Saturday, 23rd November 2024

ಲಖಿಂಪುರಕ್ಕೆ ತೆರಳಲು ರಾಹುಲ್‌ ಗಾಂಧಿಗೆ ಅನುಮತಿ ನೀಡಿಲ್ಲ: ಲಖನೌ ಪೊಲೀಸ್‌ ಕಮಿಷನರ್‌

ಲಖನೌ: ಸೀತಾಪುರ ಅಥವಾ ಲಖಿಂಪುರಕ್ಕೆ ತೆರಳಲು ಉತ್ತರ ಪ್ರದೇಶ ಸರ್ಕಾರವು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸ್‌ ಕಮಿಷನರ್‌ ಹೇಳಿದ್ದಾರೆ.

ಲಖಿಂಪುರ ಭೇಟಿಗಾಗಿ ರಾಹುಲ್‌ ಗಾಂಧಿ ಅವರಿಗೆ ಉತ್ತರ ಪ್ರದೇಶ ಸರ್ಕಾರವು ಅನುಮತಿ ನೀಡಿಲ್ಲ. ಅವರಿಗೆ ಇಲ್ಲಿಗೆ ಬರದಂತೆ ತಿಳಿಸಲಾಗಿದೆ’ ಎಂದು ಲಖನೌ ಪೊಲೀಸ್‌ ಕಮಿಷ ನರ್‌ ಡಿ.ಕೆ.ಠಾಕೂರ್‌ ತಿಳಿಸಿದ್ದಾರೆ.

ದೇಶದಲ್ಲಿ ಈಗ ಸರ್ವಾಧಿಕಾರಿ ಆಡಳಿತವಿದೆ. ನಮಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡ ದಂತೆ ತಿಳಿಸಲಾಗುತ್ತಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಸ್ಥಳದಲ್ಲಿ ನಿಷೇಧಾಜ್ಞೆ ಇದೆ ಹಾಗೂ ಅವರ ಭೇಟಿಯಿಂದಾಗಿ ಸಮಸ್ಯೆ ಸೃಷ್ಟಿಯಾಗಬಹುದು. ಹೀಗಾಗಿ ಅವರ ಭೇಟಿಗೆ ಅವಕಾಶ ಕೊಡುವುದಿಲ್ಲ’ ಎಂದಿದ್ದಾರೆ.

ಕಳೆದ ಭಾನುವಾರ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತರ ಮೇಲೆ ಎಸ್‌ಯುವಿ ಹರಿಸಿ ನಾಲ್ವರ ಹತ್ಯೆ ಮತ್ತು ನಂತರದ ಹಿಂಸಾಚಾರದಲ್ಲಿ ನಾಲ್ಕು ಮಂದಿ ಮೃತಪಟ್ಟ ಘಟನೆ ನಡೆದಿದೆ. ಹಿಂಸಾಚಾರ ಮರುಕಳಿಸುವ ಸಾಧ್ಯತೆಯ ಮೇರೆಗೆ ಲಖಿಂಪುರ-ಖೇರಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.

ಸೋಮವಾರ ಸೀತಾಪುರಕ್ಕೆ ಭೇಟಿ ನೀಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.