಾಗ್ತೀಯಾ, ಎಲ್ಲಾಾ ನಿನ್ನ ಎಜುಕೇಶನ್ ಮುಗುದ್ಮೇಲೆ.. ಓಕೆನಾ ಅಂತೆಲ್ಲಾಾ ಸಾವಿರ ಮಾತಾಡಿದ್ದೆೆ.

ನಾನು ಸುತಾರಾಂ ಒಪ್ಪಿಿಕೊಳ್ಳೋೋಕೆ ತಯಾರೇ ಇರ್ಲಿಿಲ್ಲ. ನಂಗೆ ಎಲ್ಲಕ್ಕಿಿಂತ ನನ್ನ ಕೆರಿಯರೇ ಮುಖ್ಯವಾಗಿ ಬಿಟ್ಟಿಿತ್ತು. ಈ ಹಿಂದೆ ನೀನು ನನ್ನ ಕೆರಿಯರ್ ಬಗ್ಗೆೆ ಹಗುರವಾಗಿ ಮಾತಾಡಿದ್ದು ನಂಗಿನ್ನೂ ನೆನಪಿತ್ತು. ಡೈರೆಕ್ಟಾಾಗೇ ರೇಗಾಡಿದ್ದೆೆ, ಯಾವತ್ತಿಿದ್ರೂ ತೋರ್ಸೋೋ ಹುಡ್ಗನ್ನೇ ಮದ್ವೆೆ ಆಗೋದು ಅಂತ ಬಿಲ್ಡಪ್ ಕೊಟ್ಟಿಿದ್ದೆೆ. ಆದ್ರೆೆ ನೀನು ಒಳ್ಳೆೆ ಪಾಯಿಂಟ್ ಇಟ್ಕೊೊಂಡೇ ನನ್ನ ಬಾಯಿ ಮುಚ್ಚಿಿಸಿದ್ದೆೆ. ‘ಪ್ರೀತಿ ಮಾಡೋದು ದೊಡ್ಡ ಅಪರಾಧ ಅನ್ನೋೋ ತರ ಆಡ್ತೀಯಲ್ವ… ಓಕೆ ನಿಂಗಿಷ್ಟ ಇಲ್ಲಾಾ ಅಅಂದ್ರೆೆ ಫೋರ್ಸ್ ಮಾಡಲ್ಲ. ಆದ್ರೆೆ ಇದುವರೆಗೂ ಒಮ್ಮೆೆನೂ ಮೀಟ್ ಮಾಡಿಲ್ಲ. ಪ್ಲೀಸ್ ಕಣೆ, ಮುಂದಿನ ವಾರ ಜಾತ್ರೆೆ ಇದೆ. ಒಮ್ಮೆೆ ಮೀಟ್ ಆಗು. ಆಮೇಲೆ ಯಾವತ್ತೂ ಕಾಟಕೊಡಲ್ಲ’ ಅಂದಿದ್ದೆೆ. ನಾನೂ ಅನ್ಯಮನಸ್ಕತೆಯಿಂದ ನೋಡೋಣ ಮಾತನ್ನ ತೇಲಿಸಿ ಫೋನ್ ಕಟ್ ಮಾಡಿದ್ದೆೆ.

ಜಾತ್ರೆೆಲಿ ಭೇಟಿ

ಆ ದಿನ ಜಾತ್ರೆೆಲಿ ನಾನು ನಿನ್ನ ನೋಡಿದ್ದು ಆಕಸ್ಮಿಿಕವೇ ಆಗಿತ್ತು. ಆದ್ರೆೆ ನಿಂಗೆ ನಾನು ಜಾತ್ರೆೆಗೆ ಬರೋ ವಿಚಾರ ಮೊದ್ಲೇ ಗೊತ್ತಿಿತ್ತು. ನನ್ನ ಫ್ರೆೆಂಡ್ ಹತ್ರ ನನ್ನ ಬಗ್ಗೆೆ ಎಲ್ಲಾಾನೂ ತಿಳ್ಕೋೋತ್ತಿಿದ್ದೆೆ ಅಲ್ವಾಾ ನೀನು! ಮರುದಿನಾನೇ ನಿನ್ನ ಬರ್ತ್ ಡೇ ಇತ್ತಲ್ವ. ನಿಂಗೆ ಏನಾದ್ರೂ ಉಡುಗೊರೆ ಕೊಡ್ಬೇಕು ಅಂತ ತುಂಬಾ ಕಡೆ ಹುಡ್ಕಾಾಡಿ ಆಮೇಲೆ ಒಂದು ಸಣ್ಣ ವಿಗ್ರಹ ಕೈಗಿತ್ತು, ಹ್ಯಾಾಪಿ ಬರ್ತ್ ಡೇ ಅಂತೇಳಿ, ಜನಂಗುಳಿ ಮಧ್ಯೆೆ ನಿಂಗೆ ಕಾಣದೇ ಇರೋ ಹಾಗೆ ಕಳೆದು ಹೋಗಿದ್ದೆೆ.

ಮರುಕ್ಷಣವೇ ನಿನ್ನ ಸಂದೇಶ ನನ್ನ ಕಾದಿತ್ತು. ‘ಏನು ಫಸ್‌ಟ್‌ ಮೀಟಾಗಿದ್ದಕ್ಕೆೆ ಗಿಫ್ಟಾಾ’ ಅಂತ ಅಕ್ಕರೆಯಿಂದ ಕೇಳಿದ್ದೆೆ ನೀನು. ನಾನು ‘ಅಲ್ಲ, ಗುಡ್ ಬೈ ಗಿಫ್‌ಟ್‌’ ಅಂತೇಳಿ ಫ್ರೆೆಂಡ್‌ಶಿಪ್‌ಗಿಂತ ಮಿಗಿಲಾದ್ದನ್ನ ನಿರೀಕ್ಷಿಸಿಸ್ಲೇ ಬೇಡ ಅಂತ ವಾರ್ನ್ ಮಾಡಿದ್ದೆೆ. ಸರಿ ಒತ್ತಾಾಯ ಮಾಡಲ್ಲ ಅಂತ ನೀನೂ ಸುಮ್ಮನಾಗಿದ್ದೆೆ. ಆಮೇಲೆ ನಾವ್ಯಾಾವತ್ತೂ ಮಾತಾಡಿದ್ದೇ ಇಲ್ಲ. ನಡುವೆ ಮೌನ ವಾರಿಧಿಯೇ ನಿರ್ಮಾಣವಾಗಿ ಬಿಟ್ಟಿಿತ್ತು!

ಅದೆಲ್ಲಾಾ ಆಗಿ ಸುಮಾರು ಮೂರು ವರ್ಷಗಳೇ ಕಳೆದಿದೆ. ನಾನೂ ಉದ್ಯೋೋಗ ಜೀವನ ಆರಂಭಿಸಿ ವರುಷಗಳುರುಳಿವೆ. ಅಮ್ಮ ಹೇಳಿದ್ರು, ‘ನಾಡಿದ್ದು ಭಾನುವಾರ ಹುಡುಗನ ಕಡೆಯವರು ಬರ್ತಾ ಇದ್ದಾಾರೆ, ಯಾವ್ದೇ ಬೇರೆ ಕಾರ್ಯಕ್ರಮಗಳನ್ನ ಇಟ್ಕೋೋಬೇಡ ಆ ದಿನ, ಹುಡುಗನ ಎಲ್ಲಾಾ ವಿಚಾರಗಳು ನಿಂಗೆ ಹೊಂದಾಣಿಕೆಯಾಗೋ ತರಾನೇ ಇದೆ’ ಇಂತಹ ದಿನವೊಂದು ಬರರಬಹುದು ಅನ್ನೋೋದು ಮೊದಲೇ ಗೊತ್ತಿಿತ್ತಾಾದರೂ, ಇಷ್ಟು ಬೇಗ ಬರಬಹುದು ಅನ್ನುವ ನಿರೀಕ್ಷೆ ಇರ್ಲಿಿಲ್ಲ. ಮೂಲೆಯಲ್ಲಿ ಅಚ್ಚೊೊತ್ತಿಿದ್ದ ನಿನ್ನ ನೆನಪುಗಳು ಅಣುಕಿಸಿ ಸುಮ್ಮನಾಗಿದ್ದವು.

ಅಮ್ಮ ಹೇಳಿದ ಭಾನುವಾರ ಬಂದೇಬಿಟ್ಟಿಿತ್ತು! ಅದೇನೋ ಅರಿಯಲಾರದ ನಡುಕ. ಎದೆಯೊಳಗೆ ಅವಲಕ್ಕಿಿ ಕುಟ್ಟಿಿದ ಅನುಭವ. ಏನಪ್ಪಾಾ ಮಾಡ್ಲಿಿ ಎಂದುಕೊಳ್ಳುತ್ತಿಿರುವಾಗಲೇ, ಕಾರೊಂದು ಅಂಗಳದಲ್ಲಿ ತನ್ನ ಅಸ್ಥಿಿತ್ವವನ್ನು ಸ್ಥಾಾಪಿಸಿದ ಸದ್ದು ಕೇಳಿ ಬಂದಿತ್ತು. ಬಾಗಿಲ ಮರೆಯಿಂದ ಇಣುಕಿದ ಅಮ್ಮ, ಹುಡುಗನ ಕಡೆಯೋರು ಬಂದ್ರು ಅನ್ನುತ್ತಾಾ ತನ್ನ ಓಡಾಟಗಳಿಗೆ ತೀವ್ರಗತಿ ಕೊಟ್ಟರು. ಕೆಲವು ನಿಮಿಷಗಳು ಕಳೆದಿದ್ದವಷ್ಟೇ, ಹೊರಗಿನಿಂದ ಅಪ್ಪನ ಕರೆ ಬಂದಿತ್ತು.

ನಾನೂ ತಲೆ ಅಮ್ಮನ್ನ ಕೈಯಾಸರೆಯೊಂದಿಗೆ ಮುನ್ನಡೆದಿದ್ದೆೆ. ಬಂದಿದ್ದವರು ಕೆಲವೇ ಕ್ಷಣಗಳಲ್ಲಿ ಹುಡುಗಿ ನಮಗೊಪ್ಪಿಿಗೆ, ಅವರಿಬ್ಬರು ಮಾತಾಡಿಕೊಳ್ಳಲಿ ಎಂದು ಟೆರೇಸ್‌ಗೆ ಕಳುಹಿಸಿದ್ದರು. ನಾನಂತೂ ತಲೆಯೆತ್ತಿಿ ಯಾರ ಮುಖವನ್ನೂ ನೋಡುವ ಸಾಹಸಕ್ಕೂ ಕೈ ಹಾಕಿರಲಿಲ್ಲ. ಸುದೀರ್ಘ ಮೌನ. ಕೈ ಗಡಿಯಾರದ ಮುಳ್ಳುಗಳ ಶಬ್ದವು ದೊಡ್ಡದಾಗಿಯೇ ಕೇಳಿಸತೊಡಗಿತ್ತು ನನಗೆ. ಅದರ ಬೆನ್ನಲ್ಲೇ ಬಂದಿತ್ತು, ಒಂದು ಚಿರಪರಿಚಿತ ಸ್ವರ, ಮೂರು ವರುಷಗಳ ನಂತರ…..

‘ನೀನು ಆಸೆಪಟ್ಟ ಹಾಗೇ ಸಾಂಪ್ರದಾಯಿಕವಾಗಿ ಹೆಣ್ಣು ಕೇಳೋಣ ಅಂತ ಬಂದಿದ್ದೀನಿ… ನಿನ್ನ ಕೆರಿಯರ್‌ಗೆ ರೀತಿಲೂ ಸಪೋರ್ಟ್ ಮಾಡ್ತೀನ್ ಕಣೆ… ಈಗ್ಲಾಾದ್ರೂ ಒಪ್ಪಿಿಗೆ ಕೊಡೇ ಪ್ಲೀಸ್’ ಅಂದಾಗ ನನ್ನ ಮನಸ್ಸು ಒಂದು ರೀತಿಯ ಉನ್ಮಾಾದತೆಯನ್ನ ಅನುಭವಿಸಿತ್ತು. ಆಗಷ್ಟೇ ತಲೆಯೆತ್ತಿಿದದ್ದೆೆ. ಕಣ್ಮುಂದೆ ನೀನಿದ್ದೆೆ. ವರುಷಗಳ ಹಿಂದೆ ಕಾಡಿದವನು, ನನಗಾಗಿ ಕಾದಿದ್ದಾಾನೆ ಅನ್ನೋೋದನ್ನು ಅರಿತಾಗ ಸಂತಸದಲ್ಲಿ ತೇಲಾಡಿದ್ದೆೆ.

ಬೆನ್ನಲ್ಲೇ ನಾನೂ ಕೇಳಿದ್ದೆೆ.. ಹೆಸ್ರು ಚೆನ್ನಾಾಗಿದೆ ಅಲ್ವಾಾ ಅಂತ, ಇಬ್ಬರೂ ಮನಸಾರೆ ನಕ್ಕಿಿದ್ವಿಿ….. ನಮ್ಮ ಒಪ್ಪಿಿಗೆ ಕೇಳಿ ಮನೆಯವರೆಲ್ಲರೂ ಖುಷಿಪಟ್ಟಿಿದ್ರು.
ಬದುಕು ಆಡೋ ಆಟದ ಮುಂದೆ ನಾವೇನೂ ಅಲ್ಲಾಾ ಸಾರಿ ಸಾರಿ… ಕ್ಷಮಿಸಿ ಬಿಡಿ, ಅಮ್ಮ ಗಂಡನ್ನ ಏಕವಚನದಲ್ಲಿ ಮಾತಾಡ್ಸೋೋದು ಒಳ್ಳೇದಲ್ಲ ಅಂತ ಬೈತಾರೆ…..ಆದ್ರೂ ಇನ್ನು ಒಂದು ದಿನ ಟೈಮಿದೆ ಅಲ್ವಾಾ, ಅಫೀಶಿಯಲ್ ಆಗಿ ಮಿಸೆಸ್ ಆಗೋಕೆ… ಅದಕ್ಕೆೆ ಇವತ್ತು ಮಾಫಿ ಮಾಡ್ಬಿಿಡು ಓಕೆನಾ….
ಇವನು ಗೆಳೆಯನಲ್ಲಾಾ,ನಾನು ಮೊದಲೇ ಅಲ್ಲಾಾ ಅಂತಿದ್ದೋೋಳಿಗೆ, ‘ನೀನೇ ಎಲ್ಲಾಾ ನೀನಿರದೆ ಬಾಳೇ ಇಲ್ಲಾಾ’ ಅನ್ನೋೋ ತರ ಮಾಡಿದ್ದೀಯ…. ಮೋಡಿಗಾರ ಕಣೋ ನೀನು… ನನ್ನ ಈ ಬದುಕಿಗೆ ಪ್ರೀತಿಯೆಂಬ ಅಮೃತ ತುಂಬಿ ಹಸನು ಮಾಡಿದ