Saturday, 23rd November 2024

ಟಾಟಾ ಸನ್ಸ್ ತೆಕ್ಕೆಗೆ ಏರ್ ಇಂಡಿಯಾ

ನವದೆಹಲಿ : ಅಂತಿಮವಾಗಿ ಏರ್ ಇಂಡಿಯಾ ಸಂಸ್ಥೆಯನ್ನು ಅಂತಿಮವಾಗಿ ಟಾಟಾ ಸನ್ಸ್ ಖರೀದಿ ಸಿದೆ.

ಭಾರತೀಯ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಖರೀದಿ ಸಂಬಂಧ ಬಿಡ್ ನಡೆಸಲಾ ಯಿತು. ಈ ಬಿಡ್ ನಲ್ಲಿ ವಿವಿಧ ಸಂಸ್ಥೆಗಳು ಪಾಲ್ಗೊಂಡಿದ್ದವು.

ಸರ್ಕಾರಿ ಮೂಲಗಳ ಪ್ರಕಾರ, ರಾಷ್ಟ್ರೀಯ ವಾಹಕ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಬಿಡ್ ಅನ್ನು ಟಾಟಾ ಸನ್ಸ್ ಗೆದ್ದಿದೆ. ಸಾಲ್ಟ್-ಟು-ಸಾಫ್ಟ್ ವೇರ್ ಸಮೂಹವು ಸೆ.15 ರಂದು ವಿಮಾನಯಾನಕ್ಕಾಗಿ ಅಂತಿಮ ಬಿಡ್ ಸಲ್ಲಿಸಿತ್ತು.

ಸ್ಪೈಸ್ ಜೆಟ್ ಪ್ರವರ್ತಕ ಅಜಯ್ ಸಿಂಗ್ ಕೂಡ ವಿಮಾನಯಾನಕ್ಕಾಗಿ ಬಿಡ್ ಸಲ್ಲಿಸಿದ್ದರೆ, ಸರ್ಕಾರಿ ಮೂಲಗಳು ಟಾಟಾ ಸನ್ಸ್ ವಿಮಾನಯಾನವನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಬಿಡ್ ಅನ್ನು ಗೆದ್ದಿದೆ ಎಂದು ಖಚಿತಪಡಿಸಿವೆ.