ವಾಷಿಂಗ್ಟನ್: ಅಮೆರಿಕ ಸರ್ಕಾರದ ಉಪಕಾರ್ಯದರ್ಶಿ ವೆಂಡಿ ಆರ್.ಶರ್ಮನ್ ಅವರು ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಚರ್ಚಿಸಲು ಅಕ್ಟೋಬರ್ 6ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ, ದ್ವಿಪಕ್ಷೀಯ ಶೃಂಗಸಭೆ ಯಶಸ್ವಿ ಯಾಗಿ ಪೂರೈಸಿದ ಕೆಲವೇ ದಿನಗಳ ನಂತರ, ವೆಂಡಿ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ಅಕ್ಟೋಬರ್ 6ರಂದು ದೆಹಲಿಗೆ ಭೇಟಿ ನೀಡಿ, ಸರಣಿ ದ್ವಿಪಕ್ಷೀಯ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಇಂಡಿಯಾ-ಐಡಿಯಾಸ್ ಶೃಂಗಸಭೆಯಲ್ಲಿ ಭಾಗವಹಿಸ ಲಿದ್ದಾರೆ. ಅ.7 ರಂದು ಮುಂಬೈಯಲ್ಲಿ ವಾಣಿಜ್ಯ -ವ್ಯಾಪಾರ ಕುರಿತು ನಡೆಯುವ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ವಿದೇಶಾಂಗ ಇಲಾಖೆಯ ಪ್ರಕಟಣೆ ತಿಳಿಸಿದೆ.
ಮುಂಬೈನಿಂದ ಪಾಕಿಸ್ತಾನಕ್ಕೆ ತೆರಳುವ ವೆಂಡಿ, ಇಸ್ಲಾಮಾಬಾದ್ನಲ್ಲಿ ಪಾಕಿಸ್ತಾನದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಭಾರತಕ್ಕೆ ಬರುವ ಮುನ್ನ, ಶೆರ್ಮನ್ ಸೆ.29ರಿಂದ ಸ್ವಿಟ್ಜರ್ಲ್ಯಾಂಡ್ ಮತ್ತು ಉಜ್ಬೇಕಿ ಸ್ತಾನ್ಗೆ ಭೇಟಿ ನೀಡಲಿದ್ದಾರೆ.