ಶಿಶಿರ ಕಾಲ
ಶಿಶಿರ‍್ ಹೆಗಡೆ, ಚಿಕಾಗೊ
shishirh@gmail.com
Personification – ವ್ಯಕ್ತಿಯಲ್ಲದ – ವಸ್ತುವಿಗೆ, ದೇಶಕ್ಕೆ, ಊರಿಗೆ, ಕೆರೆ ಗುಡ್ಡ ಹೀಗೆಲ್ಲದಕ್ಕೆ ಒಂದು ಮೂರ್ತರೂಪ ಭಾವಿಸಿ ಸಂಬೋಧಿಸುವುದು, ವ್ಯವಹರಿಸು ವುದು ದೈನಂದಿನ ವ್ಯವಹಾರದಲ್ಲಿ ತೀರಾ ಸಾಮಾನ್ಯವಾದದ್ದು. ನೀವು ಅಂತಾರಾಷ್ಟ್ರೀಯ ವ್ಯವಹಾರಗಳನ್ನು ಗ್ರಹಿಸುವವರಾದರೆ ದೇಶ ದೇಶಕ್ಕೆ ಇಂಥದ್ದೇ ಮೂರ್ತರೂಪ ಕೊಟ್ಟು ಸಂಬೋಧಿಸುವುದು ಸಾಮಾನ್ಯ.
ಒಂದು ದೇಶಕ್ಕೆ ದೇಶವೇ ಹೀರೋ ಎಂಬಂತೆ, ಇನ್ನೊಂದು ವಿಲನ್ ಎಂಬಂತೆ. ಅಮೆರಿಕ, ಚೀನಾ, ರಷ್ಯಾ, ಭಾರತ, ಸ್ಪೇನ್, ಉತ್ತರ ಕೊರಿಯಾ, ಇರಾನ್ ಹೀಗೆಲ್ಲ ದೇಶಗಳು ಕೆಲವರಿಗೆ ಹೀರೋ, ಇನ್ನು ಕೆಲವರಿಗೆ ವಿಲನ್. ವಿಲನ್ ಎಂದು ಮೊದಲೇ ಆರೋಪಿಸಿ ಒಂದು ಘಟನೆಯನ್ನು ನೋಡಿದಾಗ ಸಿನಿಮೀಯ ದೃಷ್ಟಿಯಲ್ಲಿ ಆ ದೇಶ ಮಾಡಿದ್ದೆಲ್ಲ ತಪ್ಪೇ. ಇನ್ನೊಂದು ದೇಶ ಮಾಡಿದ್ದೆಲ್ಲ ಓಕೆ. ಇದುವೇ ಮುಂದುವರಿದು ಕೆಲವು ದೇಶ ಗಳೆಂದರೆ ದುಷ್ಟರ ಕೂಟ.
ಇನ್ನು ಕೆಲವು ದೇಶಗಳು ಜಗತ್ತಿನ ಜವಾಬ್ದಾರಿಯನ್ನೇ ಹೊತ್ತಂತೆ. ಇದೊಂದು ಸಾಮಾನ್ಯ ದೃಷ್ಟಿಕೋನ. ಈ ಮಸೂರದಲ್ಲಿಯೇ ನಾವು ಎಲ್ಲ ದೇಶಗಳ ವ್ಯವಹಾರ ವನ್ನು ನೋಡುತ್ತಾ ಹೋಗುತ್ತೇವೆ. ಇರಾನ್ ಮತ್ತು ಇಸ್ರೇಲ್. ಈ ಎರಡು ದೇಶಕ್ಕೆ ಯಾವತ್ತೂ ಹೊಯ್ದ ಅಕ್ಕಿ ಬೇಯುವುದಿಲ್ಲ. ಈ ದ್ವೇಷಕ್ಕೆ ಇತಿಹಾಸವಿದೆ ಮತ್ತು ಈ ಎರಡೂ ದೇಶದ ಅಸ್ತಿತ್ವಕ್ಕೆ ಈ ದ್ವೇಷ ಬೇಕೇ ಬೇಕು ಕೂಡ. ಅಮೆರಿಕ ಇಸ್ರೇಲ್‌ನ ಬೆನ್ನಿಗೆ. ಇರಾನಿನದು ಅಮೆರಿಕದ ವೈರಿ ರಾಷ್ಟ್ರ ಉತ್ತರ ಕೊರಿಯಾ ಜತೆ ಮುಸುಕಿನ ಸ್ನೇಹ. ವೈರಿಯ ವೈರಿಯೇ ಸ್ನೇಹಿತನಾಗುವು ದಲ್ಲ – ಹಾಗೆ.
ಇಂತಿರ್ಪ ಸಂದರ್ಭದಲ್ಲಿ – ಹಿಂದಿನ ವರ್ಷ ನವೆಂಬರ್ ನಲ್ಲಿ ಇರಾನಿನ ಅಣ್ವಸ್ತ್ರ ಕಾರ್ಯಕ್ರಮದ ಮುಖ್ಯಸ್ಥ ಫಕ್ರಿಜಾದೇಹ್ ಹಾಡಹಗಲೇ ಗುಂಡು ತಿಂದು ಸತ್ತ ಸುದ್ದಿ ಎಲ್ಲಿಲ್ಲದ ಸಂಚಲನಕ್ಕೆ ಕಾರಣವಾಗಿತ್ತು. ಒಂದು ದೇಶದ ಅಣ್ವಸ ಮುಖ್ಯಸ್ಥ ನಡು ಹಗಲಲ್ಲೇ ಗುಂಡಿಟ್ಟು ಸಾಯುವುದೆಂದರೆ ಸಣ್ಣ ವಿಚಾರವೇ? ನನ್ನಲ್ಲಿ ಎಲ್ಲಿಲ್ಲದ ಕುತೂಹಲವನ್ನು ಕೆರಳಿಸಿದ್ದ ಸುದ್ದಿ ಅದು. ಈ ಘಟನೆಯ ನಂತರದ ಸುದ್ದಿಯ ಡೆವಲಪ್‌ಮೆಂಟ್ ವಿಚಿತ್ರ ವಾಗಿತ್ತು. ಇರಾನಿನ ಪತ್ರಿಕೆಗಳನ್ನು ತೆರೆದು ಓದಲು ಕುಳಿತಾಗ ದಿನಕ್ಕೊಂದು ರೀತಿಯ ಸುದ್ದಿ ಹೊರ ಬರುತ್ತಿತ್ತು. ಘಟನೆಯ ಮಾರನೆಯ ದಿನ – ಕೊಲ್ಲಲು ಬಂದವರ ಗುಂಪು ಮತ್ತು ಗಾರ್ಡ್ ಗಳ ನಡುವೆ ಗುಂಡಿನ ಚಕಮಕಿಯಾಯ್ತು, ಅದರಲ್ಲಿ ಫಕ್ರಿಜಾದೇಹ್ ಮಧ್ಯ ಸಿಕ್ಕಿ ಹತವಾದರು. ಇದಕ್ಕೆ ಅಲ್ಲಿನ ಪ್ರತ್ಯಕ್ಷದರ್ಶಿ ಗಳು ಸಾಕ್ಷಿಯಾಗಿದ್ದಾರೆ.
ಅದರ ಮಾರನೆಯ ದಿನ ಅಲ್ಲೊಂದು ಬಾಂಬ್ ಸಿಡಿಸಲಾಯಿತು, ಅದರಲ್ಲಿ ಫಕ್ರಿಜಾದೇಹ್ ಹತನಾದ. ಅದರ ಮಾರನೆಯ ದಿನ ಇದೊಂದು ಮರೆಯಲ್ಲಿ ನಿಂತು ನಡೆಸಿದ ಗುಂಡಿನ ದಾಳಿ ಎನ್ನುವ ವರದಿ. ಹೀಗೆ ಮುಂದಿನ ಐದು ದಿನಗಳಲ್ಲಿ ದಿನಕ್ಕೊಂದು ಕಥೆ. ಇಂದಿಗೂ ಇರಾನ್ ಅಲ್ಲೊಂದು ದೊಡ್ಡ ಟ್ರಕ್ ನಿಂತಿತ್ತು, ಅದರಲ್ಲಿ ಮೊದಲು ಬಾಂಬ್ ಸ್ಪೋಟವಾಯಿತು – ಅದರಿಂದಾಗಿ ಫಕ್ರಿಜಾದೇಹ್ ಸೆಕ್ಯುರಿಟಿ ಯವರೆಲ್ಲ ನಿಂತರು, ನಂತರ ಅದೇ ವಾಹನದಿಂದ ಹೊರಬಂದ ಹನ್ನೆರಡು ಮಂದಿ ಗುಂಡಿನ ಮಳೆಗರೆ ದರು, ಹಾಗೆ ಈ ವಿಜ್ಞಾನಿ ಸತ್ತ ಎನ್ನುತ್ತಲೇ ಇದೆ.
ಸ್ಫೋಟವಾದ ಟ್ರಕ್ ನಿಂದ ಬದುಕಿ ಬಂದು ಗುಂಡು ಹಾರಿಸೋದು ಆದದ್ದಾದರೂ ಹೇಗೆ? ನಂತರ ಹಾಗೆ ದಾಳಿಮಾಡಿದ ಹನ್ನೆರಡು ಮಂದಿ ಏಕೆ ಸಿಕ್ಕಿಲ್ಲ ಹೀಗೆ ನೂರೆಂಟು ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಒಟ್ಟಾರೆ ಆತನ ಸಾವಿನ ನಂತರದ ಕಾರಿನ ಚಿತ್ರಗಳನ್ನು ನೋಡಿದರೆ ಇದು ಬಂದೂಕಿನ ಗುಂಡಿನ ದಾಳಿ ಮತ್ತು
ಅದರಲ್ಲಿ ಫಕ್ರಿಜಾದೇಹ್ ಸತ್ತದ್ದು ಎನ್ನುವುದಂತೂ ಪಕ್ಕಾ. ಇಲ್ಲಿ ಗಮನ ಸೆಳೆದದ್ದು ಫಕ್ರಿಜಾದೇಹ್ ಅಂತಹ ವ್ಯಕ್ತಿ ಸ್ವತಃ ಸಾಮಾನ್ಯ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು, ಪಕ್ಕದಲ್ಲಿ ಹೆಂಡತಿ ಕೂತಿದ್ದರು, ಆಗ ದಾಳಿಯಾದದ್ದು, ಹತನಾದದ್ದು ಎನ್ನುವ ವಿಚಾರ.
ಅಣ್ವಸ್ತ್ರ ಕಾರ್ಯಕ್ರಮ ಇರಾನಿನ ಪರಮ ಆದ್ಯತೆಯ ವಿಚಾರ. ಹೀಗಿರುವಾಗ ಅಲ್ಲಿನ ಅಣ್ವಸ್ತ್ರ ಮುಖ್ಯಸ್ಥ, ಟಾಪ್ ವಿಜ್ಞಾನಿ, ಅಲ್ಲಿನ ಸೈನ್ಯದ ಎರಡನೆಯ ಹಂತದ ಮುಖ್ಯಸ್ಥ ತಾನೇ ಕಾರು ಚಲಾಯಿಸಿಕೊಂಡು ಹೋಗೋದು ಎಲ್ಲಾದರೂ ಇದೆಯೇ? ಡ್ರೈವರ್ ಇರಲಿಲ್ಲವೇ? ಹಾಗೆ ಹೋದಾಗ ಹತ್ಯೆಯಾದದ್ದು ಹೇಗೆ? ಇದೆಲ್ಲ ಕೇಳಿ ಒಮ್ಮೆ ಇದು ಇರಾನಿನದೇ ಕುಮ್ಮಕ್ಕಿನ ಕೆಲಸ ಎಂದೆಲ್ಲ ಅನಿಸಿದ್ದಿದೆ. ಒಟ್ಟಾರೆ ಅಲ್ಲಿಂದಿಲ್ಲಿಯವರೆಗೂ ಈ ಕೊಲೆ ಹೀಗಾಯ್ತು – ಕೊಂದವರು ಯಾರು – ಹೇಗೆ
ಎಂಬುದರ ಬಗ್ಗೆ ಒಂದು ದೊಡ್ಡ ಗೊಂದಲವೇ ಏರ್ಪಟ್ಟಿತ್ತು. ಇರಾನಿನ ಪತ್ರಿಕೆಗಳಲ್ಲಿ ದಿನಕ್ಕೊಂದು ಕಥೆಯಾದರೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಗಂಟೆ ಗೊಂದು ಕಥೆ. ಈ ಇಡೀ ಘಟನೆಯ ಸತ್ಯ ಹೊರಬರಲು ಹತ್ತು ತಿಂಗಳುಗಳ ಸಮಯವೇ ಬೇಕಾಯ್ತು.
ಆದದ್ದು ಇಷ್ಟು – ಶುಕ್ರವಾರ, ನವೆಂಬರ್ ೨೭, ೨೦೨೦. ಇರಾನಿನ ಟಾಪ್ ಅಣ್ವಸ್ತ್ರ ವಿಜ್ಞಾನಿ ಮೋಹಸೇನ್ ಫಕ್ರಿಜಾದೇಹ್ ಮತ್ತು ಪತ್ನಿ ಆತನ ಅಬ್ಸರ್ಡ್ ನಗರದ
ಎರಡನೆಯ ಮನೆಯಲ್ಲಿ ವಾರಾಂತ್ಯವನ್ನು ಕಳೆಯಲು ಹೊರಟಿದ್ದರು. ಅದೆಷ್ಟೋ ವರ್ಷದಿಂದ ಉನ್ನತ ಸ್ಥಾನದಲ್ಲಿದ್ದ ಫಕ್ರಿಜಾದೇಹ್ಗೆ ಎಲ್ಲಿಲ್ಲದ ಬಿಗಿ ಭದ್ರತೆ ಒಂದು ರೀತಿಯಲ್ಲಿ ಬಂಧನದಂತೆಯೇ ಅನ್ನಿಸುತ್ತಿತ್ತು. ಹೀಗೆಲ್ಲ ಹೊರಡುವಾಗ ತನ್ನ ಕಾರನ್ನು ತಾನೇ ಚಲಾಯಿಸಿಕೊಂಡು ಹೋಗುವುದಾಗಿ ಹೇಳುತ್ತಿದ್ದ. ಆ ದಿನ ಕೂಡ ತಾನು ತನ್ನ ಸಾಮಾನ್ಯ ಕಾರನ್ನು ಚಲಾಯಿಸಿಕೊಂಡು ಹೋಗುವವನು ಎಂದು ರಕ್ಷಣಾ ತಂಡ ಎಷ್ಟೇ ಹೇಳಿದರೂ ಕೇಳಲಿಲ್ಲ. ಆ ದಿನ ಅಲ್ಲಿನ ಆಂತರಿಕ ಭದ್ರತೆಯವರು ಫಕ್ರಿಜಾದೇಹ್ಗೆ ಜೀವಭಯವಿರುವುದನ್ನು ಹತ್ತು ಬಾರಿ ಹೇಳಿದ್ದರು.
ಒಂದೂವರೆ ದಶಕಕ್ಕಿಂತ ಜಾಸ್ತಿ ಸಮಯ ಸೈನ್ಯದಲ್ಲಿ ಉನ್ನತ ಹುದ್ದೆಯಲ್ಲಿದ್ದ ಫಕ್ರಿಜಾದೇಹ್ಗೆ ಇಂತಹ ಜೀವ ಬೆದರಿಕೆಯ ಸುದ್ದಿ, ಇಂಟೆಲಿಜೆನ್ಸ್ ವರದಿ ಇವೆಲ್ಲ ಪ್ರತಿ ದಿನ ಕೇಳುತ್ತಿದ್ದ ಅಜ್ಜಿಕಥೆಯಂತಾಗಿತ್ತು. ಪ್ರತಿದಿನ ಈ ರೀತಿ ನಮ್ಮ ಜೀವಕ್ಕೆ ಹೆದರಿಕೆಯಿದೆ ಎಂಬುದನ್ನು ಕೇಳಿದರೆ ಯಾರೇ ಆಗಲಿ – ಆದದ್ದು ಆಗುತ್ತದೆ ಎನ್ನುವ ಭಾವಕ್ಕೆ ಹೊರಳುವುದು ಸಹಜ. ನನ್ನ ರಕ್ಷಣೆ ನಿಮ್ಮ ಹೊಣೆ ಎಂದು ಫಕ್ರಿಜಾದೇಹ್ ಹೊರಟುಬಿಟ್ಟ. ಅಷ್ಟೊಂದು ದೊಡ್ಡ ಹುದ್ದೆಯಲ್ಲಿದ್ದರೂ ಬಿಡುವಿನ ಸಮಯದಲ್ಲಿ ಫಕ್ರಿಜಾದೇಹ್ ಒಂದು ಸಾಧಾರಣ ಜೀವನವನ್ನು ಹಂಬಲಿಸುತ್ತಿದ್ದ. ಆ ದಿನದ ಕೋನ್ವೊಯ್ ಹೀಗಿತ್ತು. ಫಕ್ರಿಜಾದೇಹ್ ಕಾರಿನ ಮುಂದೆ ದು ಸಶಸ ಕಾರು – ಅದರ ಹಿಂದೆ ಫಜಾದೇಹ್ಯ ಸ್ವಂತದ ಕಾರು – ಗಂಡ ಹೆಂಡತಿ, ಹಿಂದೆ ಇನ್ನೊಂದು ಸಶಸ್ತ್ರ ಪಡೆ.
ಫಕ್ರಿಜಾದೇಹ್ ಎರಡನೆಯ ಮನೆಯ ಹತ್ತಿರ ಒಂದು ಯು ಟರ್ನ್. ಅಲ್ಲಿಗೆ ಬಂದಾಗ ಮುಂದಿನ ಕಾವಲು ಕಾರು ಮನೆಯನ್ನು ಪರೀಕ್ಷಿಸಲು ಮುಂದಾಯಿತು. ಆ
ಸಮಯದಲ್ಲಿ -ಕ್ರಿಜಾದೇಹ್ ಕಾರು ಮುಂದೆ. ಆತನ ಹಿಂದೆ ಇನ್ನೊಂದು ರಕ್ಷಣಾ ಕಾರು. ಆಗ ಇದ್ದಕ್ಕಿದ್ದಂತೆ ಎಲ್ಲಿಂದಲೋ ಗುಂಡು ಹಾರುತ್ತದೆ ಮತ್ತು ಕಾರಿನ ಎದರಿನ ಗಾಜನ್ನು ಭೇಧಿಸಿ ಒಳಹೊಕ್ಕುತ್ತದೆ. ಫಕ್ರಿಜಾದೇಹ್ ಗಾಯ ಗೊಳ್ಳುತ್ತಾನೆ. ಕಾರಿನ ಬಾಗಿಲು ತೆಗೆದು ನೆಲದಮೇಲೆ ತೆವಳುತ್ತಾನೆ. ಇನ್ನೊಂದೆರಡು ಗುಂಡು ಬೀಳುತ್ತದೆ. ಹಿಂದಿನ ರಕ್ಷಣಾ ತಂಡ ದಾಳಿಯನ್ನು ಗ್ರಹಿಸುತ್ತದೆ. ಹೊರಬಂದು ನೋಡಿದರೆ ಯಾರೂ ಇಲ್ಲ. ಎಲ್ಲ ಖಾಲಿ ಖಾಲಿ – ಎಲ್ಲವೂ ಸ್ತಬ್ಧ. ರಕ್ಷಣಾ
ತಂಡಕ್ಕೆ ಎಲ್ಲಿಂದ ಗುಂಡು ಬಿದ್ದದ್ದು ಎಂದು ದಿಕ್ಕೇ ತೋಚದಂತೆ ನಿಂತುಬಿಟ್ಟಿತು.
ಅಲ್ಲಿಗೆ ಇರಾನಿನ ಅಣ್ವಸ್ತ್ರ ವಿಜ್ಞಾನಿ – ಸೇನಾ ಎರಡನೇ ನಾಯಕ – ಫಕ್ರಿಜಾದೇಹ್ ಖತಂ. ಗುಂಡು ಹಾರಿಸಿದ್ದು ಹೇಗೆ ಮತ್ತು ಯಾರು? ಆ ಟರ್ನ್ ನಲ್ಲಿ ಒಂದು ಟ್ರಕ್‌ಗೆ ಕಿಲ್ ಟೀಮ್ ಒಂದು ರೊಬೋಟಿಕ್ ಗನ್ ಅನ್ನು ಅಳವಡಿಸಿರುತ್ತದೆ. ಅಲ್ಲಿ ಅಸಲಿಗೆ ಯಾವುದೇ ವ್ಯಕ್ತಿಯೇ ಇರುವುದಿಲ್ಲ. ಈ FN Mag
Machine Gun ಬಂದೂಕನ್ನು ಸಾವಿರ ಮೈಲಿ ದೂರದಲ್ಲಿನ ಒಂದು ಅಜ್ಞಾತ ಜಾಗದಿಂದ ಒಬ್ಬ ಕಂಪ್ಯೂಟರ್ ಮೂಲಕ ಕಂಟ್ರೋಲ್ ಮಾಡಿದ್ದು ಮತ್ತು ಗುಂಡು ಹಾರಿಸಿದ್ದು. ರೊಬೋಟಿಕ್ ಗನ್, ಹತ್ತಾರು ಕ್ಯಾಮರಾ, ಸ್ಯಾಟಲೈಟ್ ಕನೆಕ್ಷನ್, ಇದೆಲ್ಲವನ್ನು ತೀರಾ ಅಚ್ಚುಕಟ್ಟಾಗಿ ಇರಾನಿನ ಒಳಗೆ ಸ್ಮಗಲ್ ಮಾಡಿ, ಫಕ್ರಿಜಾದೇಹ್ ಚಲನವಲನಗಳನ್ನು ಗ್ರಹಿಸಿ, ಎಲ್ಲ ಕೈಂಕರ್ಯಗಳನ್ನು ಏಕ್ದಂ ವ್ಯವಸ್ಥಿತವಾಗಿ ಮಾಡಿ ಮುಗಿಸಿದ್ದು ಇಸ್ರೇಲಿನ ಬೇಹುಗಾರಿಕಾ ಸಂಸ್ಥೆ ಮೋಸಾಡ್.
ಇದನ್ನು ಅಲ್ಲಿ ಅಳವಡಿಸಿದ ತಂಡ ಅದಾದ ಕೆಲವೇ ನಿಮಿಷಗಳಲ್ಲಿ ದೇಶ ತೊರೆದಾಗಿರುತ್ತದೆ. ಇದರಿಂದಾಗಿ ಯಾರೊಬ್ಬರೂ ಇರಾನಿನ ಕೈಗೆ ಸಿಗುವುದೇ
ಇಲ್ಲ. ಅಲ್ಲಿಂದ ಮುಂದೆ ಇರಾನ್ ಕಥೆ ಕಟ್ಟಲು – ಇದು ಅಮೆರಿಕದ್ದೇ ಕೆಲಸ, ಇಸ್ರೇಲ್‌ದೇ ಕೆಲಸ ಎಂದು ಕುಯ್ ಕುರ್ ಶುರುಮಾಡಿಕೊಳ್ಳುತ್ತದೆ. ವೈರಿ ಇರಾನ್ ಅಣ್ವಸ ಸಾಮರ್ಥ್ಯ ಪಡೆಯುವುದೆಂದರೆ ಅದು ಇಸ್ರೇಲಿಗೆ, ಅಮೆರಿಕಕ್ಕೆ ಮತ್ತು ಇತರ ಗೆಳೆಯ ರಾಷ್ಟ್ರಗಳಿಗೆ ಎಲ್ಲಿಲ್ಲದ ಆತಂಕದ ವಿಷಯ. ಇದನ್ನು ಮನಗಂಡ ಇಸ್ರೇಲ್ ಸರಕಾರ 2004 ರಲ್ಲಿಯೇ ಅಲ್ಲಿನ ವಿದೇಶಿ ಗುಪ್ತಚರ ಇಲಾಖೆ ಮೋಸಾಡ್‌ಗೆ ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮವನ್ನು ತಡೆಯಲು ಆದೇಶ ಮತ್ತು ಸರ್ವ
ಸ್ವತಂತ್ರ ನೀಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಮೋಸಾಡ್ ಮಾಡಿದ ದಾಳಿ, ಇರಾನಿನ ಅಣ್ವಸ ಬೆಳವಣಿಗೆಯನ್ನು ತಡೆಯಲು ಕೈಗೊಂಡ ಕೆಲಸ ಒಂದೆರಡಲ್ಲ.
2007 ರಿಂದ ಇಲ್ಲಿಯವರೆಗೆ ಇಸ್ರೇಲ್‌ನ ಮೋಸಾಡ್ ಇರಾನಿನ ಐದು ಅತ್ಯುನ್ನತ ಅಣು ವಿಜ್ಞಾನಿಗಳನ್ನು ಮುಗಿಸಿದೆ ಇರಾನಿನಲ್ಲಿಯೇ. ಅವರೆಲ್ಲರೂ ವಿಜ್ಞಾನಿ ಫಕ್ರಿಜಾದೇಹ್ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರೇ. ಅವರೆಲ್ಲರೂ ಇರಾನಿನ ಕ್ಷಿಪಣಿಯ ತುದಿಗೆ ಅಣ್ವಸ ಸಿಕ್ಕಿಸಿ ಹಾರಿಸುವುದು, ದಾಳಿ ಮಾಡುವುದು ಹೇಗೆ ಎಂಬುದನ್ನೇ ಸಾಧಿಸಲು ಹೊರಟವರು. ಅವರಲ್ಲಿ ಕೆಲವರನ್ನು ಟ್ರಾಫಿಕ್‌ನಲ್ಲಿ ಕಾರು ನಿಂತಾಗ ಬೈಕ್‌ನಲ್ಲಿ ಬಂದು ಗುಂಡು ಹಾರಿಸಿ ಇಲ್ಲವೇ ಕಾರಿನ ಗ್ಲಾಸಿಗೆ ಬಾಂಬ್ ಅಂಟಿಸಿ, ಸೋಟಿಸಿ ಕೊಲ್ಲಲಾಗಿದೆ. ಒಬ್ಬ ವಿಜ್ಞಾನಿಯನ್ನಂತೂ ಆತ ಹೋಗುತ್ತಿದ್ದ ಕಾರಿನಡಿಯಲ್ಲಿಯೇ ಟೈಮ್ ಬಾಂಬ್ ಇಟ್ಟು ಕೊಲ್ಲಲಾಗಿದೆ.
ಇನ್ನು ಕೆಲವರನ್ನು ಅವರ ಮನೆಯ ಆವರಣದಲ್ಲಿಯೇ ಇರುವಾಗ ದೂರದಲ್ಲಿ, ಮರೆಯಲ್ಲಿ ಕೂತು ಕೊಲ್ಲಲಾಗಿದೆ. ಈ ರೀತಿ ಇರಾನಿನ ಟಾಪ್ ವಿಜ್ಞಾನಿಗಳನ್ನು ಕೊಲ್ಲುವುದು ಒಂದು ಕಡೆಯಾದರೆ ಮರುಭೂಮಿಯಲ್ಲಿರುವ ಅಣು ಶಕ್ತಿಕೇಂದ್ರಗಳನ್ನು ಸೋಟಿಸಿದ ಘಟನೆ ಕೂಡ ನಡೆದಿದೆ. ಇದಲ್ಲದೇ ಇರಾನಿನ ಅಣು ಶಕ್ತಿ ಕೇಂದ್ರಗಳನ್ನು ಹ್ಯಾಕ್ ಮಾಡಿ ಅಲ್ಲಿನ ಬೆಳವಣಿಗೆಯನ್ನು ತಿಳಿಯುವುದು, ಅಲ್ಲಿನ ಅಣು ರಿಯಾಕ್ಟರ್‌ಗಳನ್ನು ಹ್ಯಾಕ್‌ನಿಂದಲೇ ಸ್ಥಗಿತಗೊಳಿಸುವುದು ಹೇಗೆ – ಎಲ್ಲ ಮಾಡಿದ್ದು ಮೋಸಾಡ್.
ಇದಲ್ಲದೇ 2011 ರ ನವೆಂಬರ್ ನಲ್ಲಿ ಇರಾನಿನ ಮಿಸೈಲ್ ಕಾರ್ಯಕ್ರಮದ ಸೈನ್ಯದ ಜನರಲ್ ಮತ್ತು ಆತನ ಹದಿನಾರು ಮಂದಿ ಆಪ್ತರನ್ನು ಬಾಂಬ್ ಸ್ಪೋಟಿಸಿ ಕೊಂದದ್ದು ಕೂಡ ಇದೇ ಮೋಸಾಡ್. ಮೋಸಾಡ್‌ನ ಲೆಕ್ಕಾಚಾರ ಎಲ್ಲ ಸರಿಯಾಗಿ ನಡೆದಿದ್ದರೆ ಫಕ್ರಿಜಾದೇಹ್ 2009 ರಲ್ಲೇ ಅಲ್ಲಾಹುವಿನ ಪಾದ ಸೇರಬೇಕಿತ್ತು. ಆದರೆ ಆ ದಿನ ಮೋಸಾಡ್‌ನ ನಡೆಯ ಬಗ್ಗೆ ಇರಾನಿನ ಬೇಹುಗಾರಿಕಾ ಸಂಸ್ಥೆಗೆ ತಿಳಿದುಹೋಗಿತ್ತು. ಆ ಕಾರಣಕ್ಕೆ ಫಕ್ರಿಜಾದೇಹ್ ಆ ದಿನ ಬಚಾವ್ ಆಗಿದ್ದ. ಅಲ್ಲಿಂದ
ಮುಂದೆ ಆತನಿಗೆ ಎಲ್ಲಿಲ್ಲದ ರಕ್ಷಣೆ ದೊರಕಿತು. ಮೋಸಾಡ್ ಅಲ್ಲಿಂದ ಈ ಘಟನೆಯ ವರೆಗೆ ಅದೆಷ್ಟೋ ಬಾರಿ ಫಕ್ರಿಜಾದೇಹ್ ಅನ್ನು ಮುಗಿಸಲು ಪ್ರಯತ್ನಿಸಿದೆ ಮತ್ತು ಸೋತಿದೆ. ಒಂದೊಂದು ಸಲ ಒಂದೊಂದು ಕಾರಣದಿಂದ ಅದು ಸಾಧ್ಯವಾಗಿಲ್ಲ.
ಒಮ್ಮೆಯಂತೂ ಮೋಸಾಡ್ ಏಜೆಂಟ್ ನ ಬಂದೂಕಿನ ಗುರಿಯಲ್ಲಿ ಫಕ್ರಿಜಾದೇಹ್ ಇದ್ದ, ಆ ಏಜೆಂಟ್ ಸುಮಾರು ಅರ್ಧ ಮೈಲಿ ದೂರದಲ್ಲಿದ್ದ. ಇನ್ನೇನ್ನು ಟ್ರಿಗರ್
ಒತ್ತಬೇಕು, ಎಲ್ಲಿಲ್ಲದಷ್ಟು ಗಾಳಿ ಬೀಸಿತ್ತು. ಆ ಕಾರಣಕ್ಕೆ ಗುರಿ ತಪ್ಪಿದರೆ ಅಲ್ಲಿ ಆತನಬದಲಿಗೆ ಇನ್ನೊಬ್ಬರಿಗೆ ಗುಂಡು ತಾಗುವ ಸಾಧ್ಯತೆಯಿತ್ತು. ಆ ಕಾರಣಕ್ಕೆ ಅಂದು ಫಕ್ರಿಜಾದೇಹ್ ಬದುಕಿಕೊಂಡಿದ್ದ. ಇಸ್ರೇಲ್ ಈ ಒಂದು ಕೆಲಸಕ್ಕೆ ತೆಗೆದುಕೊಂಡ ಸಮಯ ಬರೋಬ್ಬರಿ ಹನ್ನೊಂದು ವರ್ಷ. ಫಕ್ರಿಜಾದೇಹ್ ರಕ್ಷಣೆ ಎಷ್ಟಿತ್ತೆಂದರೆ ಹಿಂದೆ ಅವಲಂಬಿಸಿದ್ದ ಎಲ್ಲ ರೀತಿಯ ತಂತ್ರಗಳೂ ಆತನಿಗಿದ್ದ ರಕ್ಷಣೆಯಿಂದಾಗಿ ಸಾಧ್ಯವಾಗುತ್ತಿರಲಿಲ್ಲ. ಕೊನೆಯಲ್ಲಿ ಆತನ ರಕ್ಷಣಾ ವಾಹನಗಳನ್ನು ಸೋಟಿಸಿ ನಂತರ ಆತನ ಮೇಲೆ ಗುಂಡು ಹಾರಿಸಿ ಕೊಲ್ಲುವುದು ಎಂದಾಗಿತ್ತು – ಆದರೆ ಹಾಗೆ ಮಾಡಲು ಕೂಡ ಸಾಧ್ಯವಾಗಲೇ ಇಲ್ಲ. ಆ ಕಾರಣಕ್ಕೆ ಆರ್ಟಿಫಿಷಿ ಯಲ್ ಇಂಟೆಲಿಜೆನ್ಸ್ ಮತ್ತು ರೊಬೋಟಿಕ್ ಬಂದೂಕನ್ನು ಬಳಸಿ ಅತ್ಯಾಧುನಿಕ ರೀತಿಯಲ್ಲಿ ಮೋಸಾಡ್ ಫಕ್ರಿಜಾದೇಹ್ ಯನ್ನು ಕೊನೆಗೂ ಕೊಂದಿದೆ.
ನವೆಂಬರ್ 2020 ಅದಾಗಲೇ ಟ್ರಂಪ್ ಅಧಿಕಾರ ಅವಧಿಯ ಅಂತ್ಯ. ಬೈಡನ್ ಅಮೆರಿಕ ಚುಕ್ಕಾಣಿ ಹಿಡಿಯುವುದು ಇನ್ನೇನು ಖಚಿತವಾಗುತ್ತಿತ್ತು. ಬೈಡನ್
ಅಽಕಾರಕ್ಕೆ ಬಂದರೆ ಅಮೆರಿಕದ ಇರಾನಿನೆಡೆಗಿನ ನಿಲುವು ಬದಲಾಗುತ್ತದೆ ಎನ್ನುವುದು ಬೈಡನ್ ಮಾತಿನಿಂದಲೇ ಸಾದರವಾಗಿತ್ತು. ಬೈಡನ್ ಅಽಕಾರಕ್ಕೆ ಬಂದದ್ದೇ ಆದಲ್ಲಿ ಮತ್ತೆ 2015 ರ ಅಣ್ವಸ ಒಪ್ಪಂದಕ್ಕೆ ಮರುಜೀವ ಪಡೆಯುವ ಸಾಧ್ಯತೆ ಪಕ್ಕಾ ಆಗಿತ್ತು. ಹಾಗೇನಾದರೂ ಆದರೆ, ಬೈಡನ್ ಅಽಕಾರಕ್ಕೆ ಬಂದ ನಂತರ ಫಕ್ರಿಜಾದೇಹ್ ಕೊಂದರೆ ಇಸ್ರೇಲ್ ಮೇಲೆಯೇ ಬೈಡನ್ ಉರಿದುಬೀಳುವ ಸಾಧ್ಯತೆಯಿತ್ತು.
ದಿನಗಳೆದಂತೆ ಸಮಯ ಮೀರುತ್ತಿತ್ತು. ಇಸ್ರೇಲ್‌ಗೆ ಫಕ್ರಿಜಾದೇಹ್ ಅದೇ ಸಮಯದಲ್ಲಿಯೇ ಸಾಯಲೇ ಬೇಕಿತ್ತು. ಈ ಬಾರಿ ಇಸ್ರೇಲ್ ಈ ಕೆಲಸವನ್ನು ಗಡಿಬಿಡಿ ಯಲ್ಲಾದರೂ ಮಾಡಲೇ ಬೇಕಿತ್ತು. ಅದಕ್ಕೆ ಬಳಸಿಕೊಂಡದ್ದು ಅತ್ಯಂತ ಮುಂದುವರಿದ ತಂತ್ರಜ್ಞಾನವನ್ನು. ಇದು ಎಷ್ಟು ಮುಂದುವರಿದ ತಂತ್ರಜ್ಞಾನ ಎಂದರೆ ಸಾವಿರ ಮೈಲಿ ದೂರದಲ್ಲಿ ಕೂತ ಹಂತಕ ಫಕ್ರಿಜಾದೇಹ್ ಕಾರಿನಿಂದ ಕೆಳಗೆ ಇಳಿದು – ಬಿದ್ದ ನಂತರ ಕೂಡ ಅಷ್ಟೇ ಕರಾರುವಾಕ್ಕಾಗಿ ಬಂದೂಕಿನ ನಿಶಾನೆಯನ್ನು ಬದಲಿಸಿ, ಗುರಿಯಿಟ್ಟು ಕೊಂದದ್ದು.
ಇಲ್ಲಿಯವರೆಗೆ ಫಕ್ರಿಜಾದೇಹ್ ಕೊಂದ ಯಾರೊಬ್ಬರೂ ಬಿಡಿ, ಅದಕ್ಕೆ ಸಹಾಯ ಮಾಡಿದ್ದಾನೆ ಎಂದು ಕೂಡ ಒಬ್ಬನೇ ಒಬ್ಬ ಇರಾನಿನ ಕೈಗೆ ಸಿಕ್ಕಿಲ್ಲ. ಮೋಸಾಡ್ ಈ ರೀತಿ ಅನ್ಯನೆಲದಲ್ಲಿ, ಶತ್ರುರಾಷ್ಟ್ರದಲ್ಲಿ – ಎಲ್ಲರ ಮಧ್ಯೆ ಇರುವ ವ್ಯಕ್ತಿಯನ್ನು ಕೊಲ್ಲುವುದು ಸಾಮಾನ್ಯ ಆದರೆ ಅಸಾಮಾನ್ಯ ಸಾಹಸವೇ ಸರಿ. ಪ್ರತಿಯೊಂದು ಇಂತಹ ದಾಳಿಯೂ ಒಂದೊಂದು ರೋಚಕ, ಹೀಗೂ ಉಂಟೇ ಎಂಬ ಹುಬ್ಬೇರುವ ಕಥೆ. ದಾಳಿ ಅನ್ಯ ನೆಲದಲ್ಲಿ ಮಾಡುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಅಂಥದ್ದೇ ದಾಳಿ ತನ್ನ ನೆಲದಲ್ಲಿ ಶತ್ರುಗಳಿಂದ ಪ್ರತ್ಯುತ್ತರವಾಗಿ ನಡೆಯದಂತೆ ನೋಡಿಕೊಳ್ಳುವುದು.
ಇಸ್ರೇಲ್ ಚಿಕ್ಕ ದೇಶ – ಇರಾನಿನ ಮುಂದೆ ಇರುವೆಯಂತೆ. ಇರಾನಿನ ಜೊತೆ ಇಸ್ರೇಲ್ ಬಾರ್ಡರ್ ಕೂಡ ಹಂಚಿಕೆಯಾಗಿಲ್ಲ. ಇಸ್ರೇಲ್‌ನಿಂದ ಹೊರಟು ಇರಾಕ್ ದಾಟಿದರೆ ಇರಾನ್ ಸಿಗುವುದು. ಎಕಾನಾಮಿಯಲ್ಲೂ ಇರಾನಿಗೆ ಸಮವಲ್ಲದ ದೇಶ ಇಸ್ರೇಲ್. ಆದರೂ, ಗಾಜಾ ಗಲಾಟೆಯ ಮಧ್ಯದಲ್ಲಿ ಕೂಡ ಇರಾನಿಗೆ ಸಡ್ಡು ಹೊಡೆದು ನಿಲ್ಲುವುದಿದೆಯಲ್ಲ ಅದು ಹುಲಿಯ ಜತೆ ಹೊಡೆದಾಟಕ್ಕೆ ನಿಂತಂತೆ. ಇಸ್ರೇಲ್ ಇದೇ ಕಾರಣಕ್ಕೆ ಅಷ್ಟು ಚಿಕ್ಕ ದೇಶವಾದರೂ ಅಷ್ಟು ಬಲಿಷ್ಟವೆನ್ನಿಸಿ ಕೊಳ್ಳುವುದು. ಇಸ್ರೇಲ್ ಚದರದಲ್ಲಿ ದೊಡ್ಡದಿಲ್ಲದಿರಬಹುದು ಆದರೆ ಉಳಿದೆಲ್ಲವೂ ಯಾವುದೇ ಗಟ್ಟಿ ರಾಷ್ಟ್ರಗಳಿಗೆ ಕಡಿಮೆಯಿಲ್ಲ.
ಯಾಕೋ ಇದೆಲ್ಲ ಘಟನೆಗಳು, ಮೋಸಾಡ್‌ನ ಸಾಹಸಗಾಥೆಗಳನ್ನು ಹಿಂಬಾಲಿಸುವಾಗ ನಮ್ಮ ದೇಶದಲ್ಲಿ ಮೋಸಾಡ್ ನಂತಹ ಒಂದು ಬಲಿಷ್ಟ ವ್ಯವಸ್ಥೆಯ
ಕೊರತೆಯಿದೆ ಎಂದೆನಿಸುವುದಿದೆ. ನಮ್ಮಲ್ಲಿ ಟೆಕ್ನೋಲಾಜಿ, ತಲೆ, ವ್ಯವಸ್ಥೆ, ಗಟ್ಟಿ ಸರಕಾರ, ಮೋದಿಯಂತಹ ಜಬರ್ದಸ್ತ್ ಪ್ರಧಾನಿ, ಇಷ್ಟೊಂದು ಪ್ರಮಾಣದ ಜನಸಂಖ್ಯೆ, ನೆಲ, ಜಲ, ಆರ್ಥಿಕತೆ ಎಲ್ಲ ಇದ್ದರೂ ನಾವೇಕೋ ಇಂಥದ್ದರಲ್ಲಿ ಬಹಳ ಹಿಂದೆ ಎಂದೆನಿಸುವುದು ಸಹಜವಲ್ಲವೇ? ಹಾಗೊಮ್ಮೆ ಮೋಸಾಡ್ ಶಕ್ತಿ ನಮ್ಮಲ್ಲಿದ್ದಿದ್ದರೆ ಪಾಕಿಸ್ತಾನದ ಉಗ್ರ ಮುಖಂಡರು, ಮತ್ತು ದಾವೂದ್ ನಂತಹ ಕ್ರಿಮಿನಲ್ ಗಳನ್ನು 72 ಕನ್ಯೆಯರ ಜೊತೆ ಸೇರಿಸಿದ ಪುಣ್ಯ ಈಗಾಗಲೇ
ನಮ್ಮದಾಗಿರುತ್ತಿತ್ತು !!