Friday, 20th September 2024

ಐಕ್ಯತೆ, ಸಾಮಾಜಿಕ ಸಮಾನತೆಗೆ ಏಕರೂಪ ನಾಗರಿಕ ಸಂಹಿತೆ

ಅಭಿಮತ

ಜಗದೀಶ ಮಾನೆ, ಧಾರವಾಡ ವಿವಿ. 

ಭಾರತದ ನೇತೃತ್ವವನ್ನು ನರೇಂದ್ರ ಮೋದಿ ವಹಿಸಿಕೊಂಡ ನಂತರ ಇಡೀ ಭಾರತದ ದಿಕ್ಕೇ ಬದಲಾಗಿ ಹೊಯಿತು. ದೇಶಕ್ಕೆೆ ಕಂಟಕವಾಗಿದ್ದ ಸಾಕಷ್ಟು ಸಮಸ್ಯೆೆಗಳಿಗೆ ಪರಿಹಾರ ಸಿಕ್ಕಿಿದೆ. ಯಾವತ್ತೂ ಆಗೋಕೆ ಸಾಧ್ಯವೇ ಇಲ್ಲ ಎಂದಿದ್ದ ಒಂದಿಷ್ಟು ಪ್ರಮುಖ ಕಾರ್ಯಗಳನ್ನ ಮೋದಿ ಸರಕಾರ ಬೆಣ್ಣೆೆಯೊಳಗಿನ ಕೂದಲು ಹೊರ ತೆಗೆದಂತೆ ಯಾವುದೇ ಗೊಂದಲಗಳಿಲ್ಲದೆ, ದೇಶದ ಯಾವುದೇ ಮೂಲೆಯಲ್ಲಿ ಒಂದೇ ಒಂದು ಅಹಿತಕರ ಘಟನೆಗಳು ನಡೆಯುವುದಕ್ಕೆೆ ಆಸ್ಪದ ಕೊಡದೆ ಸಮರ್ಪಕವಾಗಿ ನಿಭಾಯಿಸಿದರು. ಭ್ರಷ್ಟಾಾಚಾರಕ್ಕೆೆ ಕಡಿವಾಣ ಹಾಕಲು ನೋಟ್‌ಬ್ಯಾಾನ್, ಜಿಎಸ್‌ಟಿ ಜಾರಿ, ತ್ರಿಿವಳಿ ತಲಾಕ್ ರದ್ದತಿ, 370 ನೇ ವಿಧಿ ರದ್ದು ಪಡಿಸುವ ಮೂಲಕ ಶತ್ರು ರಾಷ್ಟ್ರಗಳಿಗೆ ಗುದ್ದು ಕೊಟ್ಟರಲ್ಲದೆ, ಪ್ರಬಲವಾದ ರಾಜತಾಂತ್ರಿಿಕತೆಯನ್ನ ನಿರ್ಮಿಸಿ ಶತ್ರುಗಳ ಹೆಡೆಮುರಿ ಕಟ್ಟಿಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಮರ್ಥ್ಯವನ್ನು ಅನಾವರಣಗೂಳಿಸಿ ಪಾಕಿಸ್ತಾಾನದ ನೈಜ ಮನಸ್ಥಿಿತಿಯನ್ನು ಜಗತ್ತಿಿನೆದುರು ಬೆತ್ತಲುಗೊಳಿಸಿದರು.

ಅಯೋಧ್ಯೆೆ ರಾಮಜನ್ಮ ಭೂಮಿಯ ವಿವಾದಕ್ಕೆೆ ಸಂಬಂಧಿಸಿದ ಸರಿಯಾದ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ಗೆ ಒಪ್ಪಿಿಸುವ ಮೂಲಕ ಶತ ಶತಮಾನಗಳಿಂದ ನಡೆದುಕೊಂಡು ಬಂದಿದ್ದ ವಿವಾದಕ್ಕೀಗ ಅಂತ್ಯ ಹಾಡಿದ್ದಾಾರೆ. ಸತ್ಯಕ್ಕೆೆ ನ್ಯಾಾಯ ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರವಹಿಸಿ ಕೋಟ್ಯಂತರ ಭಾರತೀಯರ ಪ್ರೀತಿಗೆ ಪಾತ್ರರಾಗಿದ್ದಾಾರೆ. ಮುಂದೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವುದು ಮತ್ತು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು ಇವೆರಡು ಪ್ರಮುಖ ಕಾರ್ಯಗಳು ಬಾಕಿ ಇವೆ. ಸದ್ಯಕ್ಕೆೆ ಆಗಬೇಕಿರುವುದು ಏಕರೂಪ ನಾಗರಿಕ ಸಂಹಿತೆ ಜಾರಿ. ಭಾರತದಲ್ಲಿ ಎಲ್ಲಾಾ ಧರ್ಮ, ಜಾತಿ, ಪಂಥಗಳ ಜನರು ವಾಸವಾಗಿದ್ದಾಾರೆ. ಭಾರತವನ್ನು ಜಾತ್ಯತೀತ ರಾಷ್ಟ್ರವೆಂದೇ ಕರೆಯಲಾಗುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಆದರೆ, ವಾಸ್ತವವಾಗಿ ಇಲ್ಲಿ ಎಲ್ಲದಕ್ಕೂ ಜಾತಿಯ ಲೆಕ್ಕಾಾಚಾರವೇ ನಡೆಯುತ್ತದೆ. ಅಂದು ಬ್ರಿಿಟಿಷರು ಒಡೆದು ಆಳುವ ನೀತಿಯನ್ನು ಕೇವಲ ಹಿಂದೂ-ಮುಸಲ್ಮಾಾನರಿಗಷ್ಟೇ ಸಿಮಿತಗೊಳಿಸಿದ್ದರು. ಆದರೆ, ಸ್ವಾಾತಂತ್ರ್ಯ ಭಾರತದ ರಾಜಕಾರಣಿಗಳು ಹಿಂದೂ ಸಮಾಜವನ್ನೂ ಛಿದ್ರಗೊಳಿಸಿದ ಪರಿಣಾಮವಾಗಿ ಪ್ರತಿಯೊಂದು ಜಾತಿ, ಪಂಗಡ, ಉಪಜಾತಿಗಳ ಸಂಘಟನೆ ಮಾಡಿಕೊಂಡು ಅನೇಕ ನಾಯಕರು ಜಾತಿಯ ಹೆಸರಿನ ಮೇಲೆ ತಯಾರಾಗುತ್ತಿಿದ್ದಾಾರೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ಮಾತಿನ ಹಿಂದೆ ಅಭಿವೃದ್ಧಿಿಯ ಮಂತ್ರವಿದ್ದರೂ ಕೆಲವರು ಅದನ್ನು ಕೋಮು ಭಾವನೆಯಿಂದಲೇ ಅರ್ಥೈಸಿಕೊಳ್ಳುವವರಿದ್ದಾಾರೆ.

ಸಂವಿಧಾನದಲ್ಲಿರುವ ಅಲ್ಪಸಂಖ್ಯಾಾತ, ಬಹುಸಂಖ್ಯಾಾತ ಎಂಬ ಭಾವನೆಗಳಿಗೆ ತಿಲಾಂಜಲಿ ಇಡುವ ಸಮಯವೀಗ ಬಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಹೆಚ್ಚು ವಿಚಾರ ಮಂಥನಗಳಾಗಿ ಸಮಾನ ನಾಗರಿಕ ಸಂಹಿತೆಯು ಸಂಸತ್‌ನಲ್ಲಿ ಒಪ್ಪಿಿಗೆ ಪಡೆದರೆ ಮಾತ್ರ ಇಂತಹ ಶಾಸನ ಜಾರಿ ಮಾಡಲು ಸಾಧ್ಯ. ರಾಜಕೀಯವಾಗಿ ನೋಡಿದರೆ ಅಲ್ಲಿಯೂ ಭಿನ್ನತೆ ಇರುವುದು ಎದ್ದು ಕಾಣುತ್ತದೆ. ಕೇಂದ್ರದಲ್ಲಿರುವ 545 ಸಂಸದರಲ್ಲಿ ಅಥವಾ ರಾಜ್ಯದ ವಿಧಾನಸಭೆಯ *224 ಶಾಸಕರೆಲ್ಲರಲ್ಲಿಯೂ ಸಮಾನತೆ ಇದೆಯೆ? ಅಲ್ಲಿಯೂ ಆಡಳಿತ ಪಕ್ಷ, ವಿರೋಧ ಪಕ್ಷದವರು. ಹಾಗಾದರೆ ಆಡಳಿತ ಪಕ್ಷದಲ್ಲಿರುವವರೆಲ್ಲರೂ ಸಮಾನರೆ? ಎಂದು ನೋಡಿದರೆ ಅಲ್ಲಿರುವ ಮಂತ್ರಿಿಗಳು ಉಳಿದ ಶಾಸಕರು ಇವರೆಲ್ಲರಿಗೂ ಸಮಾನವಾದ ಸೌಕರ್ಯಗಳಿವೆ ಎಂದು ಹೇಳಲು ಸಾಧ್ಯವೇ? ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ‘ಚಾತುವರ್ಣ್ಯಮವ ಮಯಾ ಸೃಷ್ಠಮ್ ಗುಣ-ಕರ್ಮ ವಿಭಾಗಶಃ’ ಎಂದು ಉಚ್ಚರಿಸಿದ್ದ. ಇದರರ್ಥ ಸಮಾನತೆಯನ್ನು ಸಾಧಿಸುವುದು ಅಸಾಧ್ಯವೆಂದಲ್ಲ. ಯಾವ ರೀತಿ ನಮ್ಮ ದೇಹದಲ್ಲಿ ಅನೇಕ ಅಂಗಗಳು ತಮ್ಮ-ತಮ್ಮ ಕೆಲಸ ಮಾಡುತ್ತ ಇಡೀ ದೇಹದ ಸ್ವಸ್ಥತೆ ಕಾಪಾಡುತ್ತವೆಯೋ ಹಾಗೂ ದೇಹದ ಯಾವುದೇ ಅಂಗಕ್ಕೆೆ ನೋವಾದರೂ ಇಡೀ ದೇಹದ ಸೌಖ್ಯವನ್ನು ಕೆಡಿಸುತ್ತದೆಯೋ ಹಾಗೆ ಸಮಾಜದ ಎಲ್ಲ ಅಂಗಗಳನ್ನು ತಮ್ಮ ದೇಹದ ಅಂಗಗಳೆಂದು ತಿಳಿದುಕೊಂಡ ನಡೆಯಬೇಕಾಗಿದೆ.

ಸಂವಿಧಾನದ 44ನೇ ಆರ್ಟಿಕಲ್ ಮತ್ತು 14ನೇ ಪರಿಚ್ಛೇದಗಳೂ ಸಮಾನ ನಾಗರಿಕತೆಯನ್ನು ಜಾರಿಗೆ ತರಬೇಕೆಂಬುದನ್ನು ಸೂಚಿಸಿವೆ. ಕೆಲ ದಶಕಗಳ ಹಿಂದೆ ರಾಜೀವ್ ಗಾಂಧಿ ಪ್ರಧಾನಮಂತ್ರಿಿಯಾಗಿದ್ದಾಾಗ, ಶಾಭಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಸಂವಿಧಾನದ ಆಶಯ ಈಡೇರದಂತೆ ಮಾಡಿದರು. ಭಾರತದ ನಾನಾ ಧರ್ಮಗಳಲ್ಲಿ ವೈಯಕ್ತಿಿಕ ಕಾನೂನುಗಳು ಪ್ರಸ್ತುತ ದೇಶದಲ್ಲಿನ ಸಮಾನತೆಗೆ ಬಹಳ ಅಡ್ಡಿಿಯಾಗಿವೆ. ಹಿಂದೂ ಕ್ರಿಿಶ್ಚಿಿಯನ್ ಮುಸ್ಲಿಿಂ ಪಾರ್ಸಿ ಧರ್ಮಗಳಲ್ಲಿನ ವೈಯಕ್ತಿಿಕ ಕಾನೂನುಗಳಲ್ಲೇ ಏಕತೆ ಬರುವುದೇ? ಸಮಸ್ಯೆೆಗಳಗೆ ಪರಿಹಾರ, ಏಕರೂಪ ನಾಗರಿಕ ಸಂಹಿತೆ ಎಂಬುದು ವೈಯಕ್ತಿಿಕ ಕಾನೂನುಗಳಲ್ಲಿ ಏಕರೂಪತೆಯನ್ನು ತರುವುದೇ ಆಗಿದೆ.

ಕಳೆದ 35 ವರ್ಷಗಳಿಂದ ಶ್ರೀಮಂತರು ಉನ್ನತ ಹಾಗೂ ಸುಶಿಕ್ಷಿತ ಮಧ್ಯಮ ವರ್ಗದವರು ಸ್ವ-ಸಂತೋಷದಿಂದ ಕುಟುಂಬ ಕಲ್ಯಾಾಣ ಮಾಡಿಸಿಕೊಂಡಿದ್ದಾಾರೆ. ಅಲ್ಪಸಂಖ್ಯಾಾತರಲ್ಲಿಯೂ ಶಿಕ್ಷಣ ಪಡೆದ ಹಲವಾರು ಜನರು ಎರಡು ಅಥವಾ ಮೂರು ಮಕ್ಕಳನ್ನು ಪಡೆದು ಕುಟುಂಬ ಯೋಜನೆ ಮಾಡಿಸಿಕೊಂಡ ಹಲವಾರು ಉದಾಹರಣೆಗಳಿವೆ. ಕೆಲವೊಂದು ವರ್ಗಗಳಲ್ಲಿ ಗಂಡು ಹೆಣ್ಣು ಸಂಖ್ಯೆೆಯಲ್ಲಿ ಸಮತೋಲನವಾಗದೇ ಇರುವುದರಿಂದ ಅನೇಕ ಸಮಾಜಿಕ ಸಮಸ್ಯೆೆಗಳು ಎದುರಾಗಿವೆ. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಾಬಲಕ್ಕೆೆ ಹೆಚ್ಚಿಿನ ಮಹತ್ವವಿರುವುದರಿಂದ ಕೆಲವೊಂದು ವರ್ಗಗಳಿಗೆ ಕಾನೂನಿನ ವಿನಾಯಿತಿ ಇರುವುದರಿಂದ ತಮ್ಮ ಸಂಖ್ಯಾಾ ಬಲಕ್ಕೆೆ ಹೆಚ್ಚಿಿನ ಒತ್ತುಕೊಟ್ಟು ಹೆಚ್ಚಿಿನ ಮಕ್ಕಳನ್ನು ಪಡೆಯಲೂ ಪ್ರೇರೇಪಿಸುತ್ತಾಾರೆ. ಹೀಗಾಗಿ ಸಾಮಾಜಿಕ ಸಮತೋಲನವು ಮುಂದೆ ಭವಿಷ್ಯದ ಮೇಲೆ ದೇಶದ ಮೇಲೆಯೂ ಪರಿಣಾಮ ಬೀರಬಹುದು.

ವಿವಾಹ ವಿಚ್ಛೇದನ, ಜೀವನಾಧಾರ ಆಸ್ತಿಿಗೆ ಸಂಬಂಧಿಸಿದಂತೆ ಹಿಂದೂ-ಕ್ರಿಿಶ್ಚಿಿಯನ್ ಧರ್ಮಗಳಲ್ಲಿ ವೈಯಕ್ತಿಿಕ ಕಾನೂನುಗಳು ಒಂದು ರೀತಿ ಹೇಳುತ್ತವೆ. ಆದರೆ, ಮುಸ್ಲಿಿಂ ಧರ್ಮಗಳಲ್ಲಿಯೂ ವೈಯಕ್ತಿಿಕ ಕಾನೂನುಗಳು ಬಹಳ ಲೋಪದೋಷಗಳಿಂದ ಕೂಡಿವೆ. ಮಹಿಳೆಯರಿಗೆ ಹೇಳಲಾಗದಷ್ಟು ಆಗುತ್ತಿಿರುವ ಅನ್ಯಾಾಯಗಳಿಗೆ ತಕ್ಕ ಮಟ್ಟಿಿಗೆ ಬ್ರೇಕ್ ಹಾಕಲಾಗಿದೆ. ನಾಗರಿಕ ಸಮಾಜದಲ್ಲಿ ಬಾಳುತ್ತಿಿರುವವರೆಲ್ಲರಿಗೂ ಧರ್ಮಕ್ಕಿಿಂತ ಮಾನವೀಯತೆ ದೊಡ್ಡದೆಂಬುದನ್ನು ಅರಿತುಕೊಳ್ಳಬೇಕಾಗಿದೆ. ನಮ್ಮ ಸಂವಿಧಾನದ ಘೋಷವಾಕ್ಯವೇ ಜಾತ್ಯತೀತ ತತ್ವ ಆಗಿರುವುದರಿಂದ ಜಾತಿ, ಧರ್ಮದ ಹೆಸರಿನಲ್ಲಿ ಯಾರೂ ಕೂಡ ಈ ತರಹದ ಭೇದ-ಭಾವಗಳನ್ನು ಮಾಡಬಾರದು. ಪ್ರತಿಯೊಬ್ಬರ ವ್ಯಕ್ತಿಿತ್ವ ಧರ್ಮಗಳಿಗಿಂತ ಮಿರಿ ಬೆಳೆಯಬೇಕಾಗಿದೆ.
ಭಾರತದಲ್ಲಿ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಲ್ಲ ಧರ್ಮಿಯರಿಗೂ ಏಕರೂಪ ಶಿಕ್ಷೆ ಇದೆ. ಕೊಲೆ, ಸುಲಿಗೆ, ಕಳ್ಳತನ ದರೋಡೆ ಅತ್ಯಾಾಚಾರ ಮೊದಲಾದ ಅಪರಾಧಗಳನ್ನೆೆಸಗಿದವರ ವಿಷಯಗಳಲ್ಲಿ ಅಪರಾಧಿಗಳು ಯಾವ ಜಾತಿ ಜನಾಂಗ ಧರ್ಮದವರೆಂಬುದನ್ನು ಕಾನೂನು ಪರಿಗಣಿಸುವುದಿಲ್ಲ. ಆದರೆ, ಕೆಲ ಬುದ್ಧಿಿಜೀವಿಗಳು, ವಿಕೃತ ಮನಸ್ಸಿಿನವರು ಅನ್ಯಧರ್ಮಗಳ ಕುರಿತಾಗಿ ಅಭಿವ್ಯಕ್ತಿಿ ಸ್ವಾಾತಂತ್ರ್ಯದ ಹೆಸರಿನ ಮೇಲೆ ದೇಶ ವಿರೋಧಿ, ಸೈನ್ಯ ವಿರೋಧಿ ಘೋಷಣೆಗಳನ್ನು ಕೂಗುವವರಿಗೂ ಇತರೆ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೂ ಅತ್ಯಂತ ಕಠಿಣ ಶಿಕ್ಷೆಯ ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ.

ಮತ್ತೊೊಂದೆಡೆ ಕಾನೂನಿನ ಮುಂದೆ ಎಲ್ಲ ನಾಗರಿಕರೂ ಸಮಾನರೆಂದೆ ಹೇಳುತ್ತವೆ. ಆದರೆ, ಅಲ್ಪಸಂಖ್ಯಾಾತ, ಬಹುಸಂಖ್ಯಾಾತ ಹಾಗೂ ಮೀಸಲು ವಿಧಿ ಕಾನೂನಿನ ಮುಂದೆ ಎಲ್ಲರೂ ಸಮಾನರೆ? ಒಂದು ಸಮಾಜದಲ್ಲಿ ವಿಚ್ಛೇದನಕ್ಕಾಾಗಿ ಕಾನೂನಿನ ಸಮರಮಾಡಿ ಸೋತು ಸೊರಗುತ್ತಾಾರೆ. ಇನ್ನೊೊಂದು ಸಮಾಜದಲ್ಲಿ ಮೂರುಸಲ ತಲಾಕ್ ಹೇಳಿದರೆ ಸಾಮಾನ್ಯವಾಗಿ ಬಡುಗಡೆ ಮೊತ್ತೊೊಂದೆಡೆ 40% ಪ್ರತಿಶತ ಅಂಕ ಪಡೆದ ವಿದ್ಯಾಾರ್ಥಿಗಳಿಗೆ ಎಂಜಿನಿಯರಿಂಗ್, ಮೆಡಿಕಲ್ ಸೀಟುಸಿಗುತ್ತವೆ. ಕೆಲ ವಿದ್ಯಾಾರ್ಥಿಗಳು 80% ಅಂಕಪಡೆದರೂ ಸಿಗುವುದಿಲ್ಲ. ಹೀಗಾಗಿ ಭಾರತಕ್ಕೆೆ ದೊಡ್ಡ ಹೊಡೆತವೆಂದರೆ ಇಲ್ಲಿಯ ಅದೇಷ್ಟೋೋ ಪ್ರತಿಭೆಗಳಿಗೆ ಸೀಟು ಸಿಗದಾಗ ಅಮೆರಿಕಕ್ಕೆೆ, ಯೂರೋಪ ಖಂಡಗಳಿಗೆ ಪ್ರಯಾಣ ಬೆಳೆಸಿದ್ದಾಾರೆ. ವಿದೇಶಗಳು ಭಾರತದ ಮೆದುಳುಗಳನ್ನು ಬಳಸಿಕೊಂಡೆ ಬಲಿಷ್ಠವಾಗುತ್ತಿಿವೆ. ಬಹಳ ಬೇಜಾರದ ಸಂಗತಿ ಎಂದರೆ ಅಂತಹ ಅನಿವಾಸಿಗಳಲ್ಲಿ ಕೆಲವೊಬ್ಬರು ಭಾರಿ ಸಂಶೋಧನೆ ಮಾಡಿ ನೋಬೆಲ್ ಪಡೆದಾಗ ಆ ಅವಕಾಶ ಭಾರತಕ್ಕೆೆ ಬರಲಿಲ್ಲ.

ಏಕರೂಪ ನಾಗರಿಕ ಸಂಹಿತೆಯು ಯಾವುದೇ ನಿರ್ದಿಷ್ಟ ಧರ್ಮದ ವಿರೋಧಿಯಲ್ಲ. ಸಮಾಜದಲ್ಲಿಂದ ಕೆಲವರು ಇದರ ಪರಿವಿಲ್ಲದೆ ಏನೆನೋ ಮಾತನಾಡುತ್ತಿಿದ್ದಾಾರೆ. ಸಮಾನ ನಾಗರಿಕತೆಯ ಕುರಿತಾದ ಚರ್ಚೆಯಲ್ಲಿ ಕೇವಲ ತಲಾಕ್ ಮತ್ತು ಬಹುಪತ್ನಿಿತ್ವದ ವಿಷಯಗಳನ್ನು ಕೇಂದ್ರೀಕರಿಸಿ ಬೊಬ್ಬೆೆ ಹಾಕಲಾಗುತ್ತಿಿದೆಯಲ್ಲದೆ ಹೇಗೆ ಮೊಬೈಲ್, ವಾಟ್‌ಸ್‌‌ಫ್ ಅಂತರ್ಜಾಗಳ ಮುಖಾಂತರ ತಲಾಕ್ ಹೇಳುವುದಕ್ಕೆೆ ಬ್ರೆೆಕ್ ಬಿದ್ದಿದೆ, ಹಾಗೇ ಹಿಂದೂಧರ್ಮದಲ್ಲಿ ಅನೇಕರೂ ಎರಡೂ, ಮೂರು ವಿವಾಹಗಳಾಗಿ ಹಲವಾರು ವಿಚ್ಛೇದನಗಳ ಕುರಿತಾಗಿಯೂ ಅನೇಕ ದೂರುಗಳಿವೆ. ಸಮಾಜದಲ್ಲಿ ಜೀವಂತವಾಗಿರುವ ಅಸಮಾನತೆ, ಅನ್ಯಾಾಯಗಳನ್ನು ಕೊನೆಗಾಣಿಸಿ ಸಮಾನತೆ ತರಬೇಕಾಗಿದೆ. ನಮ್ಮ ದೇಶದ ಸಂವಿಧಾನದ ಅಡಿಯಲ್ಲಿ ಜನಮತಗಣನೆಗೆ ಅವಕಾಶವಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರಕಾರ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದರ ಕುರಿತಾಗಿ ಒಲವು ತೋರಿದೆ. ಆದ್ದರಿಂದ ಸಮಾನ ಸಂಹಿತೆ ಬಗ್ಗೆೆ ಸಾರ್ವಜನಿಕರ ಅನಿಸಿಕೆಗಳನ್ನು ತಿಳಿದುಕೊಳ್ಳಲು ದೇಶದ ಕಾನೂನು ಆಯೋಗ ವೆಬ್‌ಸೈಟ್ ಮೂಲಕ ಸಮೀಕ್ಷೆಯನ್ನು ಆರಂಭಿಸಿದೆ. ಸಮೀಕ್ಷೆಯ ಸಂಪುರ್ಣ ಅಧ್ಯಯನ ನಂತರ ಈ ವಿಷಯವಾಗಿ, ಕಾನೂನು ಜಾರಿಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸುತದೆ.

ಈಗಿನ ಬೆಲೆ ಏರಿಕೆ, ಮಕ್ಕಳ ಶಿಕ್ಷಣ ಮತ್ತು ಅವರನ್ನು ಸ್ವಾಾವಲಂಬಿಗಳನ್ನಾಾಗಿ ಮಾಡುವ ತನಕ ಖರ್ಚು ಕಲ್ಪನೆ ಮಾಡಿದರೆ ಯಾರೂ ರಾಷ್ಟ್ರೀಯ ಕಳಕಳಿಯಿರುವಂತವರಾರೂ ಈ ಕಾನೂನನ್ನು ವಿರೋದಿಸಲಾರರು. ಈ ಕಾನೂನು ಜಾರಿಯಾದರೆ ಜನರಿಗೆ ಒಳಪಡುವ ಜಾತಿ, ಧರ್ಮ, ಜನಾಂಗ ಬುಡಕಟ್ಟುಗಳ ಹೊರತಾಗಿ ಎಲ್ಲಾಾ ಜನರಿಗೆ ಅನ್ವಯಿಸುವ ಒಂದೇ ವರ್ಗದ ಪೌರ ಕಾನೂನುಗಳ ಮೂಲಕ ಆಡಳಿತ ನಡೆಸುತ್ತದೆ. ಈ ಕಾನೂನು ತಮ್ಮ ಧರ್ಮ, ಜಾತಿ ಅಥವಾ ಜನಾಂಗ ಬುಡಕಟ್ಟುಗಳ ಮೇಲೆ ಆಧಾರಿತವಾಗಿ ಪ್ರತ್ಯೇಕ ವಯಕ್ತಿಿಕ ಕಾನೂನುಗಳ ಅಡಿಯಲ್ಲಿ ಆಡಳಿತಕ್ಕೊೊಳಪಡುವ ನಾಗರಿಕರ ಹಕ್ಕನ್ನು ರದ್ದುಪಡಿಸುತ್ತದೆ. ಅಂತಹ ಸಂಹಿತೆಗಳು ಪ್ರಸ್ತುತ ವಿಶ್ವದ ಅನೇಕ ರಾಷ್ಟ್ರಗಳಲ್ಲಿಗ ಜಾರಿಯಲ್ಲಿವೆ. ನಾಗರಿಕ ಸಂಹಿತೆ ವ್ಯಾಾಪ್ತಿಿಯಲ್ಲಿ ಬರುವ ಸಾಮಾನ್ಯ ಕ್ಷೇತ್ರಗಳೆಂದರೆ ಆಸ್ತಿಿಪಾಸ್ತಿಿಗಳ ಸ್ವಾಾಧಿನ ಪಡಿಸಿಕೊಳ್ಳುವಿಕೆ ಮತ್ತು ಆಡಳಿತ, ಮದುವೆ ವಿಚ್ಚೇದನ ಹಾಗೂ ದತ್ತು ಸ್ವೀಕಾರಗಳಾಗಿವೆ. ಈಗಾಗಲೇ ಕೇಂದ್ರ ಸರಕಾರ ಸಾಕಷ್ಟು ಕ್ಷೇತ್ರಗಳಲ್ಲಿ ಹೊಸ ಹೊಸ ಕ್ರಾಾಂತಿಗಳನ್ನು ಮಾಡಿ ರಾಷ್ಟ್ರದ ಅಭಿವೃದ್ಧಿಿಗೆ ಅತ್ಯಂತ ಮಹತ್ತರವಾದ ಹೆಜ್ಜೆೆಯನ್ನಿಿಟ್ಟಿಿದೆ. ಜತೆಗೆ ಸಾಮಾಜಿಕ ಸಮಾನತೆಯಲ್ಲೂ ಹೊಸ ಹೆಜ್ಜೆೆಯನ್ನಿಿಡಲಿ ಎಂಬುದು ಕೋಟ್ಯಂತರ ಜನರ ಆಶಯವಾಗಿದೆ.