Friday, 20th September 2024

ಬೌಲರ್ ತಂಗರಸು ನಟರಾಜನ್ ಬದಲಿಗೆ ಉಮ್ರಾನ್ ಮಲಿಕ್ ಸೇರ್ಪಡೆ

ದುಬೈ: ಬೌಲರ್ ತಂಗರಸು ನಟರಾಜನ್ ಅವರಿಗೆ ಕೋವಿಡ್ ಸೋಂಕಿಗೆ ಒಳಗಾಗಿರುವ  ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಅವರ ಬದಲಿಯಾಗಿ ಬದಲಿ ಆಟಗಾರ ನನ್ನು ಸನ್‌ರೈಸರ್ಸ್ ಹೈದರಾ ಬಾದ್ ತಂಡ ಘೋಷಿಸಿದೆ.

ನಟರಾಜನ್ ಗುಣಮುಖರಾಗಿ ತಂಡವನ್ನು ಸೇರುವವರೆಗೆ ಜಮ್ಮು ಕಾಶ್ಮೀರದ ಮಧ್ಯಮ ಗತಿಯ ವೇಗದ ಬೌಲರ್ ಉಮ್ರಾನ್ ಮಲಿಕ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ನಟರಾಜನ್ ಸಂಪೂರ್ಣವಾಗಿ ಗುಣಮುಖರಾದ ಬಳಿಕ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಐಪಿಎಲ್ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರ ಪರ ಟಿ20 ಹಾಗೂ ಲಿಸ್ಟ್ ‘ಎ’ ಕ್ರಿಕೆಟ್ ಆಡಿರುವ ಉಮ್ರಾನ್ ಮಲಿಕ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ.ಈಗಾಗಲೇ ನೆಟ್ ಬೌಲರ್ ಆಗಿ ಸನ್‌ರೈಸರ್ಸ್ ಕ್ಯಾಂಪ್‌ನಲ್ಲಿ ಗುರುತಿಸಿದ್ದಾರೆ.

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಎರಡನೇ ಹಂತದಲ್ಲಿ ಸೆ.22ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಟರಾಜನ್ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಗೊಂಡಿತ್ತು.