Friday, 22nd November 2024

ಸುಶ್ಮಿತಾ ದೇವ್, ಕಾರ್ಯಕರ್ತರ ಮೇಲೆ ಹಲ್ಲೆ: ಕಾರು ಧ್ವಂಸ

ತ್ರಿಪುರ: ತ್ರಿಪುರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಸುಶ್ಮಿತಾ ದೇವ್ ಅವರ ಮೇಲೆ ದಾಳಿ ಯಾಗಿದ್ದು, ಅವರ ಕಾರನ್ನು ಧ್ವಂಸ ಮಾಡಲಾಗಿದೆ.

ಸುಶ್ಮಿತಾ ದೇವ್ ಅವರಿಗೆ ರಾಜಕೀಯ ಪ್ರಚಾರದಲ್ಲಿ ಸಹಾಯ ಮಾಡುತ್ತಿದ್ದ ಖಾಸಗಿ ಸಂಸ್ಥೆಯ ಉದ್ಯೋಗಿಗಳು ಕೂಡಾ ದಾಳಿಯಲ್ಲಿ ಗಾಯಗೊಂಡಿ ದ್ದಾರೆ. ತ್ರಿಪುರಾದಲ್ಲಿ ತೃಣಮೂಲ ಕಾಂಗ್ರೆಸ್ ಚಟುವಟಿಕೆಗಳ ಮೇಲ್ವಿಚಾರಣೆ ಮಾಡುತ್ತಿರುವ ಸುಶ್ಮಿತಾ ದೇವ್, ದಾಳಿಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದರು.

ದಾಳಿ ನಡೆದಾಗ ಭಾರತೀಯ ರಾಜಕೀಯ ಕ್ರಿಯಾ ಸಮಿತಿ ಅಥವಾ ಐ-ಪಿಎಸಿ, ರಾಜಕೀಯ ಸಾರ್ವಜನಿಕ ಸಂಪರ್ಕ ಮತ್ತು ಸಲಹಾ ಸಂಸ್ಥೆಯ ಉದ್ಯೋಗಿ ಗಳೊಂದಿಗೆ ದೇವ್ ಇದ್ದರು.

” ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಅಮತಾಲಿ ಬಜಾರ್ ನಲ್ಲಿ ಮಧ್ಯಾಹ್ನ ಸುಶ್ಮಿತಾ ದೇವ್ ಮತ್ತು ಟಿಎಂಸಿಯ 10 ಇತರ ಪಕ್ಷದ ಕಾರ್ಯ ಕರ್ತರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳು ವಾಹನಗಳನ್ನು ಧ್ವಂಸ ಮಾಡಿದರು. ಟಿಎಂಸಿಯ ಕಾರ್ಯಕರ್ತರ ಮೇಲೆ ದೈಹಿಕ ಹಲ್ಲೆ ಮಾಡಿದರು ಎಂದು ತೃಣಮೂಲ ಕಾಂಗ್ರೆಸ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದೆ.

ಈ ವೇಳೆ ಪಕ್ಷದ ಬೆಂಬಲಿಗರಿಗೆ ಸೇರಿದ ಮೊಬೈಲ್ ಫೋನ್ ಗಳು ಕಳ್ಳತನವಾಗಿದೆ. ಈ ವಿಷಯದ ಬಗ್ಗೆ ತುರ್ತಾಗಿ ವಿಚಾರಣೆಗೆ ಒಳಪಡಿಸಿ ಮತ್ತು ಅಪರಾಧಿ ಗಳನ್ನು ಬಂಧಿಸಬೇಕು” ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.