Sunday, 22nd September 2024

ಕನಕದಾಸರ ಅರಮನೆ

ಕನಕದಾಸರ ನೆನಪಿನಲ್ಲಿ ಆಧುನಿಕ ಅರಮನೆಯೊಂದನ್ನು ಅವರ ಜನ್ಮಸ್ಥಔವಾದ ಬಾಡದಲ್ಲಿ ನಿರ್ಮಿಸಲಾಗಿದೆ. ವಿಜಯನಗರ ಅರಸರ ಕಾಲದಲ್ಲಿ ಬಂಕಾಪುರದಲ್ಲಿ ದಂಡನಾಯಕನಾಗಿದ್ದ, ಯುದ್ಧಗಳಲ್ಲಿ ಭಾಗವಹಿಸಿದ್ದ ಕನಕದಾಸರ ಸ್ಮಾಾರಕವಾಗಿ ಅರಮನೆಯೊಂದನ್ನು ನಿರ್ಮಿಸಿರುವುದು ಅರ್ಥಪೂರ್ಣ. ಕಾಗಿನೆಲೆ ಅಭಿವೃದ್ಧಿಿ ಪ್ರಾಾಧಿಕಾರವು ನಿರ್ಮಿಸಿರುವ ಈ ಅರಮನೆಯು ವಿಜಯನಗರ ಶೈಲಿಯನ್ನು ಅಳವಡಿಸಿಕೊಂಡಿದ್ದು, ಕನಕದಾಸರ ಯುದ್ಧಜೀವನದ ಹಿನ್ನೆೆಲೆಯನ್ನೂ ಒಳಗೊಂಡಂತೆ, ಹಲವು ದೃಶ್ಯಗಳನ್ನು ನೀಡುತ್ತದೆ. ಸಭಾಂಗಣ, ಗ್ರಂಥಾಲಯ, ಕನಕರ ಜೀವನದ ದೃಶ್ಯಗಳನ್ನು ವಿವರಿಸುವ ಚಿತ್ರಗಳು – ಎಲ್ಲವೂ ಈ ಆಕರ್ಷಕ ಸ್ಥಳವನ್ನಾಾಗಿಸಿದ್ದು, ಕನಕದಾಸರ ಪರಿಚಯವನ್ನು ಇಂದಿನ ತಲೆಮಾರಿಗೆ ಮಾಡಿಕೊಡಲು ಯತ್ನಿಿಸುತ್ತದೆ.