Sunday, 24th November 2024

ಷೇರುಪೇಟೆ ಭರ್ಜರಿ: ಸೆನ್ಸೆಕ್ಸ್ 508 ಪಾಯಿಂಟ್ಸ್ ಏರಿಕೆ

ಮುಂಬೈ: ಭಾರತದ ಷೇರುಪೇಟೆ ಸೋಮವಾರ ಭರ್ಜರಿ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 508 ಪಾಯಿಂಟ್ಸ್ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 158 ಪಾಯಿಂಟ್ಸ್ ಹೆಚ್ಚಾಗಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 522.04 ಪಾಯಿಂಟ್ಸ್ ಏರಿಕೆಗೊಂಡು 61,818.59, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 154.1 ಪಾಯಿಂಟ್ಸ್ 18492.65 ಪಾಯಿಂಟ್ಸ್ ತಲುಪಿದೆ.

ದಿನದ ವಹಿವಾಟು ಆರಂಭದಲ್ಲಿ 1726 ಷೇರುಗಳು ಏರಿಕೆಗೊಂಡಿದ್ದು, 422 ಷೇರುಗಳು ಕುಸಿದವು ಮತ್ತು 111 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಬಜಾಜ್ ಆಟೋ ಷೇರುಗಳು ರೂ. 49 ರಷ್ಟು ಇಳಿಕೆಯಾಗಿ 3,917.25 ಕ್ಕೆ ಪ್ರಾರಂಭವಾಯಿತು. ಇಚರ್ ಮೋಟಾರ್ಸ್ ನ ಷೇರುಗಳು 821.60 ರೂಪಾಯಿಗೆ ಆರಂಭವಾಗಿದ್ದು, ಸುಮಾರು ರೂ .32 ರಷ್ಟು ಇಳಿಕೆಯಾಗಿದೆ. ಏಷ್ಯನ್ ಪೇಂಟ್ಸ್ ಷೇರುಗಳು ರೂ. 29 ರಷ್ಟು ಇಳಿಕೆಯಾಗಿ ರೂ. 3,268.95 ಕ್ಕೆ ಆರಂಭ ವಾಯಿತು. ಸಿಪ್ಲಾ ಷೇರು ರೂ .904.85 ಕ್ಕೆ ಆರಂಭವಾಯಿತು, ಸುಮಾರು 7 ರೂ. ಕುಸಿದಿದೆ. ಡಾ. ರೆಡ್ಡಿ ಲ್ಯಾಬ್ಸ್‌ನ ಷೇರುಗಳು ರೂ. 21 ರಷ್ಟು ಇಳಿಕೆಯಾಗಿ ರೂ. 4,938.00 ಕ್ಕೆ ಪ್ರಾರಂಭವಾದವು.