Saturday, 21st December 2024

ಕರ್ಣನ ಸ್ವಾಮಿನಿಷ್ಠೆ

ಅವಲೋಕನ

ಡಾ.ಕೆ.ಪಿ.ಪುತ್ತೂರಾಯ

drputhuraya@yahoo.co.in

ಶ್ರೀಮದ್ ರಾಮಾಯಣ ಮತ್ತು ಮಹಾಭಾರತ ನಮ್ಮ ದೇಶದ ಎರಡು ಮಹಾಕಾವ್ಯಗಳು. ರಾಮಾಯಣ ಏನನ್ನು ಮಾಡಬಾರದು ಎಂಬುದನ್ನು ತಿಳಿಸಿದರೆ, ಮಹಾಭಾರತ ಏನನ್ನು ಮಾಡಬೇಕು ಎಂಬುದನ್ನು ತಿಳಿಸುತ್ತದೆ.

ರಾಮಾಯಣದ ಶ್ರೀ ರಾಮಚಂದ್ರನದು ರಮಣೀಯ ವ್ಯಕ್ತಿತ್ವವಾದರೆ, ಶ್ರೀ ಕೃಷ್ಣನದು ಸ್ಮರಣೀಯ. ಶ್ರೀ ರಾಮ ಶಕ್ತಿ ಸ್ವರೂಪವಾದರೆ, ಶ್ರೀ ಕೃಷ್ಣ ಯುಕ್ತಿ ಸ್ವರೂಪ. ಒಬ್ಬನು ಗುಣನೀಯನಾದರೆ, ಇನ್ನೊಬ್ಬನು ಗಣನೀಯ. ಒಬ್ಬ ಯುದ್ಧ ಮಾಡಿದವ; ಇನ್ನೊಬ್ಬ ಯುದ್ಧ ಮಾಡಿಸಿದವ. ಒಟ್ಟಿನಲ್ಲಿ ಇವರಿಬ್ಬರೂ ಅಧರ್ಮವನ್ನು ಖಂಡಿಸಿ ಅಧರ್ಮಿಗಳನ್ನು ಶಿಕ್ಷಿಸಿ, ಸಜ್ಜನರನ್ನು ರಕ್ಷಿಸಿ, ಧರ್ಮವನ್ನು ಮರು ಸ್ಥಾಪಿಸಲು ಅವತರಿಸಿದ ಭಗವಂತನ ಅವತಾರ ರುಷರು. ಈ ಎರಡೂ ಮಹಾ ಕಾವ್ಯಗಳು ಅನೇಕಾನೇಕ ವಿಶಿಷ್ಟವಾದ ವೈವಿಧ್ಯಮಯ ಪ್ರಸಂಗಗಳ ಆಗರ.

ಮಹಾಭಾರತದಲ್ಲಿ, ಧುರ್ಯೋಧನನ ವೈಯಕ್ತಿಕ ಜೀವನದಲ್ಲೂ ಅಪೂರ್ವ ಪ್ರಸಂಗವೊಂದು ನಡೆದು ಹೋಗಿತ್ತು. ಧರ್ಯೋದನ ತನ್ನ ದಾಂಪತ್ಯ ಜೀವನದಲ್ಲಿ ಯಾರಲ್ಲೂ ಹೇಳಿಕೊಳ್ಳಲಾಗದ ಯಾತನೆಯೊಂದನ್ನು ಅನುಭವಿಸುತ್ತಿದ್ದ. ಅದೇನೆಂದರೆ ವೇಣುಗಂಧರ್ವನೆಂಬ ಗಂಧರ್ವ ಅದೃಶ್ಯ ರೂಪದಲ್ಲಿ ಮಧ್ಯರಾತ್ರಿಯ ವೇಳೆ ಅಂತಃಪುರವನ್ನು ಪ್ರವೇಶಿಸಿ ಧುರ್ಯೋಧನನನ್ನು ಆಚೆಗೆ ತಳ್ಳಿ ಆತನ ಮಡದಿ ಭಾನುಮತಿಯನ್ನು ನಿತ್ಯ ಸಂಭೋಗಿಸಿ ಹೋಗುತ್ತಿದ್ದ. ಗಂಧರ್ವರ ಜತೆ ಕಾದಾಡುವ ಸಾಮರ್ಥ್ಯವನ್ನು ಹೊಂದಿರದ ಧುರ್ಯೋಧನನಿಗೆ ಇದು ಯಾರಲ್ಲೂ ಹೇಳಿಕೊಳ್ಳಲಾಗದ ನಿತ್ಯ ವೇದನೆಯಾಗಿತ್ತು.

ಇನ್ನೊಂದೆಡೆ ಸುರ ಸುಂದರಿಯಾಗಿದ್ದ ದ್ರೌಪದಿಯನ್ನು ತನ್ನ ಅರಸಿಯನ್ನಾಗಿ ಪಡೆಯುವಲ್ಲಿ ವಿಫಲನಾಗಿದ್ದುದ್ದು, ಈತನನ್ನು ಒಳಗಿಂದೊಳಗೆ ಕಾಡುತ್ತಿತ್ತು. ಮಾತ್ರವೇ ಅಲ್ಲ ಇಂದ್ರಪ್ರಸ್ಥದಲ್ಲಿ ಅರಮನೆಯನ್ನು ಪ್ರವೇಶಿಸುವಾಗ ಮಾಯಾ ರೂಪದಲ್ಲಿದ್ದ ಜಲವನ್ನು ನೆಲವೆಂದು ಭ್ರಮಿಸಿ ಕಾಲು ಜಾರಿ ಕೊಳದೊಳಗೆ ಈತ ಬಿದ್ದಾಗ ಇದನ್ನು ಅಂತಃಪುರದಿಂದ ನೋಡಿದ ದ್ರೌಪದಿ ಕಿಸಕ್ಕನೆ ನಕ್ಕು ವ್ಯಂಗವಾಡಿದುದನ್ನು ಮರೆಯಲು ಸಾಧ್ಯವಾಗುತ್ತಿರಲಿಲ್ಲ.

‘ಎಷ್ಟಾದರೂ ಕುರುಡನ ಮಗನಲ್ಲವೇ! ನಾನೇನೋ ಅಪ್ಪ ಮಾತ್ರ ಕುರುಡನೆಂದು ತಿಳಿದಿದ್ದೆ. ಈಗ ನೋಡಿದರೆ ಮಗನೂ ಕೂಡ ಕುರುಡ!’ ಎಂಬ ಆಕೆಯ ವ್ಯಂಗದ
ಮಾತುಗಳು ಧುರ್ಯೋಧನನ ದ್ವೇಷಾಗ್ನಿಯನ್ನು ಕೆರಳಿಸಿತ್ತು ಹಾಗೂ ಮುಂದೆ ಅವಳ ವಸಾಪಹರಣಕ್ಕೂ ಬಲವಾದ ಕಾರಣವಾಗಿತ್ತು. ಈ ಅಪಮಾನ, ಅಸೂಯೆ ಯ ಬೇಗುದಿಯಲ್ಲೇ ಬೇಯುತ್ತಿದ್ದ, ಧುರ್ಯೋಧನ ಒಮ್ಮೆ ದ್ರೌಪದಿಯನ್ನು ಚುಡಾಯಿಸುತ್ತಾನೆ. ‘ ಈ ರಾತ್ರಿ ನಿನ್ನ ಸರದಿ ಯಾರ ಜತೆ? ಧರ್ಮರಾ ಯನೋ, ಭೀಮನೋ, ಅರ್ಜುನನೋ’, ಪ್ರತ್ಯುತ್ತರವಾಗಿ ಧುರ್ಯೋಧನನಿಗೆ ಗಂಧರ್ವರಿಂದಾಗುವ ಅಪಚಾರವನ್ನು ಅರಿತಿದ್ದ ದ್ರೌಪದಿ ಅವನನ್ನೇ ಕೇಳುತ್ತಾಳೆ ‘ ಈ ರಾತ್ರಿ ನಿನ್ನ ಮಡದಿಯ ಜತೆ ಯಾರು? ನೀನೇ? ಇಲ್ಲ ಗಂಧರ್ವನೇ?’ ಈ ಚುಚ್ಚು ಮಾತುಗಳಿಂದ ಮತ್ತಷ್ಟು ದುಃಖಿತನಾಗುತ್ತಾನೆ ಧುರ್ಯೋಧನ.

ತನ್ನ ಆಪ್ತಮಿತ್ರನಾದ ಧುರ್ಯೋಧನನ ಈ ದುಃಖವನ್ನು, ದುಸ್ಥಿತಿಯನ್ನು ಗಮನಿಸಿದ ಕರ್ಣ, ಕಾರಣವನ್ನು ಕೇಳಲಾಗಿ ಧುರ್ಯೋಧನನು ಎಲ್ಲಾ ಸತ್ಯವನ್ನು
ಹಾಗೂ ತನ್ನ ಅಸಹಾಯಕತೆಯನ್ನು ಅವನೆದುರು ಬಿಚ್ಚಿಡುತ್ತಾನೆ. ಗಂಧರ್ವರ ಜತೆ ಸೆಣಸಾಡುವ ಶಕ್ತಿ ಸಾಮರ್ಥ್ಯವನ್ನು ಗಳಿಸಿಕೊಂಡಿದ್ದ ಕರ್ಣ, ತಕ್ಷಣ ಈ
ಸಮಸ್ಯೆಗೆ ಪರಿಹಾರವೊಂದನ್ನು ಸೂಚಿಸುತ್ತಾನೆ. ಅದೇನೆಂದರೆ ‘ಒಂದು ರಾತ್ರಿ ನಿನ್ನ ಬದಲಿಗೆ ನಿನ್ನ ಅಂತಃಪುರದಲ್ಲಿ ಮಲಗುವ ಅವಕಾಶವನ್ನು ನನಗೆ ಕೊಡು. ಆ ದುಷ್ಟ ಗಂಧರ್ವನನ್ನು ಹೊಡೆದೋಡಿಸಿ ನಿನ್ನ ಸಂಕಷ್ಠವನ್ನು ಪರಿಹರಿಸುವೆ.’

ನಂಬಿಕೆಗೆ ಎಂದೂ ದ್ರೋಹವೆಸಗದ, ಆತ್ಮೀಯ ಗೆಳೆಯ ಕರ್ಣನ ಸಲಹೆಯನ್ನು, ಧುರ್ಯೋಧನನು ಎರಡು ಮಾತಿಲ್ಲದೆ ಕೂಡಲೇ ಒಪ್ಪಿಕೊಳ್ಳುತ್ತಾನೆ. ಅಂತೆಯೇ, ಅದೇ ದಿನ ರಾತ್ರಿ ರಾಣಿ ಭಾನುಮತಿ ನಿದ್ರೆಗೆ ಜಾರಿದ ವೇಳೆ, ಕರ್ಣನು ಅಂತಃಪುರವನ್ನು ಪ್ರವೇಶಿಸಿ, ಆಕೆಯ ಮಗ್ಗುಲಲ್ಲಿ ಮಲಗುತ್ತಾನೆ. ಯಥಾಪ್ರಕಾರ ಭಾನು ಮತಿಯ ಶೀಲ ಕೆಡಿಸಲು ಬಂದ ವೇಣುಗಂಧರ್ವನ ಜತೆ ಸೆಣಸಾಡಿ ಮತ್ತೊಮ್ಮೆ ಆತ ಆ ಕಡೆ ಸುಳಿಯದಂತೆ ಆತನನ್ನು ಹಿಮ್ಮೆಟ್ಟುತ್ತಾನೆ. ಇಷ್ಟರಲ್ಲಿ ಎಚ್ಚರಗೊಂಡ ಭಾನುಮತಿ ತನ್ನ ಗಂಡನ ಬದಲಾಗಿ ಕರ್ಣನನ್ನು ನೋಡುತ್ತಾಳೆ, ಹಾಗೂ ಆತನ ಶೌರ್ಯ, ಪರಾಕ್ರಮವನ್ನು ಮೆಚ್ಚಿಕೊಳ್ಳುತ್ತಾಳೆ; ತನ್ನ ಗಂಡ ಹೆಣೆದ ಉಪಾಯ ವನ್ನು ಕೊಂಡಾಡುತ್ತಾಳೆ.

ಮುಂದೆ ಒಂದು ಜಾನಪದ ಕಥೆಯ ಪ್ರಕಾರ, ವಿಚಿತ್ರವಾದ ಘಟನೆಯೊಂದು ನಡೆದು ಹೋಗುತ್ತದೆ. ಅದೇನೆಂದರೆ ತನ್ನ ಗಂಡನ ಕೈಯ್ಯಲ್ಲಿ ಆಗದ ಸಾಹಸವನ್ನು
ಮಾಡಿ ಶೌರ್ಯವನ್ನು ಪ್ರದರ್ಶಿಸಿದ ವೀರ, ಸುರದ್ರೂಪಿ, ಕರ್ಣನಲ್ಲಿ ಭಾನುಮತಿ ಅನುರಕ್ತಳಾಗುತ್ತಾಳೆ. ಹಾಗೂ ಬೆಳಕು ಹರಿಯಲು ಇನ್ನೂ ಎರಡು ಜಾವವಿದ್ದ ಕಾರಣ ಆಕೆ ಕರ್ಣನ ಸಂಗವನ್ನು ಬಯಸುತ್ತಾಳೆ. ಅಂತೆಯೇ ತನ್ನ ಇಂಗಿತವನ್ನು ವ್ಯಕ್ತಪಡಿಸುತ್ತಾಳೆ. ಇದನ್ನು ಕೇಳಿದ ಕರ್ಣ ಹೌಹಾರಿ ಬೆಚ್ಚಿಬೀಳುತ್ತಾನೆ. ‘ನನ್ನನ್ನು ನಂಬಿದ ನನ್ನ ಪ್ರಾಣ ಮಿತ್ರನಿಗೆ ದ್ರೋಹ ಬಗೆಯುವ ಕೆಲಸವನ್ನು ಸರ್ವಥಾ ಮಾಡಲಾರೆ;’ ಎಂದು ಹೇಳುತ್ತಾ ಆಕೆಯ ಮನವಿಯನ್ನು ತಿರಸ್ಕರಿಸು ತ್ತಾನೆ.

ಭಾನುಮತಿ ಪರಿ ಪರಿಯಾಗಿ ಕೇಳಿಕೊಂಡರೂ ಕರ್ಣನು ಮಾತ್ರ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ತನ್ನ ಆಸೆಯನ್ನು ತಿರಸ್ಕರಿಸಿ ತನ್ನ ಅಭಿಮಾನವನ್ನು ಧಿಕ್ಕರಿಸಿದ ಕರ್ಣನ ವರ್ತನೆಯಿಂದ ಕುಪಿತಗೊಂಡ ಭಾನುಮತಿ ಸಿಟ್ಟಿಗೆದ್ದು ಹೇಳುತ್ತಾಳೆ. ‘ಒಂದು ಹೆಣ್ಣಿನ ಮನದಾಸೆಯನ್ನು ತಿರಸ್ಕರಿಸೋದು ನಿನ್ನಂತಹ ವೀರನಿಗೆ ತರವಲ್ಲ. ಇಷ್ಟಕ್ಕೂ ಇದು ಮಹಾರಾಣಿಯ ಆe. ನೀನಿದನ್ನು ಪಾಲಿಸಲೇಬೇಕು. ಇಲ್ಲವಾದರೆ ನಾನೀಗ ಕಿರುಚಿಕೊಳ್ಳುವೆ. ಅಂತಃಪುರಕ್ಕೆ ಕದ್ದು
ನುಸುಳಿದ ಈ ನಿನ್ನ ಹೇಯಕೃತ್ಯವನ್ನು ಬಯಲು ಮಾಡುವೆ’.

ಈಕೆಯ ಮಾತುಗಳನ್ನು ಆಲಿಸಿದ ಕರ್ಣ ಅಸಹಾಯಕತೆಯಿಂದ ಬೆವರಿ ನಡುಗುತ್ತಾನೆ. ಒಂದು ಕಡೆಯಿಂದ ಆಪ್ತ ಮಿತ್ರ ಧುರ್ಯೋಧನನು, ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲೇ ಬೇಕು. ಇನ್ನೊಂದು ಕಡೆಯಿಂದ ಕಾಮಾಂಧಳಾಗಿರುವ ರಾಣಿಯ ಆಜ್ಞೆಯಿಂದ ತಪ್ಪಿಸಿಕೊಳ್ಳಬೇಕು. ಈ ಸಂದಿಗ್ಧ ಪರಿಸ್ಥಿತಿಯಿಂದ
ಹೊರಬರಲು ಕರ್ಣ ತಕ್ಷಣ ಉಪಾಯವೊಂದನ್ನು ಹೂಡುತ್ತಾನೆ. ಅಂತೆಯೇ ತನ್ನ ಅಂತರ್ ಶಕ್ತಿಯ ಬಲದಿಂದ, ತನ್ನ ತರಡುವಿನ (Scrotum) ಒಳಗಿರುವ ವೃಷಣಗಳನ್ನು (Testicles) ಮತ್ತೆ ತನ್ನ ಉದರದೊಳಗೆ ಎಳೆದುಕೊಂಡು, ‘ಮಹಾರಾಣೀ, ವೃಷಣಗಳೇ ಇಲ್ಲದ ನಾನು ಓರ್ವ ನಪುಂಸಕ. ಆ ಕಾರಣ ನಿಮ್ಮ ಆಸೆಯನ್ನು ಪೂರೈಸಲಾರೆ ಕ್ಷಮಿಸಿ’ ಎಂಬುದಾಗಿ ಭಾನುಮತಿಗೆ ತಿಳಿ ಹೇಳುತ್ತಾನೆ.

ಇವನ ಮಾತನ್ನು ಕಣ್ಣಾರೆ ದೃಢೀಕರಿಸಿಕೊಂಡ ಭಾನುಮತಿ ಅಲ್ಲಿಗೆ ಸುಮ್ಮನಾಗುತ್ತಾಳೆ. ಈ ಘಟನೆ ಕಳೆದು ಹಲವಾರು ವರುಷಗಳ ನಂತರ ಒಂದು ದಿನ ಎಲ್ಲರೂ ಉಪಸ್ಥಿತರಿದ್ದ ಕೌರವರ ಆಸ್ಥಾನದಲ್ಲಿ ‘ಕರ್ಣನಿಗೊಂದು ಮಗುವಾಯಿತು’ ಎಂಬ ಸಮಾಚಾರವನ್ನು ದೂತರು ಬಂದು ಹೇಳುತ್ತಾರೆ. ಇದನ್ನು ಕೇಳಿದ ಹಾಗೂ ಕರ್ಣನ ನಪುಂಸತ್ವವನ್ನು ಅರಿತಿದ್ದ ಭಾನುಮತಿ ಮಾತ್ರ ವ್ಯಂಗ್ಯ ನಗೆಯನ್ನು ಸೂಸುತ್ತಾಳೆ. ಇದನ್ನು ಗಮನಿಸಿದ ಧುರ್ಯೊಧನನು ಕಾರಣವನ್ನು
ಕೇಳಲಾಗಿ ಕರ್ಣನು ನಡೆದ ವಿಷಯವನ್ನು ವಿವರಿಸಿ ಹೇಳುತ್ತಾನೆ ಇದನ್ನು ಕೇಳಿದ ಧುರ್ಯೋಧನನ ಹೃದಯದಲ್ಲಿ ಕರ್ಣನ ಸ್ಥಾನ ಇನ್ನೂ ಭದ್ರವಾಯಿತು ಮತ್ತು ಅವರಿಬ್ಬರ ಸ್ನೇಹ ಇನ್ನೂ ಗಾಢವಾಗಿ ಬೆಳೆಯಿತು.

ಆದುದರಿಂದಲೇ ತನ್ನ ಸಹೋದರರನ್ನು ಕಳೆದುಕೊಂಡಾಗಲೂ ಅಷ್ಟೊಂದು ದುಃಖಿಸದ ಧುರ್ಯೋಧನ ಕರ್ಣನು ಸತ್ತ ಸುದ್ದಿಯನ್ನು ಕೇಳಿ ಮಗುವಿನಂತೆ ಗಳಗಳನೆ ಅಳುತ್ತಾ ಬಹಳ ಕಾಲ ರೋಧಿಸುತ್ತಾನೆ. ಜಾನಪದ ಲೋಕದ ಕಾಲ್ಪನಿಕ ಕತೆಯೇ ಆದರೂ ಈ ಅಪರೂಪದ ಪ್ರಸಂಗದಿಂದ ತಿಳಿದುಕೊಳ್ಳಬಹುದಾದ
ತಾತ್ಪರ್ಯ ಇಷ್ಟೆ.

‘ಪುರುಷಸ್ಯ ಭಾಗ್ಯಂ ಸೀಣಾಂಚ ಚಿತ್ತಂ; ದೇವೋನ ಜಾನಾತಿ, ಕುತೋ ಮನುಷ್ಯಃ?’ ಅಂದರೆ ‘ಪುರುಷರ ಭಾಗ್ಯವೂ ಸ್ತ್ರೀರ ಚಿತ್ತವೂ ಸೃಷ್ಟಿಕರ್ತ ಭಗವಂತ ನಿಗೆ ತಿಳಿಯದು ಮತ್ತೆ ಹುಲುಮಾನವರಿಗೆಲ್ಲಿ ಸಾಧ್ಯ?’ ಎಂಬ ಉಕ್ತಿಯಂತೆ ಹೆಣ್ಣು ಚಂಚಲೆ ಎಂಬುದು ಸ್ಪಷ್ಟವಾಯಿತು. ‘ಕಾಮತುರಾಣಾಂ ನ ಭಯಾಂ ನ ಲಜ್ಜಾಂ’ ಎಂಬ ಮಾತಿನಂತೆ ಕಾಮಾತುರರಿಗೆ ಯಾರ ಭಯವೂ ಇಲ್ಲ, ನಾಚಿಕೆಯೂ ಇಲ್ಲ, ಈ ಮಾತನ್ನು ಸ್ಪಷ್ಟೀಕರಿಸುವಂತೆ ಗಂಡನಿದ್ದರೂ ವೀರಶೂರ ಕರ್ಣನಿಗೆ ಮನಸೋತ ಭಾನುಮತಿ ಭಯ ಮತ್ತು ನಾಚಿಕೆಯನ್ನು ತೊರೆದು ಆತನ ಸಂಗವನ್ನೇ ಬಯಸುತ್ತಾಳೆ.

ಇಂದಿಗೂ ತಿಳಿದಿರುವ ವೈದ್ಯ ವಿಜ್ಞಾನದ ಪ್ರಕಾರ, ಪುರುಷರಲ್ಲಿ ವೃಷಣಗಳು ಅದರ ಭ್ರೂಣಾವಸ್ಥೆಯಲ್ಲೇ ಉದರದೊಳಗೆ ರೂಪುಗೊಂಡರೂ ಬೆಳೆಯುತ್ತಾ ಕೆಳಕ್ಕೆ
ಸರಿದು,  inguinal region ನಿಂದ ಹಾದು ಮಗು ಹುಟ್ಟುವುದರ ಒಳಗಾಗಿ, oಟಠ್ಠಿಞ ನೊಳಗೆ ಸೇರಿಕೊಂಡು ಬಿಡುತ್ತವೆ. ಅಪರೂಪವಾಗಿ ಕೆಲವು ಮಕ್ಕಳಲ್ಲಿ ಈ ಪ್ರಕ್ರಿಯೆ ನಡೆಯದೆ ವೃಷಣಗಳು ಉದರದೊಳಗೆಯೇ ಉಳಿದುಕೊಂಡು ಬಿಟ್ಟರೆ ಈ ಸ್ಥಿತಿಯನ್ನು cryptorchidism ಅಥವಾ undesended ಎಂದು ಕರೆಯ ಲಾಗುತ್ತದೆ. ಸಾಮಾನ್ಯವಾಗಿ ಇಂತಹ ಮಕ್ಕಳು ಬೆಳೆದ ಮೇಲೆ ನಪುಂಸಕರಾಗುತ್ತಾರೆ. ಈ ಸತ್ಯವನ್ನರಿತ ಕರ್ಣ ತನ್ನ ವೃಷಣಗಳನ್ನು ಮತ್ತೆ ಉದರದೊಳಗೆ ಎಳೆದುಕೊಂಡು ತನ್ನ ಮನೋಬಲದಿಂದ ಸಂದಿಗ್ಧ ಪರಿಸ್ಥಿತಿಯನ್ನು ತಪ್ಪಿಸಿಕೊಳ್ಳಲು ತಾನೊಬ್ಬ ನಪುಂಸಕನೆಂದು ಸಾಬೀತು ಪಡೆಸಿದುದು ನಿಜಕ್ಕೂ ಆಶ್ಚರ್ಯ ಕರವೇ ಮಾತ್ರವೇ ಅಲ್ಲ. ಆ ಕಾಲಕ್ಕೂ ತಿಳಿದಿದ್ದ ವೈದ್ಯಕೀಯ ವಿಜ್ಞಾನ ನಿಜಕ್ಕೂ ಒಂದು ಪರಮಾಶ್ಚರ್ಯವೇ ಸರಿ.

ಧುರ್ಯೋಧನನ ಮತ್ತು ಕರ್ಣರ ನಡುವಿನ ಸ್ನೇಹ ಪ್ರಶ್ನಾತೀತವಾಗಿತ್ತು. ಇಲ್ಲವಾದರೆ ಯಾವ ಗಂಡನೂ ಪರಪುರುಷರಿಗೆ ತನ್ನ ಮಡದಿಯ ಜೊತೆ ಮಲಗಲು
ಅವಕಾಶ ಮಾಡಿಕೊಡುತ್ತಿರಲಿಲ್ಲ. ಅಂತೆಯೇ ಯಾವ ಪುರುಷನೂ ಸುಲಭವಾಗಿ ಅನಾಯಾಸವಾಗಿ ದೊರಕಿದ ಅವಕಾಶವನ್ನು ಬಿಟ್ಟು ಕೊಡುತ್ತಿರಲಿಲ್ಲ. ಇಲ್ಲಿ
ಧುರ್ಯೋಧನನ ನಂಬಿಕೆ ಮತ್ತು ಕರ್ಣನ ನ್ಯಾಯ ನಿಷ್ಠೆ ಎರಡೂ ಸಾಬೀತಾಗಿವೆ; ಹಾಗೂ ಅನಕರಣೀಯವಾಗಿವೆ: (ಮಹಾಭಾರತದಲ್ಲೊಂದು ಅಪರೂಪದ ಪ್ರಸಂಗ )