Saturday, 21st September 2024

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ’ಮತಾಂತರ’ ಕ್ರಿಶ್ಚಿಯನ್‌ ಮಶಿನರಿಗಳೇ ?

ವೀಕೆಂಡ್ ವಿಥ್ ಮೋಹನ್

ಮೋಹನ್ ವಿಶ್ವ

camohanbn@gmail.com

ಕರ್ನಾಟಕ ‘ವಿಧಾನಸಭೆ’ಯಲ್ಲಿ ಇತ್ತೀಚಿಗೆ ಕ್ರಿಶ್ಚಿಯನ್ ಮಿಶನರಿಗಳ ಮತಾಂತರದ ಬಗ್ಗೆ ಬಹುದೊಡ್ಡ ಚರ್ಚೆಯೊಂದಾಯಿತು, ಹೊಸದುರ್ಗದ ಬಿ.ಜೆ.ಪಿ ಶಾಸಕ ರಾದಂತಹ ‘ಗೂಳಿಹಟ್ಟಿಶೇಖರ್’ ತಮ್ಮ ಕ್ಷೇತ್ರದಲ್ಲಾಗುತ್ತಿರುವ ಮತಾಂತರದ ವಿಚಾರವನ್ನುಎಳೆ ಎಳೆಯಾಗಿ ಬಿಚ್ಚಿಟ್ಟರು.

ಅವರ ಗ್ರಹಚಾರ ನೋಡಿ, ತಮ್ಮ ಸ್ವಂತ ತಾಯಿಯನ್ನೇ ಕ್ರಿಶ್ಚಿಯನ್ ಮಿಶನರಿಗಳು ಮತಾಂತರ ಮಾಡಿರುವ ಆಘಾತಕಾರಿ ವಿಷಯವನ್ನುತಿಳಿಸಿದರು. ಆಡಳಿತ
ಸರಕಾರದ ಶಾಸಕರಾಗಿದ್ದರೂ ಸಹ ಕ್ರಿಶ್ಚಿಯನ್ ಮತಾಂತರಿಗಳ ಕುತಂತ್ರಕ್ಕೆ ತನ್ನ ತಾಯಿಯು ಮತಾಂತರವಾಗಿರುವಾಗ ಏನೂ ಮಾಡಲಾಗದ ಅಸಹಾಯ ಕತೆ ಅವರಲ್ಲಿ ಎದ್ದು ಕಾಣುತ್ತಿತ್ತು. ಆಡಳಿತ ಪಕ್ಷದ ಶಾಸಕರ ತಾಯಿಯನ್ನೇ ಮತಾಂತರ ಮಾಡುವ ಭಂಡ ಧೈರ್ಯ ಕ್ರಿಶ್ಚಿಯನ್ ಮಿಶನರಿಗಳಿಗೆ ಬಂದಿರುವುದು ಆಘಾತಕಾರಿ ಬೆಳವಣಿಗೆ.

ಮತಾಂತರದ ಪಿಡುಗು ನಿನ್ನೆ ಮೊನ್ನೆಯದಲ್ಲ, ಬ್ರಿಟಿಷರು ಭಾರತಕ್ಕೆ ಕಾಲಿಟ್ಟ ದಿನದಿಂದಲೂ ನಡೆಯುತ್ತಾ ಬಂದಿದೆ. ಹಿಂದೂ ಧರ್ಮದಲ್ಲಿದ್ದಂತಹ ಅಸ್ಪೃಶ್ಯತೆ ಯನ್ನು ಬಳಸಿಕೊಂಡು ಮೇಲ್ಜಾತಿ ಹಾಗೂ ಕೆಳಜಾತಿಯ ನಡುವೆ ದೊಡ್ಡ ಕಂದಕವನ್ನು ಸೃಷ್ಟಿಸುವಲ್ಲಿ ಬ್ರಿಟಿಷರು ಸಫಲರಾಗಿದ್ದಾರೆ. ಹತ್ತೊಂಬತ್ತನೆಯ ಶತಮಾನ ದಲ್ಲಿ ಮೊಟ್ಟಮೊದಲ ಬಾರಿಗೆ ಜನಗಣತಿಯನ್ನು ನಡೆಸುವ ಮೂಲಕ ಸಮಾಜದ ಉನ್ನತ ಸ್ತರದ ಜನರು ಕೆಳಸ್ತರದ ಜನರ ಶೋಷಣೆಗಾಗಿಯೇ ಹುಟ್ಟಿರುವ ರೀತಿಯಲ್ಲಿ ಬಿಂಬಿಸಿದರು. ಹಿಂದೂ ಸಮಾಜದಲ್ಲಿನ ಅಸ್ಪೃಶ್ಯತೆಯಲ್ಲಿ ನೊಂದ ದಲಿತರನ್ನು ಟಾರ್ಗೆಟ್ ಮಾಡಿದಂತಹ ಬ್ರಿಟಿಷ್ ಮಿಶನರಿಗಳು ಇಲ್ಲಸಲ್ಲದ ಆಮಿಷ ಗಳನ್ನು ಒಡ್ಡಿ ದೇಶದಾದ್ಯಂತ ತಮ್ಮ ಮತಾಂತರವನ್ನುಹಳ್ಳಿಹಳ್ಳಿಗಳಿಗೆ ಪಸರಿಸಿದರು, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಯಿಂದ ಮಿಲಿಯನ್ ಗಟ್ಟಲೆ ಹಣವು ಚರ್ಚ್‌ಗಳಿಗೆ ದಾನದ ರೂಪದಲ್ಲಿ ಬರಲಾರಂಭಿಸಿತ್ತು.

ಸ್ವತಃ ಬ್ರಿಟನ್‌ನ ರಾಣಿಯೇ ಮತಾಂತರವನ್ನು ಪೋಷಿಸುತ್ತಿರುವ ವಿಷಯ ಅಂದಿನ ಕಾಲಘಟ್ಟದಲ್ಲಿ ಎಲ್ಲರಿಗೂ ತಿಳಿದಿತ್ತು. ಬಂಗಾಳದಲ್ಲಿ ಬಡವರ ಸೇವೆಗೆಂದು ಬಂದಂತಹ ‘ಮದರ್‌ತೆರೇಸಾ’ ಮಾಡಿದ ಮತಾಂತರದ ಇತಿಹಾಸವನ್ನು ನಾವ್ಯಾರು ಸಹ ಶಾಲೆಗಳಲ್ಲಿ ಓದಲೇ ಇಲ್ಲ, ಆಕೆಯು ಬಡವರ ಸೇವೆಗೆಂದು ಸ್ವರ್ಗ ದಿಂದ ಬಂದಂತಹ ದೇವತೆಯೆಂದೇ ಬಿಂಬಿಸಲಾಗಿತ್ತು. ಕೆಳಸ್ತರದ ಜನರ ಸೇವೆಯ ಹೆಸರಿನಲ್ಲಿ ‘ಮದರ್ ತೆರೇಸಾ’ ನಡೆಸಿದಂತಹ ಮತಾಂತರವನ್ನು ಮೆಚ್ಚಿಯೇ ಬಹುಶಃ ‘ನೊಬೆಲ್’ ಪ್ರಶಸ್ತಿಯನ್ನು ನೀಡಿರಬಹುದು!, ಆದರೆ ಸೇವೆಯ ಹೆಸರಿನಲ್ಲಿ ಆಕೆ ನಡೆಸಿದಂತಹ ಮತಾಂತರವನ್ನು ಯಾವ ಪಠ್ಯದಲ್ಲಿಯೂ ಹೇಳಲಿಲ್ಲ.

ಹಿಂದೂ ಧರ್ಮದಲ್ಲಿ ಹೆಚ್ಚಿನ ಅಸ್ಪೃಶ್ಯತೆಯನ್ನು ಅನುಭವಿಸಿದಂತಹ ‘ಅಂಬೇಡ್ಕರ್’ ತಮ್ಮ ಜೀವನದ ಕೊನೆಯ ದಿನಗಳಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ವಾಗಲಿಲ್ಲ, ಅಂಬೇಡ್ಕರರಿಗೆ ತಾನು ಅಂದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದರೆ ಭವಿಷ್ಯದಲ್ಲಿ ಮತಾಂತರಿಗಳು ದೇಶದಲ್ಲಿನ ಬಹುತೇಕ ದಲಿತರನ್ನು
ಮತಾಂತರಗೊಳಿಸುತ್ತಾರೆಂಬ ಭಯಾನಕತೆಯ ಅರಿವಿತ್ತು. ಅಷ್ಟು ಹೊತ್ತಿಗಾಗಲೇ ‘ಈಸ್ಟ್ ಇಂಡಿಯಕಂಪನಿ’ಯು ಭಾರತವನ್ನು ಸುಮಾರು 250 ವರ್ಷಗಳ ಕಾಲ ಹಾಳುಗೆಡವಿತ್ತು, ತಾವು ಮತಾಂತರಗೊಂಡರೆ ಭಾರತವು ಮುಂದೊಂದು ದಿನ ಮತ್ತೊಂದು ‘ಬ್ರಿಟಿಷ್ ಕಾಲೋನಿ’ ಯಾಗುತ್ತದೆಯೆಂಬ ಸ್ಪಷ್ಟತೆ ಅಂಬೇಡ್ಕರರಿಗಿತ್ತು.

ಇಂದು ಅಂಬೇಡ್ಕರ ಹೆಸರಿನಲ್ಲಿ ಹೋರಾಟ ಮಾಡುವ ದಲಿತಪರ ಸಂಘಟನೆಗಳು ನಿಜವಾದ ಅಂಬೇಡ್ಕರ್ ಅನುಯಾಯಿಗಳಾದರೆ ಕ್ರಿಶ್ಚಿಯನ್ ಮಿಶನರಿಗಳು ದಲಿತರನ್ನು ಆಮಿಷಗಳನ್ನೊಡ್ಡಿ ನಡೆಸುತ್ತಿರುವ ಮತಾಂತರದ ವಿರುದ್ಧ ಧ್ವನಿ ಎತ್ತಿ ಪ್ರತಿಭಟಿಸಬೇಕಿದೆ, ಆದರೆ ಅವರ್ಯಾರು ಸಹ ಮತಾಂತರದ ವಿರುದ್ಧಧ್ವನಿ ಎತ್ತುತ್ತಿಲ್ಲ. ‘ಬೇಲಿಯೇ ಎದ್ದು ಹೊಲ ಮೇದಂತೆ’ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ‘ಡಿ.ಕೆ.ಶಿವಕುಮಾರ್’ ಕನಕಪುರದಲ್ಲಿರುವ ಮುನೇಶ್ವರ ಬೆಟ್ಟವನ್ನುಯೇಸು ಬೆಟ್ಟ ಮಾಡಲು ಹೊರಟಿರಲಿಲ್ಲವೇ? ಜಯನಗರದ ಶಾಸಕಿ ‘ಸೌಮ್ಯರೆಡ್ಡಿ’ ಜಾತ್ಯತೀತತೆಯ ಹೆಸರಿನಲ್ಲಿ ‘ಆಯುಧ ಪೂಜೆ’ ಯಂದು ಗಣಪತಿಯ ಫೋಟೋನಲ್ಲಿ ‘ಏಸುಕ್ರಿಸ್ತನ’ ಫೋಟೋವಿಟ್ಟು ಪೂಜೆಮಾಡಿರಲಿಲ್ಲವೇ? ‘ಕ್ರಿಸ್‌ಮಸ್’ ಸಮಯದಲ್ಲಿ  ಏಸುಕ್ರಿಸ್ತನ ಫೋಟೋ ಪಕ್ಕದಲ್ಲಿ ‘ಗಣಪತಿ’ಯ ಫೋಟೋವನ್ನಿಟ್ಟು ಪೂಜೆ ಮಾಡುವ ಧೈರ್ಯ ಈಕೆಗಿಲ್ಲ, ಆಯುಧ ಪೂಜೆಯಂದು ನೆನಪಾಗುವ ‘ಜಾತ್ಯತೀತತೆ’ ಕ್ರಿಸ್ ಮಸ್ ಹಬ್ಬದಲ್ಲಿ ನೆನಪಾಗುವುದಿಲ್ಲ.

ಪ್ರಶ್ನೆ ಮಾಡಿದರೆ ‘ಕೋಮುವಾದ’ವೆಂಬ ಸುಳ್ಳು ಬಣ್ಣವನ್ನು ಕಟ್ಟಿ ರಾಜಕೀಯ ಮಾಡುತ್ತಾರೆ. ಕಾಂಗ್ರೆಸ್ಸಿನ ಜನಪ್ರತಿನಿಧಿಗಳೇ ಬಹಿರಂಗವಾಗಿ ‘ಜಾತ್ಯತೀತ ತೆಯ’ ಹೆಸರಿನಲ್ಲಿ ಮತಾಂತರಿಗಳಿಗೆ ಬೆಂಬಲಿಸಿದರೆ ಮತಾಂತರಿಗಳಿಗೆ ಆನೆಬಲ ಬಂದಂತಾಗುತ್ತದೆ. ತಮ್ಮ ಅಧಿನಾಯಕಿ ‘ಅಂಟೋನಿಯೋ ಮೈನೋ’ ರನ್ನುಖುಷಿಪಡಿಸಲು ಕರ್ನಾಟಕದ ಕಾಂಗ್ರೆಸ್ ಶಾಸಕರು ಹಿಂದೂ ಧರ್ಮಕ್ಕೆ ಚ್ಯುತಿ ತರುವಂತಹ ಕೆಲಸವನ್ನು ಆಗಾಗ ಮಾಡುತ್ತಿರುತ್ತಾರೆ. ಜಗತ್ತಿನಲ್ಲಿರುವ ರೋಗಗಳಿಗೆಲ್ಲ ಪರಿಹಾರ ನೀಡುವ ಮತಾಂತರಿಗಳು, ತಮ್ಮ ಕೇಂದ್ರ ಕಚೇರಿಯಾದ ಇಟಲಿಯ ‘ವ್ಯಾಟಿಕನ್‌ಸಿಟಿ’ಯಲ್ಲಿ ಕಳೆದ ವರ್ಷ ಕರೋನ ಸಮಯದಲ್ಲಿ ೮೦ರ ಹರೆಯದ ವೃದ್ಧ ಕ್ರಿಶ್ಚಿಯನ್ ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದರು.

ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಇದ್ದರೂ ಸಹ ‘ಮಾನವೀಯತೆ’ ಎಂಬುದು ಇನ್ನೂ ಸತ್ತಿಲ್ಲ. ವಯಸ್ಸು ಹಾಗೂ ಧರ್ಮವನ್ನು ಮೀರಿ ಚಿಕಿತ್ಸೆ ನೀಡುವಂತಹ
ಧರ್ಮ ನಮ್ಮದು. ತಮ್ಮದೇ ನೆಲದಲ್ಲಿ ವೃದ್ಧರಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಮಿಶನರಿಗಳು ಯೇಸು ಕ್ರಿಸ್ತನ ಹೆಸರಿನಲ್ಲಿ ಇತರ ದೇಶಗಳಲ್ಲಿ ಹೇಗೆ ತಾನೇ ಚಿಕಿತ್ಸೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸುತ್ತಾರೆ? ಕ್ರಿಶ್ಚಿಯನ್ ಮಿಶನರಿಗಳು ಹೆಚ್ಚಾಗಿ ಆಸ್ಪತ್ರೆಯಲ್ಲಿನ ರೋಗಿಗಳು, ದುರ್ಬಲ ಮನಸ್ಕರು, ವಯಸ್ಸಾ ದಂತಹ ವೃದ್ದರು, ಜೈಲಿನಲ್ಲಿರುವ ಕೈದಿಗಳನ್ನುಟಾರ್ಗೆಟ್ ಮಾಡುತ್ತಾರೆ.

1899ರಲ್ಲಿ ‘ಗಿಡಿಯೋನ್ಸ್ ಇಂಟರ್ನ್ಯಾಷನಲ್’ ಎಂಬ ಸಂಸ್ಥೆಯೊಂದನ್ನು ಕ್ರಿಶ್ಚಿಯನ್ ಯುವಕರ ತಂಡ ಹುಟ್ಟು ಹಾಕುತ್ತದೆ. ಈ ತಂಡದ ಪ್ರಮುಖ ಉದ್ದೇಶ
‘ಬೈಬಲ್’ ಮೂಲಕ ಯೇಸುಕ್ರಿಸ್ತನ ಸಂದೇಶಗಳನ್ನುಜನರಿಗೆ ಸಾರುವುದು. ಈ ತಂಡವು 1908ರಲ್ಲಿ ಮೊಟ್ಟ ಮೊದಲ ಬಾರಿಗೆ ‘ಹೋಟೆಲ್’ ಕೊಠಡಿಗಳಲ್ಲಿ ‘ಬೈಬಲ್’ ಇಡಲು ಶುರು ಮಾಡಿತು, ನಂತರ ಶಾಲಾ ಕ್ರೀಡಾಂಗಣಗಳು, ಆಸ್ಪತ್ರೆಗಳು, ಜೈಲುಗಳಲ್ಲಿ ಬೈಬಲ್ ನೀಡುವ ಕಾರ್ಯ ಮಾಡಿತು. ‘ಆಸ್ಪತ್ರೆ’ಯಲ್ಲಿರುವ ರೋಗಿಗಳು ಮೊದಲೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುತ್ತಾರೆ ಅಂತಹವರನ್ನು ಟಾರ್ಗೆಟ್ ಮಾಡಿದರೆ ಮತಾಂತರ ಮಾಡುವುದು ಸುಲಭ, ಜೈಲಿನಲ್ಲಿರುವ ಕೈದಿಗಳೂ ಅಷ್ಟೇ ಮಾನಸಿಕವಾಗಿ ಬಳಲುತ್ತಿರುತ್ತಾರೆ ಮತಾಂತರ ಮಾಡುವುದು ಸುಲಭ, ಸಮಾಜದಲ್ಲಿ ತೊಂದರೆಗೊಳಗಾದವರನ್ನು ಮತಾಂತರದ ಬಲೆ ಯಲ್ಲಿ ಸಿಲುಕಿಸುವುದು ಇವರ ಉದ್ದೇಶ.

‘ಗಿಡಿಯೋನ್ಸ್ ಇಂಟರ್ನ್ಯಾಷನಲ್’ ಇದುವರೆಗೂ ಜಗತ್ತಿನಾದ್ಯಂತ ಸುಮಾರು 200 ಕೋಟಿ ಬೈಬಲ್‌ಗಳನ್ನು ಹೋಟೆಲುಗಳಲ್ಲಿ, ಶಾಲೆಗಳಲ್ಲಿ, ಆಸ್ಪತ್ರೆಗಳಲ್ಲಿ ಹಾಗೂ ಜೈಲಿನಲ್ಲಿ ಇಟ್ಟಿದೆ. ನಾನೇ ಸ್ವತಃ ‘ಜೈಪುರ’ದ ಹೋಟೆಲಿನಲ್ಲಿ ಉಳಿದು ಕೊಂಡಿದ್ದಾಗ ನನ್ನರೂಮಿನ ಕಪಾಟಿನಲ್ಲೇ ‘ಗಿಡಿಯೋನ್ಸ್ ಬೈಬಲ್’ ಇತ್ತು. ವರ್ಷಕ್ಕೆ ಸುಮಾರು 7 ಕೋಟಿ ‘ಬೈಬಲ್’ಗಳನ್ನು ಈ ಸಂಸ್ಥೆಯು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸುತ್ತದೆ, ಸೆಕೆಂಡಿಗೆ ಎರಡು ‘ಬೈಬಲ್’ ಜಗತ್ತಿನಾದ್ಯಂತ ಈ ಸಂಸ್ಥೆಯು ನಿಯೋಜಿಸುತ್ತದೆ. ಮೊದಲ 100 ಕೋಟಿ ಬೈಬಲ್‌ಗಳನ್ನುನಿಯೋಜಿಸಲು 100 ವರ್ಷ ತೆಗೆದುಕೊಂಡಂತಹ ಈ ಸಂಸ್ಥೆಯು ಬಾಕಿ 100 ಕೋಟಿ ಯನ್ನು ಕೇವಲ 10 ವರ್ಷಗಳಲ್ಲಿ ಜಗತ್ತಿನಾದ್ಯಂತ ನಿಯೋಜಿಸಿದೆ, ಕ್ರಿಶ್ಚಿಯನ್ ಮಿಶನರಿಗಳು ಯಾವ ವೇಗದಲ್ಲಿ ತಮ್ಮ ಕೆಲಸವನ್ನುಹೆಚ್ಚಿಸಿದ್ದಾರೆಂದು ನೀವೇ ಯೋಚಿಸಿ.

ಕಾನೂನಿನಲ್ಲಿ ’UNDUE INFLUENCE’ ಎಂಬ ಪದವಿದೆ, ನೇರವಾಗಿ ಮತಾಂತರ ಮಾಡದೇ ಹೋದರೂ ಸಹ ಪರೋಕ್ಷವಾಗಿ ‘ಅನಗತ್ಯ ಪ್ರಭಾವ’ ಬೀರುವ ಆಮಿಷಗಳನ್ನು ನೀಡುವುದು ಅಥವಾ ಪ್ರಭಾವ ಬೀರುವ ಕೆಲಸಗಳನ್ನುಮಾಡುವ ಮೂಲಕ ಮತಾಂತರ ಮಾಡಿದರೆ ತಪ್ಪಾಗುತ್ತದೆ. ಸದನದಲ್ಲಿ ಮತಾಂತರದ ಚರ್ಚೆಯ ದಿನದ ಸಂಜೆಯೇ ಬೆಂಗಳೂರಿನ ಚರ್ಚುಗಳ ‘ಪಾದ್ರಿ’ಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮತಾಂತರ ನಿಷೇಧ ಕಾನೂನನ್ನು ಜಾರಿಗೆ ಗೊಳಿಸಬಾರದೆಂಬ ಮನವಿಯನ್ನು ಸಲ್ಲಿಸಿದ್ದಾರೆ.

ಪಾದ್ರಿಗಳು ಬಲವಂತವಾಗಿ ಮತಾಂತರ ಮಾಡುತ್ತಿಲ್ಲವೆಂದರೆ ಕಾಯಿದೆಯ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಪಾದ್ರಿಗಳು ಆತುರಾತುರದಲ್ಲಿ ಮುಖ್ಯಮಂತ್ರಿ ಗಳನ್ನು ಭೇಟಿಯಾಗಿರುವುದನ್ನು ಕಂಡರೆ ಎಲ್ಲವೂ ಸರಿಯಿಲ್ಲವೆಂಬ ವಿಷಯ ಸ್ಪಷ್ಟವಾಗುತ್ತದೆ. ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲೂ ಕೆಳಸ್ತರದ ಜನರನ್ನೂ ಮೀರಿ ಮತಾಂತರದ ಪಿಡುಗು ಹಬ್ಬಿದೆ. ಹಲವು ಜಿಲ್ಲೆಗಳಲ್ಲಿ ಒಕ್ಕಲಿಗರು, ಲಿಂಗಾಯತರು, ಕುರುಬರೂ ಸಹ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡುವ ಮತಾಂತರಿಗಳು ನಿಧಾನವಾಗಿ ‘ಮತಾಂತರದ ವಿಷಬೀಜ’ವನ್ನು ಬಿತ್ತುತ್ತಾರೆ.

ದಲಿತರ ಪರವೆಂದು ದಶಕಗಳಿಂದ ರಾಜಕೀಯ ಮಾಡಿಕೊಂಡು ಬರುತ್ತಿರುವ ಕಾಂಗ್ರೆಸ್ ಸರ್ಕಾರ, ದಲಿತರ ಸಮಸ್ಯೆಗಳನ್ನು ನಿವಾರಿಸಿದ್ದರೆ ಇಂದು ಈ ಮಟ್ಟದ ಮತಾಂತರ ಯಾಕಾಗುತ್ತಿತ್ತು? ಹಾಗಾದರೆ ದಲಿತರ ಹೆಸರಿನಲ್ಲಿ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ಜಾರಿಗೆ ತಂದಂತಹ ಯೋಜನೆಗಳು, ದಲಿತರನ್ನು ಮುಖ್ಯವಾಹಿನಿಗೆ ತರುವಲ್ಲಿ ವಿಫಲವಾಯಿತಲ್ಲವೇ ? ಕ್ರಿಶ್ಚಿಯನ್ ಮಿಶನರಿಗಳ ಅಟ್ಟಹಾಸಕ್ಕೆ ಅತಿ ಹೆಚ್ಚು ಬಲಿಯಾದಂತಹ ರಾಜ್ಯ ‘ತಮಿಳುನಾಡು’, ಭಾರತದಲ್ಲಿ
ಅತ್ಯಂತ ಹೆಚ್ಚಿನ ದೇವಸ್ಥಾನಗಳಿರುವುದು ತಮಿಳುನಾಡಿನಲ್ಲಿ, ಆದರೆ ದೇವರನ್ನೇ ನಂಬದ ದ್ರಾವಿಡ ಚಳವಳಿಯೊಂದು ಆಳವಾಗಿ ತಮಿಳುನಾಡಿನಲ್ಲಿ ನಡೆದು ಹೋಯಿತು.

ಸುಳ್ಳು ದ್ರಾವಿಡ ಸಿದ್ಧಾಂತವನ್ನು ಪ್ರತಿಪಾದಿಸುವ ಮೂಲಕ ಹಿಂದೂ ಧರ್ಮವನ್ನುತಮಿಳುನಾಡಿನಲ್ಲಿ ನಿಧಾನವಾಗಿ ತೆರೆಮರೆಗೆ ಸರಿಸಲಾಯಿತು. ಉತ್ತರ ಭಾರತೀಯರು ಆರ್ಯರು ಹಾಗೂ ದಕ್ಷಿಣ ಭಾರತದವರು ದ್ರಾವಿಡರೆಂಬ ವಿಭಜನೆ ಮಾಡಿದ ಬ್ರಿಟಿಷರು, ಕ್ರಿಶ್ಚಿಯನ್ ಮಿಶನರಿಗಳ ಮೂಲಕ ತಮಿಳುನಾಡಿನಲ್ಲಿ ತಮ್ಮ ಧರ್ಮ ಪ್ರಚಾರ ಮಾಡಿದರು. ಹಿಂದೂ ಧರ್ಮದ ಮೂಲವೇ ಕ್ರಿಶ್ಚಿಯನ್ ಧರ್ಮವೆಂಬ ಸಳ್ಳನ್ನು ತಮಿಳುನಾಡಿನ ಜನರ ತಲೆಯಲ್ಲಿ ತುಂಬಿದರು,
ಯೇಸು ಕ್ರಿಸ್ತನು ಭಗವಾನ್ ‘ಕೃಷ್ಣ’ನ ಅವತಾರದವನೆಂಬ ಸುಳ್ಳನ್ನು ಹೇಳಿದರು, ನಾಲ್ಕು ವೇದಗಳ ಮೂಲ ತಮ್ಮಧರ್ಮಗ್ರಂಥವೆಂದು ಸುಳ್ಳು ಹೇಳಿದ್ದರು,
ಹಿಂದೂಧರ್ಮದ ಹಬ್ಬಗಳ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನುಅಲ್ಲಿನ ಜನರ ತಲೆಯಲ್ಲಿ ತುಂಬಿದರು.

ತಮ್ಮ ಕ್ರಿಶ್ಚಿಯನ್ ಮತಾಂತರದ ಮೂಲಕ ಭಾರತವನ್ನು ವಿಭಜಿಸಿದ ಕೀರ್ತಿ ಮಿಶನರಿಗಳಿಗೆ ಸಲ್ಲುತ್ತದೆ, ಇವರು ಬೀಸಿದ ಮತಾಂತರವೆಂಬ ಬಲೆಯಲ್ಲಿ ಬಿದ್ದಂತಹ ಹಲವರು ಇಂದಿಗೂ ಅವರು ಹೇಳಿದ್ದ ಸುಳ್ಳುಗಳನ್ನೇ ಸತ್ಯವೆಂದು ನಂಬುತ್ತಾರೆ. ತಮಿಳು ನಾಡಿನ ದೇವಸ್ಥಾನದಿಂದ ಬರುವ ಆದಾಯ ಅಲ್ಲಿನ ಸರಕಾರಕ್ಕೆ ಸಲ್ಲಬೇಕಂತೆ, ಆದರೆ ದೇವರನ್ನೇ ನಂಬದ ದ್ರಾವಿಡ ಚಳವಳಿಯಡಿ ಯಲ್ಲಿ ಹುಟ್ಟಿಕೊಂಡಂತಹ ಪಕ್ಷಗಳು ಅಲ್ಲಿ ಆಡಳಿತ ನಡೆಸುತ್ತಿವೆ. ಸಾವಿರಾರು ವರ್ಷಗಳ ಇತಿಹಾಸವಿರುವ ತಮಿಳುನಾಡಿನ ದೇವಸ್ಥಾನಗಳ ವಾಸ್ತುಶಿಲ್ಪ ದಕ್ಷಿಣ ಭಾರತದಲ್ಲಿ ಬಹು ದೊಡ್ಡ ಛಾಪನ್ನು ಮೂಡಿಸಿದೆ.

ಸದ್ಗುರು ‘ಜಗ್ಗಿವಾಸುದೇವ್’ರ ಶ್ರಮದ ಫಲವಾಗಿ ತಮಿಳುನಾಡಿನಲ್ಲಿ ಹಳೆಯ ದೇವಸ್ಥಾನಗಳ ಪುನರುಜ್ಜೀವನ ಕಾರ್ಯ ಈಗ ಪ್ರಾರಂಭವಾಗಿದೆ. ಕ್ರಿಶ್ಚಿಯನ್ ಮಿಶನರಿಗಳ ಉಪಟಳಕ್ಕೆ ಮತಾಂತರಗೊಂಡಿರುವ ಹಿಂದುಳಿದ ಜಾತಿಗಳು ತಮ್ಮ ಜಾತಿಯ ಪಕ್ಕದಲ್ಲಿ ‘ಕ್ರಿಶ್ಚಿಯನ್’ ಪದವನ್ನು ಎಲ್ಲೆಡೆಯೂ ಸೇರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ‘ಬಲಜಿಗ’ ಸಮುದಾಯದವರು ತಮ್ಮ ಲೇಖನ ಸಾಮಗ್ರಿಗಳಲ್ಲಿ ‘ಕರ್ನಾಟಕ ಕ್ರೈಸ್ತ ಬಲಜಿಗ ಸಮಿತಿ’ ಎಂದು ಮುದ್ರಿಸಿರುತ್ತಾರೆ, ವಿಜಯಪುರ ಜಿಲ್ಲೆಯ ಹಲವು ತಾಂಡಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿವೆ, ಬಂಜಾರ ಜನಾಂಗದವರನ್ನುಒಳಗೊಳಗೇ ಒಡೆದು ಆಮಿಷಗಳನ್ನು ಒಡ್ಡಿ ಕ್ರಿಶ್ಚಿಯನ್ ಮಿಶನರಿಗಳು ಮತಾಂತರವನ್ನು ಎಗ್ಗಿಲ್ಲದೆ ಮಾಡುತ್ತಿದ್ದಾರೆ. ಕ್ಷಣ ಮಾತ್ರದ ಕಷ್ಟಕ್ಕೆ ಸಿಗುವ ಆಮಿಷಗಳಿಗೆ ಬಲಿಯಾಗುವ ಬಡವರಿಗೆ ತಾವು
ಮತಾಂತರಗೊಂಡ ನಾಲ್ಕೈದು ವರ್ಷಗಳ ನಂತರ ಎದುರಿಸುವ ದುಷ್ಪರಿಣಾಮದ ಅರಿವಾಗುತ್ತದೆ.

ಮೂಲ ಕ್ರಿಶ್ಚಿಯನ್ ಧರ್ಮದವರಿಗೂ ಹಾಗೂ ಮತಾಂತರವಾದಂತಹ ಕ್ರಿಶ್ಚಿಯನ್ ಧರ್ಮದವರಿಗೂ ಕ್ರಿಶ್ಚಿಯನ್ ಸಮಾಜವು ನೋಡುವ ರೀತಿಯಲ್ಲಿ ಹಲವು
ವ್ಯತ್ಯಾಸಗಳಿವೆ, ದಿನನಿತ್ಯದ ಆಚರಣೆಗಳಲ್ಲಿ ವ್ಯತ್ಯಾಸಗಳಿವೆ, ಚರ್ಚಿನಲ್ಲಿ ಪಾಲ್ಗೊಳ್ಳಬೇಕಿರುವ ಕಾರ್ಯಕ್ರಮಗಳಲ್ಲಿ ಬದಲಾವಣೆಗಳಿವೆ. ಮತಾಂತರ ಗೊಂಡಂತಹ ಕ್ರಿಶ್ಚಿಯನ್ ಕುಟುಂಬವನ್ನು ಮೂಲ ಕ್ರಿಶ್ಚಿಯನ್ನರು ಮತ್ತೆ ‘ಅಸ್ಪೃಶ್ಯರಂತೆ’ ಕಾಣುತ್ತಾರೆ. ಹಿಂದೂಧರ್ಮದ ದೇವರುಗಳನ್ನೇ ಬಳಸಿಕೊಂಡು ಮತಾಂತರ ಮಾಡುವ ಮಿಶನರಿಗಳಿಗೆ, ಕ್ರಿಶ್ಚಿಯನ್ ಧರ್ಮದ ಮೂಲ ತತ್ವವನ್ನುಪಸರಿಸುವ ಉದ್ದೇಶವಿಲ್ಲ.

ಚರ್ಚ್‌ಗಳನ್ನು ಹಿಂದೂ ದೇವಸ್ಥಾನಗಳ ರೀತಿಯಲ್ಲಿಯೇ ನಿರ್ಮಿಸಿ, ನೋಡುವವರಿಗೆ ತಮ್ಮ ಮುಂದಿರುವುದು ಚರ್ಚ್ ಅಥವಾ ದೇವಸ್ಥಾನವೋ ಎಂಬ
ಗೊಂದಲಮಯ ವಾತಾವರಣ ಸೃಷ್ಟಿಸುತ್ತಾರೆ. ಚರ್ಚಿನ ಮುಂದೆ ಹಿಂದೂ ದೇವಸ್ಥಾನದಲ್ಲಿ ಕಾಣಸಿಗುವ ಕಂಚಿನಲ್ಲಿ ಮಾಡಿದಂತಹ ಉದ್ದನೆಯ ಕಂಬವನ್ನು ನಿರ್ಮಿಸಿ, ಕಂಬದ ತುತ್ತತರಿದಿಯಲ್ಲಿ ‘ಯೇಸು ಕ್ರಿಸ್ತನ’ ಶಿಲುಬೆಯ ಅನಾವರಣ ಮಾಡಿರುತ್ತಾರೆ. ನೋಡುವವರಿಗೆ ಕಂಬದ ತುತ್ತತುದಿಯನ್ನು ಗಮನಿಸುವವರೆಗೂ ತಾವು ಚರ್ಚ್‌ನ ಮುಂದೆನಿಂತಿರುವ ಅರಿವಾಗುದಿಲ್ಲ. ‘ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ’ಯಡಿ ಯಲ್ಲಿ ವಿದೇಶದಿಂದ ಹರಿದು ಬರುವ ದೇಣಿಗೆಗಳನ್ನು ಕಟ್ಟು ನಿಟ್ಟಾಗಿ ನಿಯಂತ್ರಿಸಿದ್ದರೂ ಸಹ, ಭಾರತದೊಳಗಡೆಯಿಂದ ಹರಿದು ಬರುತ್ತಿರುವ ದೇಣಿಗೆಗಳಿಂದ ಕ್ರಿಶ್ಚಿಯನ್ ಮಿಶನರಿಗಳು ತಮ್ಮ ಮತಾಂತರವನ್ನು ಲೀಲಾಜಾಲವಾಗಿ ಮುಂದುವರೆಸುತ್ತಿದ್ದಾರೆ.

‘ಆಂಧ್ರಪ್ರದೇಶ’ದ ಮಾಜಿ ಮುಖ್ಯಮಂತ್ರಿ ‘ರಾಜಶೇಖರ್ ರೆಡ್ಡಿ’ ಬಹಿರಂಗವಾಗಿ ಮತಾಂತರವನ್ನುಪ್ರೋತ್ಸಾಹಿಸುತ್ತಿದ್ದರು, ಅದೇ ಕಾಯಕವನ್ನು ಮುಂದುವರೆಸಿ ಕೊಂಡು ಬರುತ್ತಿರುವ ಮಗ ‘ಜಗನ್ ಮೋಹನ್ ರೆಡ್ಡಿ’ ಬಹಿರಂಗವಾಗಿ ಮತಾಂತರವನ್ನು ಪ್ರೋತ್ಸಾಹಿಸುತ್ತಿರುವ ಹಲವು ವರದಿಗಳು ಮಾಧ್ಯಮಗಳಲ್ಲಿ ಪ್ರಸಾರ ವಾಗಿವೆ. ‘ಆಂಧ್ರದ’ ರೆಡ್ಡಿಗಳ ಹಾದಿಯಲ್ಲಿ ಬೆಂಗಳೂರಿನ ರಾಮಲಿಂಗ ರೆಡ್ಡಿ ಹಾಗೂ ಸೌಮ್ಯ ರೆಡ್ಡಿ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಕೇರಳದಲ್ಲಿ ನಡೆಯುತ್ತಿರುವ ‘ಲವ್ ಜಿಹಾದ್’ ಹಾಗೂ ‘ನಾರ್ಕೋಟಿಕ್ ಜಿಹಾದ್’ನ ವಿರುದ್ಧ ಧ್ವನಿ ಎತ್ತಿರುವ ‘ಕ್ಯಾಥೊಲಿಕ್ ಕ್ರಿಶ್ಚಿಯನ್ನರ ಬಿಷಪ್’ಗಳ ತಂಡ ಕರ್ನಾಟಕದಲ್ಲಿ ಮತಾಂತರ ನಿಷೇದ ಕಾಯ್ದೆಯನ್ನುಜಾರಿಗೆ ತರುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಚರ್ಚೆಗಳಾದರೆ ಸಂಜೆಯೇ ಗಡಿ ಬಿಡಿಯಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೆ.

ಕೇರಳದಲ್ಲಿನ ಕಮ್ಯುನಿಸ್ಟ ಸರಕಾರದಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿರುವ ಕಾರಣ, ಅಲ್ಲಿ ನಡೆಯುತ್ತಿರುವ ‘ಲವ್ ಜಿಹಾದ್’ಗೆ ಹೆಚ್ಚಾಗಿ ಕ್ರಿಶ್ಚಿಯನ್‌ರು ಬಲಿ ಯಾಗುತ್ತಿರುವ ಕಾರಣಕ್ಕಾಗಿ ಅಲ್ಲಿನ ಕ್ರಿಶ್ಚಿಯನ್ ಬಿಷಪ್ಗಳು ಅಲ್ಲಿನ ಸರಕಾರದ ವಿರುದ್ಧ ಧ್ವನಿ ಎತ್ತಿವೆ, ಲವ್ ಜಿಹಾದಿನ ನಂತರ ಕ್ರಿಶ್ಚಿಯನ್ ಹುಡಿಗಿಯರು ಮುಸಲ್ಮಾನ್ ಧರ್ಮಕ್ಕೆ ಮತಾಂತರ ಹೊಂದಿದರೆ ತಮ್ಮ ಧರ್ಮಕ್ಕೆ ಆಪತ್ತೆದುರಾಗುತ್ತದೆಯೆಂಬ ಭಯ ಇವರಿಗೆ ಕೇರಳದಲ್ಲಿ ಕಾಡುತ್ತಿದೆ, ಆದರೆ ಕರ್ನಾಟಕ ದಲ್ಲಿನ ಹಿಂದೂ ಕುಟುಂಬಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ತಮ್ಮ ಸಂಖ್ಯೆ ಹೆಚ್ಚಾಗುವುದರಿಂದ ಕರ್ನಾಟಕದಲ್ಲಿ ಇವರಿಗೆ ಯಾವುದೇ
ಸಮಸ್ಯೆ ಇರುವುದಿಲ್ಲ. ಜತೆಗೆ ಕರ್ನಾಟಕದಲ್ಲಿ ‘ಲವ್ ಜಿಹಾದ್’ ಕಾನೂನನ್ನು ಜಾರಿಗೆ ತನ್ನಿ ಎಂದೂ ಸಹ ಇವರು ತುಟಿ ಬಿಚ್ಚಿಲ್ಲ.

ತಮ್ಮ ಅನುಕೂಲಕ್ಕೆ ತಕ್ಕಂತೆ ರಾಜ್ಯದಿಂದ ರಾಜ್ಯಕ್ಕೆ ವರಸೆಯನ್ನು ಬದಲಿಸುವ ಮಿಶನರಿಗಳ ಒಂದೇ ಅಜೆಂಡಾ ‘ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ’, ತಮ್ಮ
ಮತಾಂತರಕ್ಕೆ ಅಡ್ಡಿ ಪಡಿಸುವವರ ವಿರುದ್ಧ ಧ್ವನಿ ಎತ್ತುತ್ತಾರೆ, ಆದರೆ ತಮಗೆ ಅನುಕೂಲವಾಗುವ ರಾಜ್ಯಗಳಲ್ಲಿ ಧ್ವನಿ ಎತ್ತುವುದಿಲ್ಲ. ಬಂಡವಾಳಶಾಹಿ ರಾಷ್ಟ್ರಗಳ ಮತಾಂತರ ಕುತಂತ್ರಕ್ಕೆ ರಾಜ್ಯದ ಬಹುತೇಕ ಜಿಲ್ಲೆಗಳು ಮತಾಂತರದ ಅಡ್ಡೆಗಳಾಗಿವೆ, ಪ್ರತಿನಿತ್ಯ ಮತಾಂತರಿಗಳು ಹಳ್ಳಿಗಳನ್ನು ಸುತ್ತಿ ಬಡ ಜನರ ತಲೆಯಲ್ಲಿ ಆಮಿಷಗಳನ್ನುತುಂಬಿ ಮತಾಂತರದೆಡೆಗೆ ಸೆಳೆಯುತ್ತಿದ್ದಾರೆ.

ಇಂದು ನಡೆಯುತ್ತಿರುವ ಮತಾಂತರವು ಬಾಬಾ ಸಾಹೇಬರ ದೂರದೃಷ್ಟಿ ಎಷ್ಟಿತ್ತೆಂಬುದಕ್ಕೆ ಸಾಕ್ಷಿಯಾಗಿದೆ, ಅಂದು ಅವರು ಆಲೋಚಿಸಿದಂತೆಯೇ ಕ್ರಿಶ್ಚಿಯನ್ ಮಿಶನರಿಗಳು ಎಲ್ಲೆಡೆಯೂ ಮತಾಂತರದಲ್ಲಿ ತೊಡಗಿದ್ದಾರೆ.’ಖಿಘೆಈಖಿಉ ಐಘೆಊಔಖಿಉಘೆಇಉ’ ಮೂಲಕ ಅನಗತ್ಯವಾಗಿ ಪ್ರಭಾವ ಬೀರುತ್ತಿರುವ ಕ್ರಿಶ್ಚಿಯನ್ ಮಿಶನರಿಗಳ ಮತಾಂತರವನ್ನು ತಡೆಯುವ ಕಠಿಣ ಕಾನೂನಿನ ಅವಶ್ಯಕತೆ ಕರ್ನಾಟಕ ರಾಜ್ಯದಲ್ಲಿದೆ.