Thursday, 28th November 2024

ರಾಜಕೀಯದ ಮಧ್ಯೆ ‘ಕರಾಟೆಕಿಂಗ್’ ಶಂಕರ್‌ನಾಗ್ ರನ್ನು ನೆನೆದ ನಾಯಕರು

ಬೆಂಗಳೂರು: ದಿನನಿತ್ಯದ ರಾಜಕೀಯ ಚಟುವಟಿಕೆಗಳ ಮಧ್ಯೆ ನಮ್ಮ ರಾಜಕೀಯ ನಾಯಕರು ಸಿನಿಮಾ ರಂಗದ ಮಾಣಿಕ್ಯ ಎಂದೇ ಅಭಿಮಾನಿಗಳಿಂದ ಗುರುತಿಸಿಕೊಳ್ಳುವ ಶಂಕರ್‌ನಾಗ್ ಅವರನ್ನು ನೆನೆದ್ದಿದ್ದಾರೆ.

ನಟನಾಗಿ, ನಿರ್ದೇಶಕನಾಗಿ ಕನ್ನಡ ಸಿನಿ ಪ್ರಿಯರ ಮನ ಗೆದ್ದಿದ್ದ ಶಂಕರ್ ನಾಗ್ ನಮ್ಮನ್ನೆಲ್ಲ ಅಗಲಿ ಇಂದಿಗೆ 31 ವರ್ಷಗಳು ಉರುಳಿವೆ. 31 ವರ್ಷಗಳು ಕಳೆದರೂ, ಇಂದಿಗೂ ‘ಆಟೋರಾಜ’ರಾಗಿ ಶಂಕರ್‌ನಾಗ್ ಅವರು ಅಭಿಮಾನಿಗಳ ಮನದಲ್ಲಿ ಹಚ್ಚ ಹಸಿರಾಗಿದ್ದಾರೆ. ಎಲ್ಲ ವರ್ಗಗಳಲ್ಲಿಯೂ ಅವರಿಗೆ ಅಭಿಮಾನಿಗಳು ಇದ್ದಾರೆ ಎನ್ನುವುದಕ್ಕೆ ಇಂದು ವಿವಿಧ ರಾಜಕೀಯ ನಾಯಕರು ಅವರನ್ನು ನೆನೆದಿರುವುದೇ ಸಾಕ್ಷಿಯಾಗಿದೆ.

ಸಚಿವರಾದ ಡಾ.ಕೆ.ಸುಧಾಕರ್, ಬಿ.ವೈ. ವಿಜಯೇಂದ್ರ, ಶಾಸಕ ಜಿ.ಬಿ. ಜ್ಯೋತಿನಾಗೇಶ್ ಸೇರಿದಂತೆ ಹಲವರು ಶಂಕರ್ ನಾಗ್ ಅವರ ಸ್ಮರಣೆ ಮಾಡಿದ್ದಾರೆ.

‘ಹಲವಾರು ಯಶಸ್ವೀ ಚಲನಚಿತ್ರಗಳು ಹಾಗೂ ಧಾರಾವಾಹಿಗಳ ಮೂಲಕ ಜನರ ಮನದಲ್ಲಿ ಚಿರಸ್ಥಾಯಿಯಾಗಿರುವ ಅದ್ಭುತ ಕಲಾವಿದ, ತಂತ್ರಜ್ಞ, ನಿರ್ದೇಶಕ ಶ್ರೀ ಶಂಕರ್ ನಾಗ್ ಅವರ ಪುಣ್ಯತಿಥಿಯಂದು ಅವರಿಗೆ ನಮನಗಳು. ತಮ್ಮ ಆಕರ್ಷಕ ವ್ಯಕ್ತಿತ್ವ, ಅಸಾಮಾನ್ಯ ಸಾಧನೆಗಳಿಂದಾಗಿ ಅವರು ನಾಡಿನ ಕಲಾ ಲೋಕದ ಲೆಜೆಂಡ್ ಆಗಿಯೇ ಇರಲಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂ ಮಾಡಿದ್ದಾರೆ.

‘ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ, ಮರೆಯಲಾಗದ ಮಾಣಿಕ್ಯ ಶಂಕರ್ ನಾಗ್ ಅವರ ಪುಣ್ಯತಿಥಿಯಂದು ಗೌರವ ನಮನಗಳು’ ಎಂದು ತುಮಕೂರು ಶಾಸಕ ಜಿ.ಬಿ. ಜ್ಯೋತಿನಾಗೇಶ್ ಕೂ ಮಾಡಿದ್ದಾರೆ.