Saturday, 23rd November 2024

ಅಲೆಮಾರಿ ಹುಡುಗನಿಗೆ ನಾ ಸುಕುಮಾರಿ….

*ಮಂಜುಳಾ ಎನ್ ಶಿಕಾರಿಪುರ

ನೀನೋ ಪಟಪಟ ಅಂತ ಹರಳು ಹುರಿದಂತೆ ಮಾತಾಡುತ್ತಿಿದ್ದೆ. ಆ ಮಾತುಗಳು ಕೇಳುತ್ತಿಿದ್ದರೆ ಸದಾ ಕೇಳುತ್ತಲೇ ನಿನ್ನ ನಗುಮೊಗದ ಹಾವಭಾವಗಳನ್ನು ನೋಡುತ್ತಲೇ ಇರಬೇಕೆನಿಸುತ್ತಿಿತ್ತು. ನೀ ದೂರಾದಾಗ ಅವೇ ಮಾತುಗಳು ಕಿವಿಯಲ್ಲಿ ಗುನುಗುನಿಸಿ, ಹೃದಯದಲ್ಲಿ ಮಧುರ ಬಾವನೆಗಳನ್ನು ಮೂಡಿಸುತ್ತಿಿವೆ.

ರಾತ್ರಿಿ ನಿದ್ದೆ ಬರದೇ ಅದೊಂದು ದಿನ ಒದ್ದಾಡುತ್ತಿಿದ್ದೆ. ನನಗ್ಯಾಾಕೆ ಇವತ್ತು ನಿದ್ರೆೆ ಬರ್ತಿಲ್ಲ ಏನಾಗಿದೆ ನನಗೆ ಎಂದುಕೊಂಡು ನಿದ್ರೆೆಗೆ ಜಾರಲು ಪ್ರಯತ್ನಿಿಸುತ್ತಿಿದ್ದೆ. ಆದರೆ ನಿದ್ರಾಾದೇವತೆ ಮಾತ್ರ ಬರದೇ ಸತಾಯಿಸುತ್ತಿಿದ್ದಳು. ಇದು ಎಂದಿನ ನಿದ್ರಾಾಹೀನತೆ ಅಲ್ಲ, ನೀನು ಮಾಡಿದ ಮೋಡಿಯ ಪರಿಣಾಮ, ನನ್ನ ನಿದ್ದೆೆಯ ಮೇಲಾಗಿದೆ! ನೀನು ಮನಸ್ಸನ್ನು ಕಾಡಿದ ಸುಮಧುರ ಪರಿಯಿಂದಾಗಿ, ನಿದ್ರಾಾದೇವತೆ ಮುನಿಸಿಕೊಂಡು, ನನ್ನಿಿಂದ ದೂರ ಹೋಗಿದ್ದಾಾಳೆ!

ಹೌದು ಮಾರಾಯ, ಆ ಜೋರು ಮಳೆಯಲ್ಲಿ ಮೊದಲ ಬಾರಿ ನಾ ನಿನ್ನ ನೋಡಿದ್ದೆ, ಆ ರಾತ್ರಿಿ ಕಣ್ಣು ಮುಚ್ಚಿಿದಾಗಲೆಲ್ಲಾ ನಿನ್ನ ಮುಖವೇ ಎದುರು ಬರುತಿತ್ತು, ನೀನಾಡಿದ ಮಾತುಗಳೇ ಕಿವಿಯಲ್ಲಿ ಗುನುಗುತ್ತಿಿದ್ದವು. ಆ ನಿನ್ನ ಮನಮೋಹಕ ನಗು, ಆ ನಿನ್ನ ಕುರುಚಲು ಗಡ್ಡ , ನನ್ನ ನಿದ್ರೆೆಗೆ ಭಂಗ ತಂದೊಡ್ಡಿಿದಂತು ನಿಜ ಕಣೋ ….

ಮೊದಮೊದಲಿಗೆ ಅನಿಸುತ್ತಿಿದ್ದೇನೆಂದರೆ, ಮೇಲೆ ನನಗಿರುವುದು ಮೋಹವೋ, ಪ್ರೇಮವೋ ಒಂದು ತಿಳಿಯುತ್ತಿಿರಲಿಲ್ಲ. ನಿನ್ನ ನೋಡಿದ ಮೊದಲ ದಿನವೇ ನಿನಗೆ ಬಂಧಿಯಾದೆನು. ಆ ಮೊದಲ ನೋಟಕ್ಕೆೆ, ನಗುನಗುತ್ತಾಾ ನೀನಾಡಿದ ಮಾತುಗಳಿಗೆ ಸೋತುಹೋದೆ. ಅದಕ್ಕೆೆ ನಾನು ಆಕರ್ಷಣೆ ಎನ್ನುವ ಹೆಸರಿಟ್ಟೆೆ. ಆದರೆ ಅದು ಹೆಮ್ಮರವಾಗಿದೆ.

ಇನ್ನು ನಿನ್ನ ಪರಿಚಯವಾಗಿ ಪರಿಚಯ ಸ್ನೇಹವಾಗಿ ಸಲುಗೆ ಹೆಚ್ಚಾಾದ ಮೇಲಂತೂ ನನ್ನ ಪುಟ್ಟ ಪ್ರಪಂಚದಲ್ಲಿ ನೀ ನನ್ನ ಜೀವದ ಗೆಳೆಯನಾಗಿಟ್ಟಿಿದ್ದೆ.

ರೇಗಿಸುವಲ್ಲೂ ಪ್ರೀತಿನಾ?
ಪ್ರೀತಿಯ ಅಲೆಮಾರಿ ಹುಡುಗ ಕಣೋ ನೀನು, ಮನಸ್ಸನ್ನ ಅರ್ಥನೇ ಮಾಡಿಕೊಳ್ಳಲ್ಲ. ಇತ್ತೀಚೆಗೆ ನನ್ನ ರೇಗಿಸೋದರಲ್ಲೇ ನಿನಗೆ ಹೆಚ್ಚು ಸಂತೋಷ ಅನ್ನಿಿಸುತ್ತದೆ. ಅದಕ್ಕೆೆ ದಿನಾಲೂ ನನ್ನ ಆಡಿಕೊಳ್ಳುವುದೇ ನಿನಗೆ ಕೆಲಸ, ಒಮ್ಮೊೊಮ್ಮೆೆ ನಿನ್ನೆೆದುರು ಸಿಟ್ಟು ತೋರಿದರೂ ಮರೆಯಲ್ಲಿ ನಗುತ್ತಿಿದ್ದವಳು ನಾನು. ಅದೇಕೆ ನಗುನಗುತ್ತಾಾ ಮಾತನಾಡುವಾಗಲೂ, ಮಧ್ಯದಲ್ಲಿ ನನ್ನನ್ನು ರೇಗಿಸುವಂತಹ ಮಾತುಗಳನ್ನು ಆಡುತ್ತೀಯಾ? ಅವು ಸುಮಧುರ ಬಾಣಗಳ ರೀತಿ ನನ್ನ ಮೇಲೆರಗಿ, ನನ್ನ ಕೆನ್ನೆೆ ಕೆಂಪಗಾಗಿಸುತ್ತಿಿದ್ದುದಂತೂ ನಿಜ. ಅದನ್ನು ನೋಡುತ್ತಾಾ ನೀನು ಸಂತಸ ಪಡುತ್ತಿಿದ್ದೆೆಯಾ. ಒಂದೂ ತಿಳಿಯುತ್ತಿಿಲ್ಲ.

ಅದೆಷ್ಟು ಪ್ರೀತಿಯೋ ನಿನಗೆ ನನ್ನ ಮೇಲೆ! ಅಬ್ಬಾಾ ದೊರೆಯೇ, ಸಾಕು ಇಷ್ಟು ಕಾಡಬೇಡ ಇನಿಯ.
ಸುಳಿವೇ ನೀಡದೆ ನನ್ನದೆಯೆ ಒಳಗೆ ಪ್ರವೇಶಿಸಿ, ಅಲ್ಲೇ ಮನೆ ಮಾಡಿ, ಪ್ರೀತಿಯ ಬಲೆಗೆ ಬೀಳಿಸಿಕೊಂಡವ ನೀನು ಕಣೋ. ಮೊದಲು ನಿನ್ನಲ್ಲಿ ಇಷ್ಟವಾಗಿದ್ದೇ, ನಿನ್ನ ಗುಣದಲ್ಲಿ ಮನೆಮಾಡಿರುವ ತಂದೆಯಂತಹ ಕಾಳಜಿ, ಅಮ್ಮನಂತ ಸಹನೆ. ಪರಿಚಯವಾದ ಹೊಸತರಲ್ಲಿ ನನ್ನನ್ನು ‘ರೀ ರೀ’ ಎನ್ನುತ್ತಿಿದ್ದ ನೀನು ಇತ್ತೀಚೆಗೆ ಸಲುಗೆಯಿಂದ, ನನ್ನ ಹೆಸರು ಹಿಡುದು ಕರೆಯುವುದನ್ನ ನೋಡಿದರೆ ನಾನಿನ್ನು ನಿನ್ನವಳೇ ಭರವಸೆ ನನ್ನಲ್ಲಿ ಒಡಮೂಡುತ್ತಿಿದೆ.

ನಾನಂತು ನಿನ್ನ ಮುಂದೆ ನಾಚಿ ನೀರಾಗುತ್ತಿಿದ್ದೆ. ನೀನೋ ಪಟಪಟ ಅಂತ ಹರಳು ಹುರಿದಂತೆ ಮಾತಾಡುತ್ತಿಿದ್ದೆ. ಆ ಮಾತುಗಳು ಕೇಳುತ್ತಿಿದ್ದರೆ ಸದಾ ಕೇಳುತ್ತಲೇ ಇರಬೇಕೆನಿಸುತ್ತಿಿತ್ತು, ನಿನ್ನ ನಗುಮೊಗದ ಮಾತುಗಳನ್ನು ಮತ್ತೆೆ ಮತ್ತೆೆ ಕೇಳಬೇಕೆನಿಸುತ್ತಿಿತ್ತು. ನೀ ದೂರಾದಾಗ ಅವೇ ಮಾತುಗಳು ಕಿವಿಯಲ್ಲಿ ಗುನುಗುನಿಸಿ, ಹೃದಯದಲ್ಲಿ ಮಧುರ ಬಾವನೆಗಳನ್ನು ಮೂಡಿಸುತ್ತಿಿವೆ. ನೀನು ಆಡಿದ ಮಾತುಗಳನ್ನು ರೆಕಾರ್ಡ್ ಮಾಡಿ ಕೇಳಬೇಕು ಎನಿಸುತ್ತದೆ ನನಗೆ.

ಸಿಡುಕಿದಾಗ ಸುಂದರ ಮೊಗ
ಆದರೆ, ನಿನ್ನ ನಡುವೆಯೇ ಆಗಾಗ ಇಣುಕುವ ಸಿಡುಕುತನ ಇದೆಯಲ್ಲಾಾ, ಅದು ಒಮ್ಮೊೊಮ್ಮೆೆ ಗಾಬರಿ ಬೀಳಿಸಿದ್ದು ನಿಜ. ತುಸು ಸಿಡುಕು ಮೋರೆ ಮಾಡಿಕೊಂಡಾಗ, ನಿನ್ನ ಮುಖ ಇನ್ನಷ್ಟು ಚಂದ ಕಾಣಿಸುತ್ತಿಿದ್ದುದಂತೂ ನಿಜ. ನಿನ್ನೊೊಡನೆ ಮಾತಾಡಬೇಕು ಎಂದುಕೊಂಡು ಬಂದಾಗಲೆಲ್ಲಾ ನಿನ್ನ ಆ ಸಿಡುಕುತನ ಭಯ ಹುಟ್ಟಿಿಸುತ್ತಿಿತ್ತು , ಮಗದೊಮ್ಮೆೆ ನಗುಮೊಗಕೆ ಸೋತು ಮೌನವಾಗಿ ಮಾತೇ ಮರೆಯುತಿತ್ತು. ಅಂತಹ ಸೆಳೆತ ಆ ನಿನ್ನ ಕಣ್ಣುಗಳಲ್ಲಿ ಇದೆ ಕಣೋ, ನಿನಗೇ ಗೊತ್ತಿಿಲ್ಲ ನಿನ್ನ ಕಣ್ಣಿಿನ ಸೌಂದರ್ಯ. ಆ ತುಳುಕುವ ಪ್ರೀತಿ, ಸ್ನೇಹಕ್ಕೆೆ ನನ್ನ ಮನ ಸೋತುಹೋಗಿದೆ ಕಣೋ.
ಕೆಲವೊಮ್ಮೆೆ ಎಲ್ಲವನ್ನೂ ಮಾತಿನಲ್ಲಿ ಹೇಳೋಕೆ ಆಗೋದಿಲ್ಲ. ಅದನ್ನ ನೀನೆ ಅರ್ಥ ಮಾಡ್ಕೋೋಬೇಕು. ಆದರೆ ಇದೆಲ್ಲ ನಿನಗೆ ಗೊತ್ತಿಿದ್ದರೂ ಗೊತ್ತಿಿಲ್ಲದವನಂತೆ ನಟಿಸುತ್ತಿಿರುವುದು ಸರಿಯೇ…?
ನಿನ್ನ ಹುಸಿ ಕೋಪ ತುಂಟತನ, ನನ್ನೊೊಡನೆ ಮಾತಾಡುವ ಪರಿ ಇವೆಲ್ಲ ನೋಡುತ್ತಿಿದ್ದರೆ,

ಅಂತು ಇಂತು ಇವನಿಗೆ ನಾನು ಸ್ವಂತ
ಮನಸ್ಸು ಅಂತು ಇವನೇ ನಿನ್ನವನಂತ…
ಎಂಬ ಹಾಡು ಮನದೊಳಗೆ ಗುನುಗುತ್ತದೆ.

ಅದೇನೆ ಇರಲಿ ಹೆಚ್ಚೇನು ಹೇಳಲಾರೆ ಅಗಲಿಯಂತೂ ನಾ ಬಾಳಲಾರೆ ಗೆಳೆಯಾ. ನೀನು ನನಗೆ ಮಾಡಿದ ಮೋಡಿ ಇದೆಯಲ್ಲಾಾ, ಅದು ನನ್ನ ಜೀವನವನ್ನೇ ಬದಲಾಯಿಸಿದೆ, ನಾನು ಯೋಚಿಸುವ ರೀತಿಯನ್ನೇ ಅತ್ತಿಿತ್ತ ಮಾಡಿದೆ, ನನ್ನ ಮನಸ್ಸು ಹಕ್ಕಿಿಯಂತಾಗಿದೆ, ನಿನ್ನನ್ನೇ ನೆನೆಸುತ್ತಿಿದೆ, ಸದಾ.
ನಿನ್ನನಂತೂ ಕಡೆಗಣಿಸಲಾರೆ
ಇತಿ ನಿನ್ನವಳೇ.