Saturday, 23rd November 2024

ತಮಿಳುನಾಡಿನಲ್ಲಿ ಐಟಿ ದಾಳಿ: ₹250 ಕೋಟಿ ಕಪ್ಪುಹಣ ಪತ್ತೆ

ನವದೆಹಲಿ: ತಮಿಳುನಾಡಿನ ಎರಡು ಉದ್ಯಮ ಸಮೂಹಗಳಿಗೆ ಸೇರಿದ ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯದ ವೇಳೆ ₹250 ಕೋಟಿ ಕಪ್ಪುಹಣ ಪತ್ತೆ ಮಾಡಲಾಗಿದೆ.

ಉದ್ಯಮ ಸಮೂಹಗಳು ರೇಷ್ಮೆ ಸೀರೆಗಳ ವ್ಯಾಪಾರ ಹಾಗೂ ಚಿಟ್‌ ಫಂಡ್‌ ವ್ಯವಹಾರ ನಡೆಸುತ್ತಿವೆ. ಕಾಂಚೀಪುರ, ವೆಲ್ಲೂರ್‌ ಹಾಗೂ ಚೆನ್ನೈಗಳಲ್ಲಿ 34 ಸ್ಥಳಗಳಲ್ಲಿ ಅ.5ರಂದು ಶೋಧ ಕಾರ್ಯ ಕೈಗೊಳ್ಳಲಾಗಿತ್ತು ಎಂದು ಇಲಾಖೆ ತಿಳಿಸಿದೆ. ಕಳೆದ ಹಲವು ವರ್ಷಗಳಲ್ಲಿ ಸಮೂಹ ಮಾಡಿರುವ ಹೂಡಿಕೆ ಹಾಗೂ ಪಾವತಿಸಿದ ಮೊತ್ತ ₹ 400 ಕೋಟಿ ಗೂ ಅಧಿಕ’ ಎಂದು ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲೆಕ್ಕಪತ್ರ ಇರದ ₹ 1.35 ಕೋಟಿ, 7.5 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಲೆಕ್ಕಪತ್ರ ಇಲ್ಲದ ₹ 150 ಕೋಟಿಗೂ ಅಧಿಕ ಮೊತ್ತದ ಆದಾಯವನ್ನು ಸಹ ಪತ್ತೆ ಹಚ್ಚಲಾಗಿದೆ’ ಎಂದು ತಿಳಿಸಿದೆ.

‘ತಮಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್‌ ಬಳಸಿ, ವ್ಯವಹಾರಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ತಿರುಚಿರುವುದನ್ನು ಪತ್ತೆ ಹಚ್ಚಲಾಗಿದೆ. ಲೆಕ್ಕಪತ್ರ ಇಲ್ಲದ ₹ 44 ಲಕ್ಷ ನಗದು, 9.5 ಕೆಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ.