ಮಾನ್ವಿ: ರಾಯಚೂರಿಗೆ ತೆರಳುವ ಮಾರ್ಗದಲ್ಲಿ ಪಟ್ಟಣದ ಬಸವ ವೃತ್ತಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ, ಗಣಿ ಮತ್ತು ಭೂ ವಿಜ್ಞಾನ,ಯುವ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ರವರಿಗೆ ಉದ್ಯಾನ ಉಳಿಸಿ ಹೋರಾಟ ಸಮಿತಿ ವತಿ ಯಿಂದ ಸಂಚಾಲಕ ಕೆ.ನಾಗಲಿಂಗಸ್ವಾಮಿ ಮನವಿ ಸಲ್ಲಿಸಿದರು.
ಮಾನ್ವಿ ನಗರದಲ್ಲಿನ ಸ.ನಂ. ೪೬೭/ಅ ರಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯವರು ನಿರ್ಮಿಸಿರುವ ಕಾಲೋನಿಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟಿರುವ ಸ್ಥಳವನ್ನು ಪ್ರಭಾವಿ ವ್ಯಕ್ತಿ ಅಕ್ರಮವಾಗಿ ಆಕ್ರಮಿಸಿ ಕೊಂಡು ತಡೆಗೋಡೆ ನಿರ್ಮಿಸಿದ್ದು ಕಳೆದ ೬೧ ದಿನಗಳಿಂದ ಸರಕಾರಿ ಉದ್ಯಾನವನ ರಕ್ಷಿಸುವಂತೆ ಧರಣಿ ನಡೆಸುತ್ತಿದ್ದರು ಜಿಲ್ಲಾಡಳಿತವು ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ ಅದರಿಂದ ಕೂಡಲೇ ಪರಿಶೀಲನೆ ನಡೆಸಿ ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವಂತೆ ಕೋರಿದರು.
ಮನವಿ ಸ್ವೀಕರಿಸಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ ಇಂದು ನಡೆಯುವ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಉದ್ಯಾನ ಉಳಿಸಿ ಹೋರಾಟ ಸಮಿತಿಯ ಸಂಚಾಲಕರಾದ ನರಸಪ್ಪ ಜುಕೂರು, ಯಲ್ಲಪ್ಪ ಉಟಕನೂರು ಸೇರಿದಂತೆ ಮಾಜಿಶಾಸಕ ಗಂಗಾಧರ ನಾಯಕ,ಬಿ.ಜೆ.ಪಿ.ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದ್ದಿನ್ನಿ, ಮುಖಂಡರಾದ ಶರಣಪ್ಪಗೌಡ ನಕ್ಕುಂದಿ, ಶಿವ ಶರಣ ಪಾಟೀಲ್,ಬಸವಂತಪ್ಪ ಸೇರಿದಂತೆ ಇನ್ನಿತರರು ಇದ್ದರು.
ಪಟ್ಟಣದ ಬಸವ ವೃತ್ತದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ನಡೆದ ಭಾರತ ಬಂದ್ ಸ್ಥಳಕ್ಕೆ ಅಗಮಿಸಿ ರೈತ ಮುಖಂಡರಿ0ದ ಮನವಿ ಸ್ವೀಕರಿಸಿ ಮಾತನಾಡಿದ ಅವರು ನಾನು ಶಾಸಕನಾಗಿ ಜನಸಾಮಾನ್ಯರ, ರೈತರ, ಸಮಸ್ಯೆಗಳ ಬಗ್ಗೆ ಸಂಪೂರ್ಣವಾದ ಅರಿವಿದೆ.
ನಿಮ್ಮ ಆಶೀರ್ವಾದದಿಂದ ಸಚಿವರಾಗುವ ಅವಕಾಶ ದೊರೆತಿದೆ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುತ್ತೇನೆ. ತಾಲ್ಲೂಕಿನಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾಗುತ್ತಿದ್ದು ಇಂದು ನಡೆಯುವ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಆರೋಗ್ಯಧಿಕಾರಿಗಳಿಗೆ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು ಪಟ್ಟಣದಲ್ಲಿ ತಾಯಿ-ಮಗು ಆಸ್ಪತ್ರೆ ಕಟ್ಟಡ ಪೂರ್ಣ ಗೊಂಡರು ಜನರ ಬಳಕೆಗೆ ದೊರೆಯದೆ ಇದ್ದರೆ ಉಪಯೋಗವಿಲ್ಲದಂತಾಗುತ್ತದೆ ಕೂಡಲೆ ಆಸ್ಪತ್ರೆಯನ್ನು ಉದ್ಘಾಟಿಸಿ ಅಗತ್ಯ ವಾದ ವೈದ್ಯರ ಹಾಗೂ ಸಿಬ್ಬಂದಿಗಳ, ವೈದ್ಯಕೀಯ ಸಲಕರಣೆ ಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು.
ಹಲವು ವರ್ಷಗಳಿಂದ ಕೆಳಭಾಗದ ಟೆಲ್ಯಾಂಡ್ ಜಮೀನುಗಳಿಗೆ ಸಮರ್ಪಕವಾಗಿ ನೀರು ದೊರೆಯು ತ್ತಿಲ್ಲ ಎನ್ನುವ ದೂರು ರೈತರಿಂದ ಕೇಳಿಬರುತ್ತಿದ್ದು ರೈತರ ನೀರಾವರಿ ಸಮಸ್ಯೆಗಳ ಶಾಶ್ವತವಾದ ಪರಿಹಾರಕ್ಕೆ ನೀರಾವರಿ ತಜ್ಞರ,ನೀರಾವರಿ ಅಧಿಕಾರಿಗಳ,ಜಿಲ್ಲಾಧಿಕಾರಿಗಳ ಮತ್ತು ರೈತ ಮುಖಂಡರ ರೈತ ಪರ ಸಂಘಟನೆಗಳ ಸಭೆಯ ಮೂಲಕ ಚರ್ಚೆ ನಡೆಸಿ ಪರಿಹಾರ ಕಂಡು ಕೊಳ್ಳಲು ಶೀಘ್ರವೇ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಪ್ರಭಾರಿ ತಹಸೀಲ್ದಾರ್ ಅಬ್ದುಲ್ ವಾಹಿದ್ , ಮಾಜಿಶಾಸಕ ಗಂಗಾಧರ ನಾಯಕ,ಬಿ.ಜೆ.ಪಿ.ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದ್ದಿನ್ನಿ, ಮುಖಂಡರಾದ ಶರಣಪ್ಪಗೌಡ ನಕ್ಕುಂದಿ, ಸಿ.ಐ.ಟಿ.ಯು.ತಾ.ಅಧ್ಯಕ್ಷ ಶರ್ಪುದ್ದಿನ್, ಕೆ.ಆರ್.ಎಸ್. ಮಾರೆಪ್ಪ ಹರವಿ, ಕೆ.ಪಿಆರ್.ಎಸ್.ಸಂಘಟನೆಯ ಜಿ.ಅಧ್ಯಕ್ಷ ಕಾಂ.ಡಿ ,ವೀರನಗೌಡ, ರಾಜ್ಯ ರೈತ ಸಂಘದ ತಾ.ಅಧ್ಯಕ್ಷ ಬಸವರಾಜನಾಯಕ, ಮಾರೆಪ್ಪ, ಎ.ಐ.ಟಿ.ಯು ಜಿಲ್ಲಾಧ್ಯಕ್ಷ ಸಂಗಯ್ಯಸ್ವಾಮಿ, ಕ.ರ.ವೇ.ತಾ.ಅಧ್ಯಕ್ಷ ಡಿ.ಬಸವನಗೌಡ, ಭೀಮ ಆರ್ಮಿ ತಾ.ಅಧ್ಯಕ್ಷ ದತ್ತಾತ್ರೇಯ ವಕೀಲರು, ಅಂಗನವಾಡಿ ಸಂಘದ ತಾ.ಅಧ್ಯಕ್ಷೆ ಚನ್ನಮ್ಮ, ಶ್ಯಾಮ ಸೀಂಗ್ ವೀರೇಶನಾಯಕ, ದಲಿತ ಮುಖಂಡ ಲಕ್ಷö್ಮಣ ಜಾನೆಕಲ್, ಜನಜಾಗೃತಿ ಸಂಘಟನೆಯ ಈಶಪ್ಪ, ರುದ್ರಪ್ಪನಾಯಕ, ನಾಗರಾಜ್, ತಿಮ್ಮಣ್ಣ ಭೋವಿ, ರಾಜಾಸಾಬ್, ಮಹಮ್ಮದ್, ಬಾಷುಮೀಯ, ಏಸಪ್ಪ, ಸರಸ್ವತಿ, ದ್ರಾಕ್ಷಯಿಣಿ, ಅಂಜನೇಯ ಸೇರಿದಂತೆ ತಾಲ್ಲೂಕಿನ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದರು.