ಇನ್ನಷ್ಟು ಗೊಂದಲ ಸೃಷ್ಠಿಸಲು ಬರುತ್ತಿದ್ದಾರಾ ಅರಸೀಕೆರೆ ಎನ್.ಕೊಟ್ರೇಶ್…?
ಹರಪನಹಳ್ಳಿ: ಮಾಜಿ ಶಾಸಕ ದಿವಂಗತ ಎಂ.ಪಿ.ರವೀಂದ್ರ ಅವರ ನಿಧನದ ತರುವಾಯ ಹರಪನಹಳ್ಳಿಯ ಕಾಂಗ್ರೆಸ್ನಲ್ಲಿ ಶುರುವಾದ ಬಣ ರಾಜಕಾರಣದ ಕಿಚ್ಚು ಸದ್ಯ ಹಾರುವ ಯಾವಲಕ್ಷಣಗಳು ಗೋಚರಿಸುತ್ತಿಲ್ಲ. ಇದರಿಂದಾಗಿ ಪಕ್ಷದ ನಿಷ್ಠಾವಂತಕಾರ್ಯಕರ್ತರು, ಮುಖಂಡರು ಇಲ್ಲಿನ ಬಣ ರಾಜಕಾರಣಕ್ಕೆಂದು ಮುಕ್ತಿ ಸಿಗುತ್ತದೆ ಎಂದುಕಾದು ನೋಡುವತಂತ್ರಕ್ಕೆ ಮೊರೆಹೋಗಿದ್ದು, ಇದರ ನಡುವೆ ಪಕ್ಷ ನಿಷ್ಠೆ ಇಲ್ಲದ ಪಕ್ಷಾಂತರಿ ಅರಸೀಕರೆ ಎನ್.ಕೊಟ್ರೇಶ್ ಅವರು ಕಳೆದ ಒಂದೂವರೆ ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೆ ಯಾಗಲು ಇನ್ನಿಲ್ಲದ ಕಸರತ್ತು ನಡೆಸುವ ಮೂಲಕ ಪಕ್ಷದಲ್ಲಿ ಇನ್ನಷ್ಟುಗೊಂದಲ ಸೃಷ್ಟಿಸಲು ಬರುತ್ತಿದ್ದಾರೆ ಎನ್ನುವ ಮಾತುಗಳು ಈಗ ಹರಪನಹಳ್ಳಿ ಕಾಂಗ್ರೆಸ್ ಪಾಳಿಯದಲ್ಲಿ ಕೇಳಿ ಬರುತ್ತಿವೆ.
ಮೂಲ ಕಾಂಗ್ರೆಸ್ಸಿಗರಿಗೆ, ಪಕ್ಷಕಟ್ಟಿ ಬೆಳೆಸಿದವರಿಗೆ ಇರಿಸುಮುರಿಸು :ಪಕ್ಷಕ್ಕೆ ಹೊಡೆತ
ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡದೇ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ಲೆಕ್ಸ್, ಬ್ಯಾನರ್ಗಳ ಮೂಲಕ ಪ್ರತ್ಯಕ್ಷವಾಗುವ ಅರಸೀಕೆರೆ ಎನ್.ಕೊಟ್ರೇಶ್ ಅವರುಪಕ್ಷ ನಿಷ್ಠೆ ಮೆರೆಯದೆ ಬಿಜೆಪಿ, ಕೆಜೆಪಿ, ಬಿಎಸ್ಆರ್, ಬಿಜೆಪಿ, ಜೆಡಿಎಸ್ ಎಂದು ಪಕ್ಷದಿಂದ ಪಕ್ಷಕ್ಕೆ ಹಾರಿ ಪಕ್ಷಾಂತರ ಮಾಡಿ ಈಗ ಏಕಾಏಕಿ ಟಿಕೆಟ್ ಪಡೆದು ಚುನಾ ವಣೆಗೆ ಸ್ಪರ್ಧಿಸುವ ಮಹಾದಾಸೆಯಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು ಇದು ಮೂಲ ಕಾಂಗ್ರೆಸ್ಸಿಗ ರಿಗೆ ಹಾಗೂ ಸುಮಾರು ವರ್ಷಗಳಿಂದ ತಳಪಟ್ಟದಿಂದ ಪಕ್ಷಕಟ್ಟಿ ಬೆಳೆಸಿದವರಿಗೆ ಇರಿಸುಮುರಿಸಿಗೆ ಕಾರಣವಾಗ ಲಿದ್ದು, ಸಹಜವಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬೀಳುತ್ತದೆ ಎನ್ನುವುದು ರಾಜಕೀಯ ಪಂಡಿತರಲೆ ಕ್ಕಾಚಾರ.
ಕೊವೀಡ್ ಸಂಕಷ್ಟದಲ್ಲಿ ಕ್ಷೇತ್ರದತ್ತ ಮುಖ ಮಾಡಿಲ್ಲ.
೨೦೧೮ ರ ಚುನಾವಣೆಯಲ್ಲಿ ಶಾಸಕ ಜಿ.ಕರುಣಾಕರರೆಡ್ಡಿ ಅವರ ಎದುರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಮೂರನೆ ಸ್ಥಾನಕ್ಕೆ ಕುಸಿದ ಬಳಿಕ ಕ್ಷೇತ್ರವನ್ನೇತಿರುಗಿ ನೋಡದ ಅರಸೀಕರೆ ಎನ್.ಕೊಟ್ರೇಶ್ ಅವರು ಕಳೆದ ಎರಡು ವರ್ಷದಿಂದ ವಿಶ್ವದಾದ್ಯಂತ ಕೊವೀಡ್ ಸೊಂಕು ವ್ಯಾಪಿಸಿದ್ದು ತಾಲೂಕಿನಲ್ಲಿಯೂ ಈ ಸೊಂಕಿಗೆ ತುತ್ತಾಗಿಹಲವಾರು ಸಾವು ನೋವುಗಳು ಸಂಭವಿಸಿದ್ದು, ಸೌಜನ್ಯಕ್ಕಾದರೂ ಸಾಂತ್ವಾನ ಹೇಳಲು ಬಾರದ ಹಾಗೂ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರೈತರು, ಬಡಕೂಲಿ ಕಾರ್ಮಿಕರು ಸೇರಿದಂತೆ ಅಂದುತAದು ಅಂದೇ ಉಣ್ಣುವವರಿಗೆ ಒಂದು ಆಹಾರದಕಿಟ್ ನೀಡಲುಧಾವಿಸದ, ಇತ್ತಾ ಮುಖ ತೋರದ ಇವರು ಈಗ ಶಾಸಕರಾಗಬೇಕೆಂಬ ಕನಸುಹೊತ್ತು ಕಾಂಗ್ರೆಸ್ಗೆ ಸೇರ್ಪಡೆಯಾಗಲು ಕಾಂಗ್ರೆಸ್ ನಾಯಕರಮನೆ ಬಾಗಿಲಿಗೆ ಹೋಗುತ್ತಿರುವುದು ತಾಲೂಕಿ ಸಾರ್ವಜನಿಕರು ಅಲ್ಲೊಂದರಲ್ಲಿ ಚರ್ಚಿಸುತ್ತಿದ್ದಾರೆ.
ಚಂದ್ರಶೇಖರ್ ಭಟ್ಟಿಕೆಟ್ಆಕಾಂಕ್ಷಿ.
ಪಕ್ಷ ಸಂಘಟನೆಗೆ, ಹಾಗೂ ಕೊವೀಡ್ ಸಂದರ್ಭದಲ್ಲಿ ಮನೆಯಿಂದ ಹೊರಬಾರದ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಚಂದ್ರಶೇಖರ್ಭಟ್ ಅವರೂ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದು, ರಾಜಕಾರಣದಲ್ಲಿ ಎಲ್ಲವೂ ಸಾಧ್ಯ ಎಂದು ಕ್ಷೇತ್ರದ ಜನರು ಮಾತನಾಡುತ್ತಿದ್ದಾರೆ. ಕ್ಷೇತ್ರದ ಜನಸಾಮಾನ್ಯರ ಮನಸ್ಸಿನಲ್ಲಿ ಉಳಿದವರು. ಕೆಪಿಸಿಸಿ ಮಹಿಳಾ ಘಟಕದ ರಾಜ್ಯಪ್ರಧಾನಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನಯ್ಯ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ.ವೀಣಾ ಮಹಾಂತೇಶ್ ಚರAತಿಮಠ, ಜಿಲ್ಲಾಟಾಸ್ಕ್ ಫೋರ್ಸ್ ಸಮಿತಿಸದಸ್ಯ ಶಶಿಧರ್ ಪೂಜಾರ್, ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪರಶುರಾಮಪ್ಪ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕಂಚಿಕೇರಿ ಎಂ.ಟಿ.ಸುಭಾಷ್ಚAದ್ರ, ಉಚ್ಚಂಗಿದುರ್ಗಾದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಂ.ಟಿ.ಬಸವನಗೌಡ ರವರ ಪುತ್ರ ಯಶವಂತಗೌಡ, ಕೆಪಿಸಿಸಿ ಒಬಿಸಿ ಘಟಕದ ಉಪಾಧ್ಯಕ್ಷ ಶಂಕ್ರನಹಳ್ಳಿ ಡಾ.ಉಮೇಶ್ ಬಾಬು ಅವರು ಕೊವೀಡ್ ಸಂದರ್ಭದಲ್ಲಿ ಮಳೆ, ಚಳಿ, ಬಿಸಿಲೆನ್ನದೆ ಹಗಲಿರುಳು ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ, ಬಡ ಕೂಲಿ ಕಾರ್ಮಿಕರಿಗೆ ಸಹಾಯಹಸ್ತ ಚಾಚಿ ನೊಂದವರಿಗೆ ಸಾಂತ್ವಾನ ಹೇಳಿ ತಮ್ಮಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದು, ಇತ್ತೀಚೆಗೆ ನಿಧನರಾದ ಎಂ.ಟಿ.ಬಸವನ ಗೌಡ ಅವರ ಪುತ್ರ ಎಂ.ಬಿ.ಯಶವAತಗೌಡ ಅವರೂಕೂಡ ಈಗ ಪಕ್ಷ ಸಂಘಟನೆಯಲ್ಲಿತೊಡಗುವ ಮೂಲಕ ಕ್ಷೇತ್ರದಜನ ಸಾಮಾನ್ಯರ ಮನಸ್ಸಿನಲ್ಲಿ ಉಳಿದಿ ದ್ದಾರೆ ಎನ್ನುವ ಮಾತುಗಳು ಈಗ ಸಾರ್ವಜನಿಕ ವಲಯದಲ್ಲಿದಟ್ಟವಾಗಿದ್ದು, ಈ ಬಾರಿ ಸ್ಥಳೀಯರು ಶಾಸಕರಾಗಬೇಕೆನ್ನುವ ಕೂಗು ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇವರ ಪೈಕಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗುತ್ತದೆಯೋ ಕಾದು ನೋಡಬೇಕಿದೆ.
ತಾಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕತರು ಕಾಂಗ್ರೆಸ್ ಪಕ್ಷದಿಂದ ಯಾರಿಗೇ ಬಿ.ಪಾಂ. ಸಿಗುತ್ತದೆ ಅವರಿಗೆ ಶಾಸಕರನ್ನಾಗಿ ಮಾಡುತ್ತೇವೆ ಎಂದು ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ಚರ್ಚಿಸುತ್ತಿದ್ದಾರೆ. ಕಾಂಗ್ರೆಸ್ ಬಣಗಳಿಂದ ಮತ್ತದೆ ಹರಪನಹಳ್ಳಿ ತಾಲೂಕಿನಲ್ಲಿ ಬಿಜೆಪಿ ಶಾಸಕರಾಗುತ್ತರೆ ಕಾಂಗ್ರೆಸ್ನಲ್ಲಿ ಹೊಂದಾ ಣಿಕೆಯಿAದ ಒಂದೇ ವೇಧಿಕೆ ಮಾಡದೇ ಹೋದರೆ ಇಬ್ಬರ ನ್ಯಾಯಾ ಮೂವರನೇಯವನಿಗೆ ಲಾಭಾ ಎನ್ನುವ ಹಾಗೇ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಯಾರು ಕ್ಷೇತ್ರವನ್ನು ಮುನ್ನಡೆಸಲಿದ್ದಾರೆ. ಕಾದು ನೋಡುವತಂತ್ರಕ್ಕೆ ತಾಲೂಕಿನ ಮತದಾರರು ಕಾಯುತ್ತಿದ್ದಾರೆ.