ದುಬೈ: ಐಪಿಎಲ್ ಕೂಟಕ್ಕೆ ಮುಂದಿನ ಆವೃತ್ತಿಯಲ್ಲಿ ಎರಡು ತಂಡಗಳು ಸೇರ್ಪಡೆಯಾಗುವ ಕಾರಣ ಅದರ ಪ್ರಕ್ರಿಯೆ ದುಬೈನಲ್ಲಿ ನಡೆಯುತ್ತಿದೆ. ಮುಂದಿನ ಆವೃತ್ತಿ(2022) ಯ ಐಪಿಎಲ್ ಕೂಟಕ್ಕೆ ಬಿಸಿಸಿಐ ಈಗಾಗಲೇ ಸಿದ್ದತೆ ಆರಂಭಿಸಿದೆ.
ಒಟ್ಟು 22 ಕಂಪನಿಗಳ ಪೈಕಿ 10 ಹೆಸರು ಅಂತಿಮ ಸುತ್ತಿನಲ್ಲಿದೆ. ಅಹಮದಾಬಾದ್, ಲಕ್ನೋ, ಕಟಕ್, ಧರ್ಮಶಾಲಾ, ಗುವಾಹಟಿ ಮತ್ತು ಕಟಕ್ ನಗರಗಳ ಪೈಕಿ ಎರಡು ನಗರಗಳ ಹೆಸರಲ್ಲಿ ತಂಡಗಳಿರಲಿದೆ.
ಅದಾನಿ ಗ್ರೂಪ್, ಆರ್ ಪಿ ಸಂಜೀವ್ ಗೋಯೆಂಕಾ, ಅರಬಿಂದೋ ಫಾರ್ಮಾ, ಟೊರೆಂಟ್ ಫಾರ್ಮಾ, ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರು, ಜಿಂದಾಲ್ ಸ್ಟೀಲ್, ಹಿಂದೂಸ್ಥಾನ್ ಟೈಮ್ಸ್ ಗಳು ಬಿಡ್ಡಿಂಗ್ ಸಲ್ಲಿಸಿದೆ ಎಂದು ವರದಿಯಾಗಿದೆ.
ಅದಾನಿ ಗ್ರೂಪ್ ಅಹಮದಾಬಾದ್ ತಂಡಕ್ಕೆ, ಮ್ಯಾಂಚೆಸ್ಟರ್ ಯುನೈಟೆಡ್ ಗ್ರೂಪ್ ಲಕ್ನೋ ನಗರ ಕೇಂದ್ರ ವಾಗಿರಿಸಿ ಬಿಡ್ ನಡೆಸಿದೆ. ಮಾಜಿ ನಾಯಕ ಎಂಎಸ್ ಧೋನಿಯವರ ಮ್ಯಾನೇಜರ್ ಅರುಣ್ ಪಾಂಡೆ ಅವರಿಂದ ರಿತಿ ಸ್ಪೋರ್ಟ್ಸ್ ಕಟಕ್ ತಂಡಕ್ಕಾಗಿ ಬಿಡ್ ಸಲ್ಲಿಸಿದೆಯೆನ್ನಲಾಗಿದೆ.
ಬಿಡ್ ಅನ್ನು ಅಂತಿಮವಾಗಿ ತಡವಾಗಿ ಸಲ್ಲಿಸಿದ ಕಾರಣ ರಿತಿ ಸ್ಪೋರ್ಟ್ಸ್ ನ ಉದ್ಯಮಿ ಆನಂದ್ ಪೊದಾರ್ ಅವರ ಬಿಡ್ ಸ್ವೀಕರಿಸಲಾಗಿಲ್ಲ.