Sunday, 24th November 2024

ಷೇರುಪೇಟೆ ನಕಾರಾತ್ಮಕತೆ: ನಿಫ್ಟಿ 110 ಪಾಯಿಂಟ್ಸ್ ಇಳಿಕೆ

ಮುಂಬೈ: ಅಕ್ಟೋಬರ್ ತಿಂಗಳಿನಲ್ಲಿ ಭಾರತದ ಷೇರುಪೇಟೆ ನಕಾರಾತ್ಮಕ ಆರಂಭ ಪಡೆದಿದೆ. ಶುಕ್ರವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 400, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 110 ಪಾಯಿಂಟ್ಸ್ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 394.26 ಪಾಯಿಂಟ್ಸ್ ಕುಸಿದು 58,732.10, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 110 ಪಾಯಿಂಟ್ಸ್ ಇಳಿಕೆಗೊಂಡು 17508.20 ಪಾಯಿಂಟ್ಸ್ ಮುಟ್ಟಿದೆ. ದಿನದ ವಹಿವಾಟಿನ ಆರಂಭದಲ್ಲಿ 807 ಷೇರುಗಳು ಏರಿಕೆಗೊಂಡರೆ, 981 ಷೇರುಗಳು ಕುಸಿದವು.

ದೇವಿ ಲ್ಯಾಬ್ಸ್‌ನ ಷೇರುಗಳು ರೂ. 4,815.85 ರಲ್ಲಿ ಆರಂಭವಾಗಿದ್ದು, 17 ರೂ. ಏರಿಕೆಗೊಂಡಿದೆ. ಪವರ್ ಗ್ರಿಡ್ ಕಾರ್ಪೊರೇಶನ್ ಷೇರುಗಳು ಸುಮಾರು ರೂ 1 ರಷ್ಟು ಏರಿಕೆಯಾಗಿ ರೂ 190.50 ಮಟ್ಟದಲ್ಲಿ ಪ್ರಾರಂಭವಾಯಿತು. ಟಿಸಿಎಸ್ ಷೇರುಗಳು ರೂ. 28 ರಷ್ಟು ಏರಿಕೆಯಾಗಿ 3,803.25 ರೂ. ಮುಟ್ಟಿದೆ.

ಹಿಂಡಾಲ್ಕೊ ಷೇರು ರೂ. 478.70 ಕ್ಕೆ ಆರಂಭವಾಯಿತು. ಟಾಟಾ ಸ್ಟೀಲ್ ನ ಷೇರುಗಳು ರೂ. 1,268.65 ಕ್ಕೆ ಆರಂಭವಾಗಿದ್ದು, ಸುಮಾರು 20 ರೂ. ಕುಸಿದಿದೆ. ಐಸಿಐಸಿಐ ಬ್ಯಾಂಕ್‌ನ ಷೇರುಗಳು ರೂ. 690.75 ಕ್ಕೆ ಆರಂಭವಾಗಿದ್ದು, ಸುಮಾರು ರೂ. 10 ರಷ್ಟು ಇಳಿಕೆಯಾಗಿದೆ.