Saturday, 23rd November 2024

ಜೀವನದಲ್ಲಿ ಹೊಂದಾಣಿಕೆಯೇ ಪ್ರೀತಿಯ ಸೇತು

* ಜ್ಯೋತಿ ಪುರದ

ಗಂಡ ಹೆಂಡಿರ ಜಗಳಕ್ಕೆೆ ಪುರಾತನ ಇತಿಹಾಸ. ಮನೆ ಎಂದ ಮೇಲೆ ವಾದ ವಿವಾದ ಇದ್ದದ್ದೇ. ‘ಗಂಡ ಹೆಂಡಿರ ಜಗಳ, ಉಂಡು ಮಲಗುವ ತನಕ’ ಎಂದು ಹಿಂದಿನ ನಾಣ್ಣುಡಿ. ಜಗಳವಾದರೂ, ರಾತ್ರಿಿ ಊಟ ಮಾಡಿ, ಮಲಗಿದಾಗ, ಆ ಭಿನ್ನಾಾಭಿಪ್ರಾಾಯ ಕರಗಿ, ಮತ್ತೆೆ ಇಬ್ಬರೂ ಒಂದಾಗುತ್ತಿಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಕಡೆ ಗಂಡ ಹೆಂಡತಿಯರ ನಡುವೆ ಯಾವುದೇ ಚಿಕ್ಕ ಸಹ ಜಗಳವಾಗಿ ಅದು ವಿಚ್ಛೇದನವನ್ನು ತಲುಪಿರುತ್ತದೆ. ಸಹಜವಾದ ಸಂಬಂಧಗಳ ನಡುವೆ ಅನುಮಾನ ಬಂದರೆ ಸಾಕು ಅಲ್ಲಿ ಪ್ರೇಮ ಸಂಬಂಧವೆ ಮುರಿದು ಬೀಳುತ್ತದೆ. ಅದರ ಬದಲಾಗಿ ಯಾರ ಮೇಲೆ ಯಾವುದೇ ವಿಷಯಕ್ಕೆೆ ಅನುಮಾನ ಬಂದರೂ ನೇರವಾಗಿ ಮಾತನಾಡಿ ಬಗೆಹರಿಸಿಕೊಳ್ಳಿಿ. ಇಲ್ಲವಾದಲ್ಲಿ ಮನವೆಂಬ ಮಣ್ಣಲ್ಲಿ ಹೆಮ್ಮರವಾಗಿ ಬೆಳೆಯುತ್ತದೆ.

ಸಂಸಾರದಲ್ಲಿ ನಿಮ್ಮನ್ನು ಪ್ರೀತಿಸುವವರನ್ನು ಪ್ರೀತಿಸಿ, ಚೆನ್ನಾಾಗಿ ನೋಡಿಕೊಳ್ಳಿಿರಿ. ಹಳೆಯ ವಿರಸವನ್ನು ಮನಸ್ಸಿಿನಲ್ಲೇ ಇಟ್ಟುಕೊಂಡು ಕೂರಬೇಡಿರಿ. ಸಂಗಾತಿಯನ್ನು ಯಾವತ್ತು ನೋವಾಗದಂತೆ ನೋಡಿಕೊಳ್ಳಿಿರಿ. ನಿಮ್ಮ ನಡುವೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿರಿ. ಕೋಪದಲ್ಲಿ ಕೋಯ್ದುಕೊಂಡ ಮೂಗು ಮತ್ತೆೆ ಬರಲಾರದು. ನಿಮ್ಮವರು ಸಿಟ್ಟುಮಾಡಿಕೊಂಡಿದ್ದರೇ ಅದಕ್ಕೆೆ ಕಾರಣ ಏನಿರಬಹುದು ಎಂದು ತಿಳಿದುಕೊಳ್ಳಿಿರಿ. ಪ್ರೀತಿಯಿಂದ ಮಾತನಾಡಿ, ಸಮಾಧಾನಪಡಿಸಿ.

ಉಡುಗೊರೆ ಎಂಬ ಮುಲಾಮು
ವಿಶೇಷ ದಿನಗಳಲ್ಲಿ ಊಡುಗೊರೆಯನ್ನು ನೀಡಿ. ಪುಟ್ಟ ಪುಟ್ಟ ಉಡುಗೊರೆಗಳು, ವಿರಸವನ್ನು ಮರೆಸುವ ಮುಲಾಮ ಇದ್ದಂತೆ. ಉಡುಗೊರೆಯ ಬೆಲೆ ಕಡಿಮೆ ಇದ್ದರೂ, ಅದರ ಹಿಂದಿನ ಭಾವನೆ, ವಿಶ್ವಾಾಸ, ಪ್ರೀತಿ ಮುಖ್ಯ. ಹುಡುಗಿಯರ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಅವಳ ಮನಸ್ಸಿಿಗೆ ಬೇಸರವಾಗದಂತೆ ಅವಳು ತನ್ನ ಬಗ್ಗೆೆ ಆಲೋಚಿಸದಿದ್ದರೂ, ತನ್ನನ್ನು ಪ್ರೀತಿಸುವವರ ಬಗ್ಗೆೆ ಸದಾ ಯೋಚಿಸುತ್ತಾಾಳೆ. ಹೀಗಾಗಿ ತನ್ನ ಬಾಳಸಂಗಾತಿಯ ಬಗ್ಗೆೆ ಕನಸನ್ನು ಕಟ್ಟಿಿಕೊಂಡಿರುತ್ತಾಾಳೆ. ನಿಮ್ಮನ್ನು ಪ್ರೀತಿಸುವವರ ಬಗ್ಗೆೆ ಕಾಳಜಿ ವಹಿಸಿ, ಸಂದೇಶಗಳನ್ನು ರವಾನಿಸಿ, ಫೋನ್ ಕಾಲ್ ಮಾಡಿ ಮಾತನಾಡುತ್ತೀರಿ. ಅವಳು ನಿಮ್ಮ ಫೋನ್ ಕಾಲ್, ಮೇಸೆಜ್‌ಗೋಸ್ಕರ ಕಾಯುತ್ತಿಿರುತ್ತಾಾಳೆನ್ನುವುದನ್ನು ಮರೆಯಬಾರದು.

ಪ್ರೀತಿಸುವ ಮನಸುಗಳ ಮಿಲನಕ್ಕೆೆ ವರ್ಷಕ್ಕೊೊಮ್ಮೆೆ ಬರುವ ಬರ್ತ್‌ಡೇ, ಪ್ರೇಮಿಗಳ ದಿನಾಚರಣೆ, ವೆಡ್ಡಿಿಂಗ್ ಡೇಗಳು ನಿಮ್ಮ ಪ್ರೀತಿಯನ್ನು ಮತ್ತಷ್ಟು ಗಟ್ಟಿಿಗೊಳಿಸಲು ಸಾಕ್ಷಿಯಾಗುತ್ತವೆ. ಆದಿನ ಸಿಹಿ ತಿನಿಸಿ, ಅವಳಿಗೆ ಇಷ್ಟವಾದ ಕೆಲಸವನ್ನು ಮಾಡಿದಾಗ ಅವಳಿಗೂ ಖುಷಿಯಾಗುತ್ತದೆ. ನಿಮ್ಮ ನಡುವೆ ಪ್ರೀತಿ ವರ್ಷದಿಂದ ವರ್ಷಕ್ಕೆೆ ಹೆಮ್ಮರವಾಗಿ ಬೆಳೆಯಬೇಕು. ಕ್ಷುಲ್ಲಕ ಕಾರಣದಿಂದಾಗಿ ನಿಮ್ಮ ಪ್ರೀತಿ ಬೆಳೆಯುವ ಮೊಳಕೆಯಲ್ಲಿಯೇ ಚಿವುಟಿ ಒಣಗಿಹೋಗಬಾರದು.
ಹಾರುವ ಹಕ್ಕಿಿಯ ಮನಸ್ಸಿಿಗೆ ನೂರಾರು ಕನಸುಗಳನ್ನು ಪೂರೈಸುವುದಕ್ಕಾಾಗಿ ಗಂಡನ ಸ್ಪೂರ್ತಿ ಸದಾ ಜತೆಗಿರಬೇಕು. ಅವಳೆಲ್ಲ ಕನಸುಗಳನ್ನು ಪೂರೈಸುವುದಕ್ಕೆೆ ಆಗದೇ ಇದ್ದರೂ ಸ್ವಲ್ಪನಾದರೂ ಇಡೇರಿಸಲು ಪ್ರಯತ್ನಿಿಸಿರಿ. ಆಗ ಅವಳಿಗೆ ನಿಮ್ಮ ಮೇಲೆ ಮತ್ತಷ್ಟು ಪ್ರೀತಿ ಹೆಚ್ಚುತ್ತದೆ. ಅವಳ ಗೌರವ ಮತ್ತು ಪ್ರೀತಿಯನ್ನು ನೀಡಿರಿ.

ಅನುಮಾನ ಸಲ್ಲ
ಯಾವತ್ತೂ ಅನುಮಾನಕ್ಕೆೆ ಆಸ್ಪದ ನೀಡದಿರಿ. ನಿಮ್ಮ ಮೇಲಿನ ನಂಬಿಕೆಯನ್ನು ಯಾವತ್ತಿಿಗೂ ಕಳೆದುಕೊಳ್ಳದಿರಿ. ನಿಮ್ಮವರಿಗೆ ಯಾವತ್ತು ಸುಳ್ಳು ಹೇಳಬೇಡಿರಿ. ಮನಸ್ಸು ಒಡೆದ ಕನ್ನಡಿಯಂತೆ ನುಚ್ಚು ನೂರಾದರೆ, ಮತ್ತೆೆ ಅದನ್ನು ಜೋಡಿಸುವುದು ಅಸಾಧ್ಯ.
ಮಧುವೆಯಾದ ಮೇಲೆ ಬದುಕಿನ ಬಂಡಿಯಲ್ಲಿ ಒಂದೆತ್ತು ಏರಿಗೆ, ಒಂದೆತ್ತು ಕೆರಿಗೆ, ಅದರೆ ಸಂಸಾರದಲ್ಲಿ ಸಂತೋಷವನ್ನು ಕಾಣಲು ಸಾಧ್ಯವಿಲ್ಲ. ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳಬೇಕು. ಕೋಪ ಬರದಂತೆ ನೋಡಿಕೊಳ್ಳಬೇಕು. ಕೋಪ ಬಂದರೂ ಕೂಡ ಕೋಪದ ಕೈಗೆ ಬುದ್ದಿ ಕೊಟ್ಟು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕು. ಜಗಳವು ವಿಕೋಪಕ್ಕೆೆ ಹೋಗದಂತೆ ಮುದ್ದಿಸಿ ಅದನ್ನು ಮರೆಸಬೇಕು. ಸುಂದರ ಜೀವನದಲ್ಲಿ ಸ್ಪೂರ್ತಿಯ ಮಾತಿನೊಂದಿಗೆ ಒಬ್ಬರಿಗೊಬ್ಬರು ಆಧಾರಸ್ತಂಭವಾಗಿರಬೇಕು. ಹೊಂದಾಣಿಕೆಯೊಂದಿಗೆ ಎಲ್ಲ ವಿಷಯವನ್ನು ಅರ್ಥೈಸಿಕೊಳ್ಳಬೇಕು. ಕಣ್ಣರೆಪ್ಪೆೆಯಂತೆ ನಿಮ್ಮ ಮುದ್ದಾಾದ ಸಂಗಾತಿಯನ್ನು ಕಾಪಾಡಿಕೊಳ್ಳಿಿ.